ಎಂಟ್ರಿ ಕೊಟ್ಟೆ ಬಿಡ್ತು ಒಪ್ಪೋ ಪ್ಯಾಡ್ ಏರ್ 2! ಡ್ಯುಯಲ್-ಟೋನ್ ಫಿನಿಶ್ ವಿಶೇಷ!
ಒಪ್ಪೋ ಕಂಪೆನಿ ತನ್ನ ವಿಭಿನ್ನ ಶೈಲಿಯ ಟ್ಯಾಬ್‌ಗಳಿಂದಲೂ ಸಹ ಸೈ ಎನಿಸಿಕೊಂಡಿದೆ. ವಿಶಿಷ್ಟ ಮಾದರಿಯ ಸ್ಮಾರ್ಟ್ ಟ್ಯಾಬ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಾ ಬಂದಿರುವ ಒಪ್ಪೋ ಇದೀಗ ಹೊಸ ಟ್ಯಾಬ್ ಪರಿಚಯಿಸಿದೆ. ಇದನ್ನು ಒಪ್ಪೋ ಪ್ಯಾಡ್ ಏರ್ 2 ಎಂದು ಹೆಸರಿಸಲಾಗಿದ್ದು, ಮೀಡಿಯಾಟೆಕ್ ಹಿಲಿಯೋ G99SoC ಪ್ರೊಸೆಸರ್ ವೇಗವನ್ನು ಹೊಂದಿದೆ.
ಹೌದು, ಒಪ್ಪೋ ಪ್ಯಾಡ್ ಏರ್ 2 ಟ್ಯಾಬ್ ಬಿಡುಗಡೆ ಆಗಿದೆ. ಈ ಸ್ಮಾರ್ಟ್ ಟ್ಯಾಬ್ Dolby Atmos-ಬೆಂಬಲಿತ ಕ್ವಾಡ್ ಸ್ಟಿರಿಯೊ ಸ್ಪೀಕರ್‌ಗಳನ್ನು ಒಳಗೊಂಡಿದೆ. ಜೊತೆಗೆ ಸಿಂಗಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಸಹ ಪಡೆದಿದೆ. ಇದಲ್ಲದೆ ಸ್ಮಾರ್ಟ್ ಟ್ಯಾಬ್ ರಿಯರ್ ಪ್ಯಾನಲ್ ಸ್ಕ್ರೀನ್ ಡ್ಯುಯಲ್-ಟೋನ್ ಫಿನಿಶ್‌ನಲ್ಲಿ ಬರುತ್ತದೆ. ಇನ್ನುಳಿದಂತೆ ಈ ಸ್ಮಾರ್ಟ್‌ಟ್ಯಾಬ್ ಯಾವೆಲ್ಲಾ ಫೀಚರ್ಸ್ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಒಪ್ಪೋ ಪ್ಯಾಡ್ ಏರ್ 2 ಫೀಚರ್ಸ್ ಹೇಗಿದೆ?
ಒಪ್ಪೋ ಪ್ಯಾಡ್ ಏರ್ 2 11.35 ಇಂಚಿನ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 2408 x 1720 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿ ಬರಲಿದೆ. ಜೊತೆಗೆ 260 PPI ರೆಸಲ್ಯೂಶನ್ ಅನ್ನು ಹೊಂದಿದೆ. ಇದರೊಂದಿಗೆ ಈ ಡಿಸ್‌ಪ್ಲೇಯು 90Hz ರಿಫ್ರೆಶ್ ರೇಟ್, 180Hz ಟಚ್ ಸ್ಯಾಪ್ಲಿಂಗ್ ರೇಟ್ ಮತ್ತು 400 ನೀಟ್ಸ್ ಗರಿಷ್ಠ ಬ್ರೈಟ್‌ನೆಸ್ ಲೆವೆಲ್ ಅನ್ನು ನೀಡಲಿದೆ.
ಒಪ್ಪೋ ಪ್ಯಾಡ್ ಏರ್ 2 ಮೀಡಿಯಾಟೆಕ್ ಹಿಲಿಯೋ G99SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಆಂಡ್ರಾಯ್ಡ್ 13 ಆಧಾರಿತ ColorOS 13.2 ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 6GB + 128GB, 8GB + 128GB ಹಾಗೂ 8GB + 256GB ಇಂಟರ್ ಸ್ಟೋರೇಜ್ ವೇರಿಯೆಂಟ್ ಆಯ್ಕೆಯಲ್ಲಿ ಬರಲಿದೆ. ಇದು ಯಾವುದೇ ರೀತಿಯ ಮೆಮೊರಿ ಕಾರ್ಡ್ ಬೆಂಬಲವನ್ನು ಹೊಂದಿದೆ.

ಒಪ್ಪೋ ಪ್ಯಾಡ್ ಏರ್ 2 ಹಿಂಬದಿಯಲ್ಲಿ 8 ಮೆಗಾಪಿಕ್ಸೆಲ್ ಸೆನ್ಸಾರ್ ಕ್ಯಾಮೆರಾವನ್ನು ಹೊಂದಿದೆ. ಹಾಗೆಯೇ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ. ಜೊತೆಗೆ 8,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು 33W SuperVOOC ಚಾರ್ಜಿಂಗ್ ಸ್ಟ್ಯಾಂಡರ್ಡ್‌ಗೆ ಬೆಂಬಲವನ್ನು ಹೊಂದಿದೆ. ಇದಲ್ಲದೆ Dolby Atmos-ಬೆಂಬಲಿತ ಕ್ವಾಡ್ ಸ್ಟಿರಿಯೊ ಸ್ಪೀಕರ್‌ಗಳನ್ನು ಒದಗಿಸುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್-ಬ್ಯಾಂಡ್ ವೈಫೈ, ಬ್ಲೂಟೂತ್ 5.2, ಮತ್ತು ಯುಎಸ್‌ಬಿ ಟೈಪ್-ಸಿ ಸೇರಿದೆ.
ಒಪ್ಪೋ ಪ್ಯಾಡ್ ಏರ್ 2 ಬೆಲೆ ಮತ್ತು ಲಭ್ಯತೆ
ಒಪ್ಪೋ ಪ್ಯಾಡ್ ಏರ್ 2 ಪ್ರಸ್ತುತ ಚೀನಾದಲ್ಲಿ ಮಾತ್ರವೇ ಬಿಡುಗಡೆ ಆಗಿದೆ. ಆದರಿಂದ ಇದರ ಬೆಲೆ ಚೀನಾದಲ್ಲಿ 6GB + 128GB ಆಯ್ಕೆಗೆ ¥1,299 (ಅಂದಾಜು 15,263ರೂ)ಆಗಿದೆ.
ಇದರ 8GB + 128GB ಆಯ್ಕೆಗೆ ¥1,499 (ಅಂದಾಜು 17,613ರೂ) ಜೊತೆಗೆ 8GB + 256GB ಆಯ್ಕೆಗೆ ¥1,699 (ಅಂದಾಜು 19,963ರೂ)ಬೆಲೆಯಲ್ಲಿ ಬರಲಿದೆ. ಇನ್ನು ಈ ಟ್ಯಾಬ್ಲೆಟ್ ಸ್ಪೇಸ್ ಗ್ರೇ ಮತ್ತು ಸ್ಟ್ರೀಮರ್ ಸಿಲ್ವರ್ ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ.

ಇದಲ್ಲದೆ ಒಪ್ಪೋ ಕಂಪೆನಿ ಒಪ್ಪೋ ಫೈಂಡ್ X7 ಪ್ರೊ ಸ್ಮಾರ್ಟ್‌ಫೋನ್ ಅನ್ನು ಮುಂದಿನ ವರ್ಷದ ಆರಂಭದಲ್ಲಿ ಪರಿಚಯಿಸಲು ತಯಾರಿ ನಡೆಸಿದೆ. ಈ ಫೋನ್ ವಿಶ್ವದ ಮೊದಲ ಡ್ಯುಯಲ್ ಪೆರಿಸ್ಕೋಪಿಕ್ ಲೆನ್ಸ್ ಆಯ್ಕೆ ಪಡೆಯಬಹುದು ಎಂದು ಹೇಳಲಾಗುತ್ತಿದೆ. ಜೊತೆಗೆ ಇದು ಹ್ಯಾಸೆಲ್‌ಬ್ಲಾಡ್‌ನೊಂದಿಗೆ ತನ್ನ ಕ್ಯಾಮರಾ ನಿರ್ಮಾಣ ಮಾಡುವ ಕಾರ್ಯವನ್ನೂ ಸಹ ಮುಂದುವರಿಸುತ್ತದೆ ಎಂದು ತಿಳಿಸಲಾಗಿದೆ.


Click it and Unblock the Notifications








