ಒಪ್ಪೋ ಕ್ಯಾಶ್ ಮೂಲಕ ಫೈನಾನ್ಸಿಯಲ್ ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಒಪ್ಪೋ!
ಹೊಸ ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನ ಮಾರುಕಟ್ಟೆಗೆ ಪರಿಚಯಿಸುವಲ್ಲಿ ಒಪ್ಪೋ ಕಂಪೆನಿ ಸದಾ ಮುಂದಿರುತ್ತದೆ. ಈಗಾಗ್ಲೆ ಹಲವು ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನ ಮಾರುಕಟ್ಟೆಗೆ ಪರಿಚಯಿಸಿ ಸೈ ಎನಿಸಿಕೊಂಡಿರುವ ಒಪ್ಪೋ ಕಂಪೆನಿ ಇದೀಗ ಫೈನಾನ್ಸಿಯಲ್ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ಭಾರತದಲ್ಲಿ ಒಪ್ಪೋ ಕ್ಯಾಶ್ ಅನ್ನು ಲಾಂಚ್ ಮಾಡಿದೆ. ಅಷ್ಟೇ ಅಲ್ಲ ಮ್ಯೂಚುಯಲ್ ಫಂಡ್ಸ್, ಕ್ರೆಡಿಟ್ ರಿಪೋರ್ಟ್, ಪರ್ಸನಲ್ ಲೋನ್‌ಗಳನ್ನ ನೀಡುವುದಾಗಿ ಘೋಷಣೆ ಮಾಡಿದೆ.

ಹೌದು, ಚೀನಾ ಮೂಲದ ಒಪ್ಪೋ ಕಂಪೆನಿ ಇದೀಗ ಹಣಕಾಸು ವ್ಯವಹಾರ ಕ್ಷೇತ್ರಕ್ಕೂ ಅಧಿಕೃತವಾಗಿ ಕಾಲಿಟ್ಟಿದೆ. ಈ ಸಂಬಂಧ ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಒಪ್ಪೊ ಕ್ಯಾಶ್ ಬಗ್ಗೆ ಕಂಪೆನಿ ಹೇಳಿಕೊಂಡಿದೆ. ಒಪ್ಪೋ ಕ್ಯಾಶ್ ಮೂಲಕ ಕ್ರೆಡಿಟ್ ರಿಫೋರ್ಟ್, ಮ್ಯೂಚುಯಲ್ ಫಂಡ್ಸ್ ಜೊತೆಗೆ 2ಲಕ್ಷಕ್ಕೂ ಅಧಿಕ ಪರ್ಸನಲ್ ಲೋನ್, ಹಾಗೂ 2ಕೋಟಿ ರೂ ಗಳವರೆಗೂ ಬ್ಯುಸಿನೆಸ್‌ಗೆ ಸಂಬಂಧಿಸಿದ ಲೋನ್‌ಗಳನ್ನ ನೀಡಲಾಗುವುದು ಎಂದು ಕಂಪೆನಿ ಹೇಳಿದೆ.

ಒಪ್ಪೋ ಕ್ಯಾಶ್
ಸದ್ಯ ಒಪ್ಪೋ ಪ್ರಾರಂಭಿಸಿರುವ ಒಪ್ಪೋ ಕ್ಯಾಶ್ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ಸೇವೆಯಾಗಿದೆ. ಈಗಾಗ್ಲೆ ರಿಯಲ್‌ಮಿ, ಶಿಯೋಮಿ ಕಂಪೆನಿಗಳು ಈ ಕ್ಷೇತ್ರದಲ್ಲಿ ಕಾಲಿಟ್ಟಿದ್ದು, ಗ್ರಾಹಕರಿಗೆ ತಮ್ಮ ಸೇವೆಯನ್ನ ಒದಗಿಸುತ್ತೀವೆ. ಇದೇ ನಿಟ್ಟಿನಲ್ಲಿ ಒಪ್ಪೋ ಕೂಡ ತನ್ನ ಹೆಜ್ಜೆಯನ್ನ ಇಟ್ಟಿದೆ. ಸದ್ಯ ಒಪ್ಪೋ ಕ್ಯಾಶ್ ಸೇವೆ ಒಪ್ಪೊ ಸ್ಮಾರ್ಟ್‌ಫೋನ್‌ಗಳಲ್ಲಿ ಲಭ್ಯವಾಗಲಿದೆ. ಈ ಸೇವೆಯ ಜೊತೆಗೆ ಐದು ಸೇವೆಗಳನ್ನು ಕಂಪೆನಿ ಬಿಡುಗಡೆ ಮಾಡಿದ್ದು, ಅದರಲ್ಲಿ ಫ್ರೀಡಮ್ ಸಿಸ್ಟಮ್ಯಾಟಿಕ್ ಇನ್ವೆಸ್ಟ್‌ಮೆಂಟ್ ಪ್ಲಾನ್ (SIP) ಒಂದು ವಿಶಿಷ್ಟ ಕೊಡುಗೆಯಾಗಿದೆ.

ಕಾರ್ಯವೈಖರಿ ಹೇಗೆ
ಒಪ್ಪೋ ಬಳಕೆದಾರರು ಈ ಹೊಸ ಫ್ರೀಡಮ್ SIP ಸೇವೆಯೊಂದಿಗೆ, ತಮ್ಮ ಮ್ಯೂಚುವಲ್ ಫಂಡ್ ಹೂಡಿಕೆಯನ್ನು 100 ರೂ.ಗಳಿಂದ ಪ್ರಾರಂಭಿಸಿಬಹುದು, ಅಷ್ಟೇ ಅಲ್ಲ ಅತ್ಯಂತ ಕಡಿಮೆ ಮೊತ್ತದ ಹೂಡಿಕೆಯೊಂದಿಗೂ ಪ್ರಾರಂಭಿಸಬಹುದಾಗಿದೆ. ಇದಲ್ಲದೆ ಒಪ್ಪೋ ಕಾಶ್‌ನೊಂದಿಗೆ, ಮುಂದಿನ 5 ವರ್ಷಗಳಲ್ಲಿ 10 ಮಿಲಿಯನ್ ಗ್ರಾಹಕರಿಗೆ 50,000 ಕೋಟಿ ರೂ.ಗಳ ಮೌಲ್ಯದ ಹಣಕಾಸು ಸೇವೆಗಳನ್ನು ನೀಡುವುದು ನಮ್ಮ ಉದ್ದೇಶವಾಗಿದೆ "ಎಂದು ಭಾರತ ಮಾರುಕಟ್ಟೆಯ ಉಪಾಧ್ಯಕ್ಷ ಸುಮಿತ್ ವಾಲಿಯಾ ಹೇಳಿದ್ದಾರೆ.

ಸೇವೆಯ ಲಾಭ ಪಡೆಯುವುದು ಹೇಗೆ
ನೀವು ಒಪ್ಪೋ ಸ್ಮಾರ್ಟ್‌ಫೋನ್ ಬಳಕೆದಾರರಾಗಿದ್ದರೆ ಒಪ್ಪೋ ಕ್ಯಾಶ್ ಅಪ್ಲಿಕೇಶನ್ ಅನ್ನು ಇನ್‌ಸ್ಟಾಲ್ ಮಾಡಿಕೊಳ್ಳಬೇಕು. ಅಲ್ಲದೆ ಒಪ್ಪೋ ಸ್ಮಾರ್ಟ್‌ಫೋನ್ ಬಳಸದ ಬಳಕೆದಾರರು ಇದನ್ನು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಇನ್‌ಸ್ಟಾಲ್ ಮಾಡಿಕೊಂಡು ಒಪ್ಪೋ ಕ್ಯಾಶ್ ಸೇವೆಯನ್ನ ಪಡೆಯಬಹುದು. ಆಪ್ಲಿಕೇಶನ್ ನಲ್ಲಿ ಹಂತ ಹಂತವಾಗಿ ಅಗತ್ಯ ಮಾಹಿತಿಯನ್ನ ವಿವರವಾಗಿ ನಿಡುತ್ತಾ, ನಿಮ್ಮ ಅಗತ್ಯ ಹಣಕಾಸು ಸಹಾಯವನ್ನು ಪಡೆಯಬಹುದಾಗಿದೆ.

ಇತರೆ ಫೈನ್ಯಾನ್ಸಿಯಲ್ ಸೇವೆಗಳು
ಈಗಾಗಲೇ ರಿಯಲ್‌ಮಿ ಮತ್ತು ಶಿಯೋಮಿ ಸ್ಮಾರ್ಟ್‌ಫೋನ್ ಕಂಪೆನಿಗಳು ತಮ್ಮದೇ ಆದ ಸೇವೆಗಳೊಂದಿಗೆ ಹಣಕಾಸು ಸೇವಾ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ಶಿಯೋಮಿ ಮಿ ಪೇ ಅಪ್ಲಿಕೇಶನ್‌ನೊಂದಿಗೆ ಮಿ ಕ್ರೆಡಿಟ್-ಸಾಲ ಸೇವೆಯನ್ನು ಪ್ರಾರಂಭಿಸಿದ್ದರೆ, ರಿಯಲ್‌ಮಿ ಭಾರತೀಯ ಗ್ರಾಹಕರಿಗೆ ರಿಯಲ್‌ಮಿ ಪೈಸಾವನ್ನು ಬಿಡುಗಡೆ ಮಾಡಿದೆ. ಈ ಆಪ್ಲಿಕೇಶನ್‌ಗಳು ಬಳಕೆದಾರರಿಗೆ ಹಣಕಾಸು ಸಹಾಯದ ಜೊತೆಗೆ ಮ್ಯೂಚುಯಲ್ ಫಂಡ್ ಸೇವೆಗಳನ್ನ ನೀಡುವುದಕ್ಕೆ ಪ್ರಾರಂಭವಾಗಿವೆ. ಒಟ್ಟಿನಲ್ಲಿ ಒಪ್ಪೋ ಒಪ್ಪೋ ಕ್ಯಾಶ್ ಮೂಲಕ ಹಣಕಾಸು ವ್ಯವಹಾರ ಕ್ಷೇತ್ರಕ್ಕೆ ಅಧಿಕೃತವಾಗಿ ಎಂಟ್ರಿ ನೀಡಿದೆ.


Click it and Unblock the Notifications








