Home
ಸುದ್ದಿಜಾಲ

OPPO K12x 5G: ಹೊಸ ಬಣ್ಣದಲ್ಲಿ ಮಾರಾಟ.. ಕೇವಲ 10,999 ರೂ.ಗೆ ಲಭ್ಯ!

ಒಪ್ಪೋ ಪ್ರಿಯರಿಗೆ ಬಂಪರ್ ಸುದ್ದಿ. ಬಹು ಬೇಡಿಕೆಗೆ ಮೊಬೈಲ್ ಇದೀಗ ಹೊಸ ಬಣ್ಣದಲ್ಲಿ ಬಿಡುಗಡೆಯಾಗಿದೆ. ಈ ಫೋನ್ ಸೆಪ್ಟೆಂಬರ್ 26 ರಿಂದ ಖರೀದಿಗೆ ಲಭ್ಯವಿರಲಿದೆ. ಹೌದು, ಚೀನಾದ ಪ್ರಮುಖ ಸ್ಮಾರ್ಟ್‌ಫೋನ್ ಕಂಪನಿ ಒಪ್ಪೋ (OPPO) ಜುಲೈನಲ್ಲಿ ಒಪ್ಪೋ K12x 5G (OPPO K12x 5G) ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಈ ಫೋನ್ ಬ್ರೀಜ್ ಬ್ಲೂ ಮತ್ತು ಮಿಡ್‌ನೈಟ್ ವೈಲೆಟ್ ಬಣ್ಣಗಳಲ್ಲಿ ಬಿಡುಗಡೆಯಾಯಿತು. ಇದೀಗ, ಒಪ್ಪೋ K12x 5G ಅನ್ನು ಫೆದರ್ ಪಿಂಕ್ ಎಂಬ ಹೊಸ ಬಣ್ಣದಲ್ಲಿ ಬಿಡುಗಡೆ ಮಾಡಲಾಗಿದೆ.

ಹೌದು, ಕಂಪನಿಯು ಒಪ್ಪೋ K12x 5G ಅನ್ನು ಹೊಸ ಬಣ್ಣದಲ್ಲಿ ಮಾರುಕಟ್ಟೆಗೆ ಪರಿಚಯಿಸಿದೆ. ಬಿಡುಗಡೆಯ ಆಫರ್‌ ಭಾಗವಾಗಿ, ಈ ಫೋನ್ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ ಕೇವಲ 10,999 ರೂ.ಗಳಿಗೆ ಮಾರಾಟವಾಗಲಿದೆ. ಇದು 6.67 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಮೀಡಿಯಾ ಟೆಕ್ ಡೈಮೆನ್ಶನ್ 6300 ಪ್ರೊಸೆಸರ್‌ ಹೊಂದಿದೆ. ಇದು 32 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 5100mAh ಬ್ಯಾಟರಿ ಸೇರಿದಂತೆ ಹಲವು ವೈಶಿಷ್ಟ್ಯಗಳೊಂದಿಗೆ ಮಾರಾಟಕ್ಕೆ ಸಿದ್ಧವಾಗಿದೆ.

OPPO K12x 5G: ಹೊಸ ಬಣ್ಣದಲ್ಲಿ ಮಾರಾಟ.. ಕೇವಲ 10,999 ರೂ.ಗೆ ಲಭ್ಯ!

ಒಪ್ಪೋ K12x 5G ಬೆಲೆ ಮತ್ತು ಆಫರ್‌ಗಳು

ಒಪ್ಪೋ K12x 5G ಸ್ಮಾರ್ಟ್‌ಫೋನ್ ಫೆದರ್ ಪಿಂಕ್ ಬಣ್ಣದ ರೂಪಾಂತರವು ಇತರ ಬಣ್ಣ ರೂಪಾಂತರಗಳ ಬೆಲೆಯಂತೆಯೇ ಇದೆ. 6GB RAM + 128GB ಸ್ಟೋರೇಜ್ ರೂಪಾಂತರದ ಬೆಲೆ 12,999 ರೂ. ಆಗಿದೆ. 8GB RAM + 256GB ಸ್ಟೋರೇಜ್ ಟಾಪ್ ಮಾಡೆಲ್‌ನ 15,999 ರೂ.ಗೆ ಮಾರಾಟವಾಗಲಿದೆ. ಇದು, ಸೆಪ್ಟೆಂಬರ್ 26 ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ಮುಂಬರುವ ಬಿಗ್ ಬಿಲಿಯನ್ ಡೇಸ್ ಮಾರಾಟದಲ್ಲಿ ಖರೀದಿಗೆ ಲಭ್ಯವಿರುತ್ತದೆ. ಮಾರಾಟದ ಸಮಯದಲ್ಲಿ ಒಪ್ಪೋ K12x 5G ಫೋನನ್ನು ಕೇವಲ 10,999 ರೂ.ಗೆ ಖರೀದಿಸಬಹುದು.

ಒಪ್ಪೋ K12x 5G ಫೋನಿನ ವೈಶಿಷ್ಟ್ಯಗಳು

ಡಿಸ್ಪ್ಲೇ: ಒಪ್ಪೋ K12x 5G ಫೋನ್ 6.67 ಇಂಚಿನ ಹೆಚ್‌ಡಿ ಪ್ಲಸ್ ಡಿಸ್ಪ್ಲೇಯನ್ನು ಹೊಂದಿದೆ. ಇದು 120 Hz ರಿಫ್ರೆಶ್ ರೇಟ್, 1000 ನೀಟ್ಸ್‌ ಗರಿಷ್ಠ ಬ್ರೈಟ್‌ನೆಸ್ ಹೊಂದಿದೆ.

ಪ್ರೊಸೆಸರ್: ಒಪ್ಪೋ K12x 5G ಸ್ಮಾರ್ಟ್‌ಫೋನ್‌ನಲ್ಲಿ ಮೀಡಿಯಾ ಟೆಕ್ ಡೈಮೆನ್ಶನ್ 6300 ಚಿಪ್‌ಸೆಟ್ ಅನ್ನು ಬಳಸಲಾಗಿದೆ. ಇದನ್ನು 6 ನ್ಯಾನೋಮೀಟರ್ ತಯಾರಿಕೆಯಲ್ಲಿ ತಯಾರಿಸಲಾಗುತ್ತದೆ. ಇದು ಆಂಡ್ರಾಯ್ಡ್ 14 OS ಆಧಾರಿತ ColorOS 14 ಕಸ್ಟಮ್ ಸ್ಕಿನ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.

ಸ್ಟೋರೇಜ್‌: ಒಪ್ಪೋ K12x 5G ಫೋನ್ 6GB + 8GB RAM, 256GB ಸ್ಟೋರೇಜ್ ಆಯ್ಕೆಗಳಲ್ಲಿ ಲಭ್ಯವಿದೆ. ವರ್ಚುವಲ್ RAM ವೈಶಿಷ್ಟ್ಯವು ಗರಿಷ್ಠ 16GB RAM ಶಕ್ತಿಯನ್ನು ನೀಡುತ್ತದೆ.

OPPO K12x 5G: ಹೊಸ ಬಣ್ಣದಲ್ಲಿ ಮಾರಾಟ.. ಕೇವಲ 10,999 ರೂ.ಗೆ ಲಭ್ಯ!

ಕ್ಯಾಮೆರಾ: ಒಪ್ಪೋ K12x 5G ಮೊಬೈಲ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು 32 ಮೆಗಾಪಿಕ್ಸೆಲ್ ಅಲ್ಟ್ರಾ-ಕ್ಲಿಯರ್ ಎಎಫ್ (AF) ಮುಖ್ಯ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಪೋರ್ಟ್ರೇಟ್ ಲೆನ್ಸ್ ಅನ್ನು ಹೊಂದಿದೆ. ಈ ಫೋನ್ ಸೆಲ್ಫಿ ಕ್ಲಿಕ್ಕಿಸಲು ಮತ್ತು ವಿಡಿಯೋ ಕರೆಗಳಿಗಾಗಿ, 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ.

ಬ್ಯಾಟರಿ: ಕಂಪನಿಯು ಒಪ್ಪೋ K12x 5G ಅನ್ನು 5100mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆ ಮಾಡಿದೆ. ಇದನ್ನು ವೇಗವಾಗಿ ಚಾರ್ಜ್ ಮಾಡಲು, 45W ಸೂಪರ್ ವುಕ್ ವೇಗದ ಚಾರ್ಜಿಂಗ್ ತಂತ್ರಜ್ಞಾನ ಒದಗಿಸಲಾಗಿದೆ.

ಇತರೆ ವೈಶಿಷ್ಟ್ಯಗಳು: ಒಪ್ಪೋ K12x 5G ಫೋನ್ IP54 ರೇಟಿಂಗ್, ಎಐ ಲಿಂಕ್ ಬೂಸ್ಟ್ ತಂತ್ರಜ್ಞಾನ, ಫಿಂಗರ್‌ಪ್ರಿಂಟ್ ಸಂವೇದಕವನ್ನು ಹೊಂದಿದೆ. ಎಐ ಲಿಂಕ್ ಬೂಸ್ಟ್ ವೈಶಿಷ್ಟ್ಯವು ಕಡಿಮೆ ನೆಟ್‌ವರ್ಕ್ ಕವರೇಜ್ ಹೊಂದಿರುವ ಪ್ರದೇಶಗಳಲ್ಲಿಯೂ ಉತ್ತಮ ನೆಟ್‌ವರ್ಕ್ ಅನ್ನು ಒದಗಿಸುತ್ತದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G ಡ್ಯುಯಲ್ ಸಿಮ್, 5G, 4G, ಬ್ಲೂಟೂತ್, Wi-Fi, ಜಿಪಿಎಸ್ ನಂತಹ ಆಯ್ಕೆಗಳನ್ನು ಹೊಂದಿದೆ.

Best Mobiles in India

English summary
Oppo K12x 5G Feather Pink Colour Variant Sale Starts on September 26 via Flipkart: know Price, Offer, Specs and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+