ದೇಶಿ ಮಾರುಕಟ್ಟೆಗೆ ಎಂಟ್ರಿಕೊಟ್ಟ ಒಪ್ಪೋ K10 ಸ್ಮಾರ್ಟ್‌ಫೋನ್!
ಒಪ್ಪೋ ಕಂಪೆನಿ ಭಾರತದ ಮಾರುಕಟ್ಟೆಯಲ್ಲಿ ಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳಿಗೆ ಪ್ರಸಿದ್ಧಿ ಪಡೆದುಕೊಂಡಿದೆ. ಈಗಾಗಲೇ ಹಲವು ಆಕರ್ಷಕ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ತನ್ನ K-ಸರಣಿಯಲ್ಲಿ ಹೊಸ ಒಪ್ಪೋ K10 ಸ್ಮಾರ್ಟ್‌ಫೋನ್ ಲಾಂಚ್ ಮಾಡಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 680 SoC ಪ್ರೊಸೆಸರ್ ಬಲವನ್ನು ಪಡೆದುಕೊಂಡಿದೆ. ಇನ್ನು ಈ ಫೋನ್ 8GB RAM ಅನ್ನು ಒಳಗೊಂಡಿದೆ. ಜೊತೆಗೆ 33W ವೇಗದ ಚಾರ್ಜಿಂಗ್ ಬೆಂಬಲಿಸುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಪಡೆದಿದೆ.

ಹೌದು, ಒಪ್ಪೋ ಕಂಪೆನಿ ಭಾರತದಲ್ಲಿ ಹೊಸ ಒಪ್ಪೋ K10 ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್ 90Hz ರಿಫ್ರೆಶ್ ರೇಟ್ ಬೆಂಬಲಿಸುವ 6.59 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು, 50 ಮೆಗಾಪಿಕ್ಸೆಲ್ ಸೆನ್ಸಾರ್ ಪ್ರೈಮರಿ ಕ್ಯಾಮೆರಾವನ್ನು ಹೊಂದಿದೆ. ಇನ್ನು ಈ ಫೋನ್ ಬ್ಲ್ಯಾಕ್ ಕಾರ್ಬನ್ ಮತ್ತು ಬ್ಲೂ ಫ್ಲೇಮ್ ಕಲರ್ ಆಯ್ಕೆಗಳಲ್ಲಿ ಬರಲಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ
ಒಪ್ಪೋ K10 ಸ್ಮಾರ್ಟ್‌ಫೋನ್ 1,080x2,412 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.59 ಇಂಚಿನ ಫುಲ್ HD+ ಡಿಸ್‌ಪ್ಲೇ ಹೊಂದಿದೆ. ಇನ್ನು ಈ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್ ಅನ್ನು ಒಳಗೊಂಡಿದೆ. ದೂಳು ಮತ್ತು ವಾಟರ್ ರೆಸಿಸ್ಟೆನ್ಸಿಗಾಗಿ IP5X ಮತ್ತು IPX4 ರೇಟಿಂಗ್ ಅನ್ನು ಹೊಂದಿದೆ.

ಪ್ರೊಸೆಸರ್ ಯಾವುದು?
ಒಪ್ಪೋ K10 ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 680 SoC ಪ್ರೊಸೆಸರ್ ಹೊಂದಿದ್ದು, ಕಲರ್ ಒಎಸ್ 11.1 ಸ್ಕಿನ್‌ನೊಂದಿಗೆ ಆಂಡ್ರಾಯ್ಡ್ 11 ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 8GB RAM ಮತ್ತು 128GB ಇಂಟರ್ ಸ್ಟೋರೇಜ್ ಹೊಂದಿದೆ. ಇದಲ್ಲದೆ ಸ್ಮಾರ್ಟ್‌ಫೋನ್‌ನಲ್ಲಿ ಬಳಕೆಯಾಗದ ಸ್ಟೋರೇಜ್ ಸ್ಪೇಸ್ ಬಳಸಿಕೊಂಡು ಹೆಚ್ಚುವರಿ 5G ಮೂಲಕ ಡೈನಾಮಿಕ್ 'RAM ವಿಸ್ತರಣೆಯನ್ನು' ಬೆಂಬಲಿಸುತ್ತದೆ. ಜೊತೆಗೆ ಮೈಕ್ರೋ SD ಕಾರ್ಡ್ ಮೂಲಕ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.

ಕ್ಯಾಮೆರಾ ವಿಶೇಷ
ಒಪ್ಪೋ K10 ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಬೊಕೆ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಅನ್ನು ಒಳಗೊಂಡಿದೆ. ಹಾಗೆಯೇ ಲೋ ಲೈಟ್ ಫೋಟೋಗ್ರಫಿಗಾಗಿ ನೈಟ್‌ಸ್ಕೇಪ್ ಮೋಡ್ ಅನ್ನು ಒಳಗೊಂಡಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಕೂಡ ಪಡೆದಿದೆ.

ಬ್ಯಾಟರಿ ಮತ್ತು ಇತರೆ
ಒಪ್ಪೋ K10 ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಪಡೆದಿದೆ. ಇದು 33W ವೇಗದ ಚಾರ್ಜಿಂಗ್ ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈಫೈ, 4G LTE, ಬ್ಲೂಟೂತ್ v5, ಮತ್ತು GPS/ A-GPS ಮತ್ತು 3.5mm ಆಡಿಯೋ ಜ್ಯಾಕ್ ಅನ್ನು ಒಳಗೊಂಡಿವೆ. ಅಲ್ಲದೆ USB ಟೈಪ್-C ಯನ್ನು ಹೊಂದಿದೆ.

ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ ಒಪ್ಪೋ K10 ಸ್ಮಾರ್ಟ್‌ಫೋನ್ ಆರಂಭಿಕ ಬೆಲೆ 6GB RAM + 128GB ಸ್ಟೋರೇಜ್ ಮಾದರಿಗೆ 14,990ರೂ.ಆಗಿದೆ. ಈ ಸ್ಮಾರ್ಟ್‌ಫೋನ್ 8GB + 128GB ಸ್ಟೋರೇಜ್ ರೂಪಾಂತರದ ಆಯ್ಕೆಗೆ 16,990ರೂ. ಬೆಲೆ ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್ ಬ್ಲ್ಯಾಕ್ ಕಾರ್ಬನ್ ಮತ್ತು ಬ್ಲೂ ಫ್ಲೇಮ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರುತ್ತದೆ. ಇದು ಮಾರ್ಚ್ 29 ರಿಂದ ಫ್ಲಿಪ್‌ಕಾರ್ಟ್ ಮತ್ತು ಒಪ್ಪೋ ಕಂಪನಿಯ ಆನ್‌ಲೈನ್ ಸ್ಟೋರ್‌ನಲ್ಲಿ ಖರೀದಿಗೆ ಲಭ್ಯವಿರುತ್ತದೆ.

ಆಫರ್ ಏನಿದೆ?
ಇನ್ನು ಒಪ್ಪೋ ಕಂಪನಿಯು ಫಸ್ಟ್ ಸೇಲ್ ನಲ್ಲಿ ವಿಶೇಷ ಲಾಂಚ್ ಆಫರ್ ಘೋಷಿಸಿದೆ. ಅದರಂತೆ SBI ಬ್ಯಾಂಕ್ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ EMI ವಹಿವಾಟುಗಳ ಮೇಲೆ 2,000.ರೂ. ಡಿಸ್ಕೌಂಟ್ ದೊರೆಯಲಿದೆ. ಹಾಗೆಯೇ ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡ್ಸ್ ಗ್ರಾಹಕರು ಸಹ ಕ್ರೆಡಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ EMI ವಹಿವಾಟುಗಳ ಮೇಲೆ ಸ್ಮಾರ್ಟ್‌ಫೋನ್‌ನಲ್ಲಿ 1,000 ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ.


Click it and Unblock the Notifications








