ಬಿಡುಗಡೆಗೂ ಮುನ್ನವೇ ಸದ್ದು ಮಾಡ್ತಿದೆ ಒಪ್ಪೋ ರೆನೋ 8T! ಬೆಲೆ ಎಷ್ಟಿರಬಹುದು?
ಭಾರತದಲ್ಲಿ ಒಪ್ಪೋ ಸ್ಮಾರ್ಟ್‌ಫೋನ್‌ಗಳಿಗೆ ಭಾರಿ ಬೇಡಿಕೆಯಿದೆ. ಅದಕ್ಕೆ ಅನುಗುಣವಾಗಿ ಒಪ್ಪೋ ಸ್ಮಾರ್ಟ್‌ಫೋನ್‌ಗಳು ಕೂಡ ಮಾರುಕಟ್ಟೆಯಲ್ಲಿ ಸಿಕ್ಕಾಪಟ್ಟೆ ಸಂಚಲನ ಸೃಷ್ಟಿಸಿವೆ. ಇದೀಗ ಒಪ್ಪೋ ಕಂಪೆನಿಯ ಮುಂದಿನ ಸ್ಮಾರ್ಟ್‌ಫೋನ್ ಒಪ್ಪೋ ರೆನೋ 8T ಬಿಡುಗಡೆಗೂ ಮುನ್ನವೇ ಭಾರಿ ಟ್ರೆಂಡ್ ಹುಟ್ಟುಹಾಕಿದೆ. ಈ ಸ್ಮಾರ್ಟ್‌ಫೋನ್ 4G ಮತ್ತು 5G ರೂಪಾಂತರದ ಆಯ್ಕೆಯಲ್ಲಿ ಬರಲಿದ್ದು, ಇದರ ಡಿಸೈನ್ ಹಾಗೂ ಪ್ರೊಸೆಸರ್ ವೇಗದ ಕಾರಣಕ್ಕೆ ಭಾರಿ ನಿರೀಕ್ಷೆ ಹುಟ್ಟುಹಾಕಿದೆ.

ಹೌದು, ಒಪ್ಪೋ ರೆನೋ 8T ಸ್ಮಾರ್ಟ್‌ಫೋನ್ ಬಿಡುಗಡೆಗೆ ತಯಾರಿ ನಡೆದಿದೆ. ಇದರ ನಡುವೆ ಈ ಫೋನ್‌ಗೆ ಸಂಬಂಧಪಟ್ಟ ಹಲವು ಸೋರಿಕೆಗಳು ಟೆಕ್‌ವಲಯದಲ್ಲಿ ಹಲ್‌ಚಲ್ ಎಬ್ಬಿಸಿವೆ. ಇದರ ಡಿಸೈನ್‌ಗೆ ಸಂಬಂದಪಟ್ಟ ಇಮೇಜ್‌ಗಳು ಹಲವು ಭಾರಿ ಬಹಿರಂಗವಾಗಿದ್ದು, ಇದೀಗ ಭಾರತದಲ್ಲಿ ಇದರ ಬೆಲೆ ಎಷ್ಟಿರಲಿದೆ ಎನ್ನುವ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಅಲ್ಲದೆ ಆನ್‌ಲೈನ್‌ನಲ್ಲಿ ಇದರ ಬೆಲೆ ವಿವರಗಳು ಸೋರಿಕೆಯಾಗಿದ್ದು ಫೋನ್ ಮಾರುಕಟ್ಟೆಯಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಹಾಗಾದ್ರೆ ಒಪ್ಪೋ ರೆನೋ 8T ಫೋನ್ ಬೆಲೆ ಎಷ್ಟಿರಬಹುದು? ಫೀಚರ್ಸ್ ನಿರೀಕ್ಷೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫೀಚರ್ಸ್ ನಿರೀಕ್ಷೆ ಏನು?
ಒಪ್ಪೋ ರೆನೋ 8T ಸ್ಮಾರ್ಟ್‌ಫೋನ್ 6.67 ಇಂಚಿನ OLED ಡಿಸ್‌ಪ್ಲೇ ಹೊಂದಿರುವ ಸಾಧ್ಯತೆಯಿದೆ. ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್ ಮತ್ತು 10-ಬಿಟ್ ಕಲರ್ ಡೆಪ್ತ್ ಅನ್ನು ಹೊಂದಿರಬಹುದು ಎಂದು ವರದಿಯಾಗಿದೆ. ಇನ್ನು ಡಿಸ್‌ಪ್ಲೇ 89.6% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಪಡೆದಿರಬಹುದು. ಜೊತೆಗೆ ಈ ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದೆ.

ಪ್ರೊಸೆಸರ್ ವೇಗ ಎಷ್ಟಿದೆ?
ಒಪ್ಪೋ ರೆನೋ 8T ಸ್ಮಾರ್ಟ್‌ಫೋನ್ ಮೀಡಿಯಾಟೆಕ್ ಹಿಲಿಯೋ G99 SoC ಪ್ರೊಸೆಸರ್ ವೇಗವನ್ನು ಹೊಂದಿರಬಹುದು. ಇದು ಆಂಡ್ರಾಯ್ಡ್ 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 128GB , 8GB RAM ಮತ್ತು 256GB ಹಾಗೂ 12GB RAM ಮತ್ತು 256GB ಇಂಟರ್ ಸ್ಟೋರೇಜ್ ಆಯ್ಕೆಯಲ್ಲಿ ಬರಲಿದೆ ಎಂದು ಹೇಳಲಾಗಿದೆ.

ಕ್ಯಾಮೆರಾ ಸೆಟ್‌ಅಪ್ ನಿರೀಕ್ಷೆ?
ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಹೊಂದಿರಬಹುದು. ಇದರಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿರಲಿದೆ ಎಂಬ ನಿರೀಕ್ಷೆಯಿದೆ. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಹಾಗೂ ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಹೊಂದಿರುವ ನಿರೀಕ್ಷೆಯಿದೆ. ಇದರ ಸೆಲ್ಫಿ ಕ್ಯಾಮೆರಾದ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.

ಬ್ಯಾಟರಿ ಮತ್ತು ಇತರೆ
ಒಪ್ಪೋ ರೆನೋ 8T ಸ್ಮಾರ್ಟ್‌ಫೋನ್ 4800mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 67W ವೇಗದ ಚಾರ್ಜಿಂಗ್ ಬೆಂಬಲಿಸಲಿದೆ ಎಂದು ಹೇಳಲಾಗಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್, ಬ್ಲೂಟೂತ್, ವೈಫೈ, ಯುಎಸ್‌ಬಿ ಸಿ ಪೋರ್ಟ್, ಹೆಡ್‌ಫೋನ್ ಜ್ಯಾಕ್ ಅನ್ನು ನಿರೀಕ್ಷಿಸಬಹುದು.

ಬೆಲೆ ನಿರೀಕ್ಷೆ ಏನು?
ಒಪ್ಪೋ ರೆನೋ 8T ಸರಣಿಯ ಸ್ಮಾರ್ಟ್‌ಫೋನ್ ಆರಂಭಿಕ ಬೆಲೆ 27,000 ರಿಂದ 29,000ರೂ. ಆಗಿರಬಹುದು ಎಂದು ಅಂದಾಜಿಸಲಾಗಿದೆ. ಇದು ಮಿಡ್ನೈಟ್ ಬ್ಲಾಕ್ ಮತ್ತು ಸನ್ಸೆಟ್ ಆರೆಂಜ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗಲಿದೆ ಎನ್ನಲಾಗಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್‌ನ 5G ಮಾದರಿಯು ಮಿಡ್ನೈಟ್ ಬ್ಲ್ಯಾಕ್ ಕಲರ್ ಆಯ್ಕೆಗಳ ಜೊತೆಗೆ ಒಪ್ಪೋ ಗ್ಲೋ ವಿನ್ಯಾಸವನ್ನು ಹೊಂದಿದೆ ಎಂದು ಹೇಳಲಾಗಿದೆ. ಇದರ ಬಿಡುಗಡೆ ದಿನಾಂಕ ಇನ್ನು ಕೂಡ ಅಧೀಕೃತವಾಗಿಲ್ಲ.


Click it and Unblock the Notifications








