ಒಪ್ಪೋ ರೆನೋ 4 5G ಆರ್ಟಿಸ್ಟ್ ಲಿಮಿಟೆಡ್ ಆವೃತ್ತಿಯ ಸ್ಮಾರ್ಟ್‌ಫೋನ್‌ ಬಿಡುಗಡೆ!

|

ಟೆಕ್‌ ವಲಯದ ಜನಪ್ರಿಯ ಸ್ಮಾರ್ಟ್‌ಫೋನ್‌ ತಯಾರಕರಲ್ಲಿ ಒಂದಾಗಿರುವ ಒಪ್ಪೋ ತನ್ನ ಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳಿಗೆ ಹೆಸರುವಾಸಿಯಾಗಿದೆ. ಈಗಾಗಲೇ ಹಲವು ಹೊಸ ಮಾದರಿಯ ಫೀಚರ್ಸ್‌ ಫೋನ್‌ಗಳನ್ನ ಅನಾವರಣಗೊಳಿಸಿರುವ ಒಪ್ಪೊ ಸ್ಮಾರ್ಟ್‌ಫೋನ್‌ ಪ್ರಿಯರ ನೆಚ್ಚಿನ ಆಯ್ಕೆಯಾಗಿದೆ.ಸದ್ಯ ಇದೀಗ ಈಗಾಗಲೇ ಬಿಡುಗಡೆ ಮಾಡಿರುವ ಒಪ್ಪೊ ರೆನೋ 4 5G ಸ್ಮಾರ್ಟ್‌ಫೋನ್‌ ನ ಆರ್ಟಿಸ್ಟ್‌ ಲಿಮಿಟೆಡ್‌ ಆವೃತ್ತಿಯನ್ನ ಬಿಡುಗಡೆ ಮಾಡಿದೆ. ಈ ಹೊಸ ಕಲರ್‌ ಆರ್ಟಿಸ್ಟ್‌ ಆಯ್ಕೆಯನ್ನು ಜನಪ್ರಿಯ ದೃಶ್ಯ ಕಲಾವಿದ ಜೇಮ್ಸ್ ಜೀನ್ ವಿನ್ಯಾಸಗೊಳಿಸಿದ್ದು, ಇದನ್ನು ರೆನೋ 4 ಪ್ರೊ 5 ಜಿ ಆರ್ಟಿಸ್ಟ್ ಲಿಮಿಟೆಡ್ ಆವೃತ್ತಿ ಎಂದು ಕರೆಯಲಾಗುತ್ತದೆ.

ಒಪ್ಪೊ ರೆನೋ 4

ಹೌದು, ಒಪ್ಪೊ ರೆನೋ 4 5G ಸ್ಮಾರ್ಟ್‌ಫೋನ್‌ ನ ಆರ್ಟಿಸ್ಟ್‌ ಲಿಮಿಟೆಡ್‌ ಆವೃತ್ತಿಯನ್ನ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೊನ್‌ ಈಗಾಗಲೇ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಿದೆ. ಆದರೆ ಇದೇ ಆವೃತ್ತಿಯ ಸ್ಮಾರ್ಟ್‌ಫೋನ್‌ಗಳನ್ನ ಆರ್ಟಿಸ್ಟ್‌ ಲಿಮಿಟೆಡ್‌ ವಿನ್ಯಾಸದಲ್ಲಿ ಹೊರತರಲಾಗಿದೆ. ಇದು ಹೊಸತನದ ಆಕರ್ಷಣೆಯನ್ನ ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಮುಂಭಾಗವೆಲ್ಲವೂ ಡಿಸ್‌ಪ್ಲೇ ಇರುವುದರಿಂದ, ದೃಶ್ಯ ಬದಲಾವಣೆಯು ಹಿಂಭಾಗದಲ್ಲಿ ಕಂಡುಬರುತ್ತದೆ. ಅಷ್ಟಕ್ಕೂ ಈ ವಿನ್ಯಾಸದ ವಿಶೇಷತೆಯೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಯೋಣ ಬನ್ನಿರಿ.

ಒಪ್ಪೋ

ಒಪ್ಪೋ ರೆನೋ 4 5G ಸ್ಮಾರ್ಟ್‌ಫೋನ್‌ ನ ಆರ್ಟಿಸ್ಟ್‌ ಲಿಮಿಟೆಡ್‌ ಆವೃತ್ತಿ ಸ್ಮಾರ್ಟ್‌ಫೋನ್‌ ಸಾಕಷ್ಟು ಆಕರ್ಷಣೀಯವಾಗಿದೆ. ಇದರ ಹಿಂಬಾಗದಲ್ಲಿ ಕಲರ್‌ ಕಲರ್‌ ಚಿತ್ತಾರದ ವರ್ಣಗಳನ್ನ ವಿನ್ಯಾಸಗೊಳಿಸಲಾಗಿದೆ. ಈ ಯೋಜನೆಯನ್ನು ಸೋಲೆಲುನಾ ಎಂದು ಕರೆಯಲಾಗುತ್ತದೆ. ಅದರಲ್ಲೂ ಆರ್ಟಿಸ್ಟ್‌ ಕಲಾವಿದ ಜೀನ್ ಸ್ವತಃ ಟ್ವಿಟರ್‌ನಲ್ಲಿ ಉಲ್ಲೇಖಿಸಿರುವಂತೆ ಕನಸುಗಳ ಬೇಸಿಗೆ ಉತ್ಸವ, ಸಾಹಸ ಮತ್ತು ಅನ್ವೇಷಣೆಯ ಪ್ರಿಸ್ಮಾಟಿಕ್ ಕ್ಷೇತ್ರಕ್ಕೆ ಪಾರಾಗುವುದು ಎಂದು ಚಿತ್ರಿಸಲಾಗಿದೆ. ಕೆಲವು ಜೀವಿಗಳ ಜೊತೆಗೆ ಹಿಂಭಾಗದಲ್ಲಿ ಸೊಲೆಲುನಾದ ರೇಖಾಚಿತ್ರವನ್ನು ನೀವು ನೋಡಬಹುದು.

ಸ್ಮಾರ್ಟ್‌ಫೋನ್‌

ಅಂದರೆ ಸ್ಮಾರ್ಟ್‌ಫೋನ್‌ನ ಹಿಂಬಂದಿಯಲ್ಲಿ ಚಿತ್ರಗಳ ವಿನ್ಯಾಸ, ರೇಖಾ ಚಿತ್ರಗಳ ವರ್ಣನೆ, ರಂಗುರಂಗಿನ ಚಿತ್ರಾವಳಿಗಳನ್ನ ಚಿತ್ರಿಕರೀಸುವುದೇ ಆರ್ಟಿಸ್ಟ್‌ ಲಿಮಿಟೆಡ್‌ ಆವೃತ್ತಿಯಾಗಿದೆ. ಇದು ಹೊಸ ತಲೆಮಾರಿನ ಅದರಲ್ಲೂ ಇಂದಿನ ಯುವಜನತೆಯ ನೆಚ್ಚಿನ ಆಯ್ಕೆಗಳಲ್ಲಿ ಒಂದೆನಿಸಲಿದೆ. ಹಿಂದಿನ ಯುವಜನತೆಯ ಆಶಯಗಲಿಗೆ ತಕ್ಕಂತೆ ಈ ಸ್ಮಾರ್ಟ್‌ಫೋನ್‌ ಗಳ ಹಿಂಬಾಗದಲ್ಲಿ ವೈವಿಧ್ಯ ಮಾದರಿಯ ಚಿತ್ರಗಳನ್ನ ವರ್ಣಿಸಲಾಗಿರುತ್ತೆ. ಇನ್ನು ಈ ಸ್ಮಾರ್ಟ್‌ಫೋನ್‌ ಫೀಚರ್ಸ್‌ ಗಮನಿಸುವುದಾದರೆ ಇದು 90Hz ರಿಫ್ರೆಶ್ ರೇಟ್‌ ಹೊಂದಿರುವ, 6.5 ಇಂಚಿನ ಸೂಪರ್ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ.

ಸ್ಮಾರ್ಟ್‌ಫೋನ್‌

ಇನ್ನು ಈ ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 720G ಪ್ರೊಸೆಸರ್ ಹೊಂದಿದೆ. ಅಲ್ಲದೆ 8GB RAM ಮತ್ತು 128GB ಇಂಟರ್‌ ಸ್ಟೋರೇಜ್ ಅನ್ನು ಹೊಂದಿದೆ. ಅಲ್ಲದೆ ರೆನೋ 4 ಪ್ರೊ ಕ್ವಾಡ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸಾರ್‌, ಮೂರನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್-ಆಂಗಲ್ ಲೆನ್ಸ್ ಮತ್ತು ನಾಲ್ಕನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸಾರ್‌ ಅನ್ನು ಹೊಂದಿದೆ. ಇದಲ್ಲದೆ 32 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.

ಸ್ಮಾರ್ಟ್‌ಫೋನ್‌

ಅಲ್ಲದೆ ಒಪ್ಪೋ ರೆನೋ 4 ಪ್ರೊ ಸ್ಮಾರ್ಟ್‌ಫೋನ್‌ 4,000mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿದ್ದು, 65W ಸೂಪರ್‌ವಿಒಸಿ 2.0 ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನು ಕಳೆದ ತಿಂಗಳು ಭಾರತದಲ್ಲಿ ಬಿಡುಗಡೆಯಾದ ಈ ಸ್ಮಾರ್ಟ್‌ಫೋನ್ 34,990 ರೂ ಬೆಲೆಯನ್ನ ಹೊಂದಿದ್ದು, ಇದು ‘ಸ್ಟಾರಿ ನೈಟ್' ಮತ್ತು ‘ಸಿಲ್ಕಿ ವೈಟ್' ಎಂಬ ಎರಡು ಬಣ್ಣಗಳಲ್ಲಿ ಲಭ್ಯವಿದೆ.

Best Mobiles in India

English summary
On the software side of things, the Reno4 Pro 5G Artist Limited Edition includes two customised themes but these are only limited to China right now.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X