OPPO: ಏ.22ಕ್ಕೆ ಲಾಂಚ್..! 7000mAh ಬಿಗ್ ಬ್ಯಾಟರಿ.. 50MP + 16MP ಕ್ಯಾಮೆರಾ.. ಯಾವ ಫೋನ್?
ಒಪ್ಪೋ ಶೀಘ್ರದಲ್ಲೇ ತನ್ನ ಹೊಸ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲಿದೆ. ಕಂಪನಿಯು ಇಂದು ಅಧಿಕೃತ ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ಹೌದು, ಒಪ್ಪೋ K12s (OPPO K12s) ಫೋನ್ ಇದೇ ಏಪ್ರಿಲ್ 22 ರಂದು ರಿಲೀಸ್ ಆಗಲಿದೆ ಎಂದು ಕಂಪನಿಯು ತಿಳಿಸಿದೆ. ಗಮನಿಸಬೇಖಾದ ವಿಷಯವೆಂದರೆ, ಏಪ್ರಿಲ್ 21 ರಂದು ಭಾರತದಲ್ಲಿ ಒಪ್ಪೊ K13 (OPPO K13) ಫೋನ್ ಬಿಡುಗಡೆಯಾಗುತ್ತಿದೆ. ಬನ್ನಿ, ಮುಂಬರುವ ಒಪ್ಪೋ K12s ಮೊಬೈಲ್‌ನ ವಿಶೇಷತೆಗಳು ಮತ್ತು ಇನ್ನಿತರ ವಿವರಗಳನ್ನು ತಿಳಿಯೋಣ.
ಒಪ್ಪೋ K12s ಸ್ಮಾರ್ಟ್‌ಫೋನ್ ಸೊಗಸಾದ ವಿನ್ಯಾಸ ಮತ್ತು ಅತ್ಯುತ್ತಮ ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ ಬರಲಿದೆ. ಇದು 6.67 ಇಂಚಿನ ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿರಲಿದೆ. ಈ ಮೊಬೈಲ್ ಸ್ನಾಪ್‌ಡ್ರಾಗನ್ 6 ಜೆನ್ 4 ಪ್ರೊಸೆಸರ್ ಒಳಗೊಂಡಿರುವ ನಿರೀಕ್ಷೆಯಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಅಳವಡಿಸಲಾಗಿದೆ. ಇದರೊಂದಿಗೆ 12GB RAM, 128GB ಮತ್ತು 256GB ಸ್ಟೋರೇಜ್ ಸೇರಿದಂತೆ ಮುಂತಾದ ಅತ್ಯುತ್ತಮ ವೈಶಿಷ್ಟ್ಯಗಳೊಂದಿಗೆ ಬಿಡುಗಡೆಗೆ ಸಿದ್ಧವಾಗಿದೆ.

ಶಕ್ತಿಶಾಲಿ 7,000mAh ಬ್ಯಾಟರಿಯೊಂದಿಗೆ ಬಿಡುಗಡೆ
ಒಪ್ಪೋ K12s ಫೋನಿನ ದೊಡ್ಡ ವಿಶೇಷತೆಯೆಂದರೆ, ಅದರ ಬ್ಯಾಟರಿ ಬ್ಯಾಕಪ್. ಈ ಮೊಬೈಲ್ 7,000mAh ಸಾಮರ್ಥ್ಯದ ಬೃಹತ್ ಬ್ಯಾಟರಿಯೊಂದಿಗೆ ಬಿಡುಗಡೆಯಾಗಲಿದೆ ಎಂದು ಒಪ್ಪೋ ಕಂಪನಿ ತಿಳಿಸಿದೆ. ಈ ಮೊಬೈಲ್ ಬ್ಯಾಟರಿ 5 ವರ್ಷಗಳ ಬಾಳಿಕೆ ಬರಲಿದೆ. ಇದು 1800 ಬಾರಿ ಚಾರ್ಜ್ ಮಾಡಿದರೂ ಬ್ಯಾಟರಿ ಬಾಳಿಕೆಯನ್ನು ಕಾಯ್ದುಕೊಳ್ಳುತ್ತದೆ ಎಂದು ಕಂಪನಿ ಹೇಳಿದೆ. ಇನ್ನು ಈ ಫೋನಿನ ದೊಡ್ಡ ಬ್ಯಾಟರಿಯನ್ನು ವೇಗವಾಗಿ ಚಾರ್ಜ್ ಮಾಡಲು, ಒಪ್ಪೋ K12s ಮೊಬೈಲ್ 80W ಸೂಪರ್ ಫ್ಲ್ಯಾಷ್ ಚಾರ್ಜಿಂಗ್ ತಂತ್ರಜ್ಞಾನವನ್ನು ಹೊಂದಿರುತ್ತದೆ.
ಒಪ್ಪೋ K12s ವೈಶಿಷ್ಟ್ಯಗಳು (ನಿರೀಕ್ಷಿತ)
ಡಿಸ್ಪ್ಲೇ ವಿವರ
ಒಪ್ಪೋ K12s ಸ್ಮಾರ್ಟ್‌ಫೋನ್ 6.67 ಇಂಚಿನ ಪೂರ್ಣ ಎಚ್‌ಡಿ ಪ್ಲಸ್ ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿರಲಿದೆ. ಇದು 120Hz ರಿಫ್ರೆಶ್ ದರದ ಬೆಂಬಲ ಪಡೆದಿರುತ್ತದೆ. ಈ ಸ್ಕ್ರೀನ್‌ನ ಬ್ರೈಟ್‌ನೆಸ್ ಮತ್ತು ಸುಗಮ ಸ್ಕ್ರೋಲಿಂಗ್‌ನ ಉತ್ತಮ ಅನುಭವವನ್ನು ನೀಡುತ್ತದೆ. ಇದು ಗೇಮಿಂಗ್ ಮತ್ತು ವಿಡಿಯೋ ಸ್ಟ್ರೀಮಿಂಗ್‌ಗೆ ಉತ್ತಮ ಆಯ್ಕೆಯಾಗಿದೆ.
ಕ್ಯಾಮೆರಾ
ಪವರ್ ಫುಲ್ ಪ್ರೊಸೆಸರ್
ಒಪ್ಪೋ K12s ಫೋನ್ ಇತ್ತೀಚಿನ ಸ್ನಾಪ್‌ಡ್ರಾಗನ್ 6 ಜೆನ್ 4 ಪ್ರೊಸೆಸರ್ ಅನ್ನು ಒಳಗೊಂಡಿರುವ ನಿರೀಕ್ಷೆಯಿದೆ. ಇದನ್ನು 4 ನ್ಯಾನೊಮೀಟರ್ ಫ್ಯಾಬ್ರಿಕೇಶನ್‌ಗಳ ಮೇಲೆ ನಿರ್ಮಿಸಲಾಗಿದೆ. ಗ್ರಾಫಿಕ್ಸ್‌ಗಾಗಿ ಇದು, ಅಡ್ರಿನೊ 810 ಜಿಪಿಯು ಸಹ ಹೊಂದಿರಲಿದೆ. ಇದು ಗೇಮಿಂಗ್ ಮತ್ತು ಬಹುಕಾರ್ಯಕ ಕಾರ್ಯಕ್ಷಮತೆಯನ್ನು ಇನ್ನಷ್ಟು ಸುಧಾರಿಸುತ್ತದೆ. ಈ ಫೋನ್ 8GB ಮತ್ತು 12GB RAM ಆಯ್ಕೆಗಳೊಂದಿಗೆ ಬರುತ್ತದೆ. ಇದರೊಂದಿಗೆ, ಈ ಮೊಬೈಲ್ 128GB ಮತ್ತು 256GB ಸ್ಟೋರೇಜ್ ಆಯ್ಕೆಗಳನ್ನು ಹೊಂದಿರುತ್ತದೆ.

ಕ್ಯಾಮೆರಾ ಸೆಟಪ್
ವರದಿಯ ಪ್ರಕಾರ, ಒಪ್ಪೋ K12s ಮೊಬೈಲ್ ಡ್ಯುಯಲ್ ಕ್ಯಾಮೆರಾ ಸೆಟಪ್ ಒಳಗೊಂಡಿರುತ್ತದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿರುತ್ತದೆ. ಜೊತೆಗೆ ಎರಡನೇ ಕ್ಯಾಮೆರಾವು 2 ಮೆಗಾಪಿಕ್ಸೆಲ್ ಲೆನ್ಸ್ ಹೊಂದಿದೆ. ಈ ಕ್ಯಾಮೆರಾ 4K ವಿಡಿಯೋ ರೆಕಾರ್ಡಿಂಗ್ ಅನ್ನು ಬೆಂಬಲಿಸುತ್ತದೆ. ಇನ್ನು ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಅಳವಡಿಸಲಾಗುವುದು.
ಇತರೆ ವೈಶಿಷ್ಟ್ಯಗಳು
ಒಪ್ಪೋ K12s ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 15 ಆಧಾರಿತ ColorOS 15 ಜೊತೆಗೆ ಕೆಲಸ ಮಾಡುತ್ತದೆ. ಇದು ಬಳಕೆದಾರರಿಗೆ ಹೊಸ ಮತ್ತು ಸುಗಮ ಯುಐ (UI) ಅನುಭವವನ್ನು ನೀಡಲಿದೆ. ಇದಲ್ಲದೆ, ಈ ಮೊಬೈಲ್ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಒಳಗೊಂಡಿದೆ. ಹಾಗೆಯೇ ಡ್ಯುಯಲ್ ಸ್ಪೀಕರ್ ಮತ್ತು 5G ಸಂಪರ್ಕ ಸೇರಿದಂತೆ ಹಲವು ವೈಶಿಷ್ಟ್ಯಗಳು ಫೋನ್‌ನಲ್ಲಿ ಲಭ್ಯವಿರುತ್ತವೆ.


Click it and Unblock the Notifications








