20 ಸಾವಿರದ ಒಳಗೆ ಬರುತ್ತಿದೆ ಒಪ್ಪೊವಿನ 'ಡಿಸ್‌ಪ್ಲೇ ಫಿಂಗರ್‌ಪ್ರಿಂಟ್' ಸ್ಮಾರ್ಟ್‌ಫೋನ್!!
ಭಾರತದಲ್ಲಿ ತನ್ನ ಪ್ರೀಮಿಯಮ್ ಸ್ಮಾರ್ಟ್‌ಫೋನ್‌ಗಳ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳುವವತ್ತ ಹೆಜ್ಜೆಹಾಕಿರುವ ಸೆಲ್ಫೀ ಮಾಸ್ಟರ್ ಕಂಪೆನಿ ಒಪ್ಪೊ ಇದೀಗ ಮತ್ತೊಂದು ಸಿಹಿಸುದ್ದಿ ನೀಡಿದೆ. ಇತ್ತೀಚಿಗಷ್ಟೇ 'ಒಪ್ಪೊ R17 ಪ್ರೊ' ನಂತಹ ಪ್ರೀಮಿಯಮ್ ಸ್ಮಾರ್ಟ್‌ಫೋನ್ ಒಂದನ್ನು ಬಿಡುಗಡೆ ಮಾಡಿದ್ದ ಕಂಪೆನಿ, ಇದೀಗ ನೂತನ ಸರಣಿಯೊಂದರ ಮೂಲಕ ಇತ್ತೀಚಿನ ಡಿಸ್‌ಪ್ಲೇ, ಕ್ಯಾಮೆರಾ, ಭದ್ರತೆ ಮತ್ತು ವೇಗದ ಚಾರ್ಜಿಂಗ್ ತಂತ್ರಜ್ಞಾನಗಳನ್ನು ಹೊತ್ತ ಸ್ಮಾರ್ಟ್‌ಫೋನ್ ಒಂದನ್ನು ದೇಶದಲ್ಲಿ ಬಿಡುಗಡೆ ಮಾಡುವುದಾಗಿ ತಿಳಿಸಿದೆ.
ಹೌದು, ಭಾರತದಲ್ಲಿ ಜನಸಾಮಾನ್ಯರಿಗೂ ಅತ್ಯಾಧುನಿಕ ಮೊಬೈಲ್ ತಂತ್ರಜ್ಞಾನಗಳನ್ನು ತಲುಪಿಸುವ ಸಲುವಾಗಿ ಒಪ್ಪೊ ಕಂಪೆನಿ 'ಒಪ್ಪೊ ಕೆ'(oppo K) ಸರಣಿಯ ಸ್ಮಾರ್ಟ್‌ಫೋನ್ ಒಂದನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ತಿಳಿಸಿದೆ. ಮಧ್ಯ ಶ್ರೇಣಿಯ ಬೆಲೆಯಲ್ಲಿ ಹೈ ಎಂಡ್ ಫೀಚರ್ಸ್ ಹೊಂದಿರುವ ಸ್ಮಾರ್ಟ್‌ಫೋನ್ ಇದಾಗಿದ್ದು, 20,000 ರೂ. ಬೆಲೆಯ ಒಳಗೆ ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಫೀಚರ್ ಅನ್ನು ಹೊಂದಿರಲಿದೆ ಎಂಬ ವಿಶೇಷ ಮಾಹಿತಿಯನ್ನು ನೀಡಿದೆ.

ಹಾಗಾಗಿ ಇದನ್ನು ನಾವು ಒಪ್ಪೊ ಕಂಪೆನಿ ಇತ್ತೀಚಿಗಷ್ಟೇ ಚೀನಾದಲ್ಲಿ ಬಿಡುಗಡೆ ಮಾಡಿದ 'ಒಪ್ಪೊ ಕೆ1' ಸ್ಮಾರ್ಟ್‌ಫೋನ್ ಎಂದು ನಾವು ತಿಳಿಯಬಹುದಾಗಿದ್ದು, ಈ ಸ್ಮಾರ್ಟ್‌ಫೋನ್ ಭಾರತದಲ್ಲಿ 17 ರಿಂದ 18 ಸಾವಿರ ರೂ.ಗಳ ಆಸುಪಾಸಿನಲ್ಲಿ ಬಿಡುಗಡೆಯಾಗುವುದನ್ನು ನಿರೀಕ್ಷಿಸಬಹುದಾಗಿದೆ. ಹಾಗಾದರೆ, ಒಪ್ಪೊ ಕಂಪೆನಿ ಬಿಡುಗಡೆ ಮಾಡಲು ಸಜ್ಜಾಗಿರುವ 'ಒಪ್ಪೊ ಕೆ1' ಸ್ಮಾರ್ಟ್‌ಫೋನಿನ ವಿಶೇಷತೆಗಳು ಯಾವುವು?, ಈ ಸ್ಮಾರ್ಟ್‌ಪೋನ್ ಖರೀದಿಗೆ ಏನೆಲ್ಲಾ ಕಾರಣಗಳಿವೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಭಾರತದಲ್ಲಿ 'ಒಪ್ಪೊ ಕೆ1' ಸ್ಮಾರ್ಟ್‌ಫೋನ್ ಬಿಡುಗಡೆ!
ಮೊದಲೇ ಹೇಳಿದಂತೆ ಭಾರತದಲ್ಲಿ ಜನಸಾಮಾನ್ಯರಿಗೂ ಸಹ ಅಂತಹ ಅತ್ಯಾಧುನಿಕ ಮೊಬೈಲ್ ತಂತ್ರಜ್ಞಾನಗಳನ್ನು ನೀಡಲು ಬಯಸಿದೆ. ಹಾಗಾಗಿ, ಇದಕ್ಕೆ 'ಒಪ್ಪೊ ಕೆ1' ಗಿಂತ ಮತ್ತೊಂದು ಸ್ಮಾರ್ಟ್‌ಫೋನ್ ಇಲ್ಲ ಎಂದು ಹೇಳಬಹುದು. ಮಧ್ಯ ಶ್ರೇಣಿಯ ಬೆಲೆಯಲ್ಲಿ ಫ್ಲ್ಯಾಗ್‌ಶಿಪ್ ವೈಶಿಷ್ಟ್ಯಗಳನ್ನು ಹೊಂದಿರುವ ಕೆ ಸೀರಿಸ್ ಸ್ಮಾರ್ಟ್‌ಫೋನ್ ಇದಾಗಿದ್ದು, ಇನ್ ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಫೀಚರ್‌ನಿಂದ ಪ್ಯಾಕ್ ಆಗಿದೆ. ಈಗಾಗಲೇ ಚೀನಾದಲ್ಲಿ ಬಿಡುಗಡೆಯಾಗಿರುವ ಈ ಸ್ಮಾರ್ಟ್‌ಪೋನ್ ಅಲ್ಲಿ ಭಾರೀ ಯಶಸ್ಸನ್ನು ಸಾಧಿಸಿದೆ.

20K ಅಡಿಯಲ್ಲಿ ಡಿಸ್‌ಪ್ಲೇ ಫಿಂಗರ್‌ಪ್ರಿಂಟ್!
ಡಿಸ್‌ಪ್ಲೇ ಫಿಂಗರ್‌ಪ್ರಿಂಟ್‌ನಂತಹ ಅತ್ಯಾಧುನಿಕ ಮೊಬೈಲ್ ತಂತ್ರಜ್ಞಾನವು 20 ಸಾವಿರ ರೂ.ಒಳಗಿನ ಸ್ಮಾರ್ಟ್‌ಫೋನಿನಲ್ಲಿ ಬರಲಿದೆ ಎಂದು ಒಪ್ಪೊ ಈಗಾಗಲೇ ಸ್ಪಷ್ಟಪಡಿಸಿದೆ. ಇಂತಹ ಅತ್ಯಾಧುನಿಕ ಮೊಬೈಲ್ ತಂತ್ರಜ್ಞಾನವು 20 ಸಾವಿರ ರೂಪಾಯಿಗಳ ಒಳಗೆ ಜನರಿಗೆ ಸಿಗುತ್ತಿರುವುದು ನಿಸ್ಸಂಶಯವಾಗಿ ಮೊಬೈಲ್ ಮಾರುಕಟ್ಟೆಯಲ್ಲಿ ಸ್ಪರ್ಧೆಯನ್ನು ಹೆಚ್ಚಿಸಲಿದೆ. ಇನ್-ಸ್ಕ್ರೀನ್ ಬಯೋಮೆಟ್ರಿಕ್ ತಂತ್ರಜ್ಞಾನವು ಸಾಟಿಯಿಲ್ಲದ ಮಲ್ಟಿಮೀಡಿಯಾ ವೀಕ್ಷಣೆಯ ಅನುಭವಕ್ಕಾಗಿ ಕಾರಣವಾಗುವುದರಿಂದ ಈ ಮೊಬೈಲ್ ಖರೀದಿಗೆ ಗ್ರಾಹಕ ಮುಂದಾಗಬಹುದು.

ಭಾರೀ ನಿರೀಕ್ಷೆಯಲ್ಲಿ 'ಒಪ್ಪೊ ಕೆ1'
20 ಸಾವಿರ ರೂ.ಒಳಗಿನ ಸ್ಮಾರ್ಟ್‌ಫೋನಿನಲ್ಲಿ ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ತಂತ್ರಜ್ಞಾನದ 'ಒಪ್ಪೊ ಕೆ1' ಬಗ್ಗೆ ಮೊಬೈಲ್ ಪ್ರಿಯರು ಭಾರೀ ನಿರೀಕ್ಷೆಯನ್ನು ಹೊಂದಬಹುದಾಗಿದೆ. ಈ ಸ್ಮಾರ್ಟ್‌ಫೋನ್ ಅನ್ನು ಮಾರಾಟ ಮಾಡಲು ಅಮೆಜಾನ್ ಅಥವಾ ಫ್ಲಿಪ್‌ಕಾರ್ಟ್ ಆಯ್ಕೆ ಮಾಡಿಕೊಳ್ಳಲು ನಾವು ನಿರೀಕ್ಷಿಸುತ್ತಿದ್ದೇವೆ. ಆ ಮೂಲಕ ಸ್ಮಾರ್ಟ್‌ಫೋನ್ ಮೇಲೆ ವಿವಿಧ ಕೊಡುಗೆಗಳನ್ನು, ಕ್ಯಾಶ್‌ಬ್ಯಾಕ್ ಮತ್ತು ಹೊಸ ಫೋನ್ ಮಾರಾಟದ ವಿನಿಮಯದ ಕೊಡುಗೆಗಳನ್ನು ನೀಡುವುದಾಗಿ ಕಂಪೆನಿ ಹೇಳಿಕೊಂಡಿರುವುದು 'ಒಪ್ಪೊ ಕೆ1' ನಿರೀಕ್ಷೆಯನ್ನು ಹೆಚ್ಚಿಸಿದೆ.

ಹೊಸ ಇ ಕಾಮರ್ಸ್ ಮಾರಾಟ ತಂತ್ರಗಳು
ಭಾರತದಲ್ಲಿ ಆಫ್ಲೈನ್ ಪ್ಲೇಯರ್ ಆಗಿ ಗುರುತಿಸಿಕೊಂಡಿರುವ ಒಪ್ಪೊ ಇದೀಗ ಆನ್‌ಲೈನ್ ಮೂಲಕ ಬ್ರ್ಯಾಂಡ್ ಪ್ರಚಾರಕ್ಕೆ ಸೂಕ್ತ ಸಮಯ ಎಂದು ತಿಳಿದಿದೆ. ಹಾಗಾಗಿ, ಭಾರತೀಯ ಗ್ರಾಹಕರಿಗೆ ಒಪ್ಪೊ ಹೊಸ ಸರಣಿಯನ್ನು ಆನ್ಲೈನ್ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ. ಆದರೆ ಇದು ಒಪ್ಪೊ ಆಫ್ಲೈನ್ ಮಾರಾಟ ಮೋಡ್ ಅನ್ನು ಸ್ಥಗಿತಗೊಳಿಸುತ್ತದೆ ಎಂದು ಅರ್ಥವಲ್ಲ. ಒಪ್ಪೊ ಇನ್ನೂ ಅದರ ಉತ್ಪನ್ನಗಳನ್ನು ಆಫ್ಲೈನ್ನಲ್ಲಿ ಮಾರಾಟ ಮಾಡಲು ಹೋಗುತ್ತದೆ ಮತ್ತು ಆನ್ಲೈನ್ ಮತ್ತು ಆಫ್ಲೈನ್ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಸೇವೆ ಬೆಂಬಲವನ್ನು ನೀಡುತ್ತದೆ.


Click it and Unblock the Notifications








