Home
ಸುದ್ದಿಜಾಲ

OPPO Reno 13: ನಾಳೆ ಧೂಳೆಬ್ಬಿಸಲಿವೆ ಎರಡು ಹೊಸ ಫೋನ್.. ಏನುಂಟು, ಏನಿಲ್ಲ? ನೀವೇ ನೋಡಿ

ಒಪ್ಪೋ ಎರಡು ಸೊಗಸಾದ ಫೋನ್‌ಗಳನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ. ಈಗಾಗಲೇ ಕಂಪನಿಯು, ಭಾರತದ ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ಹೌದು, ನಾಳೆ (ಜನವರಿ 9) ಬಹುನಿರೀಕ್ಷಿತ ರೆನೋ 13 (OPPO Reno13 Series 5G) ಸರಣಿ ಭಾರತದಲ್ಲಿ ರಿಲೀಸ್ ಆಗಲಿದೆ. ಈ ಮೂಲಕ ಒಪ್ಪೋ ರೆನೋ 13 (OPPO Reno 13) ಮತ್ತು ಒಪ್ಪೋ ರೆನೋ 13 ಪ್ರೊ (OPPO Reno 13 Pro) ಫೋನ್‌ಗಳು ಮಾರುಕಟ್ಟೆಗೆ ಎಂಟ್ರಿ ಕೊಡಲಿವೆ. ಬನ್ನಿ, ಈ ಫೋನ್‌ಗಳ ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ.

ಮೊಬೈಲ್ ಪ್ರಿಯರು ಒಪ್ಪೋ ರೆನೋ 13 ಸರಣಿಯ ಫೋನ್‌ಗಳಿಗಾಗಿ ಕಾಯುತ್ತಿದ್ದಾರೆ. ಕಂಪನಿಯು ಈಗಾಗಲೇ, ತನ್ನ ವೆಬ್‌ಸೈಟ್‌ನಲ್ಲಿ ಈ ಸರಣಿಯ ಮೈಕ್ರೋ ಸೈಟ್ ಲೈವ್ ಮಾಡಿದೆ. ಈ ಮೂಲಕ ಫೋನ್‌ಗಳ ಫೋಟೋ ಮತ್ತು ಡಿಸೈನ್ ಬಹಿರಂಗಪಡಿಸಿದೆ. ಇದನ್ನು OPPO AI ಫೋನ್ ಎಂದು ಕರೆದಿದೆ. ಈ ಫೋನ್ ಮೂರು 50 ಮೆಗಾಪಿಕ್ಸೆಲ್ ಕ್ಯಾಮೆರಾಗಳನ್ನು ಹೊಂದಿದೆ. ಇದು ಮೀಡಿಯಾ ಟೆಕ್‌ನ ಡೈಮೆನ್ಸಿಟಿ 8350 ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಈ ಒಪ್ಪೋ ರೆನೋ 13 ಸರಣಿಯ ಬೆಲೆಯನ್ನು ತಿಳಿಯಲು ಮುಂದೆ ಓದಿ.

OPPO Reno 13: ನಾಳೆ ಧೂಳೆಬ್ಬಿಸಲಿವೆ ಎರಡು ಹೊಸ ಫೋನ್.. ಏನುಂಟು, ಏನಿಲ್ಲ?

ಒಪ್ಪೋ ರೆನೋ 13 ಪ್ರೊ ಫೀಚರ್ಸ್‌

ಡಿಸ್ಪ್ಲೇ ವಿವರ

ಒಪ್ಪೋ ರೆನೋ 13 ಪ್ರೊ ಫೋನ್ 6.83 ಇಂಚಿನ 1.5K ಓಎಲ್‌ಇಡಿ ಡಿಸ್ಪ್ಲೇ ಹೊಂದಿದೆ. ಇದು 120Hz ರಿಫ್ರೆಶ್ ದರ, 1200 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಪಡೆದಿದೆ. ಈ ಡಿಸ್ಪ್ಲೇಯು ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಹೊಂದಿದೆ.

ಪ್ರೊಸೆಸರ್ ಸಾಮರ್ಥ್ಯ

ಒಪ್ಪೋ ರೆನೋ 13 ಪ್ರೊ ಮೊಬೈಲ್ ಮೀಡಿಯಾ ಟೆಕ್‌ನ ಡೈಮೆನ್ಸಿಟಿ 8350 ಆಕ್ಟಾಕೋರ್ ಪ್ರೊಸೆಸರ್ ಹೊಂದಿದೆ. ಇದು ಆಂಡ್ರಾಯ್ಡ್‌ 15 ಆಧಾರಿತ ColorOS 15.0 ಜೊತೆಗೆ ಕೆಲಸ ಮಾಡುತ್ತದೆ.

ಕ್ಯಾಮೆರಾ ಸೆಟಪ್

ಒಪ್ಪೋ ರೆನೋ 13 ಪ್ರೊ ಸ್ಮಾರ್ಟ್‌ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಇದೆ. ಜೊತೆಗೆ 8 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್ ಕ್ಯಾಮೆರಾ ತೃತೀಯ ಕ್ಯಾಮೆರಾ ಹೊಂದಿದೆ. ಈ ಫೋನ್ 50 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಸಹ ಹೊಂದಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಒಪ್ಪೋ ರೆನೋ 13 ಪ್ರೊ ಫೋನ್ 5,800mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 80W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.

OPPO Reno 13: ನಾಳೆ ಧೂಳೆಬ್ಬಿಸಲಿವೆ ಎರಡು ಹೊಸ ಫೋನ್.. ಏನುಂಟು, ಏನಿಲ್ಲ?

ಒಪ್ಪೋ ರೆನೋ 13 ಫೀಚರ್ಸ್‌

ಡಿಸ್ಪ್ಲೇ ವಿವರ

ಒಪ್ಪೋ ರೆನೋ 13 ಸ್ಮಾರ್ಟ್‌ಫೋನ್ 6.59 ಇಂಚಿನ 1.5K ಡಿಸ್ಪ್ಲೇ ಹೊಂದಿದೆ. ಇದು ಪಂಚ್ ಹೋಲ್ ಶೈಲಿಯ ಅಮೋಲೆಡ್‌ ಡಿಸ್ಪ್ಲೇ ಆಗಿದೆ. ಈ ಡಿಸ್ಪ್ಲೇಯು 2,760 x 1,256 ಪಿಕ್ಸೆಲ್ ರೆಸಲ್ಯೂಶನ್ ಬೆಂಬಲ ಹೊಂದಿದೆ. ಜೊತೆಗೆ 120Hz ರಿಫ್ರೆಶ್ ದರ, 240Hz ಟಚ್ ಸ್ಯಾಂಪ್ಲಿಂಗ್ ದರ ಮತ್ತು 1,200 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಹೊಂದಿದೆ.

ಪ್ರೊಸೆಸರ್ ಸಾಮರ್ಥ್ಯ

ಒಪ್ಪೋ ರೆನೋ 13 ಮೊಬೈಲ್ ಮೀಡಿಯಾಟೆಕ್‌ನ ಡೈಮೆನ್ಸಿಟಿ 8350 ಆಕ್ಟಾಕೋರ್ ಪ್ರೊಸೆಸರ್ ಹೊಂದಿದೆ. ಇದು ಆಂಡ್ರಾಯ್ಡ್‌ 15 ಆಧಾರಿತ ColorOS 15.0 ಜೊತೆಗೆ ಕೆಲಸ ನಿರ್ವಹಿಸುತ್ತದೆ.

ಕ್ಯಾಮೆರಾ ಸೆಟಪ್

ಒಪ್ಪೋ ರೆನೋ 13 ಫೋನ್ 50 ಮೆಗಾಪಿಕ್ಸೆಲ್ ಸೋನಿ ಮುಖ್ಯ ಕ್ಯಾಮೆರಾ ಹೊಂದಿದೆ. ಇದು OIS ಮತ್ತು ಎಲ್‌ಇಡಿ ಫ್ಲ್ಯಾಷ್ ಜೊತೆಗೆ ಬರುತ್ತದೆ. ಹಾಗೆಯೇ 8 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಇದೆ. ಈ ಮೊಬೈಲ್ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 50 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಒಪ್ಪೋ ರೆನೋ 13 ಸ್ಮಾರ್ಟ್‌ಫೋನ್ 5,600mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 80W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.

ಒಪ್ಪೋ ರೆನೋ 13 ಸರಣಿಯ ಬೆಲೆ

ಒಪ್ಪೋ ರೆನೋ 13 ಮತ್ತು ಒಪ್ಪೋ ರೆನೋ 13 ಫೋನ್‌ಗಳು ಈಗಾಗಲೇ ಚೀನಾದಲ್ಲಿ ಬಿಡುಗಡೆಯಾಗಿವೆ. ಒಪ್ಪೋ ರೆನೋ 13 ಫೋನನ್ನು 12GB RAM ಮತ್ತು 16GB RAM ನೊಂದಿಗೆ ಒಟ್ಟು 5 ರೂಪಾಂತರಗಳಲ್ಲಿ ಪರಿಚಯಿಸಲಾಗಿದೆ. ಈ ಫೋನಿನ ಆರಂಭಿಕ ಬೆಲೆ 44,190 ರೂ. ಆಗಿದೆ. ಭಾರತದಲ್ಲಿ 29,999 ರೂ. ಬೆಲೆಗೆ ಬಿಡುಗಡೆ ಮಾಡುವ ನಿರೀಕ್ಷೆಯಿದೆ.

ಒಪ್ಪೋ ರೆನೋ 13 ಪ್ರೊ ಫೋನನ್ನು ಚೀನಾದಲ್ಲಿ 12 B RAM ಮತ್ತು 16GB RAM ನೊಂದಿಗೆ ಬಿಡುಗಡೆ ಮಾಡಲಾಗಿದೆ. ಇದು 256GB, 512GB ಮತ್ತು 1 TB ಸ್ಟೋರೇಜ್ ಆಯ್ಕೆ ಒಳಗೊಂಡಿದೆ. ಒಪ್ಪೋ ರೆನೋ 13 ಪ್ರೊ ಬೆಲೆ 52,350 ರೂ. ಆಗಿದೆ. ಭಾರತದಲ್ಲಿ 39,999 ರೂ. ಬೆಲೆಗೆ ಬಿಡುಗಡೆ ಮಾಡುವ ಸಾಧ್ಯತೆಯಿದೆ.

Best Mobiles in India

English summary
OPPO Reno13 Series 5G Launching in India on 9th Jan: Check expected specs, price here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+