Home
ಸುದ್ದಿಜಾಲ

ಒಪ್ಪೊದ ಎಫ್‌3 ಪ್ಲಸ್ 6 ಜಿಬಿ RAM ಡಿವೈಸ್ ಬೆಲೆ ಕೇಳಿದರೆ ನೀವು ಶಾಕ್ ಆಗುವುದು ಖಂಡಿತ

By Shwetha Ps

ಒಪ್ಪೊ ಎಫ್ 3 ಈ ವರ್ಷ ಮಾರ್ಚ್‌ನಲ್ಲಿ ಘೋಷಣೆಯಾಗಿತ್ತು. ಏಪ್ರಿಲ್‌ನಲ್ಲಿ ಭಾರತದಲ್ಲಿ ಈ ಫೋನ್ ಅನ್ನು ಬಿಡುಗಡೆ ಮಾಡುವ ಸಮಯದಲ್ಲಿ 4 ಜಿಬಿ RAM ಮತ್ತು 64 ಜಿಬಿ ಸ್ಟೋರೇಜ್ ಆವೃತ್ತಿಯನ್ನು ರೂ 30,990 ಕ್ಕೆ ಘೋಷಿಸಿತ್ತು. ಈ ವಾರದ ಹಿಂದೆ ಒಪ್ಪೊ ಹೊಸ 6 ಜಿಬಿ ಸ್ಮಾರ್ಟ್‌ಫೋನ್ ಅನ್ನು ಘೋಷಣೆ ಮಾಡಿದೆ. 4 ಜಿಬಿ ಆವೃತ್ತಿಯ ಫೋನ್‌ನಂತೆಯೇ ಈ ಡಿವೈಸ್ ಕೂಡ ಇದ್ದು ವಿಶೇಷವಾಗಿ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿದೆ.

ಒಪ್ಪೊದ ಎಫ್‌3 ಪ್ಲಸ್  6 ಜಿಬಿ RAM ಡಿವೈಸ್ ಬೆಲೆ ಕೇಳಿದರೆ ನೀವು ಶಾಕ್ ಆಗುವುದು

ಅಂತೆಯೇ ಒಪ್ಪೊ ಎಫ್‌3 ಪ್ಲಸ್ 6 ಜಿಬಿ ಆವೃತ್ತಿಯ ಡಿವೈಸ್ ರೂ 22,990 ಕ್ಕೆ ದೊರೆಯಲಿದೆ. ಈ ಬೆಲೆಯಲ್ಲಿ ಇದೇ ಮೊದಲ ಬಾರಿಗೆ ಭಾರತದಲ್ಲಿ ಡಿವೈಸ್ ಮಾರಾಟವನ್ನು ಕಂಡುಕೊಳ್ಳುತ್ತಿದೆ. 4 ಜಿಬಿ ಡಿವೈಸ್ ಅನ್ನು ಕಂಪನಿಯು 30,990 ಕ್ಕೆ ಲಾಂಚ್ ಮಾಡಿತ್ತು. ಈಗ ಬಿಡುಗಡೆ ಮಾಡಿರುವ ಡಿವೈಸ್ ಹೆಚ್ಚಿನ RAM ಅನ್ನು ಪಡೆದುಕೊಂಡಿದ್ದರೂ ಬೆಲೆ 4 ಜಿಬಿ ಗಿಂತ ಕಡಿಮೆ ಇದೆ.

ಫ್ಲಿಪ್‌ಕಾರ್ಟ್ ಒಪ್ಪೊ ಎಫ್‌3 ಪ್ಲಸ್‌ನೊಂದಿಗೆ ಇನ್ನಷ್ಟು ಆಫರ್‌ಗಳನ್ನು ಬಿಡುಗಡೆ ಮಾಡುತ್ತಿದೆ. ವಿಶೇಷ ಎಕ್ಸ್‌ಚೇಂಜ್ ಬೆಲೆಯಲ್ಲಿ ಬರುತ್ತಿದ್ದು ಬೆಲೆ ರೂ 3,000 ಆಗಿದೆ. ಅಂತೆಯೇ ಇಎಮ್‌ಐ ದರ ರೂ 1,916 ಪ್ರತಿ ತಿಂಗಳಿಗೆ. ಬೈಬ್ಯಾಕ್ ಗ್ಯಾರಂಟಿಯನ್ನು ನೀಡುತ್ತಿದ್ದು ಇದು 50% ಖಾತ್ರಿಯನ್ನು ನೀಡುತ್ತಿದೆ. ಎಚ್‌ಡಿಎಫ್‌ಸಿ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ನಿಂದ ಈ ಫೋನ್ ಅನ್ನು ಖರೀದಿಸಿದಲ್ಲಿ ನಿಮಗೆ 5% ವಿನಾಯಿತಿ ಕೂಡ ದೊರೆಯಲಿದೆ.

RAM ಹೊರತಾಗಿ ಡಿವೈಸ್‌ನ ಮತ್ತೆಲ್ಲಾ ವೈಶಿಷ್ಟ್ಯಗಳು ಒಂದೇ ಆಗಿವೆ. ಒಪ್ಪೊ ಎಫ್3 ಪ್ಲಸ್ ಸೆಲ್ಫಿ ಸೆಂಟ್ರಿಕ್ ಡಿವೈಸ್ ಆಗಿದ್ದು, ಡ್ಯುಯಲ್ ಕ್ಯಾಮರಾವನ್ನು ಮುಂಭಾಗದಲ್ಲಿ 16 ಎಮ್‌ಪಿ ಮತ್ತು 8 ಎಮ್‌ಪಿ ಸೆನ್ಸಾರ್‌ಗಳಲ್ಲಿ ಪ್ರಸ್ತುತಪಡಿಸುತ್ತಿದೆ. 16 ಎಮ್‌ಪಿ ಕ್ಯಾಮರಾವನ್ನು ಹಿಂಭಾಗದಲ್ಲಿ ಎಲ್‌ಇಡಿ ಫ್ಲ್ಯಾಶ್‌ನೊಂದಿಗೆ ಡಿವೈಸ್ ಪಡೆದುಕೊಂಡಿದೆ. ಸೆಲ್ಫಿ ಕ್ಯಾಮರಾ ಬ್ಯೂಟಿಫೈ 4.0 ನೊಂದಿಗೆ ಬಂದಿದ್ದು ಸ್ಕ್ರೀನ್ ಫ್ಲ್ಯಾಶ್, ಸೆಲ್ಫಿ ಪನೊರಮಾ ಮತ್ತು ಪಾಮ್ ಶಟರ್ ಅನ್ನು ಒಳಗೊಂಡಿದ್ದು ಅತ್ಯುತ್ತಮ ಸೆಲ್ಫಿಯನ್ನು ಕ್ಲಿಕ್ಕಿಸಿಕೊಳ್ಳಬಹುದಾಗಿದೆ.

ಸ್ಮಾರ್ಟ್‌ಫೋನ್ 6 ಇಂಚಿನ ಎಫ್‌ಎಚ್‌ಡಿ 1080 ಜೆಡಿಐ ಇನ್ ಸೆಲ್ ಡಿಸ್‌ಪ್ಲೇಯನ್ನು ಪಡೆದುಕೊಂಡಿದ್ದು 2.5 ಡಿ ಕರ್ವ್ಡ್ ಗ್ಲಾಸ್ ಅನ್ನು ಮೇಲ್ಭಾಗದಲ್ಲಿ ಹೊಂದಿದೆ. ಓಕ್ಟಾ ಕೋರ್ ಸ್ನ್ಯಾಪ್‌ಡ್ರ್ಯಾಗನ್ 653 ಸಾಕ್ ಇದರಲ್ಲಿದ್ದು 64 ಜಿಬಿ ಸಂಗ್ರಹಣೆಯನ್ನು ಪಡೆದಿದೆ. ಇದನ್ನು ಎಸ್‌ಡಿ ಕಾರ್ಡ್ ಬಳಸಿಕೊಂಡು 256 ಜಿಬಿಗೆ ವಿಸ್ತರಿಸಬಹುದಾಗಿದೆ. 4ಜಿ ವೋಲ್ಟ್, ವೈಫೈ, ಬ್ಲ್ಯೂಟೂತ್ 4.1, ಮೈಕ್ರೊ ಯುಎಸ್‌ಬಿ, 3.5 ಎಮ್‌ಎಮ್ ಆಡಿಯೋ ಜ್ಯಾಕ್ ಮತ್ತು ಜಿಪಿಎಸ್ ಇದರಲ್ಲಿದೆ. 4000mAh ಬ್ಯಾಟರಿಯನ್ನು ಡಿವೈಸ್ ಹೊಂದಿದೆ. ಅಲ್ಟ್ರಾ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಡಿವೈಸ್ ಪಡೆದಿದೆ. ಆಂಡ್ರಾಯ್ಡ್ ಮಾರ್ಶ್‌ಮಲ್ಲೊವನ್ನು ಡಿವೈಸ್ ಒಳಗೊಂಡಿದೆ.

Best Mobiles in India

English summary
Oppo F3 Plus with 6GB RAM goes on sale for the first time in India at a price point of Rs. 22,990 via Flipkart.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+