Home
ಸುದ್ದಿಜಾಲ

OPPO: ಒಪ್ಪೋ ಫೈಂಡ್‌ X7 ಅಲ್ಟ್ರಾ ಫೋನ್‌ ಅನಾವರಣ! ಫೀಚರ್ಸ್‌ ಕೇಳಿ ದಂಗಾದ ಟೆಕ್‌ ವಲಯ!

ಒಪ್ಪೋ ಫೈಂಡ್‌ X7 ಅಲ್ಟ್ರಾ ಫೋನ್‌ ಮಾರುಕಟ್ಟೆಗೆ ಎಂಟ್ರಿ ನೀಡ್ತಿದ್ದ ಹಾಗೇ ಹೊಸ ಹವಾ ಕ್ರಿಯೆಟ್‌ ಮಾಡಿದೆ. ಸ್ಮಾರ್ಟ್‌ಫೋನ್‌ ಕ್ಯಾಮೆರಾ ವಿಭಾಗದಲ್ಲಿ ಹೊಸ ಅಧ್ಯಾಯ ಬರೆಯುವ ಸೂಚನೆಯನ್ನು ನೀಡಿದೆ. ಏಕೆಂದರೆ ಈ ಸ್ಮಾರ್ಟ್‌ಫೋನ್‌ನಲ್ಲಿ ಹೈಪರ್‌ಟೋನ್ ಕ್ಯಾಮೆರಾ ಸಿಸ್ಟಮ್ ಇದುವರೆಗೂ ನೀವು ಯಾವುದೇ ಮೊಬೈಲ್‌ನಲ್ಲಿಯೂ ನೋಡಿರಲು ಸಾಧ್ಯವಿಲ್ಲ ಎನ್ನಲಾಗಿದೆ.

ಹೌದು, ಅತ್ಯಾಧುನಿಕ ಕಂಪ್ಯೂಟೇಶನಲ್ ಫೋಟೋಗ್ರಫಿಯನ್ನು ನೀಡುವ ಕ್ಯಾಮೆರಾ ಸಿಸ್ಟಂ ಈ ಸ್ಮಾರ್ಟ್‌ಫೋನ್‌ನಲ್ಲಿದೆ. ಇದೇ ಕಾರಣಕ್ಕೆ ಒಪ್ಪೋ ಫೈಂಡ್‌ X7 ಅಲ್ಟ್ರಾ ಸ್ಮಾರ್ಟ್‌ಫೋನ್‌ ಬಿಡುಗಡೆ ಆಗುತ್ತಿದ್ದ ಹಾಗೇ ಹಲ್‌ಚಲ್‌ ಎಬ್ಬಿಸಿದೆ. ಈ ಸ್ಮಾರ್ಟ್‌ಫೋನ್‌ ಕ್ವಾಡ್‌ ರಿಯರ್‌ ಕ್ಯಾಮೆರಾ ರಚನೆಯನ್ನು ಪಡೆದಿದೆ. ಹ್ಯಾಸೆಲ್‌ಬ್ಲಾಡ್ ಬ್ರ್ಯಾಂಡಿಂಗ್ ಹೊಂದಿರುವ ದೊಡ್ಡ ವೃತ್ತಾಕಾರದ ಕ್ಯಾಮೆರಾ ಮಾಡ್ಯೂಲ್ ಅನ್ನು ಒಳಗೊಂಡಿದೆ. ಹಾಗಾದ್ರೆ ಒಪ್ಪೋ ಫೈಂಡ್‌ X7 ಅಲ್ಟ್ರಾ ಫೋನ್‌ ಫೀಚರ್ಸ್‌ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಒಪ್ಪೋ ಫೈಂಡ್‌ X7 ಅಲ್ಟ್ರಾ ಫೋನ್‌ ಅನಾವರಣ! ಫೀಚರ್ಸ್‌ ಕೇಳಿ ದಂಗಾದ ಟೆಕ್‌ ವಲಯ!

Oppo Find X7 ಅಲ್ಟ್ರಾ ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ
Oppo Find X7 Ultra ಸ್ಮಾರ್ಟ್‌ಫೋನ್‌ 6.82-ಇಂಚಿನ QHD ಡಿಸ್‌ಪ್ಲೇಯನ್ನು ಹೊಂದಿದೆ. ಇದು AMOLED LTPO ಡಿಸ್‌ಪ್ಲೇ ಆಗಿದ್ದು, 1440x3,168 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದಲ್ಲಿದೆ. ಇನ್ನು ಡಿಸ್‌ಪ್ಲೇ 4500 ನಿಟ್ಸ್‌ ಪೀಕ್ ಬ್ರೈಟ್‌ನೆಸ್ ಬೆಂಬಲಿಸಲಿದ್ದು, 120Hz ವರೆಗೆ 120Hz ವರೆಗೆ ಅಡಾಪ್ಟಿವ್ ರೇಟ್ ಒಳಗೊಂಡಿದೆ. ಜೊತೆಗೆ 2160Hz PWM ಡಿಮ್ಮಿಂಗ್‌ ಅನ್ನು ಹೊಂದಿದೆ.

ಒಪ್ಪೋ ಫೈಂಡ್‌ X7 ಅಲ್ಟ್ರಾ ಪ್ರೊಸೆಸರ್‌ ಯಾವುದು?
ಒಪ್ಪೋ ಫೈಂಡ್‌ X7 ಅಲ್ಟ್ರಾ ಸ್ಮಾರ್ಟ್‌ಫೋನ್‌ ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 8 Gen 3 SoC ಪ್ರೊಸೆಸರ್‌ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್‌ 14 ಆಧಾರಿತ ColorOS 14.0 ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 16GB RAM ಮತ್ತು 512GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದು ಮೆಮೊರಿ ಕಾರ್ಡ್‌ ಬೆಂಬಲಿಸುವುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಒಪ್ಪೋ ಫೈಂಡ್‌ X7 ಅಲ್ಟ್ರಾ ಫೋನ್‌ ಅನಾವರಣ! ಫೀಚರ್ಸ್‌ ಕೇಳಿ ದಂಗಾದ ಟೆಕ್‌ ವಲಯ!

ಒಪ್ಪೋ ಫೈಂಡ್‌ X7 ಅಲ್ಟ್ರಾ ಕ್ಯಾಮೆರಾ ಸೆಟಪ್‌ ಏನಿದೆ?
ಒಪ್ಪೋ ಫೈಂಡ್‌ X7 ಅಲ್ಟ್ರಾ ಸ್ಮಾರ್ಟ್‌ಫೋನ್‌ ಎರಡು ಪೆರಿಸ್ಕೋಪ್ ಕ್ಯಾಮೆರಾಗಳನ್ನು ಒಳಗೊಂಡಿರುವ ಮೊದಲ ಸ್ಮಾರ್ಟ್‌ಫೋನ್ ಎನಿಸಿಕೊಂಡಿದೆ. ಅಲ್ಲದೆ 1-ಇಂಚಿನ Sony LYT-900 ಸೆನ್ಸಾರ್‌ ಒಳಗೊಂಡ ಮೊದಲ ಫೋನ್‌ ಇದಾಗಿದೆ. ಈ ಫೋನ್‌ 50 ಮೆಗಾಪಿಕ್ಸೆಲ್ ಕ್ಯಾಮೆರಾಗಳನ್ನು ಒಳಗೊಂಡಿರುವ ಹ್ಯಾಸೆಲ್ಬ್ಲಾಡ್-ಟ್ಯೂನ್ಡ್ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದಲ್ಲದೆ 32 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಪಡೆದುಕೊಂಡಿದೆ.

ಒಪ್ಪೋ ಫೈಂಡ್‌ X7 ಅಲ್ಟ್ರಾ ಬ್ಯಾಟರಿ ಮತ್ತು ಇತರೆ
ಒಪ್ಪೋ ಫೈಂಡ್‌ X7 ಅಲ್ಟ್ರಾ ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 50W ವೈರ್‌ಲೆಸ್ ಚಾರ್ಜಿಂಗ್‌ ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ NFC, 5G, 4G LTE, Wi-Fi 7, ಬ್ಲೂಟೂತ್, USB 3.2 ಪೋರ್ಟ್, GPS/ A-GPS, ಮತ್ತು USB ಟೈಪ್-C ಪೋರ್ಟ್ ಸೇರಿವೆ. ಇದು ಉಪಗ್ರಹ ಸಂವಹನ ವೈಶಿಷ್ಟ್ಯವನ್ನು ಹೊಂದಿದೆ. ಇದಲ್ಲದೆ ಅಕ್ಸಿಲೆರೊಮೀಟರ್, ಗೈರೊಸ್ಕೋಪ್, ಪ್ರಾಕ್ಸಿಮಿಟಿ ಸೆನ್ಸಾರ್‌ ಮತ್ತು ಭೂಕಾಂತೀಯ ಸೆನ್ಸಾರ್‌ ಅನ್ನು ಒಳಗೊಂಡಿದೆ.

ಒಪ್ಪೋ ಫೈಂಡ್‌ X7 ಅಲ್ಟ್ರಾ ಫೋನ್‌ ಅನಾವರಣ! ಫೀಚರ್ಸ್‌ ಕೇಳಿ ದಂಗಾದ ಟೆಕ್‌ ವಲಯ!

ಒಪ್ಪೋ ಫೈಂಡ್‌ X7 ಅಲ್ಟ್ರಾ ಬೆಲೆ ಮತ್ತು ಲಭ್ಯತೆ
OPPO Find X7 Ultra ಸ್ಮಾರ್ಟ್‌ಫೋನ್‌ ಚೀನಾದಲ್ಲಿ ಬಿಡುಗಡೆ ಆಗಿದೆ. ಇದರ ಬೇಸ್‌ ಮಾಡೆಲ್‌ 12GB RAM + 256GB ಸ್ಟೋರೇಜ್ ಮಾದರಿಯು CNY 5,999 (ಸುಮಾರು 70,000ರೂ)ಬೆಲೆ ಹೊಂದಿದೆ. ಇನ್ನು 16GB RAM + 256GB ಸ್ಟೋರೇಜ್ ಆವೃತ್ತಿಯ ಬೆಲೆ CNY 6,499 (ಸುಮಾರು 75,000ರೂ)ಆಗಿದೆ. ಆದರೆ 16GB RAM + 512GB ಆಯ್ಕೆಯು CNY 6,999 (ಸುಮಾರು 80,000ರೂ) ಬೆಲೆ ಹೊಂದಿದೆ. ಇದನ್ನು ಪೈನ್ ಶ್ಯಾಡೋ, ಸಿಲ್ವರ್ ಮೂನ್, ವೈಸ್ಟ್ ಸೀ ಮತ್ತು ಸ್ಕೈ ಬಣ್ಣದ ಆಯ್ಕೆಯಲ್ಲಿ ಬರಲಿದೆ.

Best Mobiles in India

English summary
OPPO Find X7 Ultra with 50MP Quad camera setup launched: Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+