ಒಪ್ಪೋ ರೆನೋ 10 5G ಸರಣಿ ಗ್ರ್ಯಾಂಡ್ ಎಂಟ್ರಿಗೆ ಡೇಟ್ ಫಿಕ್ಸ್! ಕ್ಯಾಮೆರಾ ಫೀಚರ್ಸ್ ಚಿಂದಿ
ಒಪ್ಪೋ ಕಂಪೆನಿ ತನ್ನ ಬಹು ನಿರೀಕ್ಷಿತ ಒಪ್ಪೋ ರೆನೋ 10 5G ಸರಣಿ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿದೆ. ಈ ಸ್ಮಾರ್ಟ್‌ಫೋನ್ ಸರಣಿ ಇದೇ ಜುಲೈ 10ರಂದು ಭಾರತದಲ್ಲಿ ಬಿಡುಗಡೆ ಆಗಲಿದೆ ಎಂದು ಪ್ರಕಟಿಸಿದೆ. ಇನ್ನು ಈ ಸರಣಿಯಲ್ಲಿ ಒಪ್ಪೋ ರೆನೋ 10 5G, ಒಪ್ಪೋ ರೆನೋ 10 5G ಪ್ರೊ ಮತ್ತು ಒಪ್ಪೊ ರೆನೋ 10 5G ಪ್ರೊ ಪ್ಲಸ್ ಸ್ಮಾರ್ಟ್‌ಫೋನ್‌ಗಳು ಬರಲಿವೆ.
ಹೌದು, ಒಪ್ಪೋ ರೆನೋ 10 5G ಸರಣಿಯ ಬಿಡುಗಡೆ ದಿನಾಂಕ ಇದೀಗ ಬಹಿರಂಗವಾಗಿದೆ. ಈ ಮೂಲಕ ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಟಿಯಾಗಿದೆ. ಜೊತೆಗೆ ಒಪ್ಪೋ ರೆನೋ 10 5G ಸರಣಿ ಕ್ಯಾಮೆರಾ ಫೀಚರ್ಸ್‌ಗಳ ಬಗ್ಗೆ ಸಾಕಷ್ಟು ಕುತೂಹಲ ಕೆರಳುವಂತೆ ಮಾಡಿದೆ. ಹಾಗಾದ್ರೆ ಒಪ್ಪೋ ರೆನೋ 10 5G ಸರಣಿಯ ವಿಶೇಷತೆ ಏನಿರಬಹುದು? ಯಾವೆಲ್ಲಾ ಫೀಚರ್ಸ್ ನಿರೀಕ್ಷಿಸಬಹುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಒಪ್ಪೋ ರೆನೋ 10 5G ಸರಣಿ ಫೀಚರ್ಸ್ ನಿರೀಕ್ಷೆ?
ಒಪ್ಪೋ ರೆನೋ 10 5G ಸ್ಮಾರ್ಟ್‌ಫೋನ್ 6.74 ಇಂಚಿನ OLED ಡಿಸ್‌ಪ್ಲೆಯನ್ನು ಹೊಂದಿರಲಿದೆ. ಈ ಡಿಸ್‌ಪ್ಲೇ 1080 x 2412 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡದಿರಲಿದೆ. ಜೊತೆಗೆ 120Hz ರಿಫ್ರೆಶ್ ರೇಟ್ ಬೆಂಬಲಿಸಲಿದ್ದು, 950 ನೀಟ್ಸ್ ಬ್ರೈಟ್‌ನೆಸ್‌ನೊಂದಿಗೆ ಬರಲಿದೆ ಎಂದು ಅಂದಾಜಿಸಲಾಗಿದೆ.
ಒಪ್ಪೋ ರೆನೋ 10 5G ಪ್ರೊಸೆಸರ್ ಸಾಮರ್ಥ್ಯ ನಿರೀಕ್ಷೆ?
ಒಪ್ಪೋ ರೆನೋ 10 5G ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7050 SoC ಪ್ರೊಸೆಸರ್ ವೇಗವನ್ನು ಹೊಂದಿರಲಿದೆ. ಇದು ಆಂಡ್ರಾಯ್ಡ್ 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 8GB + 256GB ಸ್ಟೋರೇಜ್ ಕಾನ್ಫಿಗರೇಶನ್ ಆಯ್ಕೆಯಲ್ಲಿ ಬರಲಿದೆ.
ಒಪ್ಪೋ ರೆನೋ 10 5G ಕ್ಯಾಮೆರಾ ಸೆಟ್‌ಅಪ್ ಯಾವುದು?
ಒಪ್ಪೋ ರೆನೋ 10 5G ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿರಲಿದೆ ಎನ್ನಲಾಗಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64MP ಓಮ್ನಿವಿಷನ್ OV64B ಸೆನ್ಸಾರ್, ಎರಡನೇ ಕ್ಯಾಮೆರಾ 32MP ಟೆಲಿಫೋಟೋ ಸೆನ್ಸಾರ್ ಮತ್ತು ಮೂರನೇ ಕ್ಯಾಮೆರಾ 8MP ಅಲ್ಟ್ರಾ-ವೈಡ್ ಲೆನ್ಸ್ ಸೆನ್ಸಾರ್ ಅನ್ನು ಒಳಗೊಂಡಿರಲಿದೆ ಎಂದು ಅಂದಾಜಿಸಲಾಗಿದೆ. ಇದಲ್ಲದೆ 32MP ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿರಲಿದೆ.
ಒಪ್ಪೋ ರೆನೋ 10 5G ಬ್ಯಾಟರಿ ಮತ್ತು ಇತರೆ ಸೌಲಭ್ಯಗಳ ನಿರೀಕ್ಷೆ?
ಒಪ್ಪೋ ರೆನೋ 10 5G ಸ್ಮಾರ್ಟ್‌ಫೋನ್ 4600mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ. ಇದು 100W SuperVOOC ಫ್ಲ್ಯಾಶ್ ಚಾರ್ಜ್ ಬೆಂಬಲದೊಂದಿಗೆ ಬರಲಿದೆ ಎಂದು ಹೇಳಲಾಗಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi, ಬ್ಲೂಟೂತ್, GPS, ಮತ್ತು USB ಟೈಪ್-C ಪೋರ್ಟ್ ಚಾರ್ಜಿಂಗ್ ಬೆಂಬಲಿಸಲಿದೆ. ಇದರೊಂದಿಗೆ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಅನ್ನು ಹೊಂದಿರಲಿದೆ.
ಒಪ್ಪೋ ರೆನೋ 10 5G ಬೆಲೆ ಮತ್ತು ಲಭ್ಯತೆ
ಒಪ್ಪೋ ರೆನೋ 10 5G ಸ್ಮಾರ್ಟ್‌ಫೋನ್ ಸರಣಿಯ ಮೂರು ಸ್ಮಾರ್ಟ್‌ಫೋನ್‌ಗಳ ಬೆಲೆ ವಿವರಗಳು ಸೋರಿಕೆಯಾಗಿವೆ. ಅದರಂತೆ ಭಾರತದಲ್ಲಿ ಒಪ್ಪೋ ರೆನೋ 10 ಸ್ಮಾರ್ಟ್‌ಫೋನ್ 30,000ರೂ. ಇರಲಿದೆ ಎನ್ನಲಾಗಿದೆ. ಇನ್ನು ಒಪ್ಪೋ ರೆನೋ 10 ಪ್ರೊ 40,000ರೂ.ಬೆಲೆ ಹೊಂದಿರಲಿದೆ. ಇನ್ನು ಒಪ್ಪೋ 10 ಪ್ರೊ ಪ್ಲಸ್ ಸ್ಮಾರ್ಟ್‌ಫೋನ್ 50,000ರೂ.ಬೆಲೆಯಲ್ಲಿ ಬರಲಿದೆ ಎಂದು ಅಂದಾಜಿಸಲಾಗಿದೆ. ಈ ಸ್ಮಾರ್ಟ್‌ಫೋನ್‌ಗಳು ಐಸ್‌ಬ್ಲೂ ಮತ್ತು ಸಿಲ್ವರ್ ಗ್ರೇ ಬಣ್ಣದ ಆಯ್ಕೆಗಳಲ್ಲಿ ಬರಲಿದೆ ಎಂದು ಹೇಳಲಾಗಿದೆ.


Click it and Unblock the Notifications








