Home
ಸುದ್ದಿಜಾಲ

ಲೈವ್ ಫೋಟೋ ಶೇರ್ ಆಯ್ಕೆ ಹೊಂದಿರುವ ಮೊದಲ ಸ್ಮಾರ್ಟ್‌ಫೋನ್‌ ಲಾಂಚ್ ಮಾಡಿದ ಒಪ್ಪೋ

ಮೊಬೈಲ್‌ ಮಾರುಕಟ್ಟೆಯಲ್ಲಿ ಒಪ್ಪೋ ಸಂಸ್ಥೆ ಭಿನ್ನ ಸ್ಮಾರ್ಟ್‌ಫೋನ್‌ಗಳ ಮೂಲಕ ಗ್ರಾಹಕ ಬಳಗವನ್ನು ಹೊಂದಿದೆ. ಸಂಸ್ಥೆಯ ರೆನೋ ಸರಣಿಯ ಫೋನ್‌ಗಳು ಹೆಚ್ಚು ಆಕರ್ಷಕ ಎನಿಸಿಕೊಂಡಿವೆ. ಇದೀಗ ಒಪ್ಪೋ ರೆನೋ 12 ಸರಣಿಯ ಎರಡು ಫೋನ್‌ಗಳನ್ನು ಹಲವು ವಿಭಿನ್ನ ಫೀಚರ್ಸ್‌ಗಳ ಜೊತೆಗೆ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಿದ್ಧವಾಗಿದೆ.

ಒಪ್ಪೋ ಮೊಬೈಲ್‌ಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇದ್ದೇ ಇದೆ ಅದರಂತೆ ಒಪ್ಪೋ ಸಂಸ್ಥೆ ಕೂಡ ಗ್ರಾಹಕರನ್ನು ಸೆಳೆಯಲು ಕಡಿಮೆ ಬೆಲೆಯಲ್ಲಿ ಹೊಸ ಬಗೆಯ ಫೀಚರ್ಸ್‌ಗಳನ್ನು ಹೊಂದಿರುವ ಮೊಬೈಲ್‌ಗಳನ್ನು ಬಿಡುಗಡೆ ಮಾಡುತ್ತಾ ಬಂದಿದೆ. ಇದೀಗ ಹೊಸದಾಗಿ ಒಪ್ಪೋ ರೆನೋ 12 ಸಿರೀಸ್‌ನ ಎರಡು ಮೊಬೈಲ್‌ಗಳನ್ನು ಲಾಂಚ್ ಮಾಡಿದ್ದು ಅವುಗಳು ವಿಶೇಷವಾಗಿ ಲೈವ್ ಫೋಟೋ ಶೇರ್ ಮಾಡುವ ಆಯ್ಕೆಯನ್ನು ಹೊಂದಿರುವ ಮೊದಲ ಸ್ಮಾರ್ಟ್‌ಫೋನ್‌ಗಳು ಎಂಬ ಹೆಗ್ಗಳಿಕೆಗೆ ಪಾತ್ರವಾಗಿವೆ.

ಲೈವ್ ಫೋಟೋ ಶೇರ್ ಆಯ್ಕೆ ಹೊಂದಿರುವ ಮೊದಲ ಸ್ಮಾರ್ಟ್‌ಫೋನ್‌ ಲಾಂಚ್ ಮಾಡಿದ ಒಪ್ಪೋ

ಹಿಂದಿನ ಮಾದರಿಗಳಂತೆ ರೆನೋ 12 ಸರಣಿಯು ಅತ್ಯುತ್ತಮ ಫೋಟೋಗ್ರಫಿ ಅನುಭವ ನೀಡುತ್ತದೆ. ಈ ಮೊಬೈಲ್‌ಗಳು ಫೋಟೋ ತೆಗೆಯುವ ಮೊದಲು ಮತ್ತು ನಂತರ ಡಿಸ್‌ಪ್ಲೇ ಚಲನೆಯನ್ನು ಹೊಂದಿವೆ, ಈ ಹಿಂದೆ ಕೂಡ ಆಂಡ್ರಾಯ್ಡ್ ಫೋನ್‌ಗಳಲ್ಲಿ ಲೈವ್ ಫೋಟೋ ತೆಗೆಯುವ ಅವಕಾಶ ನೀಡಲಾಗಿತ್ತು, ಆದರೆ ಅವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಒಂದು ವೇಳೆ ಸಾಮಾಜಿಕ ಮಾಧ್ಯಮದಲ್ಲಿ ಚಿತ್ರಗಳನ್ನು ಹಂಚಿಕೊಂಡರೆ ಅವುಗಳು ಸ್ಟಿಲ್‌ ಆಗಿರುವಂತೆ ಕಾಣಿಸುತ್ತಿದ್ದವು.

ರೆನೋ 12 ಸಿರೀಸ್ ಮೊಬೈಲ್‌ಗಳು ಲೈವ್ ಫೋಟೋಗಳನ್ನು ಶೇರ್ ಮಾಡುವುದನ್ನು ಮಾತ್ರ ಬೆಂಬಲಿಸುವುದಿಲ್ಲ, ಬದಲಾಗಿ ಫೋಟೋಗಳನ್ನು ಸುಂದರವಾಗಿ ಎಡಿಟ್‌ ಮಾಡುವ ಅವಕಾಶವನ್ನು ಸಹ ನೀಡಿವೆ. ಬಳಕೆದಾರರಿಗೆ ಅವುಗಳನ್ನು ಸುಂದರಗೊಳಿಸಲು ಮತ್ತು ಎಡಿಟ್ ಮಾಡಲು ಅವಕಾಶ ನೀಡಿವೆ. ಇದರಿಂದಾಗಿ ಕಲರ್ ಹೊಂದಿಸುವುದು, ಫಿಲ್ಟರ್‌ ಸೇರಿಸುವುದರ ಜೊತೆಗೆ ಸಬ್ಜೆಕ್‌ ಮತ್ತು ಸ್ಟಿಕ್ಕರ್‌ಗಳನ್ನು ಹೊಂದಾಣಿಕೆ ಮಾಡುವ ಅವಕಾಶ ಸೇರಿದಂತೆ ವಿವಿಧ ಗ್ರಾಹಕರ ಸ್ನೇಹಿ ಆಯ್ಕೆಗಳನ್ನು ನೀಡುತ್ತವೆ.

ರೆನೋ 12 ಮತ್ತು 12 Pro ಸರಣಿ ಮೊಬೈಲ್‌ಗಳು ಶೀಘ್ರದಲ್ಲೇ ಜಾಗತಿಕ ಮಾರುಕಟ್ಟೆಗೆ ಬಿಡುಗಡೆಯಾಗುವ ನಿರೀಕ್ಷೆ ಇದ್ದು, ಇದರಲ್ಲಿ ಕೆಲವು ಫೀಚರ್ಸ್‌ಗಳನ್ನು ಬದಲಾವಣೆ ಮಾಡಿ ಜಾಗತಿಕವಾಗಿ ಬಿಡುಗಡೆ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ.

ಇದೀಗ ಚೀನಾ ಮಾರುಕಟ್ಟೆಯಲ್ಲಿ ರೆನೋ 12 ಮೊಬೈಲ್ 2,699 ಯುವಾನ್ ($372) ನಲ್ಲಿ ಪ್ರಾರಂಭವಾಗಿದೆ, ಆದರೆ 12 Pro ಮೊಬೈಲ್‌ 3,199 ಯುವಾನ್‌ ($440) ಆರಂಭಿಕ ಬೆಲೆ ಹೊಂದಿದೆ. ಇನ್ನೂ ರೆನೋ 12 ಮತ್ತು 12 Pro ಎರಡೂ ಮೊಬೈಲ್‌ಗಳು 6.7-ಇಂಚಿನ ಕವರ್ಡ್ ಎಡ್ಜ್ ಓಲ್‌ಡ್ ಪ್ಯಾನೆಲ್ ಹೊಂದಿವೆ, ಅದು 2412 x 1080 ಪಿಕ್ಸೆಲ್‌ಗಳ ಫುಲ್ HD+ ರೆಸಲ್ಯೂಶನ್ ಜೊತೆಗೆ 120Hz ರಿಫ್ರೆಶ್ ರೇಟ್ ಹೊಂದಿವೆ.

50 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ, 50 ಮೆಗಾಪಿಕ್ಸೆಲ್ + 8-ಮೆಗಾಪಿಕ್ಸೆಲ್ + 50 ಮೆಗಾಪಿಕ್ಸೆಲ್ (2x ಟೆಲಿಫೋಟೋ) ಟ್ರಿಪಲ್ ಕ್ಯಾಮೆರಾ ಸಿಸ್ಟಮ್ ವ್ಯವಸ್ಥೆ ಹೊಂದಿದೆ. ಇದರ ಜೊತೆಗೆ 80W ವೇಗದ ಚಾರ್ಜಿಂಗ್‌ನೊಂದಿಗೆ 5000mAh ಬ್ಯಾಟರಿ ಸೌಲಭ್ಯ ಪಡೆದುಕೊಂಡಿದೆ.

ರೆನೋ 12 ಮೊಬೈಲ್‌ 8250 ಡೈಮೆನ್ಸಿಟಿ ಚಿಪ್ ಹೊಂದಿದೆ, ಆದರೆ ರೆನೋ 12 Pro 9200+ SoC ಡೈಮೆನ್ಸಿಟಿ ಹೊಂದಿದೆ. ಎರಡೂ ಮಾದರಿಗಳು LPDDR5x RAM, UFS 3.1 ಸಂಗ್ರಹಣೆ, IP65 ರೇಟೆಡ್ ಚಾಸಿಸ್, ಇನ್-ಸ್ಕ್ರೀನ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಮತ್ತು IR ಬ್ಲಾಸ್ಟರ್ ಅನ್ನು ಹೊಂದಿವೆ. Pro ರೂಪಾಂತರವು ಡ್ಯುಯಲ್ ಸ್ಪೀಕರ್‌ಗಳು ಮತ್ತು ಎಕ್ಸ್-ಆಕ್ಸಿಸ್ ಲೀನಿಯರ್ ಮೋಟಾರ್‌ನಂತಹ ಹಲವು ವೈಶಿಷ್ಟ್ಯಗಳನ್ನು ಹೊಂದಿವೆ.

Best Mobiles in India

English summary
Oppo has launched two mobiles of the Reno 12 series which are the first smartphones to feature Live Photo Sharing feature.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+