Home
ಸುದ್ದಿಜಾಲ

ನೆನಪಿಡಿ.. ಮಾ.20ಕ್ಕೆ ಲಾಂಚ್; ಒಂದಲ್ಲ, ಎರಡು OPPO ಫೋನ್.. ಬೆಲೆ, ವಿಶೇಷತೆಗಳೇನು?

ಒಪ್ಪೋ ಎರಡು ಹೊಸ ಫೋನನ್ನು ಭಾರತದಲ್ಲಿ ಬಿಡುಗಡೆ ಮಾಡಲಿದೆ. ಕಂಪನಿಯು ಒಪ್ಪೋ F29 (OPPO F29) ಸರಣಿಯ ಅಡಿಯಲ್ಲಿ ಇವುಗಳನ್ನು ಪರಿಚಯಿಸುತ್ತಿದೆ. ನೂತನ ಮೊಬೈಲ್‌ಗಳ ಬಿಡುಗಡೆ ದಿನಾಂಕವನ್ನೂ ಘೋಷಿಸಿದೆ. ಹೌದು, ಇದೇ ಮಾರ್ಚ್ 20 ರಂದು ಭಾರತದಲ್ಲಿ ಒಪ್ಪೋ F29 ಸರಣಿಯನ್ನು ರಿಲೀಸ್ ಮಾಡಲಾಗುವುದು ಎಂದು ಕಂಪನಿ ಪ್ರಕಟಿಸಿದೆ. ಈ ಸರಣಿಯಲ್ಲಿ ಒಪ್ಪೋ F29 5G (OPPO F29 5G) ಮತ್ತು ಒಪ್ಪೋ F29 ಪ್ರೊ 5G (OPPO F29 Pro 5G) ಫೋನ್‌ಗಳನ್ನು ತರಲಾಗುತ್ತಿದೆ. ಈ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಒಪ್ಪೋ F29 ಸರಣಿಯ ವಿಶೇಷತೆಗಳನ್ನು ಬಹಿರಂಗಪಡಿಸಲಾಗಿದೆ. ಅದರಂತೆ, ಇವು 6.7 ಇಂಚಿನ ಡಿಸ್ಪ್ಲೇ ಹೊಂದಿರುತ್ತವೆ. ಒಪ್ಪೋ F29 ಪ್ರೊ ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಮತ್ತು ಒಪ್ಪೋ F29 ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 6 ಜೆನ್ 3 ಪ್ರೊಸೆಸರ್ ಹೊಂದಿರಲಿದೆ. ಎರಡರಲ್ಲೂ 50 ಮೆಗಾಪಿಕ್ಸೆಲ್ ಮುಖ್ಯ ಮತ್ತು 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇರುತ್ತದೆ. ಒಪ್ಪೋ F29 ಪ್ರೊ 6,000mAh ಬ್ಯಾಟರಿ ಮತ್ತು ಒಪ್ಪೋ F29 6,500mAh ಬ್ಯಾಟರಿ, 12GB RAM + 256GB ಸ್ಟೋರೇಜ್ ಆಯ್ಕೆ ಒಳಗೊಂಡಿವೆ.

ನೆನಪಿಡಿ! ಮಾ.20ಕ್ಕೆ ಲಾಂಚ್; ಒಂದಲ್ಲ, ಎರಡು OPPO ಫೋನ್.. ಬೆಲೆ, ವಿಶೇಷತೆಗಳೇನು?

ಒಪ್ಪೋ F29 ಸರಣಿಯ ಬಿಡುಗಡೆ ವಿವರ

ಒಪ್ಪೋ ಮಾರ್ಚ್ 20 ರಂದು ಭಾರತದಲ್ಲಿ ಲಾಂಚ್ ಈವೆಂಟ್ ಆಯೋಜಿಸಿದೆ. ಈ ಸಮಾರಂಭದಲ್ಲಿ ಹೊಸ ಫೋನ್‌ಗಳನ್ನು ಅಧಿಕೃತವಾಗಿ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ. ಈ ಸರಣಿಯ ಅಡಿಯಲ್ಲಿ, ಒಪ್ಪೋ F29 5G ಮತ್ತು F29 Pro 5G ಫೋನ್‌ಗಳನ್ನು ಪರಿಚಯಿಸಲಾಗುವುದು. ಕಂಪನಿಯು ಒಪ್ಪೋ F29 ಅನ್ನು ಸಾಲಿಡ್ ಪರ್ಪಲ್, ಗ್ಲೇಸಿಯರ್ ಬ್ಲೂ ಮತ್ತು ಐಸಿ ಬ್ಲೂ ಬಣ್ಣಗಳಲ್ಲಿ ಬಿಡುಗಡೆ ಮಾಡಲಿದೆ. ಒಪ್ಪೋ F29 ಪ್ರೊ ಅನ್ನು ಮಾರ್ಬಲ್ ವೈಟ್ ಮತ್ತು ಗ್ರಾನೈಟ್ ಬ್ಲ್ಯಾಕ್ ಬಣ್ಣಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಕಂಪನಿ ತಿಳಿಸಿದೆ.

ಒಪ್ಪೋ F29 ಸರಣಿಯ ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಒಪ್ಪೋ F29 ಪ್ರೊ ಮೊಬೈಲ್ 6.7 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್ಪ್ಲೇ ಹೊಂದಿರಲಿದೆ. ಇದು ಕ್ವಾಡ್ ಕರ್ವ್ಡ್ ಅಮೋಲೆಡ್ ಡಿಸ್ಪ್ಲೇ ಆಗಿದೆ. ಈ ಡಿಸ್ಪ್ಲೇಯು 120Hz ರಿಫ್ರೆಶ್ ದರದ ಬೆಂಬಲ ಹೊಂದಿದೆ. ಈ ಫೋನಿನಲ್ಲಿ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ತಂತ್ರಜ್ಞಾನ ಇರುತ್ತದೆ.

ಪ್ರೊಸೆಸರ್ ಸಾಮರ್ಥ್ಯ

ಒಪ್ಪೋ F29 ಪ್ರೊ 5G ಫೋನ್ ಮೀಡಿಯಾ ಟೆಕ್‌ನ ಡೈಮೆನ್ಸಿಟಿ 7300 ಆಕ್ಟಾ ಕೋರ್ ಪ್ರೊಸೆಸರ್‌ನಲ್ಲಿ ಬಿಡುಗಡೆಯಾಗಲಿದೆ. ಒಪ್ಪೋ F29 5G ಫೋನ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 6 ಜೆನ್ 3 ಆಕ್ಟಾ ಕೋರ್ ಪ್ರೊಸೆಸರ್‌ನೊಂದಿಗೆ ಮಾರುಕಟ್ಟೆಗೆ ಬರಲಿದೆ ಎಂದು ವರದಿಯಾಗಿದೆ.

ಸ್ಟೋರೇಜ್ ಆಯ್ಕೆ

ಒಪ್ಪೋ F29 ಪ್ರೊ 5G ಸ್ಮಾರ್ಟ್‌ಫೋನ್‌ ಅನ್ನು ಎರಡು RAM ರೂಪಾಂತರಗಳಲ್ಲಿ ಬಿಡುಗಡೆ ಮಾಡಲಾಗುವುದು. ಈ ಒಪ್ಪೋ ಮೊಬೈಲ್ 8GB RAM ಮತ್ತು 12GB RAM ಹೊಂದಿರುತ್ತದೆ. ಈ 5G ಫೋನ್ 128GB ಮತ್ತು 256GB ಸ್ಟೋರೇಜ್‌ ಆಯ್ಕೆಯೊಂದಿಗೆ ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುತ್ತದೆ. ಆದರೆ, ಒಪ್ಪೋ F29 5G ಸ್ಮಾರ್ಟ್‌ಫೋನ್‌ ಅನ್ನು 8GB RAM ನೊಂದಿಗೆ ಬಿಡುಗಡೆ ಮಾಡಲಾಗುವುದು.

ಕ್ಯಾಮೆರಾ ಸೆಟಪ್

ಒಪ್ಪೋ F29 ಪ್ರೊ 5G ಮೊಬೈಲ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿರುತ್ತದೆ. ಈ ಒಪ್ಪೋ 5G ಫೋನ್ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 16 ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ ಇರುತ್ತದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಒಪ್ಪೋ F29 ಪ್ರೊ 5G ಫೋನ್ 6000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆಯಾಗಲಿದೆ. ಈ ದೊಡ್ಡ ಬ್ಯಾಟರಿಯನ್ನು ಚಾರ್ಜ್ ಮಾಡಲು, ಸ್ಮಾರ್ಟ್‌ಫೋನ್ 80W ವೇಗದ ಚಾರ್ಜಿಂಗ್ ತಂತ್ರಜ್ಞಾನವನ್ನು ಸಹ ಹೊಮದಿರುತ್ತದೆ. ಒಪ್ಪೋ F29 ಮೊಬೈಲ್ 6500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರುತ್ತದೆ.

Best Mobiles in India

English summary
OPPO F29 and OPPO F29 Pro launching in India on March 20: Specifications and Colours Confirmed
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+