40 ದಿನಗಳಲ್ಲಿ ಮಾರಾಟವಾದ ಒಪ್ಪೊ 'ರಿಯಲ್ ಮಿ1' ಸ್ಮಾರ್ಟ್‌ಫೋನ್‌ಗಳೆಷ್ಟು ಗೊತ್ತಾ?

|

ಯುವ ಸಮುಹವನ್ನು ಗುರಿಯಾಗಿಟ್ಟುಕೊಂಡು ಬಿಡುಗಡೆಯಾಗಿದ್ದ ಒಪ್ಪೊವಿನ 'ರಿಯಲ್ ಮಿ'1 ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಧೂಳೆಬ್ಬಿಸುತ್ತಿದೆ. ಕಳೆದ ಎರಡು ತಿಂಗಳಿನಲ್ಲಿ ಅಮೆಜಾನ್ ಬೆಸ್ಟ್ ಸೆಲ್ಲರ್ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿರುವ 'ಒಪ್ಪೊ ರಿಯಲ್ ಮಿ1' ಫೋನ್ ಬಿಡುಗಡೆಯಾದ ಕೇವಲ 40 ದಿವಸಗಳಲ್ಲಿಯೇ ಲಕ್ಷಾಂತರ ಪೋನ್‌ಗಳು ಮಾರಾಟಕಂಡಿವೆ.!

ಹೌದು, 'ಒಪ್ಪೊ ರಿಯಲ್ ಮಿ1' ಬಿಡುಗಡೆಯಾದ ಕೇವಲ 40 ದಿವಸಗಳಲ್ಲಿ 4,00,000 ಲಕ್ಷದಷ್ಟು ಪೋನ್‌ಗಳನ್ನು ಮರಾಟ ಮಾಡಿರುವುದಾಗಿ ಒಪ್ಪೊ ಕಂಪೆನಿ ಮಾಹಿತಿ ನೀಡಿದೆ. ಅಮೆಜಾನ್ ಇಂಡಿಯಾದಲ್ಲಿ 4.4 ರೇಟಿಂಗ್‌ನೊಂದಿಗೆ "ಅತ್ಯಧಿಕ ರೇಟಿಂಗ್ ಫೋನ್" ಆಗಿ ಕಾಣಿಸಿಕೊಂಡು ಆಶ್ಚರ್ಯ ಮೂಡಿಸಿದ್ದ 'ರಿಯಲ್ ಮಿ1' ಈಗ ಮೊಬೈಲ್ ಮಾರಾಟದಲ್ಲಿಯೂ ದಾಖಲೆ ಸೃಷ್ಟಿಸಿದೆ.

40 ದಿನಗಳಲ್ಲಿ ಮಾರಾಟವಾದ ಒಪ್ಪೊ 'ರಿಯಲ್ ಮಿ1' ಸ್ಮಾರ್ಟ್‌ಫೋನ್‌ಗಳೆಷ್ಟು ಗೊತ್ತಾ?

ಈಗಾಗಲೇ ಶಿಯೋಮಿಗೆ ನಡುಕ ಹುಟ್ಟಿಸಿರುವ ಒಪ್ಪೊ ರಿಯಲ್ ಮಿ1' ಸ್ಮಾರ್ಟ್‌ಪೋನ್ ತನ್ನ ವಿನ್ಯಾಸ ಮತ್ತು ಫೀಚರ್ಸ್‌ಗಳಿಂದಲೇ ಮೊಬೈಲ್ ಪ್ರಿಯರನ್ನು ಸೆಳೆಯುತ್ತಿದ್ದು, ಹಾಗಾಗಿ, ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಈಗ ಹೆಚ್ಚು ಸದ್ದು ಮಾಡುತ್ತಿರುವ ರಿಯಲ್ ಮಿ 1 ಸ್ಮಾರ್ಟ್‌ಫೋನ್ ಕುರಿತ ಸಂಪೂರ್ಣ ಮಾಹಿತಿಯನ್ನು ಮುಂದಿನ ಸ್ಲೈಡರ್‌ಗಳಲ್ಲಿ ನೀಡಿದ್ದೇವೆ.

ಡಿಸ್‌ಪ್ಲೇ ಮತ್ತು ವಿನ್ಯಾಸ?

ಡಿಸ್‌ಪ್ಲೇ ಮತ್ತು ವಿನ್ಯಾಸ?

ರಿಯಲ್ ಮಿ 1 ಸ್ಮಾರ್ಟ್‌ಫೋನಿನಲ್ಲಿ ಫುಲ್‌ಸ್ಕ್ರೀನ್ 18:9 ಅನುಪಾತದ 6 ಇಂಚಿನ (2160×1080) ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಇದು FHD+ ಗುಣಮಟ್ಟದ ಡಿಸ್‌ಪ್ಲೇಯಾಗಿದ್ದು, ಪೂರ್ಣ ಪ್ರಮಾಣದ ಗುಣಮಟ್ಟದ ಡಿಸ್‌ಪ್ಲೇಯಾಗಿದೆ. ಹೆಚ್ಚು ಪಿಕ್ಸೆಲ್ ಸಾಮರ್ಥ್ಯದ ಈ ಡಿಸ್‌ಪ್ಲೇಯಲ್ಲಿ ವಿಡಿಯೋ ಮತ್ತು ಗೇಮ್ ಆಡುವ ಅನುಭವ ಅದ್ಬುತವಾಗಿದೆ.

ಪ್ರೋಸೆಸರ್ ಮತ್ತು ಒಎಸ್

ಪ್ರೋಸೆಸರ್ ಮತ್ತು ಒಎಸ್

ಆಂಡ್ರಾಯ್ಡ್ ಓರಿಯೋ ಮೂಲಕ ಕಾರ್ಯನಿರ್ವಹಣೆ ನೀಡುವ ರಿಯಲ್ ಮಿ 1 ಸ್ಮಾರ್ಟ್‌ಫೋನಿನಲ್ಲಿ ಮಿಡಿಯಾ ಟೆಕ್ ಹೆಲಿಯೋ P60 ಪ್ರೋಸೆಸರ್ ಅನ್ನು ನೀಡಲಾಗಿದೆ, 2GHz ವೇಗದಲ್ಲಿ ಕಾರ್ಯನಿರ್ವಹಿಸಲರುವ ಈ ಕೃತಕ ಬುದ್ದಿಮತ್ತೆಯ ಚಿಪ್ ಆಗಿದೆ. ಜೊತೆಗೆ ಮಾಲಿ G72MP3 ಜಿಪಿಯುವನ್ನು ನೀಡಲಾಗಿದೆ.

ಕ್ಯಾಮೆರಾ ಹೇಗಿದೆ?

ಕ್ಯಾಮೆರಾ ಹೇಗಿದೆ?

ರಿಯಲ್ ಮಿ 1 ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ 13MP ಕ್ಯಾಮೆರಾವ LED ಫ್ಲಾಷ್ ಲೈಟ್ ಅನ್ನು ಅಳವಡಿಸಲಾಗಿದೆ. ಮುಂಭಾಗದಲ್ಲಿ 8MP ಕ್ಯಾಮೆರಾವನ್ನು ನೀಡಲಾಗಿದೆಲಾಗಿದೆ. ಅಲ್ಲದೇ, ಬ್ಯೂಟಿ 2.0 ತಂತ್ರಜ್ಞಾನವನ್ನು ಈ ಸ್ಮಾರ್ಟ್‌ಫೋನ್ ಹೊಂದಿದ್ದು ಉತ್ತಮ ಸೆಲ್ಫಿ ಚಿತ್ರಗಳನ್ನು ಸೆರೆಹಿಡಿಯಲಿದೆ.

AI ಸ್ಟಿಕರ್ ಮತ್ತು ಫೇಸ್‌ಲಾಕ್

AI ಸ್ಟಿಕರ್ ಮತ್ತು ಫೇಸ್‌ಲಾಕ್

ರಿಯಲ್ ಮಿ 1 ಸ್ಮಾರ್ಟ್‌ಫೋನಿನಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ನೀಡಲಾಗಿಲ್ಲ, ಇದರ ಬದಲಾಗಿ ಫೇಸ್ ರೆಕಗ್ನೇಷನ್ ಆಯ್ಕೆಯನ್ನು ನೀಡಲಾಗಿದೆ. ಅಲ್ಲದೇ AI ಸ್ಟಿಕರ್ ಗಳನ್ನು ಕ್ರಿಯೇಟ್ ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ. ಜೊತೆಗೆ 3410mAh ಬ್ಯಾಟರಿಯನ್ನು ಫೋನಿನಲ್ಲಿ ನೀಡಲಾಗಿದೆ.

ಮೂರು ಮಾದರಿಯಲ್ಲಿ ಸ್ಟೋರೆಜ್

ಮೂರು ಮಾದರಿಯಲ್ಲಿ ಸ್ಟೋರೆಜ್

ರಿಯಲ್ ಮಿ 1 ಸ್ಮಾರ್ಟ್‌ಫೋನ್ ಮೂರು ಆವೃತ್ತಿಯಲ್ಲಿ ದೊರೆಯಲಿದ್ದು, 3GB RAM ಮತ್ತು 32GB ಇಂಟರ್ನಲ್ ಮೆಮೊರಿಯೊಂದಿಗೆ, 4GB RAM ಮತ್ತು 63GB ಇಂಟರ್ನಲ್ ಮೆಮೊರಿ ಜೊತೆಗೆ ಹಾಗೂ 6GB RAM ಮತ್ತು 128GB ಇಂಟರ್ನಲ್ ಮೆಮೊರಿಯೊಂದಿಗೆ ಮಾರುಕಟ್ಟೆಗೆ ಕಾಲಿಟ್ಟಿವೆ.

ರಿಯಲ್ ಮಿ 1 ಫೋನ್ ಬೆಲೆಗಳು

ರಿಯಲ್ ಮಿ 1 ಫೋನ್ ಬೆಲೆಗಳು

3GB RAM ಮತ್ತು 32GB ಆಂತರಿಕ ಮೆಮೊರಿ ಹೊಂದಿರುವ ಆವೃತ್ತಿ ಪೋನ್ ಬೆಲೆ 8990 ರೂ., 4GB RAM ಮತ್ತು 64GB ಇಂಟರ್ನಲ್ ಮೆಮೊರಿ ಆವೃತ್ತಿಯೂ ರೂ.10,990 ಮತ್ತು 6GB RAM ಮತ್ತು 128GB ಇಂಟರ್ನಲ್ ಮೆಮೊರಿಯ ಆವೃತ್ತಿಯ ಬೆಲೆ 13,990 ರೂಪಾಯಿಗಳಾಗಿವೆ.

Best Mobiles in India

English summary
Oppo Realme 1 has sold 400,000 units in 40 days in India, will get Android P update. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X