11,999 ರೂ. ಸಾಕು! ಕಮ್ಮಿ ಬೆಲೆಗೆ OPPO 5G ಫೋನ್.. ಶೇ.23 ರಷ್ಟು ಡಿಸ್ಕೌಂಟ್!
ಕಡಿಮೆ ಬೆಲೆಯಲ್ಲಿ 5G ಸ್ಮಾರ್ಟ್‌ಫೋನ್ ಖರೀದಿಸಲು ಬಯಸುವಿರಾ? ಯಾಕೆ ತಡ, Oppo K12x 5G ಫೋನ್ ಮೇಲೆ ಫ್ಲಿಪ್‌ಕಾರ್ಟ್‌ನಲ್ಲಿ ರಿಯಾಯಿತಿ ಘೋಷಿಸಲಾಗಿದೆ. ಈ ಫೋನ್ ಅನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ. ಇದು ಅತ್ಯಂತ ಕಡಿಮೆ ಬೆಲೆಯಲ್ಲಿ ಪ್ರೀಮಿಯಂ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಇದರ ಜೊತೆಗೆ, ಬ್ಯಾಂಕ್ ಆಫರ್‌ಗಳು ಸಹ ಲಭ್ಯವಿದೆ. ಅದರಲ್ಲೂ ಬಜೆಟ್ ಬೆಲೆಯಲ್ಲಿ ಉತ್ತಮ ಮೊಬೈಲ್ ಖರೀದಿಸಲು ಬಯಸುವವರಿಗೆ ಇದು ಸೂಕ್ತ ಸಮಯ. ಬನ್ನಿ, ಈ ಫೋನಿನ ಹೊಸ ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ.
OPPO K12x 5G ಫೋನ್ 6.67 ಇಂಚಿನ FullHD+ ಡಿಸ್ಪ್ಲೇಯನ್ನು ಹೊಂದಿದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 6300 6nm ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. 32MP ಮುಖ್ಯ ಕ್ಯಾಮೆರಾ, 5,500mAh ಬ್ಯಾಟರಿ ಮತ್ತು 45W ವೇಗದ ಚಾರ್ಜಿಂಗ್ ಸಪೋರ್ಟ್ ಹೊಂದಿದೆ. ಧೂಳು ಮತ್ತು ಸ್ಪ್ಲಾಶ್ ಪ್ರೂಫ್ IP54 ರೇಟಿಂಗ್, 360 ಡಿಗ್ರಿ ಡ್ಯಾಮೇಜ್ ಪ್ರೂಫ್ ಬಾಡಿ, 7.68mm ಅಲ್ಟ್ರಾ ಥಿನ್ ವಿನ್ಯಾಸದಂತಹ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇದು OnePlus Nord CE4ಗೆ ಸ್ಪರ್ಧೆ ನೀಡುತ್ತಿದೆ.
ಫ್ಲಿಪ್‌ಕಾರ್ಟ್‌ನಲ್ಲಿ ಶೇ.23 ರಷ್ಟು ಡಿಸ್ಕೌಂಟ್
Oppo K12X 5G ಸ್ಮಾರ್ಟ್‌ಫೋನ್ ಖರೀದಿ ಮೇಲೆ ಫ್ಲಿಪ್‌ಕಾರ್ಟ್‌ನಲ್ಲಿ ಶೇ.23 ರಷ್ಟು ರಿಯಾಯಿತಿ ಘೋಷಿಸಲಾಗಿದೆ. ನೀವು 12,999 ರೂ. ಬೆಲೆಯಲ್ಲಿ ಈ ಫೋನನ್ನು ಖರೀದಿಸಬಹುದು. ಆಯ್ದ ಬ್ಯಾಂಕ್ ಕಾರ್ಡ್‌ಗಳನ್ನು ಬಳಸಿ ಈ ಫೋನ್ ಖರೀದಿಸಿದರೆ 1,000 ರೂ. ಡಿಸ್ಕೌಂಟ್ ಸಿಗುತ್ತದೆ. ರಿಯಾಯಿತಿಯೊಂದಿಗೆ ಈ ಹೊಸ Oppo K12X 5G ಫೋನ್ ಖರೀದಿಸಲು 11,999 ರೂ. ಇದ್ದರೆ ಸಾಕು. ಇದು ಫ್ಲಿಪ್‌ಕಾರ್ಟ್, OPPO ಇಂಡಿಯಾ, ಆನ್‌ಲೈನ್ ಮತ್ತು ಆಫ್‌ಲೈನ್ ಸ್ಟೋರ್‌ಗಳಲ್ಲಿ ಲಭ್ಯವಿರಲಿದೆ.

OPPO K12x 5G ವೈಶಿಷ್ಟ್ಯಗಳು
ಡಿಸ್ಲ್ಪೇ: Oppo K12x 5G ಫೋನ್ 6.67 ಇಂಚಿನ HD+ ಡಿಸ್ಲ್ಪೇನೊಂದಿಗೆ ಬರುತ್ತದೆ. ಡಿಸ್ಲ್ಪೇಯು 1604×720 ಪಿಕ್ಸೆಲ್‌ಗಳು, 120Hz ರಿಫ್ರೆಶ್ ರೇಟ್, 1000 nits ಗರಿಷ್ಠ ಬ್ರೈಟ್‌ನೆಸ್ ಮತ್ತು ಪಾಂಡಾ ಗ್ಲಾಸ್ ರಕ್ಷಣೆ, ಐ ಕಂಫರ್ಟ್ ಮೋಡ್ ಸೇರಿದಂತೆ ಹಲವು ಡಿಸ್‌ಪ್ಲೇ ವೈಶಿಷ್ಟ್ಯಗಳನ್ನು ಹೊಂದಿದೆ.
ಪ್ರೊಸೆಸರ್: ಈ ಫೋನ್ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 6nm ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸಲಿದೆ. ಫೋನ್ ColorOS 14 ಮತ್ತು Android 14 OS ನಲ್ಲಿಯೂ ಕೆಲಸ ಮಾಡುತ್ತದೆ. ಈ ಫೋನ್‌ಗೆ Android ನವೀಕರಣಗಳು ಮತ್ತು ಭದ್ರತಾ ನವೀಕರಣಗಳು ಲಭ್ಯವಿದೆ.
ಸ್ಟೋರೇಜ್: ಈ ಫೋನ್ 6GB RAM ಮತ್ತು 128GB ಸ್ಟೋರೇಜ್ ಸೌಲಭ್ಯವನ್ನು ಹೊಂದಿದೆ. ಮೈಕ್ರೊ SD ಜೊತೆಗೆ 1TB ವರೆಗೆ ವಿಸ್ತರಿಸಬಹುದಾದ ಮೆಮೊರಿಯೊಂದಿಗೆ ಬರುತ್ತದೆ.
ಕ್ಯಾಮೆರಾ: Oppo K12x 5G ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. 32MP ಮುಖ್ಯ, 2MP ಪೋರ್ಟ್ರೇಟ್ ಕ್ಯಾಮೆರಾ ಮತ್ತು ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 8MP ಫ್ರಂಟ್ ಕ್ಯಾಮೆರಾ ಹೊಂದಿದೆ.
ಬ್ಯಾಟರಿ: ಒಪ್ಪೋ ಫೋನ್ 5100mAh ಸಾಮರ್ಥ್ಯದ ಬ್ಯಾಟರಿ ಮತ್ತು 45W SuperVOOC ಫಾಸ್ಟ್ ಚಾರ್ಜಿಂಗ್ ವೈಶಿಷ್ಟ್ಯದೊಂದಿಗೆ ಬರುತ್ತದೆ. ನೀವು ಈ ಫೋನ್ ಅನ್ನು 30 ನಿಮಿಷಗಳಲ್ಲಿ 50 ಪ್ರತಿಶತದಷ್ಟು ಚಾರ್ಜ್ ಮಾಡಬಹುದು. ಈ ಫೋನ್ ಬ್ಯಾಟರಿ ಕಾರ್ಯಕ್ಷಮತೆ, ವೇಗದ ಲೋಡ್ ಇತ್ಯಾದಿಗಳಿಗೆ ಟ್ರಿನಿಟಿ ಎಂಜಿನ್ ಬೆಂಬಲವನ್ನು ಹೊಂದಿದೆ.
ಇತರೆ ಫೀಚರ್ಸ್: ಇದು ಧೂಳು ಮತ್ತು ನೀರು ನಿರೋಧಕ (IP54) ಆಗಿದೆ. ಈ ಫೋನ್ 76.14×165.79×7.68 mm ಅಳತೆ ಮತ್ತು 186 ಗ್ರಾಂ ತೂಕವಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಫೋನ್, 5G NA/NSA, ಡ್ಯುಯಲ್ 4G VoLTE, Wi-Fi 802.11 ac (2.4GHz + 5GHz), ಬ್ಲೂಟೂತ್ 5.1, GPS + GLONASS, USB ಟೈಪ್-C ನಂತಹ ಸೌಲಭ್ಯ ಒಳಗೊಂಡಿದೆ.


Click it and Unblock the Notifications








