Home
ಸುದ್ದಿಜಾಲ

ಇಂದು OPPO Reno 13 ಸರಣಿ ಲಾಂಚ್.. ಎಷ್ಟು ಫೋನ್‌ ಬರ್ತಿವೆ.. ಬೆಲೆ ಮತ್ತು ವಿಶೇಷತೆಗಳೇನು?

ಒಪ್ಪೋ ತನ್ನ ಬಹುನಿರೀಕ್ಷಿತ ರೆನೋ 13 (OPPO Reno13 Series 5G) ಸರಣಿ ಬಿಡುಗಡೆಗೆ ಸಜ್ಜಾಗಿದೆ. ಈ ಸರಣಿಯಲ್ಲಿ ಎರಡು ಸೊಗಸಾದ ಮೊಬೈಲ್‌ಗಳು ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಡಲಿವೆ. ಹೌದು, ಕಂಪನಿಯು ಇಂದು (ಜನವರಿ 9) ಒಪ್ಪೋ ರೆನೋ 13 5G (OPPO Reno 13 5G) ಮತ್ತು ಒಪ್ಪೋ ರೆನೋ 13 ಪ್ರೊ 5G (OPPO Reno 13 Pro 5G) ಫೋನ್‌ಗಳನ್ನು ರಿಲೀಸ್ ಮಾಡಲಿದೆ. ಇವುಗಳನ್ನು ಮಧ್ಯಮ ಶ್ರೇಣಿಯ ವಿಭಾಗದಲ್ಲಿ ಪರಿಚಯಿಸಲಾಗುತ್ತಿದೆ. ಬನ್ನಿ, ಈ ಫೋನ್‌ಗಳ ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ.

ಮೊಬೈಲ್ ಪ್ರಿಯರಿಗೆ ಜನವರಿ 9 ವಿಶೇಷ ದಿನ. ಒಂದೇ ದಿನದಲ್ಲಿ ಒಪ್ಪೋ ರೆನೋ 13 ಮತ್ತುಒಪ್ಪೋ ರೆನೋ 13 ಪ್ರೊ, ಪೊಕೊ X7 ಮತ್ತು ಪೊಕೊ X7 ಪ್ರೊ ಸೇರಿದಂತೆ ನಾಲ್ಕು ಹೊಸ ಸ್ಮಾರ್ಟ್‌ಫೋನ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗುವುದು. ಈ ನಾಲ್ಕು ಮೊಬೈಲ್‌ಗಳು ಮಿಡ್ ಬಜೆಟ್ ವಿಭಾಗದಲ್ಲಿ ಬರಲಿವೆ. ಸ್ಟೈಲಿಶ್ ಲುಕ್ ಮತ್ತು ಅತ್ಯಾಕರ್ಷಕ ವಿಶೇಷತೆಗಳನ್ನು ಹೊಂದಿರಲಿವೆ. ನೀವು ಈ ಸ್ಮಾರ್ಟ್‌ಫೋನ್‌ಗಳ ಬಿಡುಗಡೆ ಸಮಾರಂಭವನ್ನು ನಿಮ್ಮ ಫೋನ್‌ನಲ್ಲಿ ಲೈವ್ ಆಗಿ ವೀಕ್ಷಿಸಬಹುದು.

ಇಂದು OPPO Reno 13 ಸರಣಿ ಲಾಂಚ್.. ಎಷ್ಟು ಫೋನ್‌, ಬೆಲೆ ಮತ್ತು ವಿಶೇಷತೆಗಳೇನು?

ಒಪ್ಪೋ ರೆನೋ 13 5G ಸರಣಿ ಬಿಡುಗಡೆ ಯಾವಾಗ?

ಒಪ್ಪೋ ರೆನೋ 13 ಸರಣಿಯು ಇಂದು (ಜನವರಿ 9) ಸಂಜೆ 5 ಗಂಟೆಗೆ ಬಿಡುಗಡೆಯಾಗಲಿದೆ. ಕಂಪನಿಯು ಇದಕ್ಕಾಗಿ ದೊಡ್ಡ ಲಾಂಚ್ ಈವೆಂಟ್ ಆಯೋಜಿಸಿದೆ. ಇದನ್ನು ಕಂಪನಿಯ ವೆಬ್‌ಸೈಟ್ ಸೇರಿದಂತೆ ಎಲ್ಲಾ ಒಪ್ಪೋ ಇಂಡಿಯಾ ಸಾಮಾಜಿಕ ಜಾಲತಾಣ ಪ್ಲಾಟ್‌ಫಾರ್ಮ್‌ಗಳಲ್ಲಿ ಲೈವ್ ವೀಕ್ಷಿಸಬಹುದು. ಈಗಾಗಲೇ ಮೈಕ್ರೋ ಸೈಟ್ ಲೈವ್ ಆಗಿದೆ. ಈ ಮೂಲಕ ಫೋನ್‌ಗಳ ಫೋಟೋ ಮತ್ತು ಡಿಸೈನ್ ಬಹಿರಂಗಪಡಿಸಿದೆ. ಕಂಪನಿಯು ಈ ಸರಣಿಯನ್ನು OPPO AI ಫೋನ್ ಎಂದು ಕರೆದಿದೆ.

ಒಪ್ಪೋ ರೆನೋ 13 5G ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಒಪ್ಪೋ ರೆನೋ 13 5G ಫೋನ್ 6.59 ಇಂಚಿನ 1.5K ಡಿಸ್ಪ್ಲೇ ಹೊಂದಿರಲಿದೆ. ಇದು ಪಂಚ್ ಹೋಲ್ ಶೈಲಿಯ ಅಮೋಲೆಡ್‌ ಡಿಸ್ಪ್ಲೇ ಆಗಿದೆ. ಈ ಡಿಸ್ಪ್ಲೇಯು 2,760 x 1,256 ಪಿಕ್ಸೆಲ್ ರೆಸಲ್ಯೂಶನ್ ಬೆಂಬಲ ಹೊಂದಿದೆ. ಜೊತೆಗೆ 120Hz ರಿಫ್ರೆಶ್ ದರ, 240Hz ಟಚ್ ಸ್ಯಾಂಪ್ಲಿಂಗ್ ದರ ಮತ್ತು 1,200 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಹೊಂದಿದೆ.

ಪ್ರೊಸೆಸರ್ ಸಾಮರ್ಥ್ಯ

ಒಪ್ಪೋ ರೆನೋ 13 5G ಸ್ಮಾರ್ಟ್‌ಫೋನ್ ಮೀಡಿಯಾಟೆಕ್‌ನ ಡೈಮೆನ್ಸಿಟಿ 8350 ಆಕ್ಟಾಕೋರ್ ಪ್ರೊಸೆಸರ್ ಹೊಂದಿದೆ. ಇದು ಆಂಡ್ರಾಯ್ಡ್‌ 15 ಆಧಾರಿತ ColorOS 15.0 ಜೊತೆಗೆ ಕೆಲಸ ನಿರ್ವಹಿಸುತ್ತದೆ.

ಕ್ಯಾಮೆರಾ ಸೆಟಪ್

ಒಪ್ಪೋ ರೆನೋ 13 5G ಮೊಬೈಲ್ 50 ಮೆಗಾಪಿಕ್ಸೆಲ್ ಸೋನಿ ಮುಖ್ಯ ಕ್ಯಾಮೆರಾ ಹೊಂದಿದೆ. ಇದು OIS ಮತ್ತು ಎಲ್‌ಇಡಿ ಫ್ಲ್ಯಾಷ್ ಜೊತೆಗೆ ಬರುತ್ತದೆ. ಹಾಗೆಯೇ 8 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಇದೆ. ಈ ಮೊಬೈಲ್ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 50 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಒಪ್ಪೋ ರೆನೋ 13 5G ಫೋನ್ 5,600mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 80W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.

ಇಂದು OPPO Reno 13 ಸರಣಿ ಲಾಂಚ್.. ಎಷ್ಟು ಫೋನ್‌, ಬೆಲೆ ಮತ್ತು ವಿಶೇಷತೆಗಳೇನು?

ಒಪ್ಪೋ ರೆನೋ 13 5G ಪ್ರೊ ವೈಶಿಷ್ಟ್ಯ

ಡಿಸ್ಪ್ಲೇ ವಿವರ

ಒಪ್ಪೋ ರೆನೋ 13 ಪ್ರೊ 5G ಮೊಬೈಲ್ 6.83 ಇಂಚಿನ 1.5K ಓಎಲ್‌ಇಡಿ ಡಿಸ್ಪ್ಲೇ ಹೊಂದಿದೆ. ಇದು 120Hz ರಿಫ್ರೆಶ್ ದರ, 1200 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಪಡೆದಿದೆ. ಈ ಡಿಸ್ಪ್ಲೇಯು ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಹೊಂದಿದೆ.

ಪ್ರೊಸೆಸರ್ ಸಾಮರ್ಥ್ಯ

ಒಪ್ಪೋ ರೆನೋ 13 ಪ್ರೊ 5G ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್‌ನ ಡೈಮೆನ್ಸಿಟಿ 8350 ಆಕ್ಟಾಕೋರ್ ಪ್ರೊಸೆಸರ್ ಹೊಂದಿದೆ. ಇದು ಆಂಡ್ರಾಯ್ಡ್‌ 15 ಆಧಾರಿತ ColorOS 15.0 ಜೊತೆಗೆ ಕೆಲಸ ಮಾಡುತ್ತದೆ.

ಕ್ಯಾಮೆರಾ ಸೆಟಪ್

ಒಪ್ಪೋ ರೆನೋ 13 ಪ್ರೊ 5G ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಇದೆ. ಜೊತೆಗೆ 8 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್ ಕ್ಯಾಮೆರಾ ತೃತೀಯ ಕ್ಯಾಮೆರಾ ಹೊಂದಿದೆ. ಈ ಫೋನ್ 50 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಸಹ ಹೊಂದಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಒಪ್ಪೋ ರೆನೋ 13 ಪ್ರೊ 5G ಮೊಬೈಲ್ 5,800mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 80W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.

ಒಪ್ಪೋ ರೆನೋ 13 5G ಸರಣಿಯ ಬೆಲೆ (ನಿರೀಕ್ಷಿತ)

ಒಪ್ಪೋ ರೆನೋ 13 5G ಫೋನನ್ನು ಭಾರತದಲ್ಲಿ 29,999 ರೂ. ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಲಾಗುವುದು. ಈ ಫೋನನ್ನು ಈಗಾಗಲೇ ಜಾಗತಿಕ ಮಾರುಕಟ್ಟೆಯಲ್ಲಿ ರಿಲೀಸ್ ಮಾಡಲಾಗಿದೆ. ಇದನ್ನು 12GB RAM ಮತ್ತು 16GB RAM, 5 ಸ್ಟೋರೇಜ್ ರೂಪಾಂತರಗಳಲ್ಲಿ ಪರಿಚಯಿಸಲಾಗಿದೆ. ಈ ಫೋನಿನ ಆರಂಭಿಕ ಬೆಲೆ 44,190 ರೂ. ಆಗಿದೆ.

ಒಪ್ಪೋ ರೆನೋ 13 ಪ್ರೊ 5G ಫೋನ್ 12GB RAM ಮತ್ತು 16GB RAM ಹೊಂದಿದೆ. ಇದು 256GB, 512GB ಮತ್ತು 1 TB ಸ್ಟೋರೇಜ್ ಆಯ್ಕೆ ಒಳಗೊಂಡಿದೆ. ಒಪ್ಪೋ ರೆನೋ 13 ಪ್ರೊ ಬೆಲೆ 52,350 ರೂ. ಆಗಿದೆ. ಭಾರತದಲ್ಲಿ 39,999 ರೂ. ಬೆಲೆಗೆ ಬಿಡುಗಡೆ ಮಾಡುವ ನಿರೀಕ್ಷೆಯಿದೆ.

ಪೊಕೊ X7 ಸರಣಿ ಬಿಡುಗಡೆ ಸಮಾರಂಭ

ಪೊಕೊ X7 5G ಸರಣಿಯು ಇಂದು (ಜನವರಿ 9) ಬಿಡುಗಡೆಯಾಗಲಿದೆ. ಸಂಜೆ 5.30 ಗಂಟೆಗೆ ದೊಡ್ಡ ಕಾರ್ಯಕ್ರಮ ನಡೆಯಲಿದೆ. ಈ ಹೊಸ ಸರಣಿಯಲ್ಲಿ ಪೊಕೊ X7 5G (Poco X7 5G) ಮತ್ತು ಪೊಕೊ X7 ಪ್ರೊ 5G (Poco X7 Pro 5G) ಫೋನ್‌ಗಳನ್ನು ಪರಿಚಯಿಸಲಾಗುವುದು. ಕಂಪನಿಯು ಪೊಕೊ X7 ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ತನ್ನ ಅಧಿಕೃತ ಸಾಮಾಜಿಕ ಜಾಲತಾಣದ ಮೂಲಕ ಸ್ಟ್ರೀಮ್ ಮಾಡುತ್ತದೆ. ನೀವು ಬಿಡುಗಡೆ ಸಮಾರಂಭವನ್ನು ಈ ಕೆಳಗಿನ ಲಿಂಕ್‌, ಕಂಪನಿಯ ವೆಬ್‌ಸೈಟ್ ಮತ್ತು ಪೊಕೊ ಇಂಡಿಯಾ ಸಾಮಾಜಿಕ ಜಾಲತಾಣದಲ್ಲಿ ಲೈವ್ ವೀಕ್ಷಿಸಬಹುದು.

Best Mobiles in India

English summary
OPPO Reno 13 Series Launch in India Today: How to Watch it Live? What to Expect?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+