Home
ಸುದ್ದಿಜಾಲ

ಭಾರತದಲ್ಲಿ ಒಪ್ಪೋ ಫೈಂಡ್‌ N2 ಫ್ಲಿಪ್ ಅಬ್ಬರ ಶುರು! ಬೆಲೆ ಎಷ್ಟು?

ಬಹು ನಿರೀಕ್ಷಿತ ಒಪ್ಪೋ ಫೈಂಡ್‌ N2 ಫ್ಲಿಪ್ ಸ್ಮಾರ್ಟ್‌ಫೋನ್‌ ಭಾರತಕ್ಕೆ ಎಂಟ್ರಿ ನೀಡಿದೆ. ಒಪ್ಪೋ ಫೈಂಡ್‌ N2 ಫ್ಲಿಪ್ ಫೋನ್‌ ತನ್ನ ಸ್ಟೈಲಿಶ್‌ ಲುಕ್‌ ಹಾಗೂ ಆಕರ್ಷಕ ಡಿಸೈನ್‌ ಮೂಲಕ ಗಮನಸೆಳೆದಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್‌ ಆಕ್ಟಾ-ಕೋರ್ ಡೈಮೆನ್ಸಿಟಿ 9000+ SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ.

ಹೌದು, ಒಪ್ಪೋ ಫೈಂಡ್‌ N2 ಫ್ಲಿಪ್ ಫೋಲ್ಡಬಲ್‌ ಸ್ಮಾರ್ಟ್‌ಫೋನ್‌ ಆಗಿದೆ. ಇದರ ಕವರ್‌ ಡಿಸ್‌ಪ್ಲೇ ಹಾಗೂ ಔಟ್‌ ಡಿಸ್‌ಪ್ಲೇ ಅತ್ಯಾಕರ್ಷಕವಾಗಿದ್ದು, ಮೊದಲ ನೋಟದಲ್ಲಿಯೇ ಕಣ್ಮನ ಸೆಳೆಯುವಂತಿದೆ. ಇದು ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಹಾಗಾದ್ರೆ ಹೊಸ ಒಪ್ಪೋ ಫೈಂಡ್‌ N2 ಫ್ಲಿಪ್ ಸ್ಮಾರ್ಟ್‌ಫೋನ್‌ ಯಾವೆಲ್ಲಾ ಫೀಚರ್ಸ್‌ ಅನ್ನು ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಭಾರತದಲ್ಲಿ ಒಪ್ಪೋ ಫೈಂಡ್‌ N2 ಫ್ಲಿಪ್ ಅಬ್ಬರ ಶುರು! ಬೆಲೆ ಎಷ್ಟು?

ಒಪ್ಪೋ ಫೈಂಡ್‌ N2 ಫ್ಲಿಪ್ ಡಿಸೈನ್‌

ಒಪ್ಪೋ ಫೈಂಡ್‌ N2 ಫ್ಲಿಪ್ ಸ್ಮಾರ್ಟ್‌ಫೋನ್‌ 6.8 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಮೇನ್‌ ಡಿಸ್‌ಪ್ಲೇ ಹೊಂದಿದೆ. ಇದು 1,080x2,520 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಈ ಡಿಸ್‌ಪ್ಲೇ 120Hz ಅಡಾಪ್ಟಿವ್ ರಿಫ್ರೆಶ್ ರೇಟ್ ಮತ್ತು 1600 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಹೊಂದಿದೆ. ಇನ್ನು 3.26 ಇಂಚಿನ ಕವರ್‌ ಡಿಸ್‌ಪ್ಲೇ ಹೊಂದಿದ್ದು, ಡಿಸ್‌ಪ್ಲೇ 382x720 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ.

ಒಪ್ಪೋ ಫೈಂಡ್‌ N2 ಫ್ಲಿಪ್ ಪ್ರೊಸೆಸರ್‌

ಒಪ್ಪೋ ಫೈಂಡ್‌ N2 ಫ್ಲಿಪ್ ಸ್ಮಾರ್ಟ್‌ಫೋನ್‌ ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 9000+ SoC ಪ್ರೊಸೆಸರ್‌ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್‌ 13 ಆಧಾರಿತ ColorOS 13.0 ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಅನ್ನು ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್‌ ಯಾವುದೇ ರೀತಿಯ ಮೆಮೊರಿ ಕಾರ್ಡ್‌ ಅನ್ನು ಬೆಂಬಲಿಸುವುದಿಲ್ಲ.

ಭಾರತದಲ್ಲಿ ಒಪ್ಪೋ ಫೈಂಡ್‌ N2 ಫ್ಲಿಪ್ ಅಬ್ಬರ ಶುರು! ಬೆಲೆ ಎಷ್ಟು?

ಒಪ್ಪೋ ಫೈಂಡ್‌ N2 ಫ್ಲಿಪ್ ಕ್ಯಾಮೆರಾ ಸೆಟ್‌ಅಪ್‌

ಒಪ್ಪೋ ಫೈಂಡ್‌ N2 ಫ್ಲಿಪ್ ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೋನಿ IMX890 ಸೆನ್ಸಾರ್‌, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಸೋನಿ IMX355 ಸೆನ್ಸಾರ್‌ ಅನ್ನು ಹೊಂದಿದೆ. ಇದಲ್ಲದೆ 32 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.

ಒಪ್ಪೋ ಫೈಂಡ್‌ N2 ಫ್ಲಿಪ್‌ ಬ್ಯಾಟರಿ ಬ್ಯಾಕ್‌ಅಪ್‌

ಒಪ್ಪೋ ಫೈಂಡ್‌ N2 ಫ್ಲಿಪ್ ಸ್ಮಾರ್ಟ್‌ಫೋನ್‌ 4,300mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 80W ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6, ಬ್ಲೂಟೂತ್ 5.3, GPS/ A-GPS, NFC, GPS, ಮತ್ತು USB ಟೈಪ್-C ಪೋರ್ಟ್ ಅನ್ನು ಬೆಂಬಲಿಸಲಿದೆ. ಇದು ಅಕ್ಸಿಲೆರೊಮೀಟರ್, ಗೈರೊಸ್ಕೋಪ್, ಹಾಲ್ ಸೆನ್ಸಾರ್‌, ಪ್ರಾಕ್ಸಿಮಿಟಿ ಸೆನ್ಸಾರ್‌, ಅನ್ನು ಹೊಂದಿದೆ.

ಭಾರತದಲ್ಲಿ ಒಪ್ಪೋ ಫೈಂಡ್‌ N2 ಫ್ಲಿಪ್ ಅಬ್ಬರ ಶುರು! ಬೆಲೆ ಎಷ್ಟು?

ಒಪ್ಪೋ ಫೈಂಡ್‌ N2 ಫ್ಲಿಪ್‌ ಬೆಲೆ ಮತ್ತು ಲಭ್ಯತೆ

ಭಾರತದಲ್ಲಿ ಒಪ್ಪೋ ಫೈಂಡ್‌ N2 ಫ್ಲಿಪ್‌ ಸ್ಮಾರ್ಟ್‌ಫೋನ್‌ 8GB + 256GB ಸ್ಟೋರೇಜ್ ಮಾದರಿಯ ಆಯ್ಕೆಗೆ 89,999ರೂ. ಬೆಲೆಯನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಫ್ಲಿಪ್‌ಕಾರ್ಟ್ ಮತ್ತು ಒಪ್ಪೋ ಕಂಪನಿಯ ಅಧಿಕೃತ ವೆಬ್‌ಸೈಟ್ ಮೂಲಕ ಲಭ್ಯವಾಗಲಿದೆ. ಇದು ಆಸ್ಟ್ರಲ್ ಬ್ಲ್ಯಾಕ್ ಮತ್ತು ಮೂನ್‌ಲೈಟ್ ಪರ್ಪಲ್ ಬಣ್ಣದ ಆಯ್ಕೆಗಳಲ್ಲಿ ದೊರೆಯಲಿದೆ.

Best Mobiles in India

English summary
Oppo Find N2 Flip price in India is set at Rs. 89,999 for the 8GB + 256GB storage model.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+