Home
ಸುದ್ದಿಜಾಲ

OPPO ಪ್ರಿಯರಿಗೆ ಸಿಹಿಸುದ್ದಿ.. ಒಂದೇ ದಿನ 2 ಫೋನ್, ಇಯರ್ ಬಡ್ಸ್, ಪ್ಯಾಡ್ ಬಿಡುಗಡೆ; ಯಾವಾಗ?

ಒಪ್ಪೋ ತನ್ನ ಗ್ರಾಹಕರಿಗೆ ಗುಡ್‌ನ್ಯೂಸ್‌ ನೀಡಿದೆ. ತನ್ನ ಹೊಸ ಒಪ್ಪೋ ರೆನೋ 13 (Oppo Reno 13 Series) ಸರಣಿಯ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದೆ. ರೆನೋ 13 ಸರಣಿಯ ಅಡಿಯಲ್ಲಿ ಒಪ್ಪೋ ರೆನೋ 13 (OPPO Reno 13) ಮತ್ತು ಒಪ್ಪೋ ರೆನೋ 13 ಪ್ರೊ (OPPO Reno 13 Pro) ಮೊಬೈಲ್‌ಗಳು ಮಾರುಕಟ್ಟೆಗೆ ಲಗ್ಗೆ ಇಡಲಿವೆ. ಈಗಾಗಲೇ, ಕೆಲವು ಪ್ರಮುಖ ವೈಶಿಷ್ಟ್ಯಗಳನ್ನು ಬಹಿರಂಗಪಡಿಸಲಾಗಿದೆ. ಬನ್ನಿ, ನೂತನ ಫೋನ್‌ಗಳ ಬಿಡುಗಡೆಯ ದಿನಾಂಕ ಮತ್ತು ವಿಶೇಷತೆಗಳನ್ನು ತಿಳಿಯೋಣ.

ಕಂಪನಿಯು ನೂತನ ಫೋನ್‌ಗಳ ಜೊತೆಗೆ, ಎನ್ಕೋ R3 ಪ್ರೊ (Enco R3 Pro) ಮತ್ತು ಒಪ್ಪೋ ಪ್ಯಾಡ್ 3 (Oppo Pad 3) ಸಹ ಬಿಡುಗಡೆ ಮಾಡಲಿದೆ. ಚೀನಾದ ಒಪ್ಪೋ ವೆಬ್‌ಸೈಟ್‌ನಲ್ಲಿ ಒಪ್ಪೋ ರೆನೋ 13 ಸರಣಿಯ ಮೈಕ್ರೋ ಸೈಟ್ ಲೈವ್ ಆಗಿದೆ. ಟೀಸರ್‌ನಲ್ಲಿ, ನವೆಂಬರ್ 25 ರಂದು ಒಪ್ಪೋ ರೆನೋ 13 ಮತ್ತು ಒಪ್ಪೋ ರೆನೋ 13 ಪ್ರೊ ಮೊಬೈಲ್‌ ಬಿಡುಗಡೆಯ ವಿವರಗಳನ್ನು ಹಂಚಿಕೊಳ್ಳಲಾಗಿದೆ.

OPPO Reno 13 ಸರಣಿ ಬಿಡುಗಡೆಗೆ ಸಿದ್ಧ; 50MP ಸೆಲ್ಫಿ ಕ್ಯಾಮೆರಾ.. ಬೆಲೆ ಎಷ್ಟು?

ಹೌದು, ಒಪ್ಪೋ ರೆನೋ 13 ಸರಣಿಯು ಮೊದಲು ಚೀನಾದಲ್ಲಿ ನವೆಂಬರ್ 25 ರಂದು 4.30ಕ್ಕೆ (7:00 PM CST) ಬಿಡುಗಡೆಯಾಗಲಿದೆ. ಕಂಪನಿಯು ಬಿಡುಗಡೆಗೂ ಮುನ್ನವೇ, ಫೋನಿನ ಸ್ಟೋರೇಜ್ ಮತ್ತು ವಿನ್ಯಾಸವನ್ನು ಬಹಿರಂಗಪಡಿಸಿದೆ. ಈ ಫೋನ್ ಫ್ಲಾಟ್ ಡಿಸ್ಪ್ಲೇ ಮತ್ತು ಟ್ರಿಪಲ್ ಕ್ಯಾಮೆರಾ ಸೆಟಪ್‌ ಹೊಂದಿರಲಿದೆ. ಎರಡೂ ಫೋನ್‌ಗಳು ಲೋಹದ ಚೌಕಟ್ಟನ್ನು ಹೊಂದಿವೆ. ಜೊತೆಗೆ ಐಆರ್ ಬ್ಲಾಸ್ಟರ್ ತಂತ್ರಜ್ಞಾನವನ್ನು ಹೊಂದಿರಲಿವೆ.

ಒಪ್ಪೋ ರೆನೋ 13 ಮೊಬೈಲ್ 12GB + 256GB, 12GB + 512GB, 16GB + 256GB, 16GB + 512GB ಮತ್ತು 16GB + 1TB ಸ್ಟೋರೇಜ್‌ ಆಯ್ಕೆಗಳಲ್ಲಿ ಬಿಡುಗಡೆಯಾಗಲಿದೆ. ಒಪ್ಪೋ ರೆನೋ 13 ಪ್ರೊ ಸ್ಮಾರ್ಟ್‌ಫೋನ್ 12GB + 256GB, 12GB + 512GB, 16GB + 512GB ಮತ್ತು 16GB + 1TB ಸ್ಟೋರೇಜ್‌ ಆಯ್ಕೆಗಳನ್ನು ಹೊಂದಿರಲಿದೆ. ಇದು ಪರ್ಪಲ್ ಬಣ್ಣದಲ್ಲಿ ಬರಲಿದೆ.

ಒಪ್ಪೋ ರೆನೋ 13 ಸರಣಿಯ ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಒಪ್ಪೋ ರೆನೋ 13 ಮೊಬೈಲ್ 6.59 ಇಂಚಿನ ಡಿಸ್ಪ್ಲೇಯನ್ನು ಹೊಂದಿರಲಿದೆ. ಇದು 1.5K ರೆಸಲ್ಯೂಶನ್, 120Hz ರಿಫ್ರೆಶ್ ದರವನ್ನು ಹೊಂದಿರುತ್ತದೆ. ಒಪ್ಪೋ ರೆನೋ 13 ಪ್ರೊ ಸ್ಮಾರ್ಟ್‌ಫೋನ್ 6.83 ಇಂಚಿನ ಡಿಸ್ಪ್ಲೇಯನ್ನು ಹೊಂದಿರಲಿದೆ. ಇದು 1.5K ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ದರದ ಬೆಂಬಲ ಪಡೆದಿರಲಿದೆ.

ಪ್ರೊಸೆಸರ್ ಸಾಮರ್ಥ್ಯ

ಕಂಪನಿಯು ಒಪ್ಪೋ ರೆನೋ 13 ಮತ್ತು ಒಪ್ಪೋ ರೆನೋ 13 ಪ್ರೊ ಮೊಬೈಲ್‌ ಅನ್ನು ಚೀನಾದಲ್ಲಿ ಮೀಡಿಯಾಟೆಕ್ ಡೈಮೆನ್ಸಿಟಿ 8350 ಪ್ರೊಸೆಸರ್‌ನೊಂದಿಗೆ ಬಿಡುಗಡೆ ಮಾಡಲಿದೆ. ಜಾಗತಿಕ ಮಾರುಕಟ್ಟೆ ಮತ್ತು ಭಾರತದಲ್ಲಿ ಮೀಡಿಯಾಟೆಕ್ ಡೈಮೆನ್ಸಿಟಿ 8300 ಪ್ರೊಸೆಸರ್‌ನೊಂದಿಗೆ ಪರಿಚಯಿಸಲಿದೆ. ಎರಡೂ ಫೋನ್‌ಗಳು ColorOS 15 ನೊಂದಿಗೆ ಕೆಲಸ ಮಾಡಲಿವೆ.

OPPO Reno 13 ಸರಣಿ ಬಿಡುಗಡೆಗೆ ಸಿದ್ಧ; 50MP ಸೆಲ್ಫಿ ಕ್ಯಾಮೆರಾ.. ಬೆಲೆ ಎಷ್ಟು?

ಕ್ಯಾಮೆರಾ ಸೆಟಪ್

ಒಪ್ಪೋ ರೆನೋ 13 ಮತ್ತು ಒಪ್ಪೋ ರೆನೋ 13 ಪ್ರೊ ಮೊಬೈಲ್‌ಗಳು ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿರಲಿದೆ. ಒಪ್ಪೋ ರೆನೋ 13 ಫೋನಿನಲ್ಲಿ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಇರಲಿದೆ. ಒಪ್ಪೋ ರೆನೋ 13 ಪ್ರೊ ಫೋನ್ OIS ಬೆಂಬಲದೊಂದಿಗೆ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 50 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ತೃತೀಯ ಕ್ಯಾಮೆರಾ ಹೊಂದಿರಲಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಎರಡೂ ಮೊಬೈಲ್‌ಗಳಲ್ಲಿ 50 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇರಲಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಒಪ್ಪೋ ರೆನೋ 13 ಮೊಬೈಲ್ 5600mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಒಪ್ಪೋ ರೆನೋ 13 ಪ್ರೊ ಫೋನ್ 5900mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ. ಎರಡೂ ಮೊಬೈಲ್‌ಗಳು ವೈರ್ಡ್ ಮತ್ತು ವೈರ್‌ಲೆಸ್ ಚಾರ್ಜಿಂಗ್‌ ಸೌಲಭ್ಯ ಹೊಂದಿರುವ ನಿರೀಕ್ಷೆಯಿದೆ.

Best Mobiles in India

English summary
Oppo Reno 13 Series Launch Date Set for November 25: expected price, specifications and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+