Home
ಸುದ್ದಿಜಾಲ

OPPO K13 5G; 7000mAh ಬ್ಯಾಟರಿ ಖಚಿತ.. ರಿಟೇಲ್ ಬಾಕ್ಸ್ ಲೀಕ್.. 20000ಕ್ಕಿಂತ ಕಡಿಮೆ ಬೆಲೆ.. ಲಾಂಚ್ ಯಾವಾಗ?

ಒಪ್ಪೋ ಭಾರತದಲ್ಲಿ ಹೊಸ 5G ಫೋನನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಕಂಪನಿಯು ನಿನ್ನೆಯಷ್ಟೇ ಒಪ್ಪೋ K13 5G (OPPO K13 5G) ಮೊಬೈಲ್ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಹೌದು, ಈ ಫೋನನ್ನು ತನ್ನ 'K' ಸರಣಿಯ ಅಡಿಯಲ್ಲಿ ಪರಿಚಯಿಸಲಾಗುತ್ತಿದೆ. ಪ್ರಸ್ತುತ, ಈ ಫೋನಿನ ಹೆಸರನ್ನು ಮಾತ್ರ ಬಹಿರಂಗಪಡಿಸಲಾಗಿದೆ. ಆದರೆ, ಬಿಡುಗಡೆ ದಿನಾಂಕ ಮತ್ತು ಮಾರಾಟದ ವಿವರಗಳನ್ನು ಕಂಪನಿ ಹಂಚಿಕೊಂಡಿಲ್ಲ. ಆದರೆ, ಕಂಪನಿಯ ಘೋಷಣೆಗೂ ಮುಂಚೆಯೇ, ಒಪ್ಪೋ K13 5G ಫೋನಿನ ರಿಟೇಲ್ ಬಾಕ್ಸ್ ಸೋರಿಕೆಯಾಗಿದೆ.

ಹೌದು, ಒಪ್ಪೋ K13 5G ಮೊಬೈಲ್‌ನ ಫೋಟೋ ಆನ್‌ಲೈನ್‌ನಲ್ಲಿ ಲೀಕ್ ಆಗಿದೆ. ಇದರೊಂದಿಗೆ ಮುಂಬರುವ ಒಪ್ಪೋ 5G ಫೋನಿನ ಪ್ರಮುಖ ವಿಶೇಷತೆಗಳು ಸಹ ಬಹಿರಂಗವಾಗಿವೆ. ಅದರಂತೆ, ಈ ಮೊಬೈಲ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 6 ಜೆನ್ 4 ಪ್ರೊಸೆಸರ್ ಹೊಂದಿರಲಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಲಭ್ಯವಿರುತ್ತದೆ. ಈ ಮೊಬೈಲ್ 6.67 ಇಂಚಿನ ಡಿಸ್ಪ್ಲೇಯೊಂದಿಗೆ ಬರುತ್ತದೆ. ಇದರೊಂದಿಗೆ 7,000mAh ದೊಡ್ಡ ಬ್ಯಾಟರಿ ಮತ್ತು 90W ವೇಗದ ಚಾರ್ಜಿಂಗ್ ಸೌಲಭ್ಯ ಪಡೆದಿದೆ. ಈ ಫೋನಿನ ಇನ್ನಿತರ ವೈಶಿಷ್ಟ್ಯಗಳನ್ನು ತಿಳಿಯಲು ಮುಂದೆ ಓದಿ.

OPPO K13 5G; 7000mAh ಬ್ಯಾಟರಿ.. 20000ಕ್ಕಿಂತ ಕಡಿಮೆ ಬೆಲೆ.. ಲಾಂಚ್ ಯಾವಾಗ?

ಒಪ್ಪೋ K13 5G ಬೆಲೆ ಮತ್ತು ಲಭ್ಯತೆ

ಕಂಪನಿಯಿಂದ ಒಪ್ಪೋ K13 5G ಬೆಲೆ ಮತ್ತು ಮಾರಾಟದ ಕುರಿತು ಇನ್ನೂ ಯಾವುದೇ ಅಧಿಕೃತ ಘೋಷಣೆ ಹೊರಡಿಸಿಲ್ಲ. ಆದರೆ, ಬಿಡುಗಡೆ ಬಳಿಕ ಈ ಫೋನ್ ಫ್ಲಿಪ್‌ಕಾರ್ಟ್‌ ಮೂಲಕ ಮಾರಾಟವಾಗಲಿದೆ. ಈ ಫೋನನ್ನು ಕಂಪನಿಯು 20 ಸಾವಿರ ರೂ.ಗಿಂತ ಕಡಿಮೆ ಬೆಲೆಗೆ ಬಿಡುಗಡೆ ಮಾಡಲಿದೆ.

ಒಪ್ಪೋ K13 5G ಡಿಸ್ಪ್ಲೇ

ಒಪ್ಪೋ K13 5G ಸ್ಮಾರ್ಟ್‌ಫೋನ್ 6.67 ಇಂಚಿನ ಫುಲ್ ಎಚ್‌ಡಿ ಪ್ಲಸ್ ಡಿಸ್ಪ್ಲೇಯೊಂದಿಗೆ ಬಿಡುಗಡೆಯಾಗುವ ಸಾಧ್ಯತೆಯಿದೆ. ಇದು ಪಂಚ್ ಹೋಲ್ ಶೈಲಿಯ ಸ್ಕ್ರೀನ್ ಆಗಿದಲಿದೆ. ಈ ಡಿಸ್ಪ್ಲೇಯು 120Hz ರಿಫ್ರೆಶ್ ದರದ ಬೆಂಬಲದೊಂದಿಗೆ ಬರುತ್ತದೆ.

ಒಪ್ಪೋ K13 5G ಪ್ರೊಸೆಸರ್

ಒಪ್ಪೋ K13 5G ಫೋನನ್ನು ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 6 ಜೆನ್ 4 ಆಕ್ಟಾ ಕೋರ್ ಪ್ರೊಸೆಸರ್‌ನೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗುವುದು. ಇದನ್ನು 4 ನ್ಯಾನೊಮೀಟರ್ ಫ್ಯಾಬ್ರಿಕೇಶನ್‌ಗಳ ಮೇಲೆ ನಿರ್ಮಿಸಲಾಗಿದೆ. ಇದು 2.3GHz ವರೆಗಿನ ಗಡಿಯಾರದ ವೇಗದಲ್ಲಿ ಕೆಲಸ ಮಾಡುವ ಸಾಮರ್ಥ್ಯವನ್ನು ಹೊಂದಿದೆ.

ಒಪ್ಪೋ K13 5G ಕ್ಯಾಮೆರಾ

ಒಪ್ಪೋ K13 5G ಮೊಬೈಲ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇದರೊಂದಿಗೆ 2 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಇರುತ್ತದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಒಪ್ಪೋ ಮೊಬೈಲ್ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿರಲಿದೆ.

ಒಪ್ಪೋ K13 5G ಬ್ಯಾಟರಿ

ಒಪ್ಪೋ K13 5G ಫೋನಿನ ಬ್ಯಾಟರಿ ಬ್ಯಾಕಪ್ ಬಗ್ಗೆ ಹೇಳುವುದಾದರೆ, ಇದು ಶಕ್ತಿಶಾಲಿ ಬ್ಯಾಟರಿಯೊಂದಿಗೆ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಈ ಮೊಬೈಲ್ 7000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು ನಿಜವಾದರೆ, ಒಪ್ಪೋ K13 5G ಇಷ್ಟು ದೊಡ್ಡ ಬ್ಯಾಟರಿಯನ್ನು ಹೊಂದಿರುವ ಕಂಪನಿಯ ಮೊದಲ ಸ್ಮಾರ್ಟ್‌ಫೋನ್ ಆಗಲಿದೆ. ವರದಿಯ ಪ್ರಕಾರ, ಈ ಮೊಬೈಲ್ 90W ವೇಗದ ಚಾರ್ಜಿಂಗ್ ತಂತ್ರಜ್ಞಾನವನ್ನು ಹೊಂದಿರುತ್ತದೆ.

ಒಪ್ಪೋ K12 ವೈಶಿಷ್ಟ್ಯಗಳು

ಒಪ್ಪೋ K12 5G ಸ್ಮಾರ್ಟ್‌ಫೋನ್ 6.7 ಇಂಚಿನ FHD+ ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಈ ಫೋನಿನ ಡಿಸ್ಪ್ಲೇಯು HDR10+, 120Hz ರಿಫ್ರೆಶ್ ದರ ಮತ್ತು 1100 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲದೊಂದಿಗೆ ಬರುತ್ತದೆ. ಈ ಒಪ್ಪೋ ಮೊಬೈಲ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 6 ಜೆನ್ 3 ಆಕ್ಟಾ ಕೋರ್ ಪ್ರೊಸೆಸರ್‌ನೊಂದಿಗೆ ಕೆಲಸ ಮಾಡುತ್ತದೆ. ಈ ಒಪ್ಪೋ ಮೊಬೈಲ್ 12GB RAM ಮತ್ತು 512GB ಸ್ಟೋರೇಜ್ ಹೊಂದಿದೆ.

ಒಪ್ಪೋ K12 5G ಮೊಬೈಲ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಇದೆ. ಹಾಗೆಯೇ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ. ಒಪ್ಪೋ K12 5G ಫೋನ್ 5,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ತ್ವರಿತವಾಗಿ ಚಾರ್ಜ್ ಮಾಡಲು, ಈ ಮೊಬೈಲ್‌ 100W ವೇಗದ ಚಾರ್ಜಿಂಗ್ ತಂತ್ರಜ್ಞಾನವನ್ನು ಹೊಂದಿದೆ.

Best Mobiles in India

English summary
OPPO K13 5G Retail Box Leaks Online; Key Specifications Tipped Ahead of India Launch
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+