Home
ಸುದ್ದಿಜಾಲ

ಒಪ್ಪೋ F7 ಬರಲಿದೆಯಂತೆ 2 ವಿಭಿನ್ನ ಆವೃತ್ತಿಗಳಲ್ಲಿ, ಪೋಸ್ಟರ್ ನೀಡಿದೆ ಸುಳಿವು

ಮಾರ್ಚ್ 26ರಂದು ಭಾರತದಲ್ಲಿ ಒಪ್ಪೋ F7 ಲಾಂಚ್ ಆಗಲಿದ್ದು, ಎರಡು ವಿಭಿನ್ನ ಆವೃತ್ತಿಗಳಲ್ಲಿ ಬರಲಿದೆ.

By Tejaswini P G

ಒಪ್ಪೋ ತನ್ನ ನೂತನ ಒಪ್ಪೋ F7 ನ ಸುತ್ತ ಸಾಕಷ್ಟು ಹವಾ ಸೃಷ್ಟಿಸುತ್ತಿದೆ. ಮಾರ್ಚ್ 26ರಂದು ಮುಂಬೈ ನಲ್ಲಿ ನಡೆಯಲಿರುವ ಲಾಂಚ್ ಸಮಾರಂಭಕ್ಕೆ ಈಗಾಗಲೇ ಒಪ್ಪೋ ಸಂಸ್ಥೆಯು ಮಾಧ್ಯಮಗಳಿಗೆ ಅಹ್ವಾನ ನೀಡಿದ್ದು, ಒಪ್ಪೋ F7 ಅಂದು ಭಾರತದಲ್ಲಿ ಬಿಡುಗಡೆಯಾಗಲಿರುವುದು ಖಚಿತವಾಗಿದೆ. ಈಗ ಬಂದಿರುವ ಒಪ್ಪೋ F7 ನ ಪೋಸ್ಟರ್ ಒಂದು ಅದು ಎರಡು ಆವೃತ್ತಿಗಳಲ್ಲಿ ಬರಲಿರುವ ಸೂಚನೆ ನೀಡುತ್ತಿದೆ.

ಒಪ್ಪೋ F7 ಬರಲಿದೆಯಂತೆ 2 ವಿಭಿನ್ನ ಆವೃತ್ತಿಗಳಲ್ಲಿ, ಪೋಸ್ಟರ್ ನೀಡಿದೆ ಸುಳಿವು


GSMArena ಮೂಲಕ ಸ್ಲ್ಯಾಶ್ಲೀಕ್ಸ್ ನಲ್ಲಿ ಲಭ್ಯವಿರುವ ಪೋಸ್ಟರ್ ಒಂದರ ಅನುಸಾರ ಒಪ್ಪೋ F7 ಎರಡು ಆವೃತ್ತಿಗಳಲ್ಲಿ ಬರಲಿದೆ. ಅದರ ಮೂಲ ಆವೃತ್ತಿ 128GB ಆಂತರಿಕ ಸ್ಟೋರೇಜ್ ಸಾಮರ್ಥ್ಯ ಹೊಂದಿದ್ದರೆ F7 ಯುತ್ ಆವೃತ್ತಿ ಸ್ವಲ್ಪ ಅಗ್ಗದ ಆವೃತ್ತಿಯಾಗಿದ್ದು, ಸ್ವಲ್ಪ ಮಟ್ಟಿಗೆ ಕಡಿಮೆ ಫೀಚರ್ಗಳನ್ನು ಹೊಂದಿದೆ. ಆದರೆ ಈ ಒಪ್ಪೋ F7 ನ ಈ ಪೋಸ್ಟರ್ ಎಲ್ಲರಿಗೂ ಲಭ್ಯವಾಗಿಲ್ಲ.

25MP AI-ಸಾಮರ್ಥ್ಯದ ಸೆಲ್ಫೀ ಕ್ಯಾಮೆರಾ

25MP AI-ಸಾಮರ್ಥ್ಯದ ಸೆಲ್ಫೀ ಕ್ಯಾಮೆರಾ

ಒಪ್ಪೋ F7 ನ ಎರಡೂ ಆವೃತ್ತಿಗಳೂ 25MP AI- ಸಾಮರ್ಥ್ಯದ ಸೆಲ್ಫೀ ಕ್ಯಾಮೆರಾ ಹೊಂದಿರಲಿದೆ. ಒಪ್ಪೋ F5 ನಂತೆ ಇದರ ಕ್ಯಾಮೆರಾ ಕೂಡ ಕೃತಕ ಬುದ್ಧಿಮತ್ತೆ ಬಳಸಿ ಸೆಲ್ಫೀಗಳನ್ನು ಮತ್ತಷ್ಟು ಚಂದಗಾಣಿಸಲಿದೆ. ಒಪ್ಪೋ F5 ನಂತೆ ಇದೂ ಕೂಡ ವ್ಯಕ್ತಿಯ ಮೈಬಣ್ಣ, ಲಿಂಗ, ವಯಸ್ಸಿನ ಆಧಾರದ ಮೇಲೆ ಸೆಲ್ಫೀ ಶಾಟ್ ಸೆರೆಹಿಡಿಯುವಾಗ ಅಗತ್ಯ ಸೆಟ್ಟಿಂಗ್ ಗಳನ್ನು ಮಾಡಿಕೊಳ್ಳುತ್ತದೆ.

ಆಕರ್ಷಕ 128GB ಸ್ಟೋರೇಜ್ ಸಾಮರ್ಥ್ಯ

ಆಕರ್ಷಕ 128GB ಸ್ಟೋರೇಜ್ ಸಾಮರ್ಥ್ಯ

ಈಗಾಗಲೇ ಹೇಳಿರುವಂತೆ ಒಪ್ಪೋ F7 ನ ಮೂಲ ಆವೃತ್ತಿಯಲ್ಲಿ 128GB ಆಂತರಿಕ ಸ್ಟೋರೇಜ್ ಸಾಮರ್ಥ್ಯವಿರಲಿದೆ. ಈ ಸ್ಮಾರ್ಟ್ಫೋನ್ ಮಧ್ಯಮ ಶ್ರೇಣಿಯ ಮೊಬೈಲ್ ಆಗಿ ಮಾರುಕಟ್ಟೆಗೆ ಬರಲಿರುವ ಹಿನ್ನಲೆಯಲ್ಲಿ , ಈ ಶ್ರೇಣಿಯಲ್ಲಿ ಬೇರಾವುದೇ ಫೋನ್ ಇಷ್ಟೊಂದು ಸ್ಟೋರೇಜ್ ಸಾಮರ್ಥ್ಯ ಹೊಂದಿಲ್ಲ ಎನ್ನುವುದು ಗಮನಾರ್ಹ ವಿಷಯವಾಗಿದೆ.

ಐಫೋನ್ X ಮಾದರಿಯ 'ನಾಚ್' ಮತ್ತು ತೆಳುವಾದ ಅಂಚುಗಳು

ಐಫೋನ್ X ಮಾದರಿಯ 'ನಾಚ್' ಮತ್ತು ತೆಳುವಾದ ಅಂಚುಗಳು

ಒಪ್ಪೋ ಈ ಹಿಂದೆ ಬಿಡುಗಡೆಮಾಡಿರುವ ಟೀಸರ್ಗಳ ಅನುಸಾರ ಒಪ್ಪೋ F7 ನ ಮೇಲ್ಭಾಗದಲ್ಲಿ ಮಧ್ಯದಲ್ಲಿ ಐಫೋನ್ X ಮಾದರಿಯ ಡಿಸ್ಪ್ಲೇ ನಾಚ್ ಒಂದು ಇರಲಿದೆ. ಅಲ್ಲದೆ ಈ ಟೀಸರ್ ಗಳಲ್ಲಿ ಲಭ್ಯವಿರುವ ಚಿತ್ರಗಳ ಅನುಸಾರ ಈ ಸಾಧನ ಎಲ್ಲಾ ಬದಿಗಳಲ್ಲೂ ತೆಳುವಾದ ಅಂಚು ಅಥವಾ ಬೆಝೆಲ್ಗಳನ್ನು ಹೊಂದಿದೆ. ಲಭ್ಯವಿರುವ ಮಾಹಿತಿಗಳ ಅನುಸಾರ ಇದರ ಡಿಸ್ಪ್ಲೇ 6.2 ಇಂಚ್ ಇದ್ದು 2280X1080 ಪಿಕ್ಸೆಲ್ ಗಳ FHD+ ರೆಸೊಲ್ಯೂಶನ್ ಮತ್ತು 19:9 ಆಸ್ಪೆಕ್ಟ್ ಅನುಪಾತ ಹೊಂದಿರಲಿದೆ. ಅಷ್ಟೇ ಅಲ್ಲದೆ ಒಪ್ಪೋ F7 ನ ಸ್ಕ್ರೀನ್-ಟು-ಬಾಡಿ ಅನುಪಾತ 89:09% ಇರಲಿದೆ.

Source 1

Best Mobiles in India

English summary
A new poster of the Oppo F7 tips that the device might be announced in two variants. The standard variant of the device is said to be launched with 128GB of internal storage capacity while the F7 Youth is said to be an affordable one with toned-down specifications. We will get to know more details on March 26.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+