ಒಪ್ಪೋ ರೆನೋ 8 ಸರಣಿ ಬಿಡುಗಡೆ!..ಕ್ಯಾಮೆರಾ ಸೆನ್ಸಾರ್ ಎಷ್ಟು?
ಒಪ್ಪೋ ಮೊಬೈಲ್ ಸಂಸ್ಥೆಯು ನೂತನವಾಗಿ ರೆನೋ 8 ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಈ ಸರಣಿಯು ಒಪ್ಪೋ ರೆನೋ 8 ಪ್ರೊ+, ರೆನೋ 8 ಪ್ರೊ, ಮತ್ತು ವೆನಿಲ್ಲಾ ರೆನೋ 8 ಅನ್ನು ಪರಿಚಯಿಸಿದೆ. ಒಪ್ಪೋ ರೆನೋ 8 ಸರಣಿಯ ಫೋನ್‌ಗಳು ಈಗ ಸುಧಾರಿತ ವಿನ್ಯಾಸ, ಅಪ್‌ಡೇಟ್ ಚಾರ್ಜಿಂಗ್ ಸೌಲಭ್ಯಗಳೊಂದಿಗೆ ಕಾಣಿಸಿಕೊಂಡಿವೆ. ಒಪ್ಪೋ ರೆನೋ 8 ಪ್ರೊ ಸ್ನ್ಯಾಪ್‌ಡ್ರಾಗನ್ 7 ಜೆನ್ 1 SoC ಹೊಂದಿರುವ ವಿಶ್ವದ ಮೊದಲ ಫೋನ್ ಆಗಿದೆ.

ಈ ಸರಣಿಯು ಒಪ್ಪೋ ರೆನೋ 8 ಪ್ರೊ+, ರೆನೋ 8 ಪ್ರೊ ಮತ್ತು ರೆನೋ 8 ಈ ಮೂರು ಫೋನ್‌ಗಳು AMOLED ಡಿಸ್‌ಪ್ಲೇ ಅನ್ನು ಒಳಗೊಂಡಿದ್ದು, ಹಾಗೆಯೇ 12GB RAM ಮತ್ತು 256GB ಆಂತರಿಕ ಸ್ಟೋರೇಜ್ ಆಯ್ಕೆಗಳನ್ನು ಪಡೆದಿವೆ. ಇನ್ನು ಒಪ್ಪೋ ರೆನೋ 8 ಪ್ರೊ ಫೋನ್ 50 ಮೆಗಾ ಪಿಕ್ಸಲ್ ಸೆನ್ಸಾರ್ ಕ್ಯಾಮೆರಾ ಹೊಂದಿದ್ದು, 32 ಮೆಗಾ ಪಿಕ್ಸಲ್ ಸೆನ್ಸಾರ್ ಸೆಲ್ಫಿ ಕ್ಯಾಮೆರಾ ಒಳಗೊಂಡಿದೆ. ಇನ್ನುಳಿದಂತೆ ಈ ಮೂರು ಫೋನಗಳ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಒಪ್ಪೋ ರೆನೋ 8 ಪ್ರೊ ಪ್ಲಸ್ ಫೀಚರ್ಸ್
ಒಪ್ಪೋ ರೆನೋ 8 ಪ್ರೊ ಪ್ಲಸ್ ಫೋನ್ 2412 × 1080 ಪಿಕ್ಸೆಲ್‌ಗಳೊಂದಿಗೆ 120Hz 6.7 ಇಂಚಿನ ಪೂರ್ಣ HD+ AMOLED ಡಿಸ್ಪ್ಲೇ, 93.4% ಸ್ಕ್ರೀನ್ ಟು ಬಾಡಿ ಅನುಪಾತ, 360Hz ಸ್ಪರ್ಶ ಮಾದರಿ ದರ, 100% DCI-P3, ಮತ್ತು 950nits ಗರಿಷ್ಠ ಹೊಳಪನ್ನು ಹೊಂದಿದೆ. ಪರದೆಯು ಗೊರಿಲ್ಲಾ ಗ್ಲಾಸ್ 5 ನಿಂದ ರಕ್ಷಿಸಲ್ಪಟ್ಟಿದೆ. ಹಾಗೆಯೇ ಇದು ಡೈಮೆನ್ಸಿಟಿ 8100 ಮ್ಯಾಕ್ಸ್ SoC ನಿಂದ ಚಾಲಿತವಾಗಿದೆ. ಅಲ್ಲದೇ ಈ ಫೋನ್ 12GB RAM ಮತ್ತು 256GB UFS3.1 ಸಂಗ್ರಹಣೆಯನ್ನು ನೀಡುತ್ತದೆ. ಹಾಗೆಯೇ ಈ ಫೋನಿನ ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್ ಹೊಂದಿದ್ದು, 32 ಮೆಗಾ ಪಿಕ್ಸಲ್ ಸೆನ್ಸಾರ್ ಸೆಲ್ಫಿ ಕ್ಯಾಮೆರಾ ಒಳಗೊಂಡಿದೆ. ಇದರೊಂದಿಗೆ ಸೂಪರ್ ಫ್ಲ್ಯಾಶ್ ಚಾರ್ಜಿಂಗ್‌ನಿಂದ ಬೆಂಬಲಿತವಾದ 4500mAh ಬ್ಯಾಟರಿ ಸಾಮರ್ಥ್ಯ ಪಡೆದಿದೆ.

ಒಪ್ಪೋ ರೆನೋ 8 ಪ್ರೊ ಫೀಚರ್ಸ್
ಒಪ್ಪೋ ರೆನೋ 8 ಪ್ರೊ ಈ ಫೋನ್ 2400 × 1080 ಪಿಕ್ಸೆಲ್‌ಗಳೊಂದಿಗೆ 120Hz 6.62 ಇಂಚಿನ ಪೂರ್ಣ HD+ AMOLED ಡಿಸ್ಪ್ಲೇ ಮತ್ತು 92% ಸ್ಕ್ರೀನ್ ಟು ಬಾಡಿ ಅನುಪಾತವನ್ನು ಹೊಂದಿದೆ. ಇದು 2.4GHz ವರೆಗಿನ ಗಡಿಯಾರದ ವೇಗದೊಂದಿಗೆ ಸ್ನ್ಯಾಪ್‌ಡ್ರಾಗನ್ 7 ಜೆನ್ 1 SoC ನಿಂದ ಚಾಲಿತವಾಗಿದೆ. ಇದು 12GB RAM ಮತ್ತು 256GB UFS 2.2 ಸಂಗ್ರಹಣೆಯೊಂದಿಗೆ ಬರುತ್ತದೆ. ಹಾಗೆಯೇ ಈ ಫೋನಿನ ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್ ಹೊಂದಿದ್ದು, 32 ಮೆಗಾ ಪಿಕ್ಸಲ್ ಸೆನ್ಸಾರ್ ಸೆಲ್ಫಿ ಕ್ಯಾಮೆರಾ ಒಳಗೊಂಡಿದೆ. ಇದರೊಂದಿಗೆ ಸೂಪರ್ ಫ್ಲ್ಯಾಶ್ ಚಾರ್ಜಿಂಗ್‌ನಿಂದ ಬೆಂಬಲಿತವಾದ 4500mAh ಬ್ಯಾಟರಿ ಸಾಮರ್ಥ್ಯ ಪಡೆದಿದೆ.
ಒಪ್ಪೋ ರೆನೋ 8 ಫೀಚರ್ಸ್
ಒಪ್ಪೋ ರೆನೋ 8 (ವೆನಿಲ್ಲಾ)ಈ ಫೋನ್ 6.43 ಇಂಚಿನ ಪೂರ್ಣ HD+ AMOLED ಡಿಸ್ಪ್ಲೇ ಮತ್ತು 90Hz ಸ್ಕ್ರೀನ್ ರಿಫ್ರೆಶ್ ದರದೊಂದಿಗೆ ಬರುತ್ತದೆ. ಇದು 800 ನಿಟ್‌ಗಳ ಗರಿಷ್ಠ ಬ್ರೈಟ್ನೆಸ್ ಹೊಂದಿದೆ ಮತ್ತು ಪರದೆಯು ಗೊರಿಲ್ಲಾ ಗ್ಲಾಸ್ 5 ನಿಂದ ರಕ್ಷಿಸಲ್ಪಟ್ಟಿದೆ. ಇದು 12GB RAM ಮತ್ತು 256GB UFS 2.2 ಸಂಗ್ರಹಣೆಯೊಂದಿಗೆ ಬರುತ್ತದೆ. ಅಲ್ಲದೇ ಮೀಡಿಯಾ ಟೆಕ್‌ನಿಂದ ಡೈಮೆನ್ಸಿಟಿ 1300 SoC ನಿಂದ ಫೋನ್ ಚಾಲಿತವಾಗಿದೆ. ಹಾಗೆಯೇ ಈ ಫೋನಿನ ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್ ಹೊಂದಿದ್ದು, 32 ಮೆಗಾ ಪಿಕ್ಸಲ್ ಸೆನ್ಸಾರ್ ಸೆಲ್ಫಿ ಕ್ಯಾಮೆರಾ ಒಳಗೊಂಡಿದೆ. ಇದರೊಂದಿಗೆ ಸೂಪರ್ ಫ್ಲ್ಯಾಶ್ ಚಾರ್ಜಿಂಗ್‌ನಿಂದ ಬೆಂಬಲಿತವಾದ 4500mAh ಬ್ಯಾಟರಿ ಸಾಮರ್ಥ್ಯ ಪಡೆದಿದೆ. ಜೊತೆಗೆ ಈ ಫೋನ್ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್, ವೈ-ಫೈ 6, ಬ್ಲೂಟೂತ್ 5.2, ಎನ್‌ಎಫ್‌ಸಿ, ಟೈಪ್-ಸಿ ಪೋರ್ಟ್ ಸೌಲಭ್ಯ ಪಡೆದಿದೆ.
ಬೆಲೆ ಮತ್ತು ಲಭ್ಯತೆ
ಒಪ್ಪೋ ರೆನೋ 8 ಪ್ರೊ ಪ್ಲಸ್ CNY 3699 (ಭಾರತದಲ್ಲಿ ಅಂದಾಜು 43,100ರೂ), ಒಪ್ಪೋ ರೆನೋ 8 ಪ್ರೊ CNY 2999 (ಭಾರತದಲ್ಲಿ ಅಂದಾಜು 35,000ರೂ) ಮತ್ತು ಒಪ್ಪೋ ರೆನೋ 8 CNY 2499 (ಭಾರತದಲ್ಲಿ ಅಂದಾಜು 29,100ರೂ) ಆಗಿದೆ. ಈ ಫೋನ್‌ಗಳು ಮುಂಬರುವ ತಿಂಗಳುಗಳಲ್ಲಿ ಭಾರತದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.


Click it and Unblock the Notifications








