Oppo : ಒಪ್ಪೊದಿಂದ ಬರಲಿದೆ ಇಸಿಜಿ ಮಾನಿಟರಿಂಗ್‌ ಮಾಡುವ ಸ್ಮಾರ್ಟ್‌ವಾಚ್‌!

|

ಈಗಾಗ್ಲೆ ಟೆಕ್‌ ಮಾರುಕಟ್ಟೆಯಲ್ಲಿ ಸಾಕಷ್ಟು ವೈವಿಧ್ಯ ಬಗೆಯ ಸ್ಮಾರ್ಟ್‌ವಾಚ್‌ಗಳು ಲಭ್ಯವಿದೆ. ಸ್ಮಾರ್ಟ್‌ಫೋನ್‌ಗಳ ಮಾರುಕಟ್ಟೆಯಷ್ಟೇ ಸ್ಮಾರ್ಟ್‌ವಾಚ್‌ಗಳ ಮಾರುಕಟ್ಟೆ ಕೂಡ ವಿಸ್ತಾರವಾಗುತ್ತಲೇ ಇದೆ. ಸದ್ಯ ಒಪ್ಪೊ ಕಂಪೆನಿ ಹೊಸ ಮಾದರಿಯ ಸ್ಮಾರ್ಟ್‌ವಾಚ್‌ ಬಿಡುಗಡೆ ಮಾಡಲು ಸಿದ್ದವಾಗಿದ್ದು, ಈ ಸ್ಮಾರ್ಟ್‌ ವಾಚ್ ಎಲೆಕ್ಟ್ರೋ ಕಾರ್ಡಿಯೋ ಗ್ರಾಮ್ (ECG) ಅನ್ನು ಅಳೆಯುವ ಟೆಕ್ನಾಲಜಿಯೊಂದಿಗೆ ಬರಲಿದೆ ಎಂಬ ಗಾಸಿಪ್‌ ಟೆಕ್‌ ವಲಯದಲ್ಲಿ ಹರಿದಾಡ್ತಿದೆ.

ಹೌದು

ಹೌದು, ಚೀನಾ ಮೂಲದ ಜನಪ್ರಿಯ ಸ್ಮಾರ್ಟ್‌ಫೋನ್‌ ಕಂಪೆನಿ ಒಪ್ಪೊ ಹೊಸ ಮಾದರಿಯ ಸ್ಮಾರ್ಟ್‌ವಾಚ್‌ ಬಿಡುಗಡೆಗೆ ಸಿದ್ದತೆ ನಡೆಸಿದೆ. ಅಲ್ಲದೆ ಈ ವಾಚ್‌ ಆಪಲ್ ವಾಚ್‌ನಂತೆಯೇ ECG ಮಾನಿಟರಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿರಲಿದೆ ಎಂದು ಹೇಳಲಾಗಿದೆ. ಈಗಾಗ್ಲೆ ಒಪ್ಪೊ ಕಂಪೆನಿ ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಸ್ಮಾರ್ಟ್ ವಾಚ್‌ಗಳನ್ನು, ಸ್ಮಾರ್ಟ್ ವೈರ್‌ಲೆಸ್ ಹೆಡ್‌ಫೋನ್‌ಗಳು ಮತ್ತು 5G ಕಸ್ಟಮರ್‌ ಪ್ರೊವೈಡೆಡ್‌ ಉಪಕರಣಗಳನ್ನು (CPE) ಬಿಡುಗಡೆ ಮಾಡುವ ಪ್ಲ್ಯಾನ್‌ ಬಗ್ಗೆ ಹೇಳಿತ್ತು.

ಒಪ್ಪೊ

ಸದ್ಯ ಒಪ್ಪೊ ಕಂಪೆನಿಯ ಹೊಸ ಸ್ಮಾರ್ಟ್‌ವಾಚ್‌ನ ವಿನ್ಯಾಸದ ಬಗ್ಗೆ ಚೀನಾದ ಟಿಪ್‌ಸ್ಟರ್ ವರದಿ ಮಾಡಿದ್ದು, ಲೀಕ್‌ ಮಾಹಿತಿ ಪ್ರಕಾರ ಒಪ್ಪೊ ಸ್ಮಾರ್ಟ್ ವಾಚ್ ಇಸಿಜಿಯನ್ನು ಅಳೆಯುವ ಸಾಮರ್ಥ್ಯವನ್ನು ಹೊಂದಿದೆ. ಅಷ್ಟೇ ಅಲ್ಲ ಈ ಸ್ಮಾರ್ಟ್ ವಾಚ್ ಚದರ ವಿನ್ಯಾಸದೊಂದಿಗೆ ಬರಲಿದೆ ಎಂದು ಹೇಳಲಾಗ್ತಿದೆ. ಹಾಗಂತ ಇಸಿಜಿ ಅಳತೆ ಮಾಡುವ ಸ್ಮಾರ್ಟ್ ವಾಚ್ ಅನ್ನು ತಂದ ಮೊದಲ ಕಂಪನಿ ಒಪ್ಪೊ ಅಲ್ಲ.

ಕಳೆದ

ಕಳೆದ ವರ್ಷವೇ ಇಸಿಜಿ ಮಾನಿಟರ್‌ ಮಾಡುವ ಸ್ಮಾರ್ಟ್‌ವಾಚ್‌ಗಳು ಮಾರುಕಟ್ಟೆಯನ್ನ ಪ್ರವೇಶಿಸಿದ್ದು, ಆಪಲ್ ವಾಚ್ ಸರಣಿ 4 ರಿಂದಲೂ ಕೂಡ ಈ ಮಾದರಿಯ ಸ್ಮಾರ್ಟ್‌ವಾಚ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಆಪಲ್ ವಾಚ್ 5, ಅಮಾಜ್‌ಫಿಟ್ ವರ್ಜ್ 2, ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ ಆಕ್ಟಿವ್ 2 ಸಹ ಇಸಿಜಿ ಬೆಂಬಲ ಹೊಂದಿರುವ ಜನಪ್ರಿಯ ಸ್ಮಾರ್ಟ್ ವಾಚ್ ಗಳಾಗಿವೆ.

ಈಗಾಗ್ಲೆ

ಈಗಾಗ್ಲೆ ಮಾರುಕಟ್ಟೆಯಲ್ಲಿ ಮನುಷ್ಯನ ಫಿಟ್ನೆಸ್‌ ಅಳೆಯಬಲ್ಲ ವೈವಿದ್ಯಮಯ ಫಿಟ್ನೆಸ್‌ ಬ್ಯಾಂಡ್‌ಗಳು ಸ್ಮಾರ್ಟ್‌ವಾಚ್‌ಗಳು ಲಭ್ಯವಿದೆ. ಇಸಿಜಿಯನ್ನ ಮಾನಿಟರ್‌ ಮಾಡುವ ವಾಚ್‌ಗಳು ಕೂಡ ಲಭ್ಯವಿದೆ. ಇಸಿಜಿ ಮಾನಿಟರಿಂಗ್‌ ಮಾಡುವುದರಿಂದ ಹೃದಯದ ಬಡಿತದಲ್ಲಾಗುವ ಬದಲಾವಣೆ, ದೇಹದ ಆರೋಗ್ಯದಲ್ಲಿ ಉಂಟಾಗುವ ವ್ಯತ್ಯಾಸದ ಬಗ್ಗೆ ಸೂಕ್ತ ಮಾಹಿತಿ ದೊರೆಯುವುದರಿಂದ ಈ ಮಾದರಿಯ ಸ್ಮಾರ್ಟ್‌ವಾಚ್‌ಗಳಿಗೆ ಒಳ್ಳೆಯ ಬೇಡಿಕೆ ಇದೆ.

ಒಪ್ಪೊ

ಇನ್ನು ಒಪ್ಪೊ ಉಪಾಧ್ಯಕ್ಷ ಶೆನ್ ಹೇಳಿಕೆಯ ಪ್ರಕಾರ ಈ ಹೊಸ ಸ್ಮಾರ್ಟ್‌ವಾಚ್‌ ಆಯತಾಕಾರದ ಡಯಲ್ ಅನ್ನು ಹೊಂದಿರುವ ವಿನ್ಯಾಸದಲ್ಲಿರುವ ಸ್ಮಾರ್ಟ್‌ವಾಚ್‌ ಇದಾಗಿರಲಿದೆ ಅಷ್ಟೇ ಅಲ್ಲ ಯಾವುದೇ ವಿಷಯವನ್ನ ಸ್ಮಾರ್ಟ್‌ವಾಚ್‌ನಲ್ಲಿ ವೀಕ್ಷಿಸಲು ಆಯತಾಕಾರದ ಡಯಲ್ ಉತ್ತಮವಾಗಿರಲಿದೆ ಎಂದು ಹೇಳಿದ್ದಾರೆ. ಸದ್ಯ ಈ ಹೊಸ ಸ್ಮಾರ್ಟ್ ವಾಚ್ MWC 2020 ರಲ್ಲಿ ಬಿಡುಗಡೆಯಾಗಲಿದೆ ಎಂದು ಅಂದಾಜಿಸಲಾಗಿದೆ.

Best Mobiles in India

English summary
The Oppo smartwatch would come with a square design.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X