Home
ಸುದ್ದಿಜಾಲ

Oppo Reno 14 ಸರಣಿ ಶೀಘ್ರದಲ್ಲೇ ಬಿಡುಗಡೆ: ನಿರೀಕ್ಷಿತ ವೈಶಿಷ್ಟ್ಯಗಳು ಬಹಿರಂಗ!

ಜನಪ್ರಿಯ ಸ್ಮಾರ್ಟ್‌ಫೋನ್ ಬ್ರ್ಯಾಂಡ್ Oppo ತನ್ನ ಇತ್ತೀಚಿನ Reno ಸರಣಿಯನ್ನು ವಿಸ್ತರಿಸಲು ಸಿದ್ಧವಾಗಿದೆ. ಕಂಪನಿಯು ಚೀನಾದಲ್ಲಿ Oppo Reno 14 ಸರಣಿಯ ಫೋನ್‌ಗಳನ್ನು ಶೀಘ್ರವೇ ಬಿಡುಗಡೆಯನ್ನು ಅಧಿಕೃತವಾಗಿ ಘೋಷಿಸಿದೆ. ಈ ಹೊಸ ಸರಣಿಯಲ್ಲಿ Reno 14 ಮತ್ತು Reno 14 Pro ಎಂಬ ಎರಡು ಮಾದರಿಗಳು ಇರಲಿವೆ ಎಂದು ನಿರೀಕ್ಷಿಸಲಾಗಿದೆ. ಇದೀಗ ಈ Oppo Reno 14 ಸ್ಮಾರ್ಟ್‌ಫೋನ್ ಜನಪ್ರಿಯ ಬೆಂಚ್‌ಮಾರ್ಕಿಂಗ್ ವೆಬ್‌ಸೈಟ್‌ನಲ್ಲಿ ಕಾಣಿಸಿಕೊಂಡಿದ್ದು, ಅದರ ಪ್ರೊಸೆಸರ್, RAM ಮತ್ತು ಆಪರೇಟಿಂಗ್ ಸಿಸ್ಟಮ್‌ನಂತಹ ಪ್ರಮುಖ ವಿವರಗಳನ್ನು ಬಹಿರಂಗಪಡಿಸಿದೆ.!

ಹೌದು, Oppo Reno 14 ಸ್ಮಾರ್ಟ್‌ಫೋನ್ ಜನಪ್ರಿಯ ಬೆಂಚ್‌ಮಾರ್ಕಿಂಗ್ ವೆಬ್‌ಸೈಟ್‌ನಲ್ಲಿ ಕಾಣಿಸಿಕೊಂಡಿದ್ದು, Oppo Reno 14 ಸ್ಮಾರ್ಟ್‌ಫೋನ್ ಬಹುಕಾರ್ಯಕವನ್ನು ಸುಲಭಗೊಳಿಸಲು 12GB RAM ನೊಂದಿಗೆ ಬರಲಿದೆ. ಸಾಫ್ಟ್‌ವೇರ್ ವಿಭಾಗದಲ್ಲಿ, ಈ ಹ್ಯಾಂಡ್‌ಸೆಟ್ Android 15 ಆಪರೇಟಿಂಗ್ ಸಿಸ್ಟಮ್‌ನೊಂದಿಗೆ ಬಾಕ್ಸ್‌ನಿಂದ ಹೊರಬರುವ ನಿರೀಕ್ಷೆಯಿದೆ. ಗೀಕ್‌ಬೆಂಚ್ ಪರೀಕ್ಷೆಯಲ್ಲಿ, Oppo Reno 14 ಸ್ಮಾರ್ಟ್‌ಫೋನ್ ಸಿಂಗಲ್-ಕೋರ್‌ನಲ್ಲಿ 1,612 ಅಂಕಗಳು ಮತ್ತು ಮಲ್ಟಿ-ಕೋರ್ ಪರೀಕ್ಷೆಯಲ್ಲಿ 6,404 ಅಂಕಗಳನ್ನು ಗಳಿಸಿದೆ ಎಂದು ತಿಳಿದುಬಂದಿದೆ.

ಗೀಕ್‌ಬೆಂಚ್ ಪಟ್ಟಿಯ ಪ್ರಕಾರ, PKZ110 ಮಾದರಿ ಸಂಖ್ಯೆಯನ್ನು ಹೊಂದಿರುವ Oppo ಹ್ಯಾಂಡ್‌ಸೆಟ್ Oppo Reno 14 ಸ್ಮಾರ್ಟ್‌ಫೋನ್ ಆಗಿರಬಹುದು. ಈ ಫೋನ್ ಆಕ್ಟಾ-ಕೋರ್ ಪ್ರೊಸೆಸರ್‌ನಿಂದ ಚಾಲಿತವಾಗಿದ್ದು, ಪ್ರೈಮ್ ಕೋರ್ 3.25GHz ಗರಿಷ್ಠ ಕ್ಲಾಕ್ ಸ್ಪೀಡ್ ಹೊಂದಿದೆ. ಉಳಿದಂತೆ ಮೂರು ಕೋರ್‌ಗಳು 3GHz ನಲ್ಲಿ ಮತ್ತು ನಾಲ್ಕು ಕೋರ್‌ಗಳು 2.10GHz ನಲ್ಲಿ ಕಾರ್ಯನಿರ್ವಹಿಸುತ್ತವೆ. ಈ ವಿಶೇಷಣಗಳನ್ನು ಗಮನಿಸಿದರೆ, Oppo Reno 14 ಮೀಡಿಯಾ ಟೆಕ್ ಡೈಮೆನ್ಸಿಟಿ 8400 SoC (ಸಿಸ್ಟಮ್ ಆನ್ ಎ ಚಿಪ್) ನೊಂದಿಗೆ ಬಿಡುಗಡೆಯಾಗುವ ಸಾಧ್ಯತೆ ಇದೆ.

ಇಷ್ಟೇ ಅಲ್ಲದೆ, Oppo Reno 14 ಸರಣಿ ಸ್ಮಾರ್ಟ್‌ಫೋನ್‌ಗಳು ವಿಶೇಷವಾಗಿ' ಮ್ಯಾಜಿಕ್ ಕ್ಯೂಬ್' ಎಂಬ ಹೊಸ ಬಟನ್‌ನೊಂದಿಗೆ ಬರಬಹುದು, ಇದು Apple ನ ಆಕ್ಷನ್ ಬಟನ್‌ನಂತೆ ಪ್ರೊಗ್ರಾಮೆಬಲ್ ಕಾರ್ಯವನ್ನು ಹೊಂದಿರುತ್ತದೆ ಎನ್ನಲಾಗಿದೆ. ಇದಲ್ಲದೆ, ಸೋರಿಕೆಯಾದ ಮಾಹಿತಿಯ ಪ್ರಕಾರ, ಮೂಲ ಮಾದರಿಯು iPhone-ಪ್ರೇರಿತ ವಿನ್ಯಾಸವನ್ನು ಹೊಂದಿರಬಹುದು ಎನ್ನಲಾಗಿದೆ.! ಇನ್ನು ಚೀನಾದಲ್ಲಿ Oppo Reno 14 ಸರಣಿಯ ಶೀಘ್ರ ಬಿಡುಗಡೆ ಬಗ್ಗೆ ಹೇಳಲಾಗಿದೆಯಾದರೂ, ನಿಖರವಾದ ಬಿಡುಗಡೆ ದಿನಾಂಕವನ್ನು ಇನ್ನೂ ಬಹಿರಂಗಪಡಿಸಿಲ್ಲ. ಆದರೆ,

Oppo Reno 14 ಸರಣಿ ಶೀಘ್ರದಲ್ಲೇ ಬಿಡುಗಡೆ: ನಿರೀಕ್ಷಿತ ವೈಶಿಷ್ಟ್ಯಗಳು ಬಹಿರಂಗ!

ಈ ಹಿಂದಿನ ಹಲವು ವರದಿಗಳ ಪ್ರಕಾರ, Oppo Reno 14 ಸ್ಮಾರ್ಟ್‌ಫೋನಿನ ವಿನ್ಯಾಸ ಮತ್ತು ಕೆಲವು ಪ್ರಮುಖ ವೈಶಿಷ್ಟ್ಯಗಳ ಕುರಿತು ಈಗಾಗಲೇ ಆನ್‌ಲೈನ್‌ನಲ್ಲಿ ಹಲವು ಮಾಹಿತಿಗಳು ಹರಿದಾಡಿವೆ. Oppo Reno 14 ಫೋನ್‌ ಫ್ಲಾಟ್ ಡಿಸ್ಪ್ಲೇಗಳನ್ನು ಹೊಂದಿರಬಹುದು. ಅಲ್ಲದೆ, ಅವು ಲೋಹದ ಮಧ್ಯದ ಚೌಕಟ್ಟಿನೊಂದಿಗೆ ತೆಳುವಾದ ಮತ್ತು ಹಗುರವಾದ ವಿನ್ಯಾಸವನ್ನು ಹೊಂದಿರುವ ಸಾಧ್ಯತೆ ಇದೆ. ಈ ಸರಣಿಯಲ್ಲಿ ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾವನ್ನು ನೀಡಲಾಗುವುದು ಎಂದು ನಿರೀಕ್ಷಿಸಲಾಗಿದೆ, ಆದರೆ ಇದು ಪ್ರೊ ಮಾದರಿಗೆ ಮಾತ್ರ ಸೀಮಿತವಾಗಿರಬಹುದು.

ಇತ್ತ ಪ್ರೊ ಮಾದರಿ, Oppo Reno 14 Pro ಕುರಿತು ಹೇಳುವುದಾದರೆ, ಇದು 120Hz ರಿಫ್ರೆಶ್ ದರದೊಂದಿಗೆ ಫ್ಲಾಟ್ OLED ಡಿಸ್ಪ್ಲೇಯನ್ನು ಹೊಂದಿರಬಹುದು. ಇದು Android 15 ಆಧಾರಿತ ColorOS 15 ನಲ್ಲಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ. ಕ್ಯಾಮೆರಾ ವಿಭಾಗದಲ್ಲಿ, ಇದು 50-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 3.5x ಆಪ್ಟಿಕಲ್ ಜೂಮ್‌ನೊಂದಿಗೆ 50-ಮೆಗಾಪಿಕ್ಸೆಲ್ ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾ ಮತ್ತು 8-ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಕ್ಯಾಮೆರಾವನ್ನು ಒಳಗೊಂಡಿರುವ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರಬಹುದು.

Best Mobiles in India

English summary
An Oppo smartphone identified by the model number PKZ110 has appeared on Geekbench, and it is thought to be the standard version of the Oppo Reno 14.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+