ಶೀಘ್ರದಲ್ಲೇ OPPO Reno 12F ಮೊಬೈಲ್ ಲಾಂಚ್! AI ವೈಶಿಷ್ಟ್ಯದ ಜೊತೆಗೆ ಏನೆಲ್ಲಾ ವಿಶೇಷತೆಗಳಿವೆ ಗೊತ್ತಾ?
ಒಪ್ಪೋ ಸಂಸ್ಥೆಯ ಸ್ಮಾರ್ಟ್‌ಫೋನ್‌ಗಳಿಗೆ ಮೊಬೈಲ್ ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆ ಇದೆ. ಕಡಿಮೆ ಬೆಲೆಯಲ್ಲಿ ಅತ್ಯಾಕರ್ಷಕ ಫೀಚರ್ಸ್‌ನ ಸ್ಮಾರ್ಟ್‌ಫೋನ್‌ಗಳನ್ನು ನೀಡುವಲ್ಲಿ ಯಶಸ್ವಿಯಾಗಿವೆ. ಈ ನಡುವೆ ಒಪ್ಪೋ ತನ್ನ OPPO Reno 12F 5G ಯನ್ನು ಮಾರುಕಟ್ಟೆಗೆ ಶೀಘ್ರದಲ್ಲೇ ಪರಿಚಯಿಸಲಿದೆ ಎಂದು ತಿಳಿದು ಬಂದಿದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 6300 SoC ನಲ್ಲಿ 12GB RAM ಮತ್ತು 512GB ಸ್ಟೋರೇಜ್ ಆನ್‌ಬೋರ್ಡ್‌ನೊಂದಿಗೆ ಕಾರ್ಯನಿರ್ವಹಿಸಲಿದೆ. ಇದು AI ರೆಕಾರ್ಡಿಂಗ್ ಸಾರಾಂಶ, ಟೆಕ್ಸ್ಟ್‌ಗಾಗಿ AI ಸಾರಾಂಶ, AI ರೈಟರ್ ಮತ್ತು AI ಸ್ಪೀಕ್‌ನಂತಹ ಹಲವಾರು AI ವೈಶಿಷ್ಟ್ಯಗಳೊಂದಿಗೆ ಬರಲಿದೆ.
ಚೀನಾದ ಟೆಕ್ ಬ್ರ್ಯಾಂಡ್ OPPO Reno 12F 5G ಸ್ಮಾರ್ಟ್‌ಫೋನ್‌ನ ಬೆಲೆ ಮತ್ತು ಲಭ್ಯತೆಯ ವಿವರಗಳನ್ನು ಬಹಿರಂಗಪಡಿಸಿಲ್ಲ. ಆದರೆ ಈ ಸ್ಮಾರ್ಟ್ಫೋನ್ ಎರಡು ಬಣ್ಣಗಳಲ್ಲಿ ಬರಲಿದೆ ಎಂಬುದನ್ನು ಸ್ಪಷ್ಟಪಡಿಸಿದೆ. ಇದು ಪ್ರಸ್ತುತ OPPO ನ ಜಾಗತಿಕ ವೆಬ್‌ಸೈಟ್‌ನಲ್ಲಿ ಅಂಬರ್ ಆರೆಂಜ್ ಮತ್ತು ಆಲಿವ್ ಗ್ರೀನ್ ಬಣ್ಣದ ಆಯ್ಕೆಗಳಲ್ಲಿ ಪಟ್ಟಿ ಮಾಡಲಾಗಿದೆ. ಇದು 5,000mAh ಬ್ಯಾಟರಿ, 45W ಚಾರ್ಜಿಂಗ್ ಬೆಂಬಲ ಮತ್ತು IP64 ರೇಟೆಡ್ ಬಿಲ್ಡ್ ಹೊಂದಿರಲಿದೆ ಎಂದು ಸಂಸ್ಥೆ ತಿಳಿಸಿದೆ.

OPPO Reno 12F 5G ವಿಶೇಷತೆಗಳು:
ಇದು ಡ್ಯುಯಲ್ ನ್ಯಾನೋ ಸಿಮ್ ಜೊತೆಗೆ ColorOS 14.0 ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು 6.67 ಇಂಚಿನ ಪೂರ್ಣ HD+ (1,080x2,400 ಪಿಕ್ಸೆಲ್‌ಗಳು) OLED ಡಿಸ್‌ಪ್ಲೇ, 120Hz ರಿಫ್ರೆಶ್ ರೇಟ್, 92.2 ಶೇಕಡಾ ಸ್ಕ್ರೀನ್ ಟು ಬಾಡಿ ಅನುಪಾತ, pixel 394ppi ಸಾಂದ್ರತೆ, ಮತ್ತು1,200nits ಗರಿಷ್ಠ ಬ್ರೈಟ್‌ನೆಸ್. ಡಿಸ್‌ಪ್ಲೇಯು AGC DT-Star 2 ಗಾಜಿನ ರಕ್ಷಣೆಯನ್ನು ಹೊಂದಿರಲಿದೆ. ಇದು 12GB LPDDR4X RAM ಮತ್ತು 512GB UFS2.2 ಸಂಗ್ರಹಣೆಯೊಂದಿಗೆ ಜೋಡಿಸಲಾದ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.
OPPO Reno 12F 5G ಕ್ಯಾಮೆರಾ:
ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಹೊಂದಿರಲಿದೆ. ಇದು 50MP ಪ್ರಾಥಮಿಕ ಸೆನ್ಸಾರ್ OIS (ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್) ಜೊತೆಗೆ 8MP ವೈಡ್-ಆಂಗಲ್ ಕ್ಯಾಮೆರಾ ಮತ್ತು 2MP ಮ್ಯಾಕ್ರೋ ಸಂವೇದಕ ಒಳಗೊಂಡಿರುತ್ತದೆ. ಮುಂಭಾಗದಲ್ಲಿ ಫೋನ್ 32MP ಶೂಟರ್ ಅನ್ನು ಪಡೆಯುತ್ತದೆ. Oppo Reno 12 ಮತ್ತು Oppo Reno 12 Pro ನಂತೆ ಇದು ಕೂಡ AI ಬೆಸ್ಟ್ ಫೇಸ್, AI ಎರೇಸರ್ 2.0, AI ಸ್ಟುಡಿಯೋ ಮತ್ತು AI ಕ್ಲಿಯರ್ ಫೇಸ್‌ನಂತಹ AI ಆಧಾರಿತ ಕ್ಯಾಮೆರಾ ವೈಶಿಷ್ಟ್ಯಗಳನ್ನು ಸಹ ಒಳಗೊಂಡಿದೆ.
OPPO Reno 12F 5G ಕನೆಕ್ಟಿವಿಟಿ ಆಯ್ಕೆಗಳು:
5G, 4G LTE, Wi-Fi 802.11 a/b/g/n/, ಬ್ಲೂಟೂತ್ 5.3, Beidou, Glonass, Galileo, GPS, NFC, ಮತ್ತು USB ಟೈಪ್-ಸಿ ಪೋರ್ಟ್ ಸೇರಿವೆ. ಆನ್‌ಬೋರ್ಡ್ ಸೆನ್ಸಾರ್‌ಗಳು ಅಕ್ಸೆಲೆರೊಮೀಟರ್, ಬಣ್ಣ ತಾಪಮಾನ ಸಂವೇದಕ, ಗುರುತ್ವಾಕರ್ಷಣೆ ಸೆನ್ಸಾರ್, ಭೂಕಾಂತೀಯ ಸೆನ್ಸಾರ್, ಐಆರ್ ಸೆನ್ಸಾರ್, ಸಾಮೀಪ್ಯ ಸೆನ್ಸಾರ್ ಮತ್ತು ಆಪ್ಟಿಕಲ್ ಸೆನ್ಸಾರ್ ಅನ್ನು ಒಳಗೊಂಡಿರಲಿದೆ. ಇದು ದೃಢೀಕರಣಕ್ಕಾಗಿ ಫಿಂಗರ್‌ಪ್ರಿಂಟ್ ಸಂವೇದಕವನ್ನು ಒಳಗೊಂಡಿದೆ ಮತ್ತು ಫೇಸ್ ಗುರುತಿಸುವಿಕೆಯನ್ನು ಬೆಂಬಲಿಸುತ್ತದೆ.
ಈ ಮೊಬೈಲ್ 45W ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಹೊಂದಿದೆ. ವೇಗದ ಚಾರ್ಜಿಂಗ್ ಅಡಾಪ್ಟರ್ ಹೊಂದಿರಲಿದೆ. 71 ನಿಮಿಷಗಳಲ್ಲಿ ಶೂನ್ಯದಿಂದ 100 ಪ್ರತಿಶತದಷ್ಟು ಬ್ಯಾಟರಿಯನ್ನು ಫುಲ್ ಮಾಡಲಿದೆ ಎಂದು ಹೇಳಲಾಗುತ್ತಿದೆ. ಹತ್ತು ನಿಮಿಷಗಳ ಚಾರ್ಜಿಂಗ್ 6.2 ಗಂಟೆಗಳ ಟಾಕ್ ಟೈಮ್ ಮತ್ತು 5.05 ಗಂಟೆಗಳವರೆಗೆ ವೀಡಿಯೊ ಪ್ಲೇಬ್ಯಾಕ್ ಸಮಯವನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ.


Click it and Unblock the Notifications








