ಜುಲೈ 12ರಂದು OPPO Reno 12 ಸರಣಿಯ ಸ್ಮಾರ್ಟ್‌ಫೋನ್ ಲಾಂಚ್; ಫೀಚರ್ಸ್ ತಿಳಿಯಿರಿ
ಒಪ್ಪೋ ಸಂಸ್ಥೆ ಅಗ್ಗದ ದರದಲ್ಲಿ ಉತ್ತಮ ಫೀಚರ್ಸ್ ಇರುವ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಒಪ್ಪೋ ಸಂಸ್ಥೆಯ ಸ್ಮಾರ್ಟ್‌ಫೋನ್‌ಗಳಿಗೆ ವಿಶೇಷ ಬೇಡಿಕೆ ಇದೆ. ಈ ಫೋನ್‌ಗಳು ದೊಡ್ಡ ದೊಡ್ಡ ಕಂಪನಿಯ ಫೋನ್‌ಗಳಿಗೆ ತೀವ್ರ ಪೈಪೋಟಿ ನೀಡುವ ಮೂಲಕ ಮೊಬೈಲ್ ಮಾರುಕಟ್ಟೆಯಲ್ಲಿ ತನ್ನದೇ ಹಿಡಿತ ಹೊಂದಿವೆ. ಒಪ್ಪೋ (OPPO) ಸಂಸ್ಥೆ ಇದೀಗ ನೂತನ ಸ್ಮಾರ್ಟ್‌ಫೋನ್ ಒಂದನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಲು ಸಿದ್ಧತೆ ಮಾಡಿಕೊಂಡಿದೆ ಎಂದು ಸಂಸ್ಥೆಯೇ ಸ್ಪಷ್ಟಪಡಿಸಿದೆ.
ಹೌದು, OPPO Reno 12 ಮತ್ತು OPPO Reno 12 Pro ಮುಂದಿನ ವಾರ ಭಾರತದಲ್ಲಿ ಬಿಡುಗಡೆಯಾಗಲಿವೆ. ಫೋನ್‌ಗಳು ಈಗಾಗಲೇ ಚೀನಾ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ಅಧಿಕೃತವಾಗಿ ಬಿಡುಗಡೆಯಾಗಿದ್ದರೂ, ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಈಗ ಮುಂಬರುವ ಸ್ಮಾರ್ಟ್‌ಫೋನ್‌ಗಳ ಭಾರತದಲ್ಲಿನ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಿದೆ.

ಗಮನಾರ್ಹವಾಗಿ, ಇತ್ತೀಚಿನ ವರದಿಯು ಈ ಫೋನ್‌ಗಳ ಬಿಡುಗಡೆಯ ದಿನಾಂಕವನ್ನು ಉಲ್ಲೇಖಿಸಿದೆ ಇದು ಅಧಿಕೃತ ದಿನಾಂಕ ಎಂಬುದನ್ನು ಸ್ಪಷ್ಪಪಡಿಸಿದೆ. OPPO Reno 12 ಸರಣಿಯ ವಿವರಗಳನ್ನು ಈ ಲೇಖನದಲ್ಲಿ ನೋಡೋಣ ಬನ್ನಿ.
OPPO Reno 12 ಸರಣಿಯ ಭಾರತದ ಬಿಡುಗಡೆ ದಿನಾಂಕ:
OPPO Reno 12 ಮತ್ತು OPPO Reno 12 Pro ಜುಲೈ 12 ರಂದು ಭಾರತದ ಗ್ರಾಹಕರಿಗೆ ಬಿಡುಗಡೆ ಮಾಡಲು ಸಿದ್ಧವಾಗಿದೆ ಎಂದು ಕಂಪನಿಯು ಅಧಿಕೃತವಾಗಿ ದೃಢಪಡಿಸಿದೆ. Reno 12 ಮ್ಯಾಟ್ ಬ್ರೌನ್, ಆಸ್ಟ್ರೋ ಸಿಲ್ವರ್ ಮತ್ತು ಸನ್‌ಸೆಟ್ ಪೀಚ್ ಬಣ್ಣಗಳಲ್ಲಿ ಬರಲಿದೆ. ಈ ನಡುವೆ ಅದರ ಪ್ರೊ ರೂಪಾಂತರವು ಸನ್‌ಸೆಟ್ ಗೋಲ್ಡ್ ಮತ್ತು ಸ್ಪೇಸ್ ಬ್ರೌನ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರಲಿದೆ ಎಂದು ಮಾಹಿತಿ ನೀಡಿದೆ.
OPPO Reno 12 ಸರಣಿ ಏನನ್ನು ನಿರೀಕ್ಷಿಸಬಹುದು:
Reno 12 ಮತ್ತು Reno 12 Pro ಈ ಸ್ಮಾರ್ಟ್‌ಫೋನ್‌ಗಳು 6.7 ಇಂಚಿನ ಫುಲ್ HD+ 120Hz ಫ್ಲೆಕ್ಸಿಬಲ್ AMOLED ಡಿಸ್‌ಪ್ಲೇ ಹೊಂದಿರಲಿವೆ. 1200 nits ವರೆಗಿನ ಗರಿಷ್ಠ HDR ಬ್ರೈಟ್‌ನೆಸ್ ಜೊತೆಗೆ ಬರಲಿವೆ ಎಂದು OPPO ದೃಢಪಡಿಸಿದೆ.
ಜಾಗತಿಕ ರೂಪಾಂತರದಂತೆಯೇ ಮುಂಬರುವ OPPO ಫೋನ್‌ಗಳ ಭಾರತೀಯ ರೂಪಾಂತರವು MediaTek ಡೈಮೆನ್ಸಿಟಿ 7300 ಎನರ್ಜಿ ಚಿಪ್‌ಸೆಟ್‌ನೊಂದಿಗೆ ಸಜ್ಜುಗೊಂಡಿವೆ. Reno 12 ಸೋನಿಯ LYT-600 ಸಂವೇದಕದೊಂದಿಗೆ OIS-ಸಕ್ರಿಯಗೊಳಿಸಿದ 50MP ಮುಖ್ಯ ಕ್ಯಾಮರಾ, 2MP OV02B10 ಮ್ಯಾಕ್ರೋ ಕ್ಯಾಮರಾ ಮತ್ತು 8MP ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಅನ್ನು ಹೊಂದಿರಲಿದೆ.
Reno 12 Pro ವೆನಿಲ್ಲಾ ರೂಪಾಂತರಕ್ಕೆ ಇದೇ ರೀತಿಯ ಸೆಟಪ್ ಅನ್ನು ಪ್ಯಾಕ್ ಮಾಡುತ್ತದೆ, ಆದರೆ 2MP OV02B10 ಮ್ಯಾಕ್ರೋ ಕ್ಯಾಮೆರಾದ ಬದಲಿಗೆ ಇದರಲ್ಲಿ Samsung JN5 ಸೆನ್ಸಾರ್ ಜೊತೆಗೆ 50MP ಟೆಲಿಫೋಟೋ ಕ್ಯಾಮೆರಾದೊಂದಿಗೆ ಬರುತ್ತದೆ. ವೆನಿಲ್ಲಾ ರೂಪಾಂತರವು 32MP ಸೆಲ್ಫಿ ಕ್ಯಾಮೆರಾ ನೀಡಿದರೆ, ಕಂಪನಿ ಪ್ರಕಾರ ರೆನೋ 12 ಪ್ರೊ 50MP ಸೆನ್ಸಾರ್ ಜೊತೆಗೆ ಬರಲಿದೆ.
Reno 12 ಸರಣಿಯ ಫೋನ್‌ಗಳು 80W SUPERVOOC ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಹೊಂದಿರುತ್ತದೆ ಎಂದು OPPO ಉಲ್ಲೇಖಿಸಿದೆ. ಎರಡೂ ಫೋನ್‌ಗಳು IP65 ರೇಟಿಂಗ್ ಅನ್ನು ಒಳಗೊಂಡಿವೆ ಮತ್ತು AI ಎರೇಸರ್ 2.0, AI ರೈಟರ್, AI ರೆಕಾರ್ಡಿಂಗ್ ಸಮ್ಮರಿ ಸೇರಿ ಅನೇಕ ಬಳಕೆದಾರರ ಸ್ನೇಹಿ ಅನುಭವವನ್ನು ಹೆಚ್ಚಿಸಲು ಹಲವಾರು AI ಆಧಾರಿತ ವೈಶಿಷ್ಟ್ಯಗಳನ್ನು ಹೊಂದಿರುತ್ತವೆ.


Click it and Unblock the Notifications








