Home
ಸುದ್ದಿಜಾಲ

OPPO: ಜುಲೈ 12ರಂದು ಭಾರತದಲ್ಲಿ OPPO Reno 12 ಸರಣಿ ಸ್ಮಾರ್ಟ್‌ಫೋನ್ ಲಾಂಚ್! ಸ್ಟೋರೇಜ್ ತಿಳಿಯಿರಿ

ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಒಪ್ಪೋ (OPPO) ಸಂಸ್ಥೆಯ ಮೊಬೈಲ್‌ಗಳು ತನ್ನದೇ ಆದ ಹಿಡಿತ ಸಾಧಿಸಿವೆ. ಈ ಸಂಸ್ಥೆ ಇದೀಗ ಮುಂಬರುವ ದಿನಗಳಲ್ಲಿ ತನ್ನ ಬಹು ನಿರೀಕ್ಷಿತ ಒಪ್ಪೋ ರೆನೋ 12 ಸರಣಿಯ (OPPO Reno 12 series) ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡುವ ಕುರಿತು ಮಾಹಿತಿ ನೀಡಿದೆ. ಈ ಕುರಿತು OPPO Reno 12 5G ಸ್ಮಾರ್ಟ್‌ಫೋನ್‌ ಫ್ಲಿಪ್‌ಕಾರ್ಟ್‌ನ ಅಧಿಕೃತ ವೆಬ್‌ಸೈಟ್ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಲಾಂಚ್ ಆಗಲಿದೆ ಎಂದು ಒಪ್ಪೋ ಸಂಸ್ಥೆ ಅಧಿಕೃತವಾಗಿ ದೃಢಪಡಿಸಿದೆ. ಆದರೆ ಮುಂಬರುವ ಈ ಸ್ಮಾರ್ಟ್‌ಫೋನ್‌ ನಿಖರವಾಗಿ ಯಾವಾಗ ಬಿಡುಗಡೆಯಾಗಲಿದೆ ಎಂಬ ಅಂಶವನ್ನು ಇನ್ನೂ ಸಂಸ್ಥೆ ಬಹಿರಂಗಪಡಿಸಿಲ್ಲ.

ಭಾರತದಲ್ಲಿ OPPO Reno 12 ಸರಣಿಯ ಬಿಡುಗಡೆ ದಿನಾಂಕ ಮತ್ತು ಸ್ಟೋರೆಜ್:
ಮೂಲಗಳ ಪ್ರಕಾರ ಭಾರತದಲ್ಲಿ OPPO Reno 12 ಸರಣಿಯು ಜುಲೈ 12ರಂದು ಬಿಡುಗಡೆಯಾಗಲಿದೆ. ಇದರ ಹೊರತಾಗಿ OPPO Reno 12 ಇದು 8GB ಹಾಗೂ 256GB ಸ್ಟೋರೇಜ್ ಆಯ್ಕೆಯಲ್ಲಿ ಬರಲಿದೆ ಮತ್ತು Oppo Reno 12 Pro ಇದು 12GB ಹಾಗೂ 256GB ಮತ್ತು 12GB ಹಾಗೂ 512GB ಸ್ಟೋರೇಜ್ ಆಯ್ಕೆಗಳಲ್ಲಿ ಆಗಮಿಸಲಿದೆ ಎಂದು ಹೇಳಲಾಗುತ್ತಿದೆ.

ಜುಲೈ 12ರಂದು ಭಾರತದಲ್ಲಿ OPPO Reno 12 ಸರಣಿ ಸ್ಮಾರ್ಟ್‌ಫೋನ್ ಲಾಂಚ್!

ಜಾಗತಿಕ ಮಾರುಕಟ್ಟೆಯಲ್ಲಿ OPPO Reno 12 ಸರಣಿಯ ಫೀಚರ್ಸ್:
ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 8250 (ಸ್ಟಾರ್ ಎಡಿಷನ್) ಚಿಪ್‌ಸೆಟ್‌ನಿಂದ 16GB ವರೆಗೆ LPDDR5X RAM ಮತ್ತು 512GB ವರೆಗಿನ UFS 3.1 ಸ್ಟೋರೆಜ್ ಜೊತೆಗೆ ಜೋಡಿಸಲ್ಪಟ್ಟಿದೆ. ಇದರ 16GB ಯ LPDDR5X RAM ಮತ್ತು 512GB ವರೆಗಿನ UFS 3.1 ಸಂಗ್ರಹಣೆಯ ವೇರಿಯಂಟ್ MediaTek ಡೈಮೆನ್ಸಿಟಿ 9200+ (ಸ್ಟಾರ್ ಎಡಿಷನ್) ಚಿಪ್ ಅನ್ನು ಹೊಂದಿರಲಿದೆ.

ಈ ಸರಣಿಯು 6.7 ಇಂಚಿನ ಫುಲ್ HD+ OLED ಡಿಸ್‌ಪ್ಲೇ 1,200 nits ನ ಗರಿಷ್ಠ ಬ್ರೈಟ್ನೆಸ್‌, ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್ ಮತ್ತು 240Hz ಟಚ್ ರೇಟ್ ದರವನ್ನು ಬೆಂಬಲಿಸುತ್ತದೆ. ಫಲಕವು HDR10+ ಅನ್ನು ಬೆಂಬಲಿಸುತ್ತದೆ, ಹಾರ್ಡ್‌ವೇರ್ ಮಟ್ಟದಲ್ಲಿ ಬ್ಲೂ ಲೈಟ್ ಕಡಿತ ಮತ್ತು 2160Hz ಹೆಚ್ಚಿನ ಆವರ್ತನ PWM ಬ್ಲರ್ ಮಾಡುವ ಸಾಮರ್ಥ್ಯ ಹೊಂದಿದೆ. ಜೊತೆಗೆ ಈ ಸ್ಮಾರ್ಟ್‌ಫೋನ್ 80W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000 mAh ಬ್ಯಾಟರಿಯನ್ನು ಹೊಂದಿರಲಿದೆ.

ಕ್ಯಾಮೆರಾ:
ಮುಂಭಾಗದಲ್ಲಿ ಇದು ಆಟೋಫೋಕಸ್ ಮತ್ತು f/2.0 ದ್ಯುತಿರಂಧ್ರದೊಂದಿಗೆ 50 MP ಸೆಲ್ಫಿ ಕ್ಯಾಮೆರಾ ಹೊಂದಿದೆ. ಕ್ಯಾಮೆರಾಕ್ಕಾಗಿ OPPO Reno 12 ಮತ್ತು Reno 12 Pro ಎರಡೂ ಕೂಡ OIS ಮತ್ತು f/1.8 ದ್ಯುತಿರಂಧ್ರದೊಂದಿಗೆ 50 MP ಪ್ರಾಥಮಿಕ ಸೆನ್ಸಾರ್ ಹೊಂದಿವೆ. ಎರಡೂ ಫೋನ್‌ಗಳು 8 MP ಅಲ್ಟ್ರಾವೈಡ್ ಶೂಟರ್‌ಗಳನ್ನು ಮತ್ತು 50 MP ಟೆಲಿಫೋಟೋ ಘಟಕಗಳನ್ನು f/2.0 ದ್ಯುತಿರಂಧ್ರದೊಂದಿಗೆ ಹೊಂದಿವೆ. ಎರಡೂ ಫೋನ್‌ಗಳು 60fps ವರೆಗೆ 4K ವೀಡಿಯೊ ರೆಕಾರ್ಡಿಂಗ್ ಅನ್ನು ಸಹ ಬೆಂಬಲಿಸುತ್ತವೆ. OPPO Reno 12 ಸರಣಿಯು ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸಹ ಹೊಂದಿವೆ.

ಕನೆಕ್ಟಿವಿಟಿ:
ಇದರ ಜಾಗತಿಕ ರೂಪಾಂತರವು 4G, 5G, Wi-Fi 6, ಬ್ಲೂಟೂತ್ 5.4, NFC, USB ಟೈಪ್-C ಪೋರ್ಟ್ ಮತ್ತು ಹೆಚ್ಚಿನ ಕನೆಕ್ಟಿವಿಟಿ ಆಯ್ಕೆಗಳನ್ನು ಹೊಂದಿದೆ.

OPPO Reno 12 ಸರಣಿ 5G ಯು ಭಾರತದಲ್ಲಿ ಬಿಡುಗಡೆಗೆ ಮುಂಚಿತವಾಗಿ ಸ್ಮಾರ್ಟ್‌ಫೋನ್ ಕೆಲವು ಪ್ರಮುಖ ಮುಖ್ಯಾಂಶಗಳ ಕುರಿತು ಹಿಂಟ್ ನೀಡುವ ಸಾಧ್ಯತೆ ಇದೆ.

Best Mobiles in India

English summary
OPPO has officially confirmed that OPPO Reno 12 5G smartphone will soon be launched in the Indian market via Flipkart's official website.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+