Home
ಸುದ್ದಿಜಾಲ

Oppo; ಜೂನ್ 13ರದು ಭಾರತದಲ್ಲಿ ಒಪ್ಪೋ F27 Pro+ ಸ್ಮಾರ್ಟ್‌ಫೋನ್ ಲಾಂಚ್ ! ಫೀಚರ್ಸ್‌ ಏನಿರಲಿವೆ ?

ಕಡಿಮೆ ಬಜೆಟ್‌ನಲ್ಲಿ ಉತ್ತಮ ಫೀಚರ್ಸ್‌ ಹೊಂದಿರುವ ಸ್ಮಾರ್ಟ್‌ಫೋನ್‌ಗಳನ್ನು (Smartphones) ನೀಡುತ್ತಾ ಬಂದಿರುವ ಒಪ್ಪೋ ಸಂಸ್ಥೆ, ಅತೀ ಹೆಚ್ಚು ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ, ಭಾರತೀಯ ಮಾರುಟಗಟ್ಟೆಯಲ್ಲಿ ತನ್ನದೇ ಆದ ಗ್ರಾಹಕರ ಬಳಗವನ್ನೇ ಈ ಸಂಸ್ಥೆ ಹೊಂದಿದೆ. ಇದೀಗ ಸಂಸ್ಥೆ ಇದೇ ಜೂನ್ 13ರಂದು ಭಾರತದಲ್ಲಿ Oppo F27 Pro+ 5G ಸರಣಿಯ ಮೊಬೈಲ್‌ ಪ್ರಾರಂಭಿಸಲು ಸಜ್ಜಾಗಿದೆ. ಈ ಫೋನ್ ಧೀರ್ಘ ಕಾಲಿನ ಬಾಳಿಕೆಗೆ ಆದ್ಯತೆ ನೀಡಲಿದೆ ಎಂದು ತಿಳಿಸಿದೆ. ಮಳೆಗಾಲದಲ್ಲಿ ಹೊಂದಿಕೊಳ್ಳುವಂತಹ ಈ ಸ್ಮಾರ್ಟ್‌ಫೋನ್‌ ಕುರಿತು ಇನ್ನಷ್ಟು ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ. ಪೂರ್ತಿ ಲೇಖನ ಓದಿ.

OPPO F27 Pro+ 5G ಇದು ಧೀರ್ಘಬಾಳಿಕೆಗೆ ಆದ್ಯತೆ ನೀಡಲಿದ್ದು, ಇದನ್ನು ಸಾಬೀತಪಡಿಸಲು ಹಲವು ಪ್ರಮಾಣೀಕರಣಗಳನ್ನು ಹೊಂದಿದೆ ಎಂದು ಎಂದು ಸಂಸ್ಥೆ ಹೇಳಿಕೊಂಡಿದೆ, ಇದರಲ್ಲಿ ಪ್ರಮುಖವಾಗಿ ಧೂಳು ಹಾಗೂ ನೀರಿನಿಂದ ರಕ್ಷಣೆ ಪಡೆಯಲು IP ರೇಟಿಂಗ್‌ ತಂತ್ರಾಂಶವನ್ನು ಈ ಸ್ಮಾರ್ಟ್‌ಫೋನ್ ಹೊಂದಿರಲಿದೆ. ಸ್ಮಾರ್ಟ್‌ಫೋನ್‌ IP66 ತಂತ್ರಾಂಶ ಹೊಂದಿದ್ದು, ಇದು ಧೂಳು ಮತ್ತು ನೀರಿನ ಜೆಟ್‌ಗಳ ವಿರುದ್ದ ರಕ್ಷಿಸುತ್ತದೆ. IP68 ಇದು 30 ನಿಮಿಷಗಳ ಕಾಲ 1.5 ಮೀಟರ್ ವರೆಗೆ ಧೂಳು ಮತ್ತು ನೀರಿನಿಂದ ರಕ್ಷಣೆ ಒದಗಿಸಲಿದೆ. IP69 ಇದು ಅತ್ಯಂತ ಪ್ರಭಾವಶಾಲಿ ರಕ್ಷಣೆ ನೀಡಲಿದೆ ಇದು 80°C ತಲುಪುವ ತಾಪಮಾನದಲ್ಲಿ ಹಾಗೂ ಹೆಚ್ಚಿನ ಒತ್ತಡದ ನೀರಿನ ಜೆಟ್‌ಗಳಿಂದ ಫೋನ್ ಅನ್ನು ರಕ್ಷಿಸುತ್ತದೆ.

Oppo; ಜೂನ್ 13ರದು ಭಾರತದಲ್ಲಿ ಒಪ್ಪೋ F27 Pro+ ಸ್ಮಾರ್ಟ್‌ಫೋನ್ ಲಾಂಚ್

ಹೆಚ್ಚುವರಿಯಾಗಿ ಫೋನ್ ಮಿಲಿಟರಿ ದರ್ಜೆಯ ಬಾಳಿಕೆ ಮಾನದಂಡಗಳನ್ನು (MIL-STD-810H) ಹೊಂದಿರಲಿದೆ ಮತ್ತು ವರ್ಧಿತ ಡಿಸ್‌ಪ್ಲೇ ರಕ್ಷಣೆಗಾಗಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ಅನ್ನು ಒಳಗೊಂಡಿದೆ.

ನೀರಿನಿಂದ ರಕ್ಷಣೆ ಕುರಿತು ವಿವರಗಳು:

Oppo F27 Pro Plus ನೀರಿನಿಂದ ರಕ್ಷಣೆ ಪಡೆಯುವ ಗುಣಗಳನ್ನು ಹೊಂದಿದ್ದು, ಮೈಕ್ರೊಫೋನ್, ಓಪನ್ ಸ್ಪೀಕರ್‌ಗಳು, SIM ಕಾರ್ಡ್ ಸ್ಲಾಟ್, ಪಿನ್‌ಹೋಲ್‌ ಮತ್ತು USB ಪೋರ್ಟ್‌ಗಳಿಗೆ ನೀರು ಹಾಗೂ ಧೂಳಿನಿಂದ ರಕ್ಷಣೆ ಒದಗಿಸಲಿದೆ ಎಂದು OPPO ಹೇಳಿದೆ. OPPO ಪ್ರಕಾರ ಓಫನ್ ಮೈಕ್ರೊಫೋನ್‌ಗಳು ಮತ್ತು ಇಯರ್‌ಪೀಸ್ ಸ್ಪೀಕರ್ ಅನ್ನು ಫಿಲ್ಮ್‌ನಿಂದ ಮುಚ್ಚಲಾಗುತ್ತದೆ, ಅದು ಮೊಬೈಲ್‌ ಮಳೆ ಅಥವಾ ನೀರಿನಲ್ಲಿ ಬಿದ್ದಾಗ ಆಡಿಯೋ ಹಾದುಹೋಗಲು ಅನುಮತಿಸುವುದರ ಜೊತೆಗೆ ನೀರನ್ನು ಹೊರಗಿಡುತ್ತದೆ ಮತ್ತು ಯುಎಸ್‌ಬಿ ಘಟಕವು ಸಿಲಿಕೋನ್ ರಿಂಗ್‌ನೊಂದಿಗೆ ಸುರಕ್ಷಿತವಾಗಿರಲು ಸಹಕರಿಸಲಿದೆ. ಡಿವೈಸ್‌ ಹೊಸ ಜಲನಿರೋಧಕ ಸರ್ಕ್ಯೂಟ್ ವಿನ್ಯಾಸವನ್ನು ಬಳಸಲಿದೆ ಎಂದು ಹೇಳಿದೆ. ಇದಲ್ಲದೆ ಡಿಸ್‌ಪ್ಲೇ ಒದ್ದೆಯಾದ ಸಂದರ್ಭದಲ್ಲಿಯೂ ಕೈಗಳಿಂದಲೂ ಸರಾಗವಾಗಿ ಕಾರ್ಯ ನಿರ್ವಹಿಸಬಹುದಾಗಿದೆ.

ಬಾಳಿಕೆ ಜೊತೆಗೆ ಸ್ಟೈಲಿಶ್:

Oppo F27 Pro+ 5G ಹಗುರವಾದ ತೆಳುವಾದ ವಿನ್ಯಾಸ ಹೊಂದಿದ್ದು ಇದನ್ನು ದೇಶದ ರಗ್ಗಡ್ ಡಿಸೈನ್‌ ಸ್ಮಾರ್ಟ್‌ಫೋನ್‌ ಆಗಿರಲಿದೆ ಎಂದು ಸಂಸ್ಥೆ ಹೇಳಿದೆ. ಫೋನ್ ಮಿಡ್‌ನೈಟ್ ನೇವಿ ಮತ್ತು ಡಸ್ಕ್ ಪಿಂಕ್ ಎರಡು ಬಣ್ಣಗಳಲ್ಲಿ ಬಿಡುಗಡೆಯಾಗಲಿದೆ ಮತ್ತು ಉತ್ತಮ ಸ್ಪರ್ಶಕ್ಕಾಗಿ ಕಾಸ್ಮೊಸ್ ರಿಂಗ್ ವಿನ್ಯಾಸದ ಜೊತೆಗೆ ಲೆದರ್ ಬ್ಯಾಕ್ ಅನ್ನು ಒಳಗೊಂಡಿದೆ.

OPPO F27 Pro+ ಫೀಚರ್ಸ್‌:

ಬಾಳಿಕೆಯ ಮೇಲೆ ಗಮನ ಕೇಂದ್ರೀಕರಿಸಿರುವ ಮೊಬೈಲ್ ಇದಾಗಿದ್ದು, ಇದರ ​ನಿರೀಕ್ಷಿತ ವಿಶೇಷಣಗಳು ಈ ವರ್ಷದ ಆರಂಭದಲ್ಲಿ ಚೀನಾದಲ್ಲಿ ಬಿಡುಗಡೆಯಾದ OPPO A3 Pro ಅನ್ನು ಹೋಲುತ್ತವೆ ಎಂದು ಹೇಳಲಾಗಿದೆ. ಇದು 6.7 ಇಂಚಿನ ಫುಲ್ HD+ 120Hz ಕವರ್ಡ್‌ OLED ಡಿಸ್‌ಪ್ಲೇ, ಡೈಮೆನ್ಸಿಟಿ 7050 ಪ್ರೊಸೆಸರ್, 2MP ಡೆಪ್ತ್ ಸೆನ್ಸಾರ್ ಜೊತೆಗೆ 64MP ಪ್ರೈಮರಿ ರಿಯರ್ ಕ್ಯಾಮೆರಾ ಮತ್ತು 67W ಫಾಸ್ಟ್ ಚಾರ್ಜರ್ ಜೊತೆಗೆ 5000mAh ಬ್ಯಾಟರಿ ಹೊಂದಿದೆ.

Best Mobiles in India

English summary
Oppo is all set to launch the F27 Pro+ 5G series Smartphone in India on June 13. The smartphone is said to prioritize long-lasting durability.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+