ಒಪ್ಪೋ K10 5G: ಮೋಸ್ಟ್‌ ಸ್ಟೈಲಿಶ್ 5G ಪರ್ಫಾರ್ಮರ್ ಫೋನ್‌! ಬೆಲೆ ಕೇವಲ 17499ರೂ.!

|

ಒಪ್ಪೋ ಕಂಪೆನಿ ಪ್ರಾರಂಭದಿಂದಲೂ ಕೂಡ ಹೊಸತನಕ್ಕೆ ಹೆಸರುವಾಸಿಯಾಗಿದೆ. ಮಧ್ಯಮ ಶ್ರೇಣಿಯ ಫ್ಲ್ಯಾಗ್‌ಶಿಪ್‌ಗಳು ಮತ್ತು ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳಲ್ಲಿ ಸದಾ ಹೊಸ ಬೆಂಚ್‌ ಮಾರ್ಕ್‌ ಸೆಟ್‌ ಮಾಡುತ್ತಾ ಬಂದಿದೆ. ನೂತನ ಶೈಲಿ ಮತ್ತು ಕಾರ್ಯಕ್ಷಮತೆಯು ಒಪ್ಪೋ ಹ್ಯಾಂಡ್‌ಸೆಟ್‌ಗಳಿಗೆ ಸಮಾನಾರ್ಥಕವಾಗಿದೆ. ಇದೀಗ ಒಪ್ಪೋ ಕಂಪೆನಿ ಹೊಸ ವಿನ್ಯಾಸ ಹಾಗೂ ಡಿಸೈನ್‌ ಒಳಗೊಂಡಿರುವ ಹೊಸ ಒಪ್ಪೋ ಕೆ-ಸರಣಿಯನ್ನು ಹೊರತಂದಿದೆ. ಒಪ್ಪೋ K10 5G ಸ್ಮಾರ್ಟ್‌ಫೋನ್‌ ಪಾಕೆಟ್ ಸ್ನೇಹಿ ಬೆಲೆಯನ್ನು ಹೊಂದಿದೆಯಾದರೂ, ಹೆಚ್ಚಿನ ಬೆಲೆಯ ಸ್ಮಾರ್ಟ್‌ಫೋನ್‌ಗಳಲ್ಲಿ ಕಂಡುಬರುವ ಅನೇಕ ಫೀಚರ್ಸ್‌ಗಳನ್ನು ಒಳಗೊಂಡಿದೆ.

ಒಪ್ಪೋ K10 5G: ಮೋಸ್ಟ್‌ ಸ್ಟೈಲಿಶ್ 5G ಪರ್ಫಾರ್ಮರ್ ಫೋನ್‌! ಬೆಲೆ ಕೇವಲ 17499ರೂ.

ಇನ್ನು ಒಪ್ಪೋ K10 5G ಸ್ಮಾರ್ಟ್‌ಫೋನ್‌ ಮೊಸ್ಟ್‌ ಸ್ಟೈಲಿಶ್‌ ಮತ್ತು ಆಲ್‌ರೌಂಡರ್ 5G ಸ್ಮಾರ್ಟ್‌ಫೋನ್ ಆಗಿ ಹೇಗೆ ಗುರುತಿಸಿಕೊಂಡಿದೆ ಎನ್ನುವುದರ ವಿವರ ಇಲ್ಲಿದೆ.

ಫ್ಲ್ಯಾಗ್‌ಶಿಪ್‌ ಡಿಸೈನ್‌
ಒಪ್ಪೋ K10 5G ಸ್ಮಾರ್ಟ್‌ಫೋನ್‌ ಮೋಸ್ಟ್ ಸ್ಟೈಲಿಶ್‌ ಮತ್ತು ಎಲಿಗೆಂಟ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾಗಿದೆ. ಇದು ಕಾಂಪ್ಯಾಕ್ಟ್, ಸ್ಟ್ರೈಟ್‌-ಫ್ರೇಮ್ ವಿನ್ಯಾಸವನ್ನು ಒಳಗೊಂಡಿದ್ದು, ಅಲ್ಟ್ರಾ-ಸ್ಲಿಮ್ ಬಾಡಿಯನ್ನು ನೀಡುತ್ತದೆ. ಇನ್ನು ಈ ಹ್ಯಾಂಡ್‌ಸೆಟ್ ಒಪ್ಪೋ ಕಂಪೆನಿಯ ಅಸ್ಕರ್ ಒಪ್ಪೋ ಗ್ಲೋ ತಂತ್ರಜ್ಞಾನದೊಂದಿಗೆ ಬರುತ್ತದೆ. ಈ ಟೆಕ್ನಾಲಜಿ ಸಾಮಾನ್ಯವಾಗಿ ಪ್ರಮುಖ ಒಪ್ಪೋ ಫೋನ್‌ಗಳಲ್ಲಿ ಕಂಡುಬರುತ್ತದೆ. ಈ ಫೋನ್‌ನ ರಿಯರ್‌ ಪ್ಯಾನಲ್‌ ಮಿಶ್ರಿತ ಹೊಳಪು ಮತ್ತು ಮ್ಯಾಟ್ ವಿನ್ಯಾಸವನ್ನು ಹೊಂದಿದೆ. ಇದನ್ನು ಅತ್ಯಾಧುನಿಕ ಗ್ಲಿಟರ್ ಸ್ಯಾಂಡ್ ಪ್ರಕ್ರಿಯೆಯನ್ನು ಬಳಸಿಕೊಂಡು ಮಾಡಲಾಗಿದೆ. ಇದು ವಿಶಿಷ್ಟವಾದ ರೆಪ್ಲೆಕ್ಟಿವ್‌ ಮೆಟಲ್‌ ವಿನ್ಯಾಸವನ್ನು ಕ್ರಿಯೆಟ್‌ ಮಾಡಲಿದೆ ಮತ್ತು ಫೋನ್ ಫಿಂಗರ್‌ಪ್ರಿಂಟ್ ಮತ್ತು ಸ್ಕ್ರಾಚ್-ರೆಸಿಸ್ಟೆನ್ಸಿಯನ್ನು ನೀಡಲಿದೆ.

ಒಪ್ಪೋ K10 5G ಸ್ಮಾರ್ಟ್‌ಫೋನ್‌ ದಕ್ಷತಾಶಾಸ್ತ್ರವನ್ನು ಸಹ ಹೆಚ್ಚಿಸುತ್ತದೆ. ಇದರ ಫ್ಲಾಟ್ ವಿನ್ಯಾಸ ಮತ್ತು 7.99 ಎಂಎಂ ಚಾಸಿಸ್‌ನಿಂದಾಗಿ, ತೆಳ್ಳಗಿನ 5G ಡಿವೈಸ್‌ ಎನಿಸಿಕೊಂಡಿದೆ. ಇದು 5,000mAh ಬ್ಯಾಟರಿ ಸೆಲ್‌ನಲ್ಲಿ ಪ್ಯಾಕ್ ಮಾಡುತ್ತದೆ, ಒಂದೇ ಕೈಯಲ್ಲಿ ಈ ಸ್ಮಾರ್ಟ್‌ಫೋನ್‌ ಅನ್ನು ಬಳಸುವುದಕ್ಕೆ ಸಾಧ್ಯವಾಗಲಿದೆ.

ಒಪ್ಪೋ K10 5G: ಮೋಸ್ಟ್‌ ಸ್ಟೈಲಿಶ್ 5G ಪರ್ಫಾರ್ಮರ್ ಫೋನ್‌! ಬೆಲೆ ಕೇವಲ 17499ರೂ.

ಜೊತೆಗೆ, ಒಪ್ಪೋ K10 5G ಸ್ಮಾರ್ಟ್‌ಫೋನ್‌ ಹೆಚ್ಚು ಬಾಳಿಕೆ ಬರುವ ಹ್ಯಾಂಡ್‌ಸೆಟ್‌ಗಳಲ್ಲಿ ಒಂದಾಗಿದೆ. ಇದು IPX4 ವಾಟರ್‌-ರೆಸಿಸ್ಟೆನ್ಸಿಯನ್ನು ಹೊಂದಿದೆ. ಅಲ್ಲದೆ 130+ ಅಲ್ಟ್ರಾ-ಕಠಿಣ ವಿಶ್ವಾಸಾರ್ಹತೆ ಪರೀಕ್ಷೆಗಳಿಗೆ ಒಳಗಾಗಿದೆ. ಈ ಫೋನ್‌ ಅನ್ನು ನೀವು ಮಿಡ್‌ನೈಟ್ ಬ್ಲ್ಯಾಕ್ ಮತ್ತು ಓಷನ್ ಬ್ಲೂ ಕಲರ್‌ ಆಯ್ಕೆಗಳಲ್ಲಿ ಖರೀದಿಸಬಹುದು. ಇದರಲ್ಲಿ ನನ್ನ ನೆಚ್ಚಿನ ಆಯ್ಕೆ ಓಷನ್ ಬ್ಲೂ ಬಣ್ಣವಾಗಿದೆ.

ಒಪ್ಪೋ K10 5G: ಮೋಸ್ಟ್‌ ಸ್ಟೈಲಿಶ್ 5G ಪರ್ಫಾರ್ಮರ್ ಫೋನ್‌! ಬೆಲೆ ಕೇವಲ 17499ರೂ.

ಲ್ಯಾಗ್‌-ಫ್ರೀ ಪ್ರೊಸೆಸಿಂಗ್ ಮತ್ತು ಮಲ್ಟಿ ಟಾಸ್ಕಿಂಗ್‌ ಪರ್ಫಾರ್ಮೆನ್ಸ್
ಇನ್ನು ಈ ಸ್ಮಾರ್ಟ್‌ಫೋನ್‌ 5G ಸಕ್ರಿಯಗೊಳಿಸಿದ ಮೀಡಿಯಾಟೆಕ್‌ ಡೈಮೆನ್ಸಿಟಿ 810 ಚಿಪ್‌ಸೆಟ್‌ ಅನ್ನು ಹೊಂದಿದೆ. ಇದು 2.4GHz ಕ್ಲಾಕ್‌ ಸ್ಪೀಡ್‌ ನೀಡುತ್ತದೆ. 6nm ಪ್ರೊಸೆಸರ್ ಎಲ್ಲದರ ಜೊತೆಗೆ ಅತ್ಯುತ್ತಮ ಕಾರ್ಯಕ್ಷಮತೆಯನ್ನು ನೀಡುತ್ತದೆ. ಗೇಮಿಂಗ್ ಅಥವಾ ಭಾರೀ ಅಪ್ಲಿಕೇಶನ್‌ಗಳಂತಹ ಉನ್ನತ-ಸಂಪನ್ಮೂಲ ಕಾರ್ಯಗಳು ಆಗಿರಲಿ ಎಲ್ಲವನ್ನೂ ನಿಭಾಯಿಸಲು ಇದು ಸಮರ್ಥವಾಗಿದೆ. ಮಲ್ಟಿ ಟಾಸ್ಕ್‌ ಅನ್ನು ಬೆಣ್ಣೆಯಂತೆ ಮೃದುವಾಗಿ ನಿಭಾಯಿಸುತ್ತದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್‌ 5GB ವರೆಗೆ RAM ವಿಸ್ತರಣೆಯನ್ನು ಮಾಡಬಹುದಾಗಿದ್ದು, ಒಟ್ಟು 8GB RAM ಆಯ್ಕೆ ಲಭ್ಯವಾಗಲಿದೆ.

ಒಪ್ಪೋ K10 5G: ಮೋಸ್ಟ್‌ ಸ್ಟೈಲಿಶ್ 5G ಪರ್ಫಾರ್ಮರ್ ಫೋನ್‌! ಬೆಲೆ ಕೇವಲ 17499ರೂ.

ಒಪ್ಪೋ K10 5G ಸ್ಮಾರ್ಟ್‌ಫೋನ್‌ 128 GB ಇಂಟರ್‌ಬಿಲ್ಟ್‌ ಸ್ಟೋರೇಜ್‌ ಅನ್ನು ಹೊಂದಿದೆ. ಇದು ಏಳು 5G ಬ್ಯಾಂಡ್‌ಗಳನ್ನು (n1/n5/n8/n28A/n41/n77/n78) ಬೆಂಬಲಿಸುತ್ತದೆ. ಅಲ್ಲದೆ 5G ನೆಟ್‌ವರ್ಕ್‌ ದೇಶದಲ್ಲಿ ಲಭ್ಯವಾಗದ ನಂತರ ವೇಗದ ಇಂಟರ್ನೆಟ್ ಸಂಪರ್ಕವನ್ನು ಬೆಂಬಲಿಸುವುದಕ್ಕೆ ಇದು ಸಿದ್ಧವಾಗಿದೆ.

ದೀರ್ಘಕಾಲ ಬಾಳಿಕೆ ಬರುವ ಬ್ಯಾಟರಿ ಮತ್ತು ಫೀಚರ್-ರಿಚ್ ಸಾಫ್ಟ್‌ವೇರ್
ಒಪ್ಪೋ K10 5G ಸ್ಮಾರ್ಟ್‌ಫೋನ್‌ 33W SUPERVOOCTM ವೇಗದ ಚಾರ್ಜಿಂಗ್ ಬೆಂಬಲಿಸುವ 5,000mAh ಬ್ಯಾಟರಿಯನ್ನು ಹೊಂದಿದೆ. ಇದನ್ನು ಭಾರೀ ಬಳಕೆ ಮಾಡಿದರೂ ಕೂಡ ನೇರವಾಗಿ ಎರಡು ದಿನಗಳವರೆಗೆ ಬಾಳಿಕೆ ಬರಲಿದೆ. ಈ ಸ್ಮಾರ್ಟ್‌ಫೋನ್‌ಗೆ 33W ವೇಗದ ಚಾರ್ಜರ್ ಯಾವುದೇ ಸಮಯದಲ್ಲಿ ಬ್ಯಾಟರಿಯನ್ನು ಚಾರ್ಜ್‌ ಮಾಡಲಿದೆ. ಇನ್ನು 5,000mAh ಬ್ಯಾಟರಿಯನ್ನು ಫುಲ್‌ ಚಾರ್ಜ್‌ ಮಾಡಲು ಕೇವಲ ಒಂದು ಗಂಟೆ ಸಮಯವನ್ನು ತೆಗೆದುಕೊಳ್ಳುತ್ತದೆ. ಒಪ್ಪೋ K10 5G ಫೋನ್‌ ರಿವರ್ಸ್ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತದೆ. ಜೊತೆಗೆ USB ಕೇಬಲ್ ಮೂಲಕ ಇತರ ಡಿಬವೈಸ್‌ಗಳನ್ನು ರೀಚಾರ್ಜ್ ಮಾಡಬಹುದಾಗಿದೆ.

ಒಪ್ಪೋ K10 5G: ಮೋಸ್ಟ್‌ ಸ್ಟೈಲಿಶ್ 5G ಪರ್ಫಾರ್ಮರ್ ಫೋನ್‌! ಬೆಲೆ ಕೇವಲ 17499ರೂ.

ಇದಲ್ಲದೆ, ಹ್ಯಾಂಡ್‌ಸೆಟ್ 'ಚಾರ್ಜಿಂಗ್ ಹಾರ್ಡ್‌ವೇರ್ ಪ್ರೊಟೆಕ್ಷನ್' ತಂತ್ರಜ್ಞಾನಗಳ ಶ್ರೇಣಿಯನ್ನು ಬೆಂಬಲಿಸುವುದರಿಂದ ನೀವು ಒಪ್ಪೋ K10 5G ಯೊಂದಿಗೆ ಚಿಂತೆ-ಮುಕ್ತ ಚಾರ್ಜಿಂಗ್ ಅನುಭವವನ್ನು ಹೊಂದಬಹುದು. ಇಂತಹ ಬ್ಯಾಟರಿ-ಕೇಂದ್ರಿತ ಚಾರ್ಜಿಂಗ್ ಫೀಚರ್ಸ್‌ ಹೆಚ್ಚಿನ ಬೆಲೆಯ ಸ್ಮಾರ್ಟ್‌ಫೋನ್‌ಗಳಲ್ಲಿ ಕಂಡುಬರಲಿದೆ.

ಇನ್ನು ಸಾಫ್ಟ್‌ವೇರ್‌ಗೆ ಸಂಬಂಧಿಸಿದಂತೆ, ಈ ಹ್ಯಾಂಡ್‌ಸೆಟ್ ColorOS 12.1 (Android 12) ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಸಾಕಷ್ಟು ಗ್ರಾಹಕೀಕರಣ ಫೀಚರ್ಸ್‌ಗಳನ್ನು ನೀಡುತ್ತದೆ. ಬ್ಯಾಕ್‌ಗ್ರೌಂಡ್‌ ಸ್ಟ್ರೀಮ್, ಫ್ಲೆಕ್ಸ್‌ಡ್ರಾಪ್, ಸ್ಮಾರ್ಟ್ ಸೈಡ್ ಬಾರ್ ಮತ್ತು ದೈನಂದಿನ ದಕ್ಷತೆ ಹೆಚ್ಚಿಸುವ ಗೂಗಲ್‌ ಲೆನ್ಸ್‌ನೊಂದಿಗೆ ಥ್ರೀ-ಫಿಂಗರ್ ಟ್ರಾನ್ಸ್‌ಲೇಟ್‌ನಂತಹ ಉಪಯುಕ್ತ ಫೀಚರ್ಸ್‌ಗಳನ್ನು ಕೂಡ ಒಳಗೊಂಡಿದೆ.

ಸೆಗ್ಮೆಂಟ್‌-ಲೀಡಿಂಗ್‌ ಆಡಿಯೋ ಮತ್ತು ವೀಡಿಯೊ ಗುಣಮಟ್ಟ
ಒಪ್ಪೋ K10 5G ಸ್ಮಾರ್ಟ್‌ಫೋನ್‌ ಅದರ ಬೆಲೆ ವರ್ಗದಲ್ಲಿ ಬಹುಮುಖ ಮೊಬೈಲ್ ಸ್ಪೀಕರ್ ಸೆಟಪ್ ಅನ್ನು ತರುತ್ತದೆ. ಈ ಹ್ಯಾಂಡ್‌ಸೆಟ್ 'ಅಲ್ಟ್ರಾ-ಲೀನಿಯರ್ ಡ್ಯುಯಲ್ ಸ್ಟಿರಿಯೊ' ಸ್ಪೀಕರ್‌ಗಳನ್ನು ಹೊಂದಿದೆ. ಇದು ಕಡಿಮೆ ಬ್ಯಾಟರಿ ಕವರ್ ಕಂಪನದೊಂದಿಗೆ ಸಿನಿಮಾ ದರ್ಜೆಯ ಸೌಂಡ್‌ಅನ್ನು ನೀಡುತ್ತದೆ. ಅಲ್ಲದೆ ಸ್ಪೀಕರ್‌ಗಳು ಜೋರಾದ ಮತ್ತು ಗರಿಗರಿಯಾದ ಸೌಂಡ್‌ ಪ್ರೊಡ್ಯೂಶ್‌ ಮಾಡಲಿದೆ. ಅದು ಗರಿಷ್ಠ ವಾಲ್ಯೂಮ್ ಮಟ್ಟದಲ್ಲಿಯೂ ಕೂಡ ಡಿಸ್ಟಾರ್ಟ್ ಮಾಡುವುದಿಲ್ಲ.

ಒಪ್ಪೋ K10 5G: ಮೋಸ್ಟ್‌ ಸ್ಟೈಲಿಶ್ 5G ಪರ್ಫಾರ್ಮರ್ ಫೋನ್‌! ಬೆಲೆ ಕೇವಲ 17499ರೂ.

ಒಪ್ಪೋ K10 5G ಫೋನ್‌ನಲ್ಲಿ ಉತ್ತಮ ಗುಣಮಟ್ಟದ ಆಡಿಯೊ ಕಾರ್ಯಕ್ಷಮತೆಯನ್ನು ಡಿವೈಸ್‌ನ ರಿಂಗ್‌ಟೋನ್‌ಗಳ ಮೂಲಕವೂ ಕೂಡ ಅನುಭವಿಸಬಹುದು. ಇದಕ್ಕಾಗಿ ಧ್ವನಿ ವರ್ಧನೆ ತಜ್ಞ ಡಿರಾಕ್‌ನೊಂದಿಗೆ ಒಪ್ಪೋ ಪಾಲುದಾರಿಕೆ ಮಾಡಿಕೊಂಡಿದೆ. ಒಪ್ಪೋ K10 5G ಕಸ್ಟಮ್-ನಿರ್ಮಿತ 3D ಸರೌಂಡ್ ಸೌಂಡ್ ರಿಂಗ್‌ಟೋನ್‌ಗಳೊಂದಿಗೆ ರವಾನಿಸುತ್ತದೆ. ಅದು ಬ್ರಿಂಗ್‌ ಔಟ್ ದಿ ಟ್ರೂ ಪವರ್ ದಿ ಅಲ್ಟ್ರಾ-ಲೀನಿಯರ್ ಸ್ಪೀಕರ್ ಅರೇಯನ್ನು ನೀಡಲಿದೆ.

ಇದಲ್ಲದೆ ಒಪ್ಪೋ K10 5G ಯ 6.56 HD+ ಕಲರ್-ರಿಚ್ ಡಿಸ್‌ಪ್ಲೇಯನ್ನು ಹೊಂದಿದೆ. ಇದರ HD+ ಸ್ಕ್ರೀನ್‌ ಕಲರ್‌ ವೈಬ್ರೆನ್ಸಿ ಮತ್ತು ಸ್ಮೂತ್‌ ಟಚ್‌ ರೆಸ್ಪಾನ್ಸ್‌ಮೂಲ ನಿಮ್ಮ ಮಂತ್ರಮುಗ್ಧರನ್ನಾಗಿಸುತ್ತದೆ. ಇದು UI ನ್ಯಾವಿಗೇಶನ್ ಮತ್ತು ಸ್ಕ್ರೋಲಿಂಗ್ ಕೂಡ ಸಾಕಷ್ಟು ಸ್ಮೂತ್‌ ಆಗಿದ್ದು 90Hz ರಿಫ್ರೆಶ್ ರೇಟ್‌ ಹೊಂದಿದೆ. ಅಲ್ಲದೆ HD+ ಸ್ಕ್ರೀನ್‌ ವೀಡಿಯೊ ಸ್ಟ್ರೀಮಿಂಗ್ ಮತ್ತು ಗೇಮ್‌ಪ್ಲೇ ಸಮಯದಲ್ಲಿ ಫ್ಲ್ಯಾಗ್‌ಶಿಪ್-ಗ್ರೇಡ್ ದೃಶ್ಯಗಳನ್ನು ಸಹ ನೀಡುತ್ತದೆ. ಇದು 100% DCI-P3 ಹೈ ಕಲರ್ ಗ್ಯಾಮಟ್ ಅನ್ನು ಬೆಂಬಲಿಸಲಿದೆ.

ಒಪ್ಪೋ K10 5G: ಮೋಸ್ಟ್‌ ಸ್ಟೈಲಿಶ್ 5G ಪರ್ಫಾರ್ಮರ್ ಫೋನ್‌! ಬೆಲೆ ಕೇವಲ 17499ರೂ.

ಒಪ್ಪೋ K10 5G ಫೋನ್‌ನಲ್ಲಿ ನೀವು ದೀರ್ಘಾವಧಿಯವರೆಗೆ ವೀಡಿಯೊಗಳನ್ನು ವೀಕ್ಷಿಸಿದರೂ ಕೂಡ ನಿಮ್ಮ ಕಣ್ಣುಗಳಿಗೆ ಯಾವುದೇ ರೀತಿಯ ಆಯಾಸವಾಗುವುದಿಲ್ಲ. ಏಕೆಂದರೆ ಈ ಫೋನ್‌ನ ಸ್ಕ್ರೀನ್‌ ಬ್ರೈಟ್‌ನೆಸ್‌ ಅಥವಾ ಗಾಢ ಪರಿಸರದಲ್ಲಿ ಪರದೆಯ ಗೋಚರತೆಯನ್ನು ಹೆಚ್ಚಿಸಲು ಅಥವಾ ಮಂದಗೊಳಿಸಲು ವಿವಿಧ ಹಂತದ ಆಂಬಿಯೆಂಟ್‌ ಲೈಟ್‌ನ್ನು ಸ್ವಯಂಚಾಲಿತವಾಗಿ ಪತ್ತೆಹಚ್ಚಲು ಸಾಧ್ಯವಾಗುತ್ತದೆ. ಹೀಗಾಗಿ ನಿಮ್ಮ ಕಣ್ಣುಗಳ ಮೇಲೆ ನೀಲಿ ಬೆಳಕಿನ ಪರಿಣಾಮವನ್ನು ಕಡಿಮೆ ಮಾಡುತ್ತದೆ.

48MP AI ಕ್ಯಾಮರಾ ಜೊತೆಗೆ ಅಲ್ಟ್ರಾ-ಕ್ಲಿಯರ್ 108MP ಪಿಕ್ಚರ್ ಮೋಡ್
ಒಪ್ಪೋ ಸ್ಮಾರ್ಟ್‌ಫೋನ್‌ಗಳಲ್ಲಿ ಕ್ಯಾಮರಾ ಪರಿಣತಿಗೆ ಯಾವುದೇ ಪರಿಚಯದ ಅಗತ್ಯವಿಲ್ಲ. ಎಲ್ಲಾ ಒಪ್ಪೋ ಹ್ಯಾಂಡ್‌ಸೆಟ್‌ಗಳು ಬೆಲೆಯನ್ನು ಲೆಕ್ಕಿಸದೆಯೇ ಸರಿಸಾಟಿಯಿಲ್ಲದ ಚಿತ್ರ ಮತ್ತು ವೀಡಿಯೊ ಗುಣಮಟ್ಟವನ್ನು ನೀಡುತ್ತವೆ. ಇನ್ನು ಒಪ್ಪೋ K10 5G 48MP f/1.7 AI ಪ್ರೈಮೆರಿ ಕ್ಯಾಮೆರಾವನ್ನು ಹೊಂದಿದೆ. ಇದು ಅಲ್ಟ್ರಾ-ಕ್ಲಿಯರ್ 108MP ಹೈ-ರೆಸಲ್ಯೂಶನ್ ಚಿತ್ರಗಳನ್ನು ನೀಡಲು ಮೆಷಿನ್‌ ಲರ್ನಿಂಗ್‌ ಮತ್ತು ಕಂಪ್ಯೂಟೇಶನಲ್ ಫೋಟೋಗ್ರಫಿಯನ್ನು ಅನ್ವಯಿಸುತ್ತದೆ. ಇದರಲ್ಲಿ ನೀವು 108MP ಮೋಡ್ ಅನ್ನು ಸಕ್ರಿಯಗೊಳಿಸಿದಾಗ, AI-ಸಕ್ರಿಯಗೊಳಿಸಿದ ಕ್ಯಾಮರಾ ಸಿಸ್ಟಮ್ ಹೆಚ್ಚಿನ ಪಿಕ್ಸೆಲ್ ಚಿತ್ರಗಳನ್ನು ರಿಕನ್‌ಸ್ಟ್ರಕ್ಟ್‌ ಮಾಡಲು ಸಾಫ್ಟ್‌ವೇರ್ ಅಲ್ಗಾರಿದಮ್ ಅನ್ನು ಬಳಸುತ್ತದೆ.

ಒಪ್ಪೋ K10 5G: ಮೋಸ್ಟ್‌ ಸ್ಟೈಲಿಶ್ 5G ಪರ್ಫಾರ್ಮರ್ ಫೋನ್‌! ಬೆಲೆ ಕೇವಲ 17499ರೂ.

ಇನ್ನು ಈ ಫೋನ್‌ನ ಮುಖ್ಯ ಕ್ಯಾಮೆರಾವು 2MP ಡೆಪ್ತ್ ಸೆನ್ಸಾರ್‌ನಿಂದ ಬೆಂಬಲಿತವಾಗಿದೆ. ಇದು ನ್ಯಾಚುರಲ್‌ ಬೊಕೆ ಎಫೆಕ್ಟ್‌ ಮೂಲಕ ಸ್ಟಷ್ಟ ಭಾವಚಿತ್ರಗಳನ್ನು ಸೆರೆಹಿಡಿಯಲು ಸಹಾಯ ಮಾಡುತ್ತದೆ. ಇದರಲ್ಲಿ ನೀವು ಅಲ್ಟ್ರಾ ನೈಟ್ ಮೋಡ್ ಅನ್ನು ಸಹ ಪಡೆಯುತ್ತೀರಿ. ಇದು ಬಣ್ಣಗಳು ಮತ್ತು ಸ್ಪಷ್ಟತೆಯನ್ನು ಕಳೆದುಕೊಳ್ಳದೆ ಬ್ರೈಟ್‌ನೆಸ್‌ ಲೋ-ಲೈಟ್‌ ಶೂಟ್ಸ್‌ ಸೆರೆಹಿಡಿಯಲು ನಿಮಗೆ ಅನುಮತಿಸುತ್ತದೆ. ಅಲ್ಲದೆ ಇದರಲ್ಲಿ AI ದೃಶ್ಯ ವರ್ಧನೆಗಳನ್ನು ಸಕ್ರಿಯಗೊಳಿಸಿ ಮತ್ತು ಕ್ಯಾಮರಾ ವರ್ಕ್‌ ಆಗುವಂತೆ ಮಾಡಬಹುದು.

ಒಪ್ಪೋ K10 5G: ಮೋಸ್ಟ್‌ ಸ್ಟೈಲಿಶ್ 5G ಪರ್ಫಾರ್ಮರ್ ಫೋನ್‌! ಬೆಲೆ ಕೇವಲ 17499ರೂ.

ಕೇವಲ 17499ರೂ. ಬೆಲೆಯ ಒಪ್ಪೋ K10 5G ಫೋನ್‌ ಸಂಪೂರ್ಣ ಪ್ಯಾಕೇಜ್ ಆಗಿದೆ. ಇದು ಆಲ್-ರೌಂಡರ್ 5G ಹ್ಯಾಂಡ್‌ಸೆಟ್ ಆಗಿದ್ದು ಶೈಲಿ ಮತ್ತು ಕಾರ್ಯಕ್ಷಮತೆಯ ಎಲ್ಲಾ ಸರಿಯಾದ ಬಾಕ್ಸ್‌ಗಳನ್ನು ಗುರುತಿಸುತ್ತದೆ. ಈ ಫೋನ್‌ನ ಅಲ್ಟ್ರಾ-ಸ್ಲಿಮ್ ವಿನ್ಯಾಸ, ಪವರ್ ಪ್ಯಾಕ್ಡ್ ಕಾರ್ಯಕ್ಷಮತೆ, ನಿರಂತರ ಗುಣಮಟ್ಟದ ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್, ಫ್ಲ್ಯಾಗ್‌ಶಿಪ್ ಆಡಿಯೊ ಮತ್ತು ವಿಡಿಯೋ ಗುಣಮಟ್ಟ ಮತ್ತು AI ಸಕ್ರಿಯಗೊಳಿಸಿದ ಕ್ಯಾಮೆರಾ ಎಲ್ಲವೂ ಅದ್ಭುತವಾಗಿದೆ. ಆದ್ದರಿಂದ, 8+128GB ಹೊಂದಿರುವ ಒಪ್ಪೋ K10 5G ಈ ವಿಭಾಗದಲ್ಲಿ ಉತ್ತಮ ಬೆಲೆಯ 5G ಹ್ಯಾಂಡ್‌ಸೆಟ್ ಆಗಿದೆ.

ಒಪ್ಪೋ K10 5G: ಮೋಸ್ಟ್‌ ಸ್ಟೈಲಿಶ್ 5G ಪರ್ಫಾರ್ಮರ್ ಫೋನ್‌! ಬೆಲೆ ಕೇವಲ 17499ರೂ.

ಇನ್ನು ಒಪ್ಪೋ K10 5G ಸ್ಮಾರ್ಟ್‌ಫೋನ್‌ ಜೂನ್ 15 ರಿಂದ ಮಾರಾಟವಾಗಲಿದೆ. ಫ್ಲಿಪ್‌ಕಾರ್ಟ್, ಮೇನ್‌ ರಿಟೇಲ್‌ ಸ್ಟೋರ್ಸ್‌ ಮತ್ತು ಒಪ್ಪೋ ಆನ್‌ಲೈನ್ ಸ್ಟೋರ್‌ನಲ್ಲಿ ಖರೀದಿಗೆ ಲಭ್ಯವಿರುತ್ತದೆ. ಫ್ಲಿಪ್‌ಕಾರ್ಟ್‌ ಅಥವಾ ಒಪ್ಪೋ ಆನ್‌ಲೈನ್ ಸ್ಟೋರ್‌ನಲ್ಲಿ K10 5G ಅನ್ನು ಖರೀದಿಸುವ ಗ್ರಾಹಕರು 3 ತಿಂಗಳವರೆಗೆ ನೋ ಕಾಸ್ಟ್‌ EMI ಆಯ್ಕೆಯನ್ನು ಪಡೆಯಬಹುದು. ಅಲ್ಲದೆ SBI ಡೆಬಿಟ್/ಕ್ರೆಡಿಟ್ ಕಾರ್ಡ್‌ಗಳು ಮತ್ತು EMI ವಹಿವಾಟುಗಳು, Axis ಬ್ಯಾಂಕ್ ಡೆಬಿಟ್/ಕ್ರೆಡಿಟ್ ಕಾರ್ಡ್‌ಗಳು ಮತ್ತು EMI ವಹಿವಾಟು, ಬ್ಯಾಂಕ್ ಆಫ್ ಬರೋಡಾ ಕ್ರೆಡಿಟ್ ಕಾರ್ಡ್‌ಗಳು ಮತ್ತು ಕ್ರೆಡಿಟ್ ಕಾರ್ಡ್ EMI ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್ ಡೆಬಿಟ್/ಕ್ರೆಡಿಟ್ ಕಾರ್ಡ್‌ಗಳ EMI ವಹಿವಾಟುಗಳ ಮೇಲೆ 1500ರೂ.ಗಳ ಫ್ಲಾಟ್ ರಿಯಾಯಿತಿಯನ್ನು ಪಡೆಯಬಹುದು.

Best Mobiles in India

English summary
OPPO K10 5G: Most Stylish 5G Performer of The Town At Just Rs. 17499

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X