ಒಪ್ಪೋ F5 ಯೂತ್ ಎಡಿಷನ್ ಶೀಘ್ರವೇ ಭಾರತೀಯ ಮಾರುಕಟ್ಟೆಗೆ
ಒಪ್ಪೋ ಇತ್ತೀಚೆಗೆ ಲಾಂಚ್ ಮಾಡಿದ್ದ ಸೆಲ್ಪಿ ಕೇಂದ್ರಿತ ಸ್ಮಾರ್ಟ್ ಫೋನ್ ಒಪ್ಪೋ F5ನ ನೂತನ ಆವೃತ್ತಿಯೊಂದು ಲಾಂಚ್ ಆಗಿದೆ. ಹೊಸದಾಗಿ ಒಪ್ಪೋ F5 ಯೂತ್ ಎಡಿಷನ್ ಮಾರುಕಟ್ಟೆಯಲ್ಲಿ ಶೀಘ್ರವೇ ಕಾಣಿಸಿಕೊಳ್ಳಲಿದೆ. ಈಗಾಗಲೇ ಈ ಒಪ್ಪೋ F5 ಯೂತ್ ಎಡಿಷನ್ ಫಿಲಿಪೈನ್ ಮಾರುಕಟ್ಟೆಯಲ್ಲಿ ಸರಿಸುಮಾರು ರೂ. 17,835ಕ್ಕೆ ಮಾರಾಟವಾಗುತ್ತಿದೆ ಎನ್ನಲಾಗಿದೆ.

ಒಪ್ಪೋ F5 ಯೂತ್ ಎಡಿಷನ್ ಇದು ಒಪ್ಪೋ F5 ಸ್ಮಾರ್ಟ್ ಫೋನ್ ಆರಂಭಿಕ ಆವೃತ್ತಿಯಾಗಲಿದೆ. ಈ ಸ್ಮಾರ್ಟ್ ಫೋನ್ ನಲ್ಲಿ 6 ಇಂಚಿನ FHD + ಡಿಸ್ ಪ್ಲೇಯನ್ನು ಕಾಣಬಹುದಾಗಿದೆ. ಅಲ್ಲದೇ ಇದು 18:9 ಅನುಪಾತದಿಂದ ಕೂಡಿರಲಿದೆ. ಈ ಸ್ಮಾರ್ಟ್ ಫೋನಿನಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಹಿಂಭಾಗದಲ್ಲಿ ನೀಡಲಾಗಿದೆ.
ಒಪ್ಪೋ F5 ಯೂತ್ ಎಡಿಷನ್ ನಲ್ಲಿ ಮಿಡಿಯಾ ಟೆಕ್ MT6163T ಪ್ರೋಸೆಸರ್ ಅನ್ನು ಕಾಣಬಹುದಾಗಿದೆ. ಅಲ್ಲದೇ 3GB RAM ಮತ್ತು 32GB ಇಂಟರ್ನಲ್ ಮೆಮೊರಿಯನ್ನು ಇದರಲ್ಲಿ ಅಳವಡಿಸಲಾಗಿದೆ. ಈ ಸ್ಮಾರ್ಟ್ ಫೋನಿನ ಹಿಂಭಾಗದಲ್ಲಿ 13MP ಕ್ಯಾಮೆರಾವನ್ನು ನೀಡಲಾಗಿದ್ದು, ಜೊತೆಗೆ LED ಫ್ಲಾಷ್ ಲೈಟ್ ಸಹ ನೀಡಲಾಗಿದೆ.
ಮುಂಭಾಗದಲ್ಲಿ 16MP ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದ್ದು, ಜೊತೆಗೆ ಸ್ಕ್ರಿನ್ ಫ್ಲಾಷ್ ಆಯ್ಕೆಯನ್ನು ನೀಡಲಾಗಿದೆ. ಇದಲ್ಲದೇ ಇದರಲ್ಲಿ ಫೆಷಿಯಲ್ ಲಾಕ್ ಮತ್ತು AI ಬ್ಯೂಟಿ ಮೋಡ ಸಹ ಕಾಣಬಹುದಾಗಿದೆ. ಇದಲ್ಲದೇ ಈ ಫೋನ್ ನಲ್ಲಿ ಉತ್ತಮ ಬ್ಯಾಟರಿ ಬಾಳಿಕೆಗಾಗಿ 3200mAh ಬ್ಯಾಟರಿಯನ್ನು ನೀಡಲಾಗಿದೆ.
ಇದಲ್ಲದೇ ಆಂಡ್ರಾಯ್ಡ್ 7.1 ಮತ್ತು ಕಲರ್ OS 3.2 ಅನ್ನು ಒಪ್ಪೋ F5 ಯೂತ್ ಎಡಿಷನ್ ಹೊಂದಿದ್ದು, ಡ್ಯುಯಲ್ 4ಜಿ ಸಿಮ್ ಹಾಕಿಕೊಳ್ಳುವ ಅವಕಾಶವನ್ನು ಪಡೆದುಕೊಂಡಿದೆ. ಒಪ್ಪೋ F5 ಯೂತ್ ಎಡಿಷನ್ ಬ್ಲಾಕ್ ಮತ್ತು ಗೋಲ್ಡ್ ಬಣ್ಣದಲ್ಲಿ ದೊರೆಯಲಿದೆ.


Click it and Unblock the Notifications








