ಒಪ್ಪೋದಿಂದ ಲಾಂಚ್‌ ಆಗಲಿದೆಯಾ ಒಪ್ಪೋ ಸ್ಮಾರ್ಟ್‌ಟಿವಿ!

|

ಚೀನಾ ಮೂಲದ ಸ್ಮಾರ್ಟ್‌ಫೊನ್‌ ಕಂಪೆನಿ ಒಪ್ಪೋ ಇದೀಗ ಸ್ಮಾರ್ಟ್‌ ಟಿವಿಯನ್ನು ಸಹ ಬಿಡುಗಡೆ ಮಾಡುವ ಯೋಜನೆ ಹಾಕಿಕೊಂಡಿದೆ ಎಂದು ಹೇಳಲಾಗ್ತಿದೆ. ಈಗಾಗಲೇ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಜನಪ್ರಿಯತೆಯನ್ನ ಗಳಸಿಕೊಂಡಿರೋ ಒಪ್ಪೋ ಇತರೆ ಉತ್ಪನ್ನಗಳಲ್ಲು ವೈವಿಧ್ಯತೆ ಸಾಧಿಸಲು ಮುಂದಾಗಿದೆ. ಇತ್ತೀಚೆಗೆ ನಡೆದ ಒಪ್ಪೋ ಸಮ್ಮೇಳನದಲ್ಲಿ ಇಂತಹದೊಂದು ಯೋಜನೆ ಪ್ರಸ್ತಾಪವಾಗಿದೆ ಎಂಬ ಸುದ್ದಿ ಇದೀಗ ಟೆಕ್‌ ಮಾರುಕಟ್ಟೆಯಲ್ಲಿ ಕೇಳಿ ಬರುತ್ತಿದೆ.

ಹೌದು

ಹೌದು, ಒಪ್ಪೋ ಸ್ಮಾರ್ಟ್‌ಫೋನ್‌ ಕಂಪೆನಿ ಈಗಾಗ್ಲೆ ಸ್ಮಾರ್ಟ್‌ಫೋನ್‌ ಸೇರಿದಂತೆ ಸ್ಮಾರ್ಟ್‌ ಬ್ಯಾಂಡ್‌ಗಳನ್ನ ಸಹ ಬಿಡುಗಡೆ ಮಾಡಿದೆ. ಇದೀಗ ತನ್ನ ಉತ್ತನ್ನಗಳಲ್ಲಿ ವೈವಿಧ್ಯತೆ ಸಾಧಿಸಲು ಮುಂದಾಗಿದ್ದು, ಮುಂದಿನ ದಿನಗಳಲ್ಲಿ ಒಪ್ಪೋ ಸ್ಮಾರ್ಟ್‌ಟಿವಿಯನ್ನ ಲಾಂಚ್‌ ಮಾಡಲಿದೆ ಎಂದು ಹೇಳಲಾಗ್ತಿದೆ. ಟೆಕ್‌ ಮಾರುಕಟ್ಟೆಯಲ್ಲಿ ತನ್ನದೆ ಬ್ರಾಂಡ್‌‌ ಅನ್ನ ಸೃಷ್ಟಿಸಲು ಮುಂದಾಗಿರೋ ಒಪ್ಪೋ ಕಂಪೆನಿ ಎಲ್ಲಾ ರೀತಿಯ ಸ್ಮಾರ್ಟ್‌ ಪ್ರಾಡಕ್ಟ್‌ಗಳನ್ನ ಮುಂದೊಂದು ದಿನ ಲಾಂಚ್‌ ಮಾಡಿದರೂ ಅಚ್ಚರಿಯಿಲ್ಲ.

ಒಪ್ಪೋ

ಒಪ್ಪೋ ಕಂಪೆನಿ ಸ್ಮಾರ್ಟ್ ಟಿವಿ ಲೈನ್ ಅನ್ನು ಪ್ರಾರಂಭಿಸುವ ಬಗ್ಗೆ ಇನ್ನೂ ಏನನ್ನೂ ಘೋಷಿಸದಿದ್ದರೂ, ಒಪ್ಪೊ ಟಿವಿಯನ್ನು ಪ್ರಾರಂಭಿಸುವುದರೊಂದಿಗೆ ಶೀಘ್ರದಲ್ಲೇ ಸ್ಮಾರ್ಟ್‌ಟಿವಿ ಮಾರುಕಟ್ಟೆಯಲ್ಲಿ ಒಪ್ಪೋ ಕಂಪೆನಿ ಹಲ್‌ಚಲ್‌ ಎಬ್ಬಿಸಲಿದೆ ಎಂಬ ವದಂತಿಗಳು ಸೃಷ್ಟಿಯಾಗಿದ್ದು. ಟೆಕ್‌ಲೋಕದಲ್ಲಿ ಬಾರಿ ನಿರೀಕ್ಷೆಯನ್ನ ಹುಟ್ಟುಹಾಕಿದೆ. ಪ್ರಸ್ತುತ, ಮಾರುಕಟ್ಟೆಯಲ್ಲಿ ದೊಡ್ಡ-ಪರದೆಯ ಸ್ಮಾರ್ಟ್ ಟಿವಿಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಈಗಾಗ್ಗಲೆ ಹಲವಾರು ಸ್ಮಾರ್ಟ್‌ಫೋನ್‌ ಕಂಪೆನಿಗಳು ಸ್ಮಾರ್ಟ್‌ ಟಿವಿ ಮಾರುಕಟ್ಟೆಯನ್ನ ಪ್ರವೇಶಿಸಿವೆ.

ಸದ್ಯ

ಸದ್ಯ ಗ್ರಾಹಕರ ಬೇಡಿಕೆಯನ್ನು ಪೂರೈಸಲು ಅನೇಕ ಸ್ಮಾರ್ಟ್‌ಫೋನ್‌ ಬ್ರಾಂಡ್‌‌ಗಳು ಸ್ಮಾರ್ಟ್‌ಟಿವಿ ಮಾರುಕಟ್ಟೆಯನ್ನ ಪ್ರವೇಶಿಸಿವೆ. ಶಿಯೋಮಿ, ಹುವಾವೇ, ಹಾನರ್, ಮೊಟೊರೊಲಾ, ಮತ್ತು ಒನ್‌ಪ್ಲಸ್ ಮುಂತಾದವುಗಳು ಈಗಾಗಲೇ ತಮ್ಮ ಸ್ಮಾರ್ಟ್ ಟಿವಿ ಲೈನ್ ಅನ್ನು ಪ್ರಾರಂಭಿಸಿವೆ. ಜೊತೆಗೆ ಇತ್ತೀಚಿಗಷ್ಟೆ ನೋಕಿಯಾ ಬ್ರಾಂಡ್ ಟಿವಿಗಳನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಅಷ್ಟೇ ಅಲ್ಲ 2019 ರಲ್ಲಿ 10 ಮಿಲಿಯನ್ ಯುನಿಟ್ ನಷ್ಟು ತನ್ನ ಸ್ಮಾರ್ಟ್‌ಟಿವಿಗಳು ಮಾರಾಟವಾಗಿವೆ ಅಂತಾ ಶಿಯೋಮಿ ಗ್ರೂಪ್ ಘೋಷಣೆ ಮಾಡಿದ್ದನ್ನು ಸಹ ಗಮನಿಸಬಹುದು.

ಇನ್ನು

ಇನ್ನು ಭಾರತೀಯ ಸ್ಮಾರ್ಟ್‌ಟಿವಿ ಮಾರುಕಟ್ಟೆಯಲ್ಲಿ ಶಿಯೋಮಿ ಸ್ಮಾರ್ಟ್ ಟಿವಿ ಮಾರುಕಟ್ಟೆಯಲ್ಲಿ ಲೀಡಿಂಗ್‌ ಸ್ಥಾನವ್ನ ಪಡೆದುಕೊಂಡಿದೆ. ಭಾರತದಲ್ಲಿ ಸ್ಮಾರ್ಟ್ ಟಿವಿಗಳ ವಿಷಯಕ್ಕೆ ಬಂದಾಗ ಶಿಯೋಮಿಯ ಮಿ ಟಿವಿ ಮಾರುಕಟ್ಟೆ ಪಾಲಿನ ಶೇಕಡಾ 33 ರಷ್ಟು ಪಾಲನ್ನು ಹೊಂದಿದೆ ಎಂದು ಹೇಳಲಾಗ್ತಿದೆ. ಎರಡನೇ ಸ್ಥಾನವನ್ನು ಸ್ಯಾಮ್‌ಸಂಗ್ ಇಂಡಿಯಾ 14% ಮಾರುಕಟ್ಟೆ ಪಾಲನ್ನು ಪಡೆದುಕೊಂಡರೆ, ಎಲ್‌ಜಿ 13% ಪಾಲನ್ನು ಹೊಂದಿದೆ. ಇದೆಲ್ಲವೂ ಪ್ರಸ್ತುತ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಟಿವಿಗೆ ಇರುವ ಬೇಡಿಕೆಯನ್ನ ಸೂಚಿಸುತ್ತದೆ.

Most Read Articles
Best Mobiles in India

Read more about:
English summary
Oppo, one of the leading smartphone brand from China, has been actively trying to diversify its portfolio of products. Recently, at a conference held by Oppo, the theme was set as “integrating the ecological and intelligent future”, hinting that the company plans to enrich its own product line.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X