ಫ್ಲಿಪ್‌ಕಾರ್ಟ್‌ನಲ್ಲಿ ಮೊದಲ ಮಾರಾಟದಲ್ಲೇ ದಾಖಲೆ ಸೃಷ್ಟಿಸಿದ Oppo K13 5G!
Oppo ಇತ್ತೀಚೆಗೆ ಬಿಡುಗಡೆಗೊಳಿಸಿರುವ ಬಹುನಿರೀಕ್ಷಿತ Oppo K13 5G ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಸ್ಫೋಟಕ ಪ್ರವೇಶದೊಂದಿಗೆ ಭಾರಿ ಯಶಸ್ಸನ್ನು ಗಳಿಸಿದೆ. ಇದೇ ಏಪ್ರಿಲ್ 25 ರಂದು ನಡೆದ ಮೊದಲ ಮಾರಾಟದಲ್ಲಿಯೇ ಫ್ಲಿಪ್‌ಕಾರ್ಟ್‌ನಲ್ಲಿ ಈ ಫೋನ್ ಸಂಪೂರ್ಣವಾಗಿ ಮಾರಾಟವಾಗಿರುವುದು ಇದರ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಫ್ಲಿಪ್‌ಕಾರ್ಟ್‌ನ ವರದಿಯ ಪ್ರಕಾರ, 20,000 ರೂಪಾಯಿಗಳಿಗಿಂತ ಕಡಿಮೆ ಬೆಲೆಯ ವಿಭಾಗದಲ್ಲಿ Oppo K13 5G ಸ್ಮಾರ್ಟ್‌ಫೋನ್ ಅತಿ ಹೆಚ್ಚು ಮಾರಾಟವಾಗಿರುವ ಸಾಧನವಾಗಿ ದಾಖಲೆ ನಿರ್ಮಿಸಿದೆ.!
ಹೌದು, Oppo K13 5G ಸ್ಮಾರ್ಟ್‌ಫೋನ್ ಮಾರಾಟದ ಕುರಿತು ಫ್ಲಿಪ್‌ಕಾರ್ಟ್ ಹೇಳಿರುವಂತೆ, Oppo K13 5G ಗೆ ಭಾರತದಲ್ಲಿ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. 20,000 ರೂಪಾಯಿಗಳಿಗಿಂತ ಕಡಿಮೆ ಬೆಲೆಯ ವಿಭಾಗದಲ್ಲಿ Oppo K13 5G ಸ್ಮಾರ್ಟ್‌ಫೋನ್ ಅತಿ ಹೆಚ್ಚು ಮಾರಾಟವಾಗಿರುವ ಸಾಧನವಾಗಿದೆ. ಗ್ರಾಹಕರಿಂದ ದೊರೆತ ಉತ್ತಮ ಬೆಂಬಲದಿಂದಾಗಿ, ಪ್ರಸ್ತುತ ಈ ಫೋನ್‌ನ ಸ್ಟಾಕ್ ಖಾಲಿಯಾಗಿದೆ. ಆದಾಗ್ಯೂ, ಫ್ಲಿಪ್‌ಕಾರ್ಟ್ ಮೇ 1 ರಂದು ಮತ್ತೆ ಖರೀದಿಗೆ ಲಭ್ಯವಿರುತ್ತದೆ ಎಂದು ಖಚಿತಪಡಿಸಿದೆ. ಆಸಕ್ತ ಗ್ರಾಹಕರು ಅಂದು ಈ ಸ್ಮಾರ್ಟ್‌ಫೋನ್ ಅನ್ನು ಖರೀದಿಸಬಹುದು ಎಂದು ಪೋಸ್ಟ್ ಮಾಡಿದೆ.
Oppo K13 5G ಸ್ಮಾರ್ಟ್‌ಫೋನ್ ಬೆಲೆ ಮತ್ತು ಲಭ್ಯತೆ
Oppo K13 5G ಸ್ಮಾರ್ಟ್‌ಫೋನ್ ಪ್ರಿಸಮ್ ಬ್ಲಾಕ್ ಮತ್ತು ಐಸಿ ಪರ್ಪಲ್ ಎರಡು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ. ಗ್ರಾಹಕರು ತಮ್ಮ ಅಗತ್ಯಕ್ಕೆ ಅನುಗುಣವಾಗಿ ಎರಡು ವಿಭಿನ್ನ ಕಾನ್ಫಿಗರೇಶನ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಇವುಗಳಲ್ಲಿ ಮೊದಲನೆಯ 8GB RAM ಮತ್ತು 128GB ಆಂತರಿಕ ಸಂಗ್ರಹಣೆಯ ಮಾದರಿಯ ಬೆಲೆ ರೂ. 17,999 ಆಗಿದ್ದರೆ, 8GB RAM ಮತ್ತು 256GB ಆಂತರಿಕ ಸಂಗ್ರಹಣೆಯ ರೂಪಾಂತರವು ರೂ. 19,999 ಕ್ಕೆ ಲಭ್ಯವಿದೆ.

Oppo K13 5G ಸ್ಮಾರ್ಟ್‌ಫೋನಿನ ವೈಶಿಷ್ಟ್ಯಗಳು,
Oppo K13 5G ಸ್ಮಾರ್ಟ್‌ಫೋನ್ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಉತ್ತಮ ಫೀಚರ್‌ಗಳನ್ನು ಒಳಗೊಂಡಿದೆ. ಇದು 1.5K ರೆಸಲ್ಯೂಶನ್, 120Hz ರಿಫ್ರೆಶ್ ದರ ಮತ್ತು 1200 ನಿಟ್ಸ್ ಗರಿಷ್ಠ ಹೊಳಪನ್ನು ಹೊಂದಿರುವ 6.67-ಇಂಚಿನ AMOLED ಡಿಸ್ಪ್ಲೇಯನ್ನು ಹೊಂದಿದೆ. ಈ ಡಿಸ್ಪ್ಲೇ ಅತ್ಯುತ್ತಮ ವೀಕ್ಷಣೆಯ ಅನುಭವವನ್ನು ನೀಡುತ್ತದೆ. ಕ್ಯಾಮೆರಾ ವಿಭಾಗದಲ್ಲಿ, Oppo K13 5G ಫೋನಿನ ಹಿಂಭಾಗದಲ್ಲಿ 50-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕ ಮತ್ತು 2-ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾವನ್ನು ಒಳಗೊಂಡಿರುವ ಡ್ಯುಯಲ್ ಕ್ಯಾಮೆರಾ ಸೆಟಪ್ ಇದೆ. ಮುಂಭಾಗದಲ್ಲಿ, ಉತ್ತಮ ಗುಣಮಟ್ಟದ ಸೆಲ್ಫಿಗಳನ್ನು ಕ್ಲಿಕ್ಕಿಸಲು 16-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ನೀಡಲಾಗಿದೆ.
ಕಾರ್ಯಕ್ಷಮತೆಗೆ ಬಂದರೆ, ಈ Oppo K13 5G ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 6 Gen 4 ಚಿಪ್‌ಸೆಟ್ ಮತ್ತು Adreno 810 GPU ನಿಂದ ಚಾಲಿತವಾಗಿದೆ. ಇದು 8GB LPDDR4X RAM ಮತ್ತು 256GB ವರೆಗಿನ UFS 3.1 ಆಂತರಿಕ ಸಂಗ್ರಹಣೆಯೊಂದಿಗೆ ಬರುತ್ತದೆ, ಇದು ವೇಗದ ಮತ್ತು ಸುಗಮ ಕಾರ್ಯನಿರ್ವಹಣೆಯನ್ನು ಖಚಿತಪಡಿಸುತ್ತದೆ. Oppo K13 5G ಬೃಹತ್ 7,000mAh ಬ್ಯಾಟರಿಯನ್ನು ಹೊಂದಿದೆ ಮತ್ತು ಇದು 80W ವೈರ್ಡ್ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ, ಅಂದರೆ ಫೋನ್ ಅನ್ನು ಬಹಳ ಕಡಿಮೆ ಸಮಯದಲ್ಲಿ ಚಾರ್ಜ್ ಮಾಡಬಹುದು.
ಸಾಫ್ಟ್‌ವೇರ್ ವಿಷಯಕ್ಕೆ ಬಂದರೆ, ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 15 ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಅದರ ಮೇಲೆ ColorOS 15 ಲೇಯರ್ ಅನ್ನು ಹೊಂದಿದೆ. ಇದು ಬಳಕೆದಾರರಿಗೆ ಉತ್ತಮ ಮತ್ತು ಸುಲಭವಾದ ಇಂಟರ್ಫೇಸ್ ಅನ್ನು ಒದಗಿಸುತ್ತದೆ. ಹೆಚ್ಚುವರಿ ವೈಶಿಷ್ಟ್ಯಗಳಾದ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್, ಡ್ಯುಯಲ್ ಸಿಮ್ ಬೆಂಬಲ, ಸ್ಟೀರಿಯೊ ಸ್ಪೀಕರ್‌ಗಳು, ಇನ್ಫ್ರಾರೆಡ್ ಸೆನ್ಸರ್, ಬ್ಲೂಟೂತ್ 5.3 ಸಂಪರ್ಕ ಮತ್ತು ನೀರು ಹಾಗೂ ಧೂಳಿನ ಪ್ರತಿರೋಧಕ್ಕಾಗಿ IP65 ರೇಟಿಂಗ್ ಅನ್ನು ಸಹ ಈ ಫೋನ್ ಒಳಗೊಂಡಿದೆ.


Click it and Unblock the Notifications








