Home
ಸುದ್ದಿಜಾಲ

ಅಚ್ಚರಿಯ ಫೀಚರ್ಸ್‌ನೊಂದಿಗೆ ಬರಲಿದೆ ಒಪ್ಪೋ ಪ್ಯಾಡ್‌ ಏರ್‌ 2! ಲಾಂಚ್‌ ಯಾವಾಗ?

ಸ್ಮಾರ್ಟ್‌ಫೋನ್‌ ಮಾತ್ರವಲ್ಲದೆ ಸ್ಮಾರ್ಟ್‌ ಟ್ಯಾಬ್‌ಗಳನ್ನು ಪರಿಚಯಿಸುತ್ತಾ ಬಂದಿರುವ ಬ್ರ್ಯಾಂಡ್‌ಗಳಲ್ಲಿ ಒಪ್ಪೋ ಕಂಪೆನಿ ಕೂಡ ಒಂದಾಗಿದೆ. ಒಪ್ಪೋ ಕಂಪೆನಿ ಸ್ಮಾರ್ಟ್‌ ಟ್ಯಾಬ್ಲೆಟ್‌ಗಳ ಮೂಲಕ ಟೆಕ್‌ ವಲಯದಲ್ಲಿ ಸೈ ಎನಿಸಿಕೊಂಡಿದೆ. ಇದೀಗ ತನ್ನ ಮುಂದಿನ ಟ್ಯಾಬ್‌ ಒಪ್ಪೋ ಪ್ಯಾಡ್‌ ಏರ್‌ 2 ಅನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ.

ಹೌದು, ಒಪ್ಪೋ ಪ್ಯಾಡ್‌ ಏರ್‌ 2 ಶೀಘ್ರದಲ್ಲೇ ಮಾರುಕಟ್ಟೆಗೆ ಎಂಟ್ರಿ ನೀಡಲು ತಯಾರಿ ನಡೆಸಿದೆ. ಈ ಟ್ಯಾಬ್‌ ಒಪ್ಪೋ ರೆನೋ 11 ಸರಣಿಯ ಜೊತೆಗೆ ಬಿಡುಗಡೆ ಆಗುವುದು ಪಕ್ಕಾ ಎನಿಸಿದೆ. ಇದು ಇದೇ ನವೆಂಬರ್ 23 ರಂದು ಲಾಂಚ್‌ ಆಗಲಿದೆ ಎಂದು ಆನ್‌ಲೈನ್‌ನಲ್ಲಿ ವರದಿಯಾಗಿದೆ. ಹಾಗಾದ್ರೆ ಒಪ್ಪೋ ಪ್ಯಾಡ್‌ ಏರ್‌ 2 ಟ್ಯಾಬ್‌ನಲ್ಲಿ ಯಾವೆಲ್ಲಾ ಫೀಚರ್ಸ್‌ ನಿರೀಕ್ಷಿಸಲಾಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಅಚ್ಚರಿಯ ಫೀಚರ್ಸ್‌ನೊಂದಿಗೆ ಬರಲಿದೆ ಒಪ್ಪೋ ಪ್ಯಾಡ್‌ ಏರ್‌ 2! ಲಾಂಚ್‌ ಯಾವಾಗ?

ಒಪ್ಪೋ ಪ್ಯಾಡ್‌ ಏರ್‌ 2 ಫೀಚರ್ಸ್‌ ನಿರೀಕ್ಷೆ ಏನು?
ಒಪ್ಪೋ ಪ್ಯಾಡ್‌ ಏರ್‌ 2 11.35 ಇಂಚಿನ ಡಿಸ್‌ಪ್ಲೇಯನ್ನು ಹೊಂದಿರಲಿದೆ. ಇದು 2000 x 1200 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದಲ್ಲಿ ಬರಲಿದೆ. ಇನ್ನು ಡಿಸ್‌ಪ್ಲೇ 225 ಪಿಪಿಐ ಪಿಕ್ಸೆಲ್‌ ಸಾಂದ್ರತೆಯನ್ನು ಒಳಗೊಂಡಿರಲಿದೆ ಎನ್ನಲಾಗಿದೆ. ಜೊತೆಗೆ 90 Hz ರಿಫ್ರೆಶ್ ರೇಟ್‌ ಅನ್ನು ಬೆಂಬಲಿಸುವ ನಿರೀಕ್ಷೆಯನ್ನು ಇಡಲಾಗಿದೆ.

ಒಪ್ಪೋ ಪ್ಯಾಡ್‌ ಏರ್‌ 2 ಪ್ರೊಸೆಸರ್‌ ಯಾವುದು?
ಒಪ್ಪೋ ಪ್ಯಾಡ್‌ ಏರ್‌ 2 ಮೀಡಿಯಾಟೆಕ್ ಹಿಲಿಯೊ G99 ಚಿಪ್‌ಸೆಟ್ ಪ್ರೊಸೆಸರ್‌ನಲ್ಲಿ ಬರಲಿದೆ. ಇದು ಆಂಡ್ರಾಯ್ಡ್‌ 14 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 8 GB RAM ಮತ್ತು 128 GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯದಲ್ಲಿ ಬರಲಿದೆ ಎಂದು ನಿರೀಕ್ಷಿಸಲಾಗಿದೆ. ಇದಲ್ಲದೆ ಮೆಮೊರಿ ಕಾರ್ಡ್‌ ಬೆಂಬಲದೊಂದಿಗೆ 1 TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.

ಅಚ್ಚರಿಯ ಫೀಚರ್ಸ್‌ನೊಂದಿಗೆ ಬರಲಿದೆ ಒಪ್ಪೋ ಪ್ಯಾಡ್‌ ಏರ್‌ 2! ಲಾಂಚ್‌ ಯಾವಾಗ?

ಒಪ್ಪೋ ಪ್ಯಾಡ್‌ ಏರ್‌ 2 ಕ್ಯಾಮೆರಾ ಸೆಟ್‌ಅಪ್‌ ಏನಿದೆ?
ಒಪ್ಪೋ ಪ್ಯಾಡ್‌ ಏರ್‌ 2 ಹಿಂಬದಿಯಲ್ಲಿ 8 ಮೆಗಾಪಿಕ್ಸೆಲ್‌ ಸೆನ್ಸಾರ್‌ ಕ್ಯಾಮೆರಾವನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದೆ. ಇದರ ಮೂಲಕ 1080p FHD ವೀಡಿಯೊ ರೆಕಾರ್ಡಿಂಗ್ ಮಾಡಬಹುದು ಎನ್ನಲಾಗಿದೆ. ಇದರೊಂದಿಗೆ ಈ ಸ್ಮಾರ್ಟ್‌ ಟ್ಯಾಬ್‌ ಮುಂಭಾಗದಲ್ಲಿ 8 ಮೆಗಾಪಿಕ್ಸೆಲ್‌ ಕ್ಯಾಮೆರಾವನ್ನು ನಿರೀಕ್ಷಿಸಲಾಗಿದೆ.

ಒಪ್ಪೋ ಪ್ಯಾಡ್‌ ಏರ್‌ 2 ಬ್ಯಾಟರಿ ಮತ್ತು ಇತರೆ ಸಾಮರ್ಥ್ಯ
ಒಪ್ಪೋ ಪ್ಯಾಡ್‌ ಏರ್‌ 2 8000 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದ್ದು, 33W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ ಎಂದು ವರದಿಯಾಗಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ
ಬ್ಲೂಟೂತ್ v5.3, ವೈಫೈ, USB-C v2.0 ಅನ್ನು ಬೆಂಬಲಿಸಬಹುದು ಎಂದು ಹೇಳಲಾಗಿದೆ.

ಅಚ್ಚರಿಯ ಫೀಚರ್ಸ್‌ನೊಂದಿಗೆ ಬರಲಿದೆ ಒಪ್ಪೋ ಪ್ಯಾಡ್‌ ಏರ್‌ 2! ಲಾಂಚ್‌ ಯಾವಾಗ?

ಒಪ್ಪೋ ಪ್ಯಾಡ್‌ ಏರ್‌ 2 ಬೆಲೆ ಮತ್ತು ಲಭ್ಯತೆ
ಒಪ್ಪೋ ಪ್ಯಾಡ್‌ ಏರ್‌ 2 ಅನ್ನು ಭಾರತದಲ್ಲಿ 19,999ರೂ ಬೆಲೆಗೆ ಬರಬಹುದು ಎಂದು ಅಂದಾಜಿಸಲಾಗಿದೆ. ಇದರ ಕಲರ್‌ ಆಯ್ಕೆಗಳ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಆದರೆ ಈ ಟ್ಯಾಬ್‌ ಮೊದಲಿಗೆ ಚೀನಾದಲ್ಲಿ ಮಾತ್ರ ಬಿಡುಗಡೆ ಆಗುವ ನಿರೀಕ್ಷೆ ಇಡಲಾಗಿದೆ. ಆದರಿಂದ ಭಾರತದ ಮಾರುಕಟ್ಟೆಗೆ ಈ ಸ್ಮಾರ್ಟ್‌ ಟ್ಯಾಬ್‌ ಎಂಟ್ರಿ ನೀಡುವುದಕ್ಕೆ ಇನ್ನಷ್ಟು ದಿನಗಳು ಬೇಕಾಗಬಹುದು ಎನ್ನಲಾಗಿದೆ.

ಇನ್ನು ಇತ್ತಿಚಿಗೆ ಒಪ್ಪೋ ರೆನೋ 11 ಸ್ಮಾರ್ಟ್‌ಫೋನ್‌ ಫೀಚರ್ಸ್‌ ಕೂಡ ಬಹಿರಂಗವಾಗಿದೆ. ಈ ಸ್ಮಾರ್ಟ್‌ಫೋನ್‌ 6.78 ಇಂಚಿನ ಅಮೋಲೆಡ್‌ ಡಿಸ್‌ಪ್ಲೇಯೊಂದಿಗೆ ಬರಲಿದೆ. ಈ ಡಿಸ್‌ಪ್ಲೇ 1080 x 2412 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದಲ್ಲಿ ಬರಲಿದೆ. ಇನ್ನು ಈ ಡಿಸ್‌ಪ್ಲೇ 394 ಪಿಪಿಐ ಪಿಕ್ಸೆಲ್‌ ಸಾಂದ್ರತೆಯನ್ನು ಒಳಗೊಂಡಿದ್ದು, 900 ನೀಟ್ಸ್‌ ಬ್ರೈಟ್‌ನೆಸ್‌ನೊಂದಿಗೆ ಬರಲಿದೆ. ಇದಲ್ಲದೆ 1400 ನೀಟ್ಸ್‌ ಗರಷ್ಠ ಬ್ರೈಟ್‌ನೆಸ್‌ ಬೆಂಬಲಿಸಲಿದೆ.

Best Mobiles in India

English summary
Oppo Pad Air 2 Tablet Launch date Set for November 23
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+