ಒಪ್ಪೋ ಕಂಪೆನಿಯ ಎನ್‌ಕೋ M31 ವಾಯರ್‌ಲೆಸ್‌ ನೆಕ್‌ಬ್ಯಾಂಡ್‌ ಇಯರ್‌ಫೋನ್‌ ಬಿಡುಗಡೆ!

|

ಟೆಕ್‌ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್‌ಗಳ ಭರಾಟೆ ಹೆಚ್ಚಾದಂತೆ ಹೆಡ್‌ಫೊನ್‌ಗಳ ಮಾರುಕಟ್ಟೆ ಕೂಡ ವಿಸ್ತಾರವಾಗುತ್ತಲೇ ಇದೆ. ಈಗಾಗಲೇ ಮಾರುಕಟ್ಟೆಯಲ್ಲಿ ಹಲವು ಕಂಪೆನಿಗಳ ಇಯರ್‌ಫೋನ್‌ಗಳು ಲಬ್ಯವಿದೆ. ಇವುಗಳಲ್ಲಿ ಒಪ್ಪೋ ಕಂಪೆನಿಯು ಕೂಡ ಒಂದಾಗಿದ್ದು. ತನ್ನದೇ ಆದ ವಿವಿಧ ಮಾದರಿಯ ಇಯರ್‌ಫೋನ್‌ಗಳನ್ನ ಪರಿಚಯಿಸಿ ಸೈ ಎನಿಸಿಕೊಂಡಿದೆ. ಸದಾ ಹೊಸತನದ ಪ್ರಾಡಕ್ಟ್‌ಗಳನ್ನೇ ಪರಿಚಯಿಸುತ್ತಾ ಗ್ರಾಹಕರನ್ನ ಸೆಳೆಯುವ ಒಪ್ಪೋ ಕಂಪೆನಿ ಇದೀಗ ತನ್ನ ಹೊಸ ಮಾದರಿಯ ವಾಯರ್‌ಲೆಸ್‌ ನೆಕ್‌ಬ್ಯಾಂಡ್‌ ಇಯರ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ.

ಹೌದು

ಹೌದು ಚೀನಾ ಮೂಲದ ಜನಪ್ರಿಯ ಸ್ಮಾರ್ಟ್‌ಫೋನ್‌ ಕಂಪೆನಿ ಒಪ್ಪೋ ತನ್ನ ಹೊಸ ಇಯರ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ. ಸದ್ಯ ಭಾರತದಲ್ಲಿ ಬಿಡುಗಡೆ ಮಾಡಿರುವ ಈ ಇಯರ್‌ಫೊನ್‌ ಅನ್ನು ಒಪ್ಪೋ ಎನ್‌ಕೋ M31 ವಾಯರ್‌ಲೆಸ್‌ ನೆಕ್‌ಬ್ಯಾಂಡ್‌ ಇಯರ್‌ಫೋನ್‌ ಎಂದು ಹೆಸರಿಸಲಾಗಿದೆ.ಇನ್ನು ಈ ಇಯರ್‌ಫೋನ್‌ಗಳು ನೆಕ್‌ಬ್ಯಾಂಡ್‌ ಶೈಲಿಯಲ್ಲಿದ್ದು, ಈ ಮಾದರಿಯಲ್ಲಿ ಒಪ್ಪೋ ಕಂಪೆನಿಯೆ ಎರಡನೇ ಇಯರ್‌ಫೋನ್‌ ಇದಾಗಿದೆ. ಇದಕ್ಕೂ ಮುನ್ನ ಒಪ್ಪೋ ಎನ್ಕೋ Q1 ಇಯರ್‌ಫೋನ್‌ ಕೂಡ ನೆಕ್‌ಬ್ಯಾಂಡ್‌ ಶೈಲಿಯನ್ನ ಒಳಗೊಂಡಿತ್ತು.

ಇನ್ನು

ಇನ್ನು ಈ ಹೊಸ ಇಯರ್‌ಫೋನ್‌ ಹೈ-ರೆಸ್ ವೈರ್‌ಲೆಸ್ ಪ್ರಮಾಣೀಕರಣವನ್ನು ಹೊಂದಿದ್ದು, 990 ಕೆಬಿಪಿಎಸ್ ವರೆಗೆ ಪ್ರಸರಣ ವೇಗವನ್ನು ಹೊಂದಿದೆ. ಇದನ್ನು ಸಕ್ರಿಯಗೊಳಿಸಲು ಬ್ಲೂಟೂತ್ 5.0 ಮತ್ತು ಎಲ್‌ಡಿಎಸಿಗೆ ಬೆಂಬಲವನ್ನು ನೀಡುವ ಸಾಮರ್ಥ್ಯವನ್ನ ಈ ಇಯರ್‌ಫೊನ್‌ ಒಳಗೊಂಡಿದೆ. ಅಲ್ಲದೆ ಬಳಕೆದಾರರು " ಸಮತೋಲಿತ ಆಡಿಯೋವನ್ನ ಫುಲ್‌ ಫ್ರೀಕ್ವೆನ್ಸಿ ರೇಂಜ್‌ನಲ್ಲಿ ಪಡೆಯಲಿದ್ದಾರೆ. ಅಷ್ಟೇ ಅಲ್ಲ ಕ್ಲಿಯರ್‌ ಹೈ ಫ್ರೀಕ್ವೆನ್ಸಿ ರಿಚ್‌ ಮಿಡ್‌ ರೇಂಜ್‌ ಫ್ರೀಕ್ವೆನ್ಸಿ ಹಾಗೂ ಪವರ್ ಫುಲ್‌ ಲೋ ಫ್ರೀಕ್ವೆನ್ಸಿಯನ್ನ ಪಡೆಯಬಹುದಾಗಿದೆ.

ನೆಕ್‌ಬ್ಯಾಂಡ್

ಅಲ್ಲದೆ ನೆಕ್‌ಬ್ಯಾಂಡ್ ಶೈಲಿಯ ಈ ಇಯರ್‌ಫೋನ್‌ಗಳು 9.2 ಎಂಎಂ ಡೈನಾಮಿಕ್ ಆಡಿಯೋ ಡ್ರೈವರ್‌ಗಳನ್ನು ಒಳಗೊಂಡಿದೆ. ಜೊತೆಗೆ ಇದು AI- ಆಧಾರಿತ ಅಪ್‌ಲಿಂಕ್ ನಾಯಿಸ್‌ ಕ್ನಾನ್ಸಲೇಶನ್ ಹೊಂದಿದೆ. ಇನ್ನು ಈ ಇಯರ್‌ಫೋನ್‌ಗಳು ಬಳಕೆದಾರರ ಕಿವಿಯ ವಿನ್ಯಾಸಕ್ಕೆ ತಕ್ಕಂತೆ ಹೊಂದಿಕೊಳ್ಳುವ ಸಾಮರ್ಥ್ಯವನ್ನ ಹೊಂದಿದೆ. ಜೊತೆಗೆ ಉತ್ತಮ ಆಡಿಯೋ ಅನುಭವವನ್ನ ನೀಡಲಿದೆ. ಇದಲ್ಲದೆ ಎಂಕೋ W31 ಇಯರ್‌ಬಡ್‌ಗಳು ಧೂಳು ಮತ್ತು ನೀರು-ನಿರೋಧಕ ವಿನ್ಯಾಸವನ್ನು ಹೊಂದಿದ್ದು, ಬಾಸ್ ಮತ್ತು ಬ್ಯಾಲೆನ್ಸ್ ಮೋಡ್‌ಗಳನ್ನು ಒಳಗೊಂಡಂತೆ ಎರಡು ವಿಧಾನಗಳನ್ನ ಹೊಂದಿದೆ.

ಒಪ್ಪೋ

ಇನ್ನು ಒಪ್ಪೋ ಕಂಪೆನಿಯ ಮತ್ತೊಂದು ಇಯರ್‌ಫೊನ್ ಎನ್‌ಕೋ ಫ್ರೀ 13.4 ಎಂಎಂ "ಅಲ್ಟ್ರಾ-ಡೈನಾಮಿಕ್" ಸ್ಪೀಕರ್‌ಗಳನ್ನು ಹೊಂದಿದ್ದು. ಡ್ಯುಯಲ್ ಮ್ಯಾಗ್ನೆಟಿಕ್ ಸರ್ಕ್ಯೂಟ್‌ಗಳನ್ನ ಹೊಂದಿದೆ. ಒಪ್ಪೋ ಡಯಾಫ್ರಾಮ್‌ಗಾಗಿ ಮ್ಯಾಗ್ನಾಲಿಯಂ-ಟೈಟಾನಿಯಂ ಸಂಯೋಜನೆಯನ್ನು ಒಳಗೊಂಡಿದೆ. ಇದಲ್ಲದೆ ಒಪ್ಪೋ ಎನ್‌ಕೋ ಫ್ರೀ ಬೆಲೆ 7,999 ರೂ ಆಗಿತ್ತು. ಆದರೆ ಎನ್‌ಕೋ ಡಬ್ಲ್ಯು 31 ಕೇವಲ 4,499 ರೂ.ಗಳಿಗೆ ಲಭ್ಯವಾಗಲಿದೆ. ಸದ್ಯ ಈ ಹೊಸ ಇಯರ್‌ಫೋನ್‌ ಇದೇ ಮಾರ್ಚ್ 30 ರಂದು ಭಾರತದಲ್ಲಿ ಮಾರಾಟವಾಗಲಿದ್ದು, ಕಪ್ಪು ಮತ್ತು ಹಸಿರು ಎಂಬ ಎರಡು ಬಣ್ಣ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿರುತ್ತವೆ.

Most Read Articles
Best Mobiles in India

English summary
Oppo launches Enco M31 Wireless Neckband Earphones in India: Price and other details.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X