ಒಪ್ಪೋ ಪ್ಯಾಡ್‌ ಏರ್ ಟ್ಯಾಬ್ಲೆಟ್ ಬಿಡುಗಡೆ; 7100mAh ಬ್ಯಾಟರಿ!

|

ಪ್ರಮುಖ ಮೊಬೈಲ್‌ ಬ್ರ್ಯಾಂಡ್‌ಗಳಲ್ಲಿ ಒಂದಾದ ಒಪ್ಪೋ ಸಂಸ್ಥೆಯು ನೂತನವಾಗಿ ಒಪ್ಪೋ ರೆನೋ 8 ಫೋನ್ ಸರಣಿಯನ್ನು ಬಿಡುಗಡೆ ಮಾಡಿದೆ. ಈ ಸರಣಿಯೊಂದಿಗೆ ಸಂಸ್ಥೆಯು ಒಪ್ಪೋ ಪ್ಯಾಡ್‌ ಏರ್‌ ಟ್ಯಾಬ್ಲೆಟ್ ಡಿವೈಸ್‌ ಅನ್ನು ಲಾಂಚ್ ಮಾಡಿದೆ. ಒಪ್ಪೋ ಪ್ಯಾಡ್‌ ಏರ್‌ ಡಿವೈಸ್‌ ಇದು ಕಂಪನಿಯ ಎರಡನೇ ಟ್ಯಾಬ್ಲೆಟ್ ಮಾದರಿಯಾಗಿದ್ದು, ಈ ಸಾಧನವು ಕೆಲವು ಆಕರ್ಷಕ ಫೀಚರ್ಸ್‌ಗಳಿಂದ ಗ್ರಾಹಕರ ಗಮನ ಸೆಳೆದಿದೆ.

ಒಪ್ಪೋ ಪ್ಯಾಡ್‌ ಏರ್ ಟ್ಯಾಬ್ಲೆಟ್ ಬಿಡುಗಡೆ; 7100mAh ಬ್ಯಾಟರಿ!

ಒಪ್ಪೋ ಪ್ಯಾಡ್‌ ಏರ್ (Oppo Pad Air) ಸಾಧನವು ಕ್ವಾಲ್ಕಮ್‌ ನ ಸ್ನ್ಯಾಪ್‌ಡ್ರಾಗನ್‌ 6 ಸರಣಿಯ ಪ್ರೊಸೆಸರ್‌ನಲ್ಲಿ ಕಾರ್ಯ ನಿರ್ವಹಿಸುತ್ತದೆ. ಈ ಡಿವೈಸ್‌ 2K ಡಿಸ್‌ಪ್ಲೇಯೊಂದಿಗೆ ಬರುತ್ತದೆ. ಈ ಡಿವೈಸ್‌ ಹೆಚ್ಚಿನ ರಿಫ್ರೆಶ್ ದರದ ಸ್ಕ್ರೀನ್‌ ಪಡೆದಿದೆ. ಆದಾಗ್ಯೂ, ಇದು ತೆಳುವಾದ ಮತ್ತು ಹಗುರವಾದ ರಚನೆ ಹೊಂದಿರುವ ಟ್ಯಾಬ್ಲೆಟ್ ಆಗಿದೆ. ಇನ್ನುಳಿದಂತೆ ಒಪ್ಪೋ ಪ್ಯಾಡ್‌ ಏರ್ ಟ್ಯಾಬ್ಲೆಟ್‌ ಸಾಧನದ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಒಪ್ಪೋ ಪ್ಯಾಡ್‌ ಏರ್ ಡಿವೈಸ್‌ 2000 × 1200 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ 10.36 ಇಂಚಿನ 2K ಡಿಸ್‌ಪ್ಲೇಯನ್ನು ಹೊಂದಿದೆ. ಇದು 60Hz ನ ಸ್ಕ್ರೀನ್ ರಿಫ್ರೆಶ್ ದರ, 83.5% ಸ್ಕ್ರೀನ್-ಟು-ಬಾಡಿ ಅನುಪಾತ, 71% NTSC ಬಣ್ಣದ ಹರವು, 360nits ಬ್ರೈಟ್ನೆಸ್‌ ಜೊತೆಗೆ 225 ppi ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿದೆ. ಹಾಗೆಯೇ ಈ ಟ್ಯಾಬ್ಲೆಟ್ 2.4GHz ನಲ್ಲಿ ಸ್ನಾಪ್‌ಡ್ರಾಗನ್ 680 SoC ನಿಂದ ಶಕ್ತಿಯನ್ನು ಒಳಗೊಂಡಿದ್ದು, ಅಡ್ರಿನೊ 610 GPU ಸಪೋರ್ಟ್‌ ಸಹ ಸೇರಿಕೊಂಡಿದೆ. ಇನ್ನು ಈ ಟ್ಯಾಬ್ 6GB RAM ಮತ್ತು 128GB UFS2.2 ಆಂತರಿಕ ಸಂಗ್ರಹಣೆಯನ್ನು ಹೊಂದಿದೆ.

ಒಪ್ಪೋ ಪ್ಯಾಡ್‌ ಏರ್ ಸಾಧನವು 7100mAh ಬ್ಯಾಟರಿ ಯೂನಿಟ್ ಅನ್ನು ರನ್ ಮಾಡುತ್ತದೆ. ಇದಕ್ಕೆ ಪೂರಕವಾಗಿ 18W ವೇಗದ ಚಾರ್ಜಿಂಗ್ ಮತ್ತು PD ಪ್ರೋಟೋಕಾಲ್‌ಗೆ ಬೆಂಬಲವನ್ನು ಬೆಂಬಲಿಸುತ್ತದೆ. ಕ್ಯಾಮೆರಾ ವಿಭಾಗದಲ್ಲಿ, 8 ಮೆಗಾ ಪಿಕ್ಸಲ್‌ ಹಿಂಬದಿಯ ಕ್ಯಾಮೆರಾ ಮತ್ತು 5 ಮೆಗಾ ಪಿಕ್ಸಲ್‌ ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದಿದೆ. ಇದು ಸೈಡ್ ಬೆಜೆಲ್‌ನಲ್ಲಿದೆ. ಯಾವುದೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಇಲ್ಲ, ಆದರೆ ಇದು ಫೇಸ್ ಅನ್‌ಲಾಕ್ ಬೆಂಬಲದೊಂದಿಗೆ ಬರುತ್ತದೆ.

ಒಪ್ಪೋ ಪ್ಯಾಡ್‌ ಏರ್ ಟ್ಯಾಬ್ಲೆಟ್ ಬಿಡುಗಡೆ; 7100mAh ಬ್ಯಾಟರಿ!

ಇನ್ನು ಈ ಒಪ್ಪೋ ಪ್ಯಾಡ್‌ ಏರ್ ಸಾಧನದ ರಚನೆಯ ಬಗ್ಗೆ ನೋಡುವುದಾದರೇ, ಇದು ಲೋಹದ ದೇಹದೊಂದಿಗೆ ಹಿಂಭಾಗದಲ್ಲಿ ರಚನೆಯ ಮಾದರಿಯೊಂದಿಗೆ ಬರುತ್ತದೆ. ಈ ಸಾಧನವು 440 ಗ್ರಾಂ ತೂಕ ಹೊಂದಿದ್ದು, ಕೇವಲ 6.94 ಮಿಮೀ ದಪ್ಪವಾಗಿದೆ. ಇನ್ನು ಈ ಡಿವೈಸ್‌ ವೈ-ಫೈ 5, ಬ್ಲೂಟೂತ್ ವಿ 5.1, ಟೈಪ್-ಸಿ ಪೋರ್ಟ್ ಆಯ್ಕೆಗಳನ್ನು ಪಡೆದಿದೆ. ಹಾಗೆಯೇ ಆಂಡ್ರಾಯ್ಡ್ 12 ಓಎಸ್ ಆಧಾರಿತ ಕಲರ್ ಓಎಸ್ ಮತ್ತು ಡಾಲ್ಬಿ ಅಟ್ಮಾಸ್‌ನೊಂದಿಗೆ ಕ್ವಾಡ್ ಸ್ಪೀಕರ್ ಸೆಟಪ್ ಸೇರಿವೆ.

ಬೆಲೆ ಮತ್ತು ಲಭ್ಯತೆ?
ಒಪ್ಪೋ ಪ್ಯಾಡ್‌ ಏರ್ ಸಾಧನವು 4GB + 64GB ವೇರಿಯಂಟ್‌ ಮಾದರಿಗೆ CNY 1299 (ಭಾರತದಲ್ಲಿ ಅಂದಾಜು 15,100ರೂ) ಮತ್ತು 6GB + 128 GB ರೂಪಾಂತರಕ್ಕಾಗಿ CNY 1699 (ಭಾರತದಲ್ಲಿ ಅಂದಾಜು 19,800ರೂ) ಆಗಿದೆ. ಇನ್ನು ಈ ಟ್ಯಾಬ್ಲೆಟ್ ಸಿಲ್ವರ್ ಮತ್ತು ಗ್ರೇ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ. ಈ ಡಿವೈಸ್‌ನ ಪೂರ್ವ-ಬುಕಿಂಗ್ ಅನ್ನು ಈಗ ಚೀನಾದಲ್ಲಿ ಪ್ರಾರಂಭಿಸಲಾಗಿದೆ. ಭಾರತಕ್ಕೆ ಯಾವಾಗ ಲಾಂಚ್ ಎನ್ನುವ ಬಗ್ಗೆ ಮಾಹಿತಿ ಬಹಿರಂಗಪಡಿಸಿಲ್ಲ.

Best Mobiles in India

English summary
Oppo Pad Air with 7,100mAh Battery Launched: Price, Specifications.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X