Home
ಸುದ್ದಿಜಾಲ

ಭಾರತದಲ್ಲಿ ಜೂನ್ 23 ರಂದು Oppo K13x 5G ಬಿಡುಗಡೆ: ಬೆಲೆ, ವೈಶಿಷ್ಟ್ಯಗಳು ಬಹಿರಂಗ

ಜನಪ್ರಿಯ ಮೊಬೈಲ್ ಬ್ರ್ತಾಂಡ್ Oppo ಇದೇ ತಿಂಗಳಲ್ಲಿ ಭಾರತದಲ್ಲಿ ತನ್ನ ಬಹುನಿರೀಕ್ಷಿತ Oppo K13x 5G ಸ್ಮಾರ್ಟ್‌ಫೋನನ್ನು ಬಿಡುಗಡೆ ಮಾಡುವುದು ಅಧಿಕೃತವಾಗಿ ಖಚಿತವಾಗಿದೆ. ಜೂನ್ 23 ರಂದು ದೇಶದಲ್ಲಿ Oppo K13x 5G ಫೋನ್ ಬಿಡುಗಡೆಯಾಗಲಿದ್ದು, ಈ ಹೊಸ ಸ್ಮಾರ್ಟ್‌ಫೋನ್ ₹15,000 ಕ್ಕಿಂತ ಕಡಿಮೆ ಬೆಲೆಯ ವಿಭಾಗದಲ್ಲಿ ಸ್ಥಾನ ಪಡೆಯಲಿದೆ, ಇದು ವಿಶೇಷವಾಗಿ ಯುವ ವಿದ್ಯಾರ್ಥಿಗಳು ಮತ್ತು ಆರಂಭಿಕ ವೃತ್ತಿಪರರನ್ನು ಗುರಿಯಾಗಿಸಿಕೊಂಡಿದೆ ಎಂದು Oppo ತಿಳಿಸಿದೆ. ಈ ಕುರಿತ ಸಂಪೂರ್ಣ ಮಾಹಿತಿ ಈ ಕೆಳಕಂಡಂತಿದೆ.

Oppo K13x 5G: ಬಿಡುಗಡೆ ಮತ್ತು ಲಭ್ಯತೆ
Oppo K ಸರಣಿಯಲ್ಲಿ ಬಜೆಟ್ ಬೆಲೆಯ Oppo K13x 5G ಸ್ಮಾರ್ಟ್‌ಫೋನ್ ಜೂನ್ 23 ರಂದು ಮಧ್ಯಾಹ್ನ 12 ಗಂಟೆಗೆ ಭಾರತದಲ್ಲಿ ಬಿಡುಗಡೆಯಾಗಲಿದೆ ಎಂದು ಕಂಪನಿಯು ಪತ್ರಿಕಾ ಪ್ರಕಟಣೆಯಲ್ಲಿ ದೃಢಪಡಿಸಿದೆ. ಇದರ ಬೆಲೆ ದೇಶದಲ್ಲಿ ರೂ. 15,000 ಕ್ಕಿಂತ ಕಡಿಮೆ ಇರುತ್ತದೆ ಎಂದು ಕಂಪನಿ ತಿಳಿಸಿದೆ. ಹಾಗೂ ಫೋನ್ ಮಿಡ್‌ನೈಟ್ ವೈಲೆಟ್ ಮತ್ತು ಸನ್‌ಸೆಟ್ ಪೀಚ್ ಬಣ್ಣ ಆಯ್ಕೆಗಳಲ್ಲಿ ಫ್ಲಿಪ್‌ಕಾರ್ಟ್ ಮೂಲಕ ಪ್ರತ್ಯೇಕವಾಗಿ ಖರೀದಿಸಲು ಲಭ್ಯವಿರುತ್ತದೆ ಎಂದು ಕಂಪೆನಿಯು ತಿಳಿಸಿದೆ. ಜೊತೆಗೆ, ಈ ಸ್ಮಾರ್ಟ್‌ಫೋನ್ ಹೊಂದಿರುವ ಕೆಲವು ವೈಶಿಷ್ಟ್ಯಗಳನ್ನು ಸಹ ಬಹಿರಂಗಪಡಿಸಿದೆ.

Oppo K13x 5G: ಪ್ರಮುಖ ವೈಶಿಷ್ಟ್ಯಗಳು ಬಹಿರಂಗ,
ಮುಂಬರುವ Oppo K13x 5G ಫೋನ್ ಉತ್ತಮ ಬಿಲ್ಡ್ ಕ್ವಾಲಿಟಿಯೊಂದಿಗೆ ಬಂದಿದೆ ಎಂದು ಕಂಪನಿಯು ತಿಳಿಸಿದೆ. ಈ ಫೋನ್ ಸಮುದ್ರ ಸ್ಪಂಜುಗಳಿಂದ ಪ್ರೇರಿತವಾದ ಬಯೋಮಿಮೆಟಿಕ್ ಸ್ಪಾಂಜ್ ಶಾಕ್ ಅಬ್ಸಾರ್ಪ್ಷನ್ ಸಿಸ್ಟಮ್ ಅನ್ನು ಬಳಸುತ್ತದೆ, ಇದು ಶಾಕ್ ರೆಸಿಸ್ಟೆನ್ಸ್ ಅನ್ನು ಸುಧಾರಿಸುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ. ಫೋನ್‌ನಲ್ಲಿರುವ ಡಿಸ್ಪ್ಲೇ ಸ್ಪ್ಲಾಶ್ ಟಚ್ ಮತ್ತು ಗ್ಲೋವ್ ಟಚ್ ಮೋಡ್ ಜೊತೆಗೆ ಕ್ರಿಸ್ಟಲ್ ಶೀಲ್ಡ್ ಗ್ಲಾಸ್ ರಕ್ಷಣೆಯನ್ನು ನೀಡುತ್ತದೆ ಎಂದು ಕಂಪೆನಿ ತಿಳಿಸಿದೆ.

ಈ ಹಿಂದೆಯೇ, Oppo K13x 5G ಫೋನ್ AM04 ಹೈ-ಸ್ಟ್ರೆಂತ್ ಅಲ್ಯೂಮಿನಿಯಂ ಅಲಾಯ್ ಮಿಡಲ್ ಫ್ರೇಮ್ ಮತ್ತು 360-ಡಿಗ್ರಿ ಡ್ಯಾಮೇಜ್-ಪ್ರೂಫ್ ಆರ್ಮರ್ ಬಾಡಿಯೊಂದಿಗೆ ಬರುತ್ತದೆ ಎಂದು Oppo ಬಹಿರಂಗಪಡಿಸಿತ್ತು. ಇದು MIL-STD 810-H ಶಾಕ್ ರೆಸಿಸ್ಟೆನ್ಸ್ ಪ್ರಮಾಣೀಕರಣದ ಜೊತೆಗೆ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP65 ರೇಟಿಂಗ್ ಅನ್ನು ಪಡೆಯುತ್ತದೆ. ಫೋನ್ SGS ಗೋಲ್ಡ್ ಡ್ರಾಪ್-ರೆಸಿಸ್ಟೆನ್ಸ್ ಮತ್ತು SGS ಮಿಲಿಟರಿ ಸ್ಟ್ಯಾಂಡರ್ಡ್ ಪ್ರಮಾಣೀಕರಣಗಳೊಂದಿಗೆ ಬರುತ್ತದೆ.

ಭಾರತದಲ್ಲಿ ಜೂನ್ 23 ರಂದು Oppo K13x 5G ಬಿಡುಗಡೆ: ಬೆಲೆ, ವೈಶಿಷ್ಟ್ಯಗಳು ಬಹಿರಂಗ

ಪ್ರಮುಖ ವೈಶಿಷ್ಟ್ಯಗಳಲ್ಲಿ, ಈ Oppo K13x 5G ಫೋನ್ 45W SuperVOOC ಚಾರ್ಜಿಂಗ್ ಬೆಂಬಲದೊಂದಿಗೆ 6,000mAh ಬ್ಯಾಟರಿಯನ್ನು ಹೊಂದಿರುತ್ತದೆ ಎಂದು ಕಂಪನಿಯು ಪತ್ರಿಕಾ ಪ್ರಕಟಣೆಯಲ್ಲಿ ಬಹಿರಂಗಪಡಿಸಿದೆ. ಇದು 50-ಮೆಗಾಪಿಕ್ಸೆಲ್ AI-ಬೆಂಬಲಿತ ಡ್ಯುಯಲ್ ರಿಯರ್ ಕ್ಯಾಮೆರಾ ಘಟಕವನ್ನು ನೀಡುತ್ತದೆ ಮತ್ತು AI ಎರೇಸರ್, AI ಅನ್‌ಬ್ಲರ್, AI ರಿಫ್ಲೆಕ್ಷನ್ ರಿಮೂವರ್ ಮತ್ತು AI ಕ್ಲಾರಿಟಿ ಎನ್‌ಹಾನ್ಸರ್‌ನಂತಹ AI-ಬೆಂಬಲಿತ ಇಮೇಜಿಂಗ್ ವೈಶಿಷ್ಟ್ಯಗಳನ್ನು ಬೆಂಬಲಿಸುತ್ತದೆ ಎಂದು ತಿಳಿಸಿದೆ.

ಕಾರ್ಯಕ್ಷಮತೆ ವಿಭಾಗದಲ್ಲಿ, ಈ Oppo K13x 5G ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಚಿಪ್‌ಸೆಟ್‌ನಿಂದ ಚಾಲಿತವಾಗಿರಲಿದೆ. ಇದು 4GB ಮತ್ತು 6GB RAM ಆಯ್ಕೆಗಳಲ್ಲಿ ಲಭ್ಯವಿದ್ದು, 128GB ಆನ್‌ಬೋರ್ಡ್ ಸಂಗ್ರಹಣೆಗೆ ಬೆಂಬಲವನ್ನು ನೀಡುತ್ತದೆ. ಹ್ಯಾಂಡ್‌ಸೆಟ್ ಆಂಡ್ರಾಯ್ಡ್ 15-ಆಧಾರಿತ ColorOS 15 ನೊಂದಿಗೆ ಬರುತ್ತದೆ ಮತ್ತು Google Gemini ಮತ್ತು AI ಸಮ್ಮರಿ, AI ರೆಕಾರ್ಡರ್ ಮತ್ತು AI ಸ್ಟುಡಿಯೋದಂತಹ ಇತರ ವೈಶಿಷ್ಟ್ಯಗಳನ್ನು ನೀಡುತ್ತದೆ.

Best Mobiles in India

English summary
OPPO India is set to unveil the brand-new OPPO K13x 5G on June 23, 2025.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+