Home
ಸುದ್ದಿಜಾಲ

OPPO: ಭಾರತಕ್ಕೆ ಎಂಟ್ರಿ ಕೊಟ್ಟ ಒಪ್ಪೋ ರೆನೋ 11 ಸರಣಿ! ಫೀಚರ್ಸ್‌ ಹೇಗಿದೆ? ಬೆಲೆ ಎಷ್ಟು?

ಭಾರತದಲ್ಲಿ ಭಾರಿ ನಿರೀಕ್ಷೆ ಹುಟ್ಟುಹಾಕಿದ್ದ ಒಪ್ಪೋ ರೆನೋ 11 ಸರಣಿ ಸ್ಮಾರ್ಟ್‌ಫೋನ್‌ಗಳು ಬಿಡುಗಡೆ ಅಗಿವೆ. ಈ ಸರಣಿಯಲ್ಲಿ ಒಪ್ಪೋ ರೆನೋ 11 ಮತ್ತು ರೆನೋ 11 ಪ್ರೊ ಸ್ಮಾರ್ಟ್‌ಪೋನ್‌ಗಳನ್ನು ಪರಿಚಯಿಸಿಲಾಗಿದೆ. ಈ ಎರಡೂ ಸ್ಮಾರ್ಟ್‌ಫೋನ್‌ ಗಳು ಕೂಡ 6.7 ಇಂಚಿನ FHD+ 120Hz OLED ಡಿಸ್‌ಪ್ಲೇಯನ್ನು ಹೊಂದಿವೆ.

ಹೌದು, ಒಪ್ಪೋ ರೆನೋ 11 ಮತ್ತು ರೆನೋ 11 ಪ್ರೊ ಸ್ಮಾರ್ಟ್‌ಫೋನ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಈ ಸರಣಿಯ ಸ್ಮಾರ್ಟ್‌ಫೋನ್‌ ಗಳು 10-ಬಿಟ್ ಬಣ್ಣಗಳನ್ನು ಬೆಂಬಲಿಸುವ ಡಿಸ್‌ಪ್ಲೇ ಪಡೆದುಕೊಂಡಿವೆ. ಅಲ್ಲದೆ ಭಾರತದಲ್ಲಿ ಮೊದಲ ಬಾರಿಗೆ Android 14-ಆಧಾರಿತ ColorOS 14 ನಲ್ಲಿ ರನ್‌ ಆಗಲಿವೆ. ಹಾಗಾದ್ರೆ ಒಪ್ಪೋ ರೆನೋ 11 ಮತ್ತು ರೆನೋ 11 ಪ್ರೊ ಸ್ಮಾರ್ಟ್‌ಫೋನ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಭಾರತಕ್ಕೆ ಎಂಟ್ರಿ ಕೊಟ್ಟ ಒಪ್ಪೋ ರೆನೋ 11 ಸರಣಿ! ಫೀಚರ್ಸ್‌ ಹೇಗಿದೆ? ಬೆಲೆ ಎಷ್ಟು?

ಒಪ್ಪೋ ರೆನೋ 11 ಫೀಚರ್ಸ್‌ ಹೇಗಿದೆ?
OPPO Reno11 ಸ್ಮಾರ್ಟ್‌ಫೋನ್‌ 6.7 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್, 240Hz ಟಚ್ ಸ್ಯಾಂಪ್ಲಿಂಗ್ ರೇಟ್‌, 950 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಬೆಂಬಲಿಸಲಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 7050 6nm ಪ್ರೊಸೆಸರ್ ವೇಗದೊಂದಿಗೆ ಬರಲಿದೆ. ಇದಕ್ಕೆ ಪೂರಕವಾಗಿ ಮಾಲಿ-G68 MC4 GPU ಸಪೋರ್ಟ್‌ ಪಡೆದಿದೆ. ಇದು ಆಂಡ್ರಾಯ್ಡ್‌ 14-ಆಧಾರಿತ ColorOS 14 ನಲ್ಲಿ ಕಾರ್ಯನಿರ್ವಹಿಸಲಿದೆ. ಫೋನ್‌ 8GB RAM ಮತ್ತು 128GB / 256GB ಸ್ಟೋರೇಜ್‌ ಆಯ್ಕೆಯಲ್ಲಿ ಬರಲಿದೆ.

ಕ್ಯಾಮೆರಾ ಮತ್ತು ಬ್ಯಾಟರಿ ಸಾಮರ್ಥ್ಯ
ಒಪ್ಪೋ ರೆನೋ 11 ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ರಚನೆಯನ್ನು ಪಡೆದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50MP ಸೋನಿ LYT600 ಸೆನ್ಸಾರ್‌, ಎರಡನೇ ಕ್ಯಾಮೆರಾ 8MP IMX355 ಅಲ್ಟ್ರಾ-ವೈಡ್ ಲೆನ್ಸ್‌ ಮತ್ತು ಮೂರನೇ ಕ್ಯಾಮೆರಾ 32MP ಟೆಲಿಫೋಟೋ ಲೆನ್ಸ್‌ ಅನ್ನು ಪಡೆದಿದೆ. ಇದಲ್ಲದೆ 32MP RGBW ಸೆಲ್ಪಿ ಕ್ಯಾಮೆರಾವನ್ನು ಒಳಗೊಂಡಿದೆ. ಜೊತೆಗೆ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 67W SuperVOOC ಫಾಸ್ಟ್ ಚಾರ್ಜಿಂಗ್ ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G SA/NSA, Wi-Fi 802.11 ac (2.4GHz + 5GHz), ಬ್ಲೂಟೂತ್ 5.2, USB ಟೈಪ್-C, NFC ಬೆಂಬಲ ಪಡೆದಿದೆ.

ಭಾರತಕ್ಕೆ ಎಂಟ್ರಿ ಕೊಟ್ಟ ಒಪ್ಪೋ ರೆನೋ 11 ಸರಣಿ! ಫೀಚರ್ಸ್‌ ಹೇಗಿದೆ? ಬೆಲೆ ಎಷ್ಟು?

ಒಪ್ಪೋ ರೆನೋ 11 ಪ್ರೊ ಫೀಚರ್ಸ್‌ ಹೇಗಿದೆ?
ಒಪ್ಪೋ ರೆನೋ 11 ಪ್ರೊ ಸ್ಮಾರ್ಟ್‌ಫೋನ್‌ 6.7 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇದು 120Hz ರಿಫ್ರೆಶ್ ರೇಟ್, 240Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಬೆಂಬಲ ಪಡೆದಿದೆ. ಇನ್ನು ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 8200 4nm ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ Mali-G610 MC6 GPU ಸಪೊರ್ಟ್‌ ಪಡೆದಿದೆ. ಇದು ಆಂಡ್ರಾಯ್ಡ್‌ 14-ಆಧಾರಿತ ColorOS 14 ಬೆಂಬಲದೊಂದಿಗೆ ರನ್‌ ಆಗಲಿದೆ. ಹಾಗೆಯೇ 12GB RAM ಮತ್ತು 256GB ಇಂಟರ್‌ ಸ್ಟೋರೇಜ್ ಆಯ್ಕೆಯಲ್ಲಿದೆ.

ಒಪ್ಪೋ ರೆನೋ 11 ಪ್ರೊ ಕ್ಯಾಮೆರಾ ಮತ್ತು ಬ್ಯಾಟರಿ ಸಾಮರ್ಥ್ಯ ಏನು?
ಒಪ್ಪೋ ರೆನೋ 11 ಪ್ರೊ ಸ್ಮಾರ್ಟ್‌ಫೋನ್‌ ಹಿಂಭಾಗದಲ್ಲಿ ತ್ರಿವಳಿ ಕ್ಯಾಮೆರಾ ರಚನೆಯನ್ನು ಪಡೆದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50MP ಸೋನಿ IMX890 ಸೆನ್ಸಾರ್‌, ಎರಡನೆ ಕ್ಯಾಮೆರಾ 8MP 112º ಅಲ್ಟ್ರಾ-ವೈಡ್ ಲೆನ್ಸ್‌ ಮತ್ತು ಮೂರನೇ ಕ್ಯಾಮೆರಾ 32MP ಟೆಲಿಫೋಟೋ ಲೆನ್ಸ್‌ ಅನ್ನು ಪಡೆದಿದೆ. ಇದಲ್ಲದೆ 32MP RGBW ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಜೊತೆಗೆ ಸ್ಮಾರ್ಟ್‌ಫೋನ್‌ 4700mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 80W SuperVOOC ಫಾಸ್ಟ್ ಚಾರ್ಜಿಂಗ್ ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G SA/NSA, Wi-Fi 802.11 ac (2.4GHz + 5GHz), ಬ್ಲೂಟೂತ್ 5.2, USB ಟೈಪ್-C, NFC ಬೆಂಬಲ ಪಡೆದಿದೆ.

ವಿಶೇಷ ಪೀಚರ್ಸ್‌ ಏನಿದೆ?
ಒಪ್ಪೋ ರೆನೋ 11 ಸರಣಿಯಲ್ಲಿ ISO, ಶಟರ್ ವೇಗ, ಮಾನ್ಯತೆ ಮೌಲ್ಯ, ಫೋಕಸ್ ಮತ್ತು ವೈಟ್ ಬ್ಯಾಲೆನ್ಸ್ ಅನ್ನು ಸರಿಹೊಂದಿಸಲು ನಿಮಗೆ ಅನುಮತಿಸುವ ಸಂಪೂರ್ಣ-ಕ್ರಿಯಾತ್ಮಕ ಪ್ರೊ ಮೋಡ್ ಅನ್ನು ನೀಡಲಾಗಿದೆ. ಇದಲ್ಲದೆ 3×3 ಗ್ರಿಡ್, ಕರ್ಣೀಯ ಮತ್ತು ಗೋಲ್ಡನ್ ಸ್ಪೈರಲ್ ಗೈಡ್‌ಗಳು-ಕ್ಯಾಮೆರಾ ಸೆಟ್ಟಿಂಗ್‌ಗಳಿಂದ ಸಕ್ರಿಯಗೊಳಿಸಲಾಗಿದೆ. ಜೊತೆಗೆ ಎರಡೂ ಡಿವೈಸ್‌ಗಳು ಸಹ OPPOದ ಬ್ಯಾಟರಿ ಹೆಲ್ತ್ ಎಂಜಿನ್ (BHE) ತಂತ್ರಜ್ಞಾನವನ್ನು ಒಳಗೊಂಡಿವೆ, ಇದು ಬ್ಯಾಟರಿ ಬಾಳಿಕೆ ಮತ್ತು ಸಮರ್ಥನೀಯತೆಯನ್ನು ಸುಧಾರಿಸುತ್ತದೆ.

ಭಾರತಕ್ಕೆ ಎಂಟ್ರಿ ಕೊಟ್ಟ ಒಪ್ಪೋ ರೆನೋ 11 ಸರಣಿ! ಫೀಚರ್ಸ್‌ ಹೇಗಿದೆ? ಬೆಲೆ ಎಷ್ಟು?

ಬೆಲೆ ಮತ್ತು ಲಭ್ಯತೆ

OPPO Reno11 ಸ್ಮಾರ್ಟ್‌ಫೋನ್‌ 8GB + 128GB ಮಾದರಿಗೆ 29,999ರೂ ಬೆಲೆಯನ್ನು ಹೊಂದಿದೆ. ಇದರ 8GB + 256GB ಮಾದರಿಯ ಬೆಲೆ 31,999ರೂ ಆಗಿದೆ. ಈ ಫೋನ್‌ ವೇವ್ ಗ್ರೀನ್ ಮತ್ತು ರಾಕ್ ಗ್ರೇ ಬಣ್ಣಗಳಲ್ಲಿ ಬರುತ್ತದೆ.
OPPO Reno11 Pro ಸ್ಮಾರ್ಟ್‌ಫೋನ್‌ 12GB + 256GB ಮಾದರಿಗೆ 39,999ರೂ ಬೆಲೆಯನ್ನು ಹೊಂದಿದೆ. ಇದನ್ನು ಪರ್ಲ್ ವೈಟ್ ಮತ್ತು ರಾಕ್ ಗ್ರೇ ಬಣ್ಣಗಳಲ್ಲಿ ಖರೀದಿಸಬಹುದಾಗಿದೆ. ಈ ಸ್ಮಾರ್ಟ್‌ಫೋನ್‌ಗಳು ಫ್ಲಿಪ್‌ಕಾರ್ಟ್, OPPO ಇಂಡಿಯಾ ಆನ್‌ಲೈನ್ ಸ್ಟೋರ್ ಮತ್ತು ಆಫ್‌ಲೈನ್ ಸ್ಟೋರ್‌ಗಳಲ್ಲಿ ಜನವರಿ 12 ರಿಂದ ಮುಂಗಡ-ಕೋರಿಕೆಗೆ ಲಭ್ಯವಿವೆ.

Best Mobiles in India

English summary
OPPO Reno11 Smartphone Series launched in India: Starting Price at Rs. 29,999
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+