ಒಪ್ಪೋ ರೆನೋ7 5G : ಬೆಲೆ ಮತ್ತು ಫೀಚರ್ಸ್‌ಗಳನ್ನು ಸಂಯೋಜಿಸುವ ಸ್ಮಾರ್ಟ್‌ಫೋನ್!
ಪ್ರಸ್ತುತ ದಿನಗಳಲ್ಲಿ ಸ್ಮಾರ್ಟ್‌ಫೋನ್ ಕ್ಯಾಮೆರಾ ವಿನ್ಯಾಸ ಸಾಕಷ್ಟು ಬದಲಾಗಿದೆ. ಸ್ಮಾರ್ಟ್‌ಫೋನ್‌ನ ಲೆನ್ಸ್ ಮೂಲಕ ವಿಶ್ಯಯಲ್ ಸ್ಟೋರಿ ಹೇಳುವ ಶೈಲಿ ಬದಲಾಗಿದೆ. ಮೊಬೈಲ್ ಫೊಟೋಗ್ರಫಿಯಲ್ಲಿ ಹೊಸ ಬದಲಾವಣೆ ತರುವಲ್ಲಿ ಒಪ್ಪೋ ಕಂಪೆನಿ ಮುಂಚೂಣಿಯಲ್ಲಿ ನಿಲ್ಲುತ್ತದೆ. ತನ್ನ ಸ್ಮಾರ್ಟ್‌ಫೋನ್ ಸರಣಿಯಲ್ಲಿ ಹೊಸ ಮಾದರಿಯ ಕ್ಯಾಮೆರಾ ಟೆಕ್ನಾಲಜಿಯನ್ನು ಪರಿಚಯಿಸುತ್ತಲೇ ಬಂದಿದೆ. ಇತ್ತೀಚಿಗೆ ಲಾಂಚ್ ಆದ ಒಪ್ಪೋ ರೆನೋ 7 ಸರಣಿಯ ಕ್ಯಾಮೆರಾ ಟೆಕ್ನಾಲಜಿ ಮತ್ತು ವಿನ್ಯಾಸ ಹಾಗೂ ಕಾರ್ಯಕ್ಷಮತೆಯ ವಿಷಯದಲ್ಲಿ ಸಾಕಷ್ಟು ಅಪ್‌ಗ್ರೇಡ್ ಆಗಿದೆ.

ಹೌದು, ಒಪ್ಪೋ ಕಂಪೆನಿ ಹಿಂದಿನ ರೆನೋ ಮಾದರಿಗಳಂತೆ, ಹೊಸ ಒಪ್ಪೋ ರೆನೋ 7 5G ಫೋನ್‌ನಲ್ಲಿ ಪ್ರೀಮಿಯಂ ವಿನ್ಯಾಸವನ್ನು ಪ್ಯಾಕ್ ಮಾಡಿದೆ. ಡ್ಯುಯಲ್-ಟೋನ್ ರಿಯರ್ ಪ್ಯಾನೆಲ್ ಕ್ಯಾಮೆರಾಗಳ ಬೋಲ್ಡ್ ಪ್ಲೇಸ್‌ನಿಂದ ಸುಲಭವಾಗಿ ನಿಮ್ಮ ಕಣ್ಣನ್ನು ಸೆಳೆಯುತ್ತದೆ. ಒಪ್ಪೋ ರೆನೋ 7 5G ಸ್ಮಾರ್ಟ್‌ಫೋನ್ ಟ್ರಿಪಲ್-ಸೆನ್ಸರ್ ಸೆಟಪ್‌ನಲ್ಲಿ ಪೋರ್ಟ್ರೇಟ್ ಕ್ಯಾಮೆರಾ ಅನುಭವ ಹೈಲೈಟ್ ಆಗಿರೋದು ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ.
ಒಪ್ಪೋ ರೆನೋ7 5G ಸ್ಮಾರ್ಟ್‌ಫೋನ್ 28,990ರೂ.ಬೆಲೆ ಹೊಂದಿದೆ. ಸ್ಮಾರ್ಟ್‌ಫೋನ್ ಹೊಂದಿರುವ ಫೀಚರ್ಸ್‌ಗಳು ಹಾಗೂ ಬೆಲೆಗಳ ನಡುವಿನ ಅನುಪಾತ ನಿಮಗೆ ಆಶ್ಚರ್ಯ ಎನಿಸಲಿದೆ. ಈ ಸ್ಮಾರ್ಟ್‌ಫೋನ್‌ನ ಫೀಚರ್ಸ್ ಹಾಗೂ ಇದರ ಬೆಲೆ ನಡುವೆ ಸರಿಯಾದ ಸಮತೋಲನವನ್ನು ಹೊಂದಿದೆಯಾ ಅನ್ನೊದನ್ನ ಕೆಳಗಿನ ಹಂತಗಳಲ್ಲಿ ತಿಳಿಯೋಣ ಬನ್ನಿರಿ.
ಒಪ್ಪೋ ರೆನೋ7 5G ಪೋರ್ಟ್ರೇಟ್ ಕ್ಯಾಮೆರಾ
ಒಪ್ಪೋ ರೆನೋ 7 5G ಸ್ಮಾರ್ಟ್‌ಫೋನ್ ಒಳಗೊಂಡಿರುವ ಪ್ರಮುಖ ಅಂಶಗಳಲ್ಲಿ ಕ್ಯಾಮೆರಾ ಸೆಟಪ್ ಕೂಡ ಒಂದಾಗಿದೆ. ಈ ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ತ್ರಿವಳಿ ಕ್ಯಮೆರಾ ಹೊಂದಿದೆ. ಇದರಲ್ಲಿ ಪ್ರೈಮರಿ ಕ್ಯಾಮೆರಾ 64MP , ಎರಡನೇ ಕ್ಯಾಮೆರಾ 8MP ಅಲ್ಟ್ರಾ-ವೈಡ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2MP ಮ್ಯಾಕ್ರೋ ಶೂಟರ್ ಅನ್ನು ಒಳಗೊಂಡಿದೆ. ಇದಲ್ಲದೆ ಸೆಲ್ಫಿ ಮತ್ತು ವೀಡಿಯೊ ಕರೆಗಾಗಿ 32MP ಸೆಲ್ಫಿ ಕ್ಯಾಮೆರಾವನ್ನು ಸಹ ಒಳಗೊಂಡಿದೆ.

ಇನ್ನು ಒಪ್ಪೋ ರೆನೋ 7 5G ಸ್ಮಾರ್ಟ್‌ಫೋನಿನ ಹೈಲೆಟ್ ಆಗಿರುವ ಪೋರ್ಟ್ರೇಟ್ ಕ್ಯಾಮೆರಾ ಸಾಕಷ್ಟು ವಿಶೇಷವಾಗಿದೆ. ಈ ಸ್ಮಾರ್ಟ್‌ಫೋನ್ ಬೊಕೆ ಫ್ಲೇರ್ ಪೋರ್ಟ್ರೇಟ್ ಅನ್ನು 25 ಹಂತದ ಹೊಂದಾಣಿಕೆಯ ಲೆನ್ಸ್ ಅನ್ನು ನೀಡುತ್ತದೆ. ಇದರ ರಿಸಲ್ಟ್ DSLR ತರಹದ ಫ್ಲೇರ್ ಮತ್ತು ಬೊಕೆ ಎಫೆಕ್ಟ್ ಹೊಂದಿದೆ. ಇದರಲ್ಲಿ ಬೊಕೆ ಫ್ಲೇರ್ ಟೆಕ್ನಾಲಜಿ ಒಪ್ಪೊದ ಸಿಗ್ನೇಚರ್ ಆಗಿದ್ದು, ರೆನೋ ಸರಣಿಯಲ್ಲಿ ಮುಂದುವರೆದಿದೆ.

ಒಪ್ಪೋ ಬೊಕೆ ಫ್ಲೇರ್ ಪೋರ್ಟ್ರೇಟ್ ಕ್ಯಾಮೆರಾವು ಕೆಲವು ಅತ್ಯದ್ಭುತವಾದ ವೀಡಿಯೊ ಮತ್ತು ಫೋಟೋಶೂಟ್‌ಗಳನ್ನು ಕ್ರಿಯೆಟ್ ಮಾಡುವುದಕ್ಕೆ ಬ್ಯಾಕ್‌ಗ್ರೌಂಡ್ ಬ್ಲರ್ ಮಾಡಲಿದೆ. ಇದು ರಿಯಾಲಿಟಿ ಎಫೆಕ್ಟ್ ಅನ್ನು ನೀಡುತ್ತದೆ. ಜೊತೆಗೆ ವರ್ಧಿತ ವೀಡಿಯೊ ಅನುಭವವನ್ನು ನೀಡುತ್ತದೆ. ಈ ಡಿವೈಸ್ AI ಹೈಲೈಟ್ ವೀಡಿಯೊವನ್ನು ಒಳಗೊಂಡಿರುತ್ತದೆ. ಅಲ್ಲದೆ ಬೆಸ್ಟ್ AI ಸೀನ್ ಗುರುತಿಸುವಿಕೆಯನ್ನು ನೀಡುತ್ತದೆ. ಇದು ಪೂರ್ವನಿಯೋಜಿತವಾಗಿ ಆನ್ ಆಗುತ್ತದೆ.

ನಾನು ಕೂಡ ಈ ಎಫೆಕ್ಟ್ ಅನ್ನು ಲೋ ಲೈಟ್‌ನಲ್ಲಿ ಪ್ರಯತ್ನಿಸಿದ್ದು, ಇದಕ್ಕಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಲಾದ ಫೀಚರ್ಸ್ ಕಂಡುಕೊಂಡಿದ್ದೇನೆ. ಇದರಲ್ಲಿ, ಒಪ್ಪೋ ಕ್ಯಾಮೆರಾವು ನಿಮ್ಮನ್ನು ಅಥವಾ ವಿಷಯವನ್ನು ಲೋ ಲೈಟ್‌ನಲ್ಲಿ ಆಟೋಮ್ಯಾಟಿಕ್ ಆಗಿ ಹೈಲೈಟ್ ಮಾಡುತ್ತದೆ. ಇದರಿಂದ ಯೂನಿಕ್ ಔಟ್‌ಪುಟ್ ಅನ್ನು ನೀಡುತ್ತದೆ.
ಇನ್ನು ನೀವು ಒಪ್ಪೋ ರೆನೋ 7 5G ಜೊತೆಗೆ AI ಕಲರ್ ಪೋರ್ಟ್ರೇಟ್ ವೀಡಿಯೊವನ್ನು ಪಡೆಯಬಹುದು. ಇದು ಒಪ್ಪೋ ಕಂಪೆನಿಯ ಮತ್ತೊಂದು ಸಿಗ್ನೇಚರ್ ಆಗಿದೆ. ಇದರಲ್ಲಿ AI ಕಲರ್ ಪೋರ್ಟ್ರೇಟ್ ವೀಡಿಯೊ ರಿಯಲ್ ಟೈಂನಲ್ಲಿ ಕಂಟೆಟ್ ಕಲರ್ ಅನ್ನು ಹೈಲೈಟ್ ಮಾಡುತ್ತದೆ. ಜೊತೆಗೆ, ಲೈವ್ HDR, ಡ್ಯುಯಲ್ ವ್ಯೂ ವೀಡಿಯೋ, ಫೋಕಸ್ ಟ್ರ್ಯಾಕಿಂಗ್ ಮತ್ತು ಅಲ್ಟ್ರಾ-ಸ್ಟೆಡಿ ವಿಡಿಯೋ, ಫ್ಲ್ಯಾಷ್ ಸ್ನ್ಯಾಪ್‌ಶಾಟ್ ಮತ್ತು ಅಲ್ಟ್ರಾ-ಸ್ಪಷ್ಟ 108MP ಇಮೇಜಿಂಗ್‌ನಂತಹ ಫೀಚರ್ಸ್‌ಗಳು ಕೂಡ ಲಭ್ಯವಿದೆ. ಒಟ್ಟಿನಲ್ಲಿ ಹೇಳುವುದಾದರೆ ಒಪ್ಪೋ ರೆನೋ 7 5G ಕೆಲಸ ಮಾಡಲು ಅತ್ಯುತ್ತಮ ಫೋಟೋಗ್ರಫಿ ಅನುಭವ ನೀಡಲಿದೆ.
ಇದಲ್ಲದೆ ಸೊಲೊಪ್ AI ಕಟ್ ಹೊಸ ಯುಗದ ವಿಷಯ ರಚನೆಕಾರರು ಮತ್ತು ಪ್ರಭಾವಿಗಳಿಗೆ ಪರಿಪೂರ್ಣವಾಗಿದೆ. ಇಲ್ಲಿ, ಟೆಂಪ್ಲೇಟ್‌ಗಳನ್ನು ಸ್ವಯಂಚಾಲಿತವಾಗಿ ಆಯ್ಕೆ ಮಾಡಲಾಗುತ್ತದೆ. ಇದು ನಿಮಗೆ ಪರಿಪೂರ್ಣ ವೀಡಿಯೊ ವಿಷಯವನ್ನು ನೀಡುತ್ತದೆ. ನೀವು ವೈರಲ್ ವೀಡಿಯೊ ಟೆಂಪ್ಲೇಟ್ ಅನ್ನು ಆಯ್ಕೆ ಮಾಡಬಹುದು. ಅಲ್ಲದೆ ನಿಮ್ಮ ಸ್ವಂತ ವೀಡಿಯೊವನ್ನು ಮಾಡಬಹುದು.

ಎಡಿಟಿಂಗ್ ಅನ್ನು ಪರಿಗಣಿಸಿದರೆ ಒಪ್ಪೋ ರೆನೋ 7 5G ಹೊಸ ಫೀಚರ್ಸ್ ಹೊಂದಿದೆ. ನಿಮಗೆ ವೀಡಿಯೊಗಳು ಮತ್ತು ಫೋಟೋಗಳಿಗಾಗಿ AI ರಿಟೌಚಿಂಗ್ ಎಂಬ ಫೀಚರ್ಸ್ ಅನ್ನು ನೀಡುತ್ತದೆ. ಇನ್ನು ಈ ಫೋನ್ ಎಂಟು ರಿಟೌಚಿಂಗ್ ಆಯ್ಕೆಗಳೊಂದಿಗೆ ಬರುತ್ತದೆ. ಪ್ರತಿಯೊಂದೂ 1-100 ಪ್ರಮಾಣದಲ್ಲಿದೆ, ಇದು ಎಲ್ಲಾ ರೀತಿಯ ವೀಡಿಯೋ ರೀಟಚಿಂಗ್ ಮತ್ತು ಎಡಿಟಿಂಗ್ ಅನ್ನು ಸುಲಭಗೊಳಿಸುತ್ತದೆ. ಇದರಿಂದ ಸೆಲ್ಫಿ ಕ್ಯಾಮೆರಾವನ್ನು ಬಳಸುವ ಕಂಟೆಂಟ್ ಕ್ರಿಯೆಟರ್ಸ್ ಮತ್ತು ಪ್ರಭಾವಿಗಳಿಗೆ ಇದು ಉತ್ತಮ ಫೀಚರ್ಸ್ ಎನಿಸಲಿದೆ.

ಒಪ್ಪೋ ರೆನೋ 7 5G ಡಿಸೈನ್: ಟ್ರೆಂಡಿ ಮತ್ತು ಸ್ಟೈಲಿಶ್
ಒಪ್ಪೋ ರೆನೋ 7 5G ಸ್ಮಾರ್ಟ್‌ಫೋನ್ ನಲ್ಲಿ ಪ್ರಮುಖವಾಗಿ ಗಮನ ಸೆಳೆಯುವ ವಿಷಯವೆಂದರೆ ಅದು ಸ್ಮಾರ್ಟ್‌ಫೋನ್ ವಿನ್ಯಾಸ. ಸ್ಮಾರ್ಟ್‌ಫೋನ್‌ನಲ್ಲಿ ಲಭ್ಯವಿರುವ ಹೊಸ ಬಣ್ಣದ ಯೋಜನೆಗಳೊಂದಿಗೆ ಒಟ್ಟಾರೆ ನೋಟ ಮತ್ತು ಭಾವನೆಯು ಸೊಗಸಾಗಿದೆ. ರೆನೋ 7 5G ಸೂಕ್ಷ್ಮವಾದ ಉಲ್ಕಾಪಾತದ ವಿನ್ಯಾಸವನ್ನು ರೂಪಿಸುವ ಮೈಕ್ರಾನ್ ಗಾತ್ರದ ಅಲಂಕಾರಿಕ ರೇಖೆಗಳನ್ನು ಹೊಂದಿದೆ ಎಂದು ಒಪ್ಪೋ ಹೇಳಿಕೊಂಡಿದೆ. ಇದು ಒಪ್ಪೋ ಗ್ಲೋ ಅನ್ನು ಫ್ರೇಮ್‌ನಲ್ಲಿ ಹೈಲೈಟ್ ಮಾಡುವುದರೊಂದಿಗೆ ಸ್ಮಾರ್ಟ್‌ಫೋನ್‌ಗೆ ಶೂಟಿಂಗ್ ಸ್ಟಾರ್ ವಿನ್ಯಾಸವನ್ನು ನೀಡುತ್ತದೆ.
ಒಪ್ಪೋ ರೆನೋ 7 5G ವಿನ್ಯಾಸದ ಉತ್ತಮ ಭಾಗ LDI ತಂತ್ರಜ್ಞಾನ ಹೊಂದಿದೆ. ಈ ಸ್ಮಾರ್ಟ್‌ಫೋನ್ ಇಂಡಸ್ಟ್ರಿ-ಫಸ್ಟ್ ಏರ್‌ಕ್ರಾಫ್ಟ್-ಗ್ರೇಡ್ LDI ಟಕ್ನಾಲಜಿಯೊಂದಿಗೆ ಬರಲಿದೆ. ಇದು ಅದನ್ನು ಬಲವಾದ ಮತ್ತು ಗಟ್ಟಿಮುಟ್ಟಾಗಿ ಮಾಡುತ್ತದೆ ಮತ್ತು ಒರಟು ಬಳಕೆಗೆ ಸಹ ಸೂಕ್ತವಾಗಿದೆ. ಜೊತೆಗೆ, ರಿಯರ್ ಪ್ಯಾನೆಲ್‌ನಲ್ಲಿ ಫಿಂಗರ್‌ಪ್ರಿಂಟ್ ಮತ್ತು ಸ್ಕ್ರಾಚ್-ಫ್ರೀ ಅನುಭವಕ್ಕಾಗಿ ವಿನ್ಯಾಸಗೊಳಿಸಲಾಗಿದೆ.

ಇದಲ್ಲದೆ ಒಪ್ಪೋ ರೆನೋ 7 5G ಸ್ಮಾರ್ಟ್‌ಫೋನ್ ರಿಯರ್ ಪ್ಯಾನೆಲ್ ಕಲರ್ ಕೋಲ್ಡ್‌ನಿಂದ ವಾರ್ಮ್‌ಗೆ ಬದಲಾಯಿಸುವ ವಿಧಾನವಾಗಿದೆ. ಈ ಸ್ಮಾರ್ಟ್‌ಫೋನ್ ಅನ್ನು ಕೈಯಲ್ಲಿ ಹಿಡಿದಿಟ್ಟುಕೊಳ್ಳುವಾಗ ಆರಾಮದಾಯಕ, ಗಟ್ಟಿಮುಟ್ಟಾದ ಅನುಭವವನ್ನು ಒದಗಿಸಲು ಚಿಂತನಶೀಲವಾಗಿ ವಿನ್ಯಾಸಗೊಳಿಸಲಾಗಿದೆ. ಇನ್ನೂ ಹೆಚ್ಚು ಆಕರ್ಷಕವಾದ ಅಂಶವೆಂದರೆ ಈ ಸ್ಮಾರ್ಟ್‌ಫೋನ್ ಕೇವಲ 173 ಗ್ರಾಂ ತೂಗುತ್ತದೆ ಮತ್ತು ಕೇವಲ 7.81 ಮಿಮೀ ದಪ್ಪ ಗಾತ್ರವನ್ನು ಹೊಂದಿದೆ.

ಇನ್ನು ಒಪ್ಪೋ ರೆನೋ7 5G ಸ್ಮಾರ್ಟ್‌ಫೋನ್ 4,500 mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬರುತ್ತದೆ. ಇದರ ಬೃಹತ್ ಬ್ಯಾಟರಿಯ ಹೊರತಾಗಿಯೂ, ಒಪ್ಪೋ ಹೊಸ ರೆನೋ 7 5G ಅನ್ನು ಹಗುರವಾದ, ನಯವಾದ ಮತ್ತು ಟ್ರೆಂಡಿಯನ್ನಾಗಿ ಮಾಡಲು ನವೀನವಾಗಿ ವಿನ್ಯಾಸಗೊಳಿಸಿದೆ. ಇದು 65W SuperVOOC ವೇಗದ ಚಾರ್ಜಿಂಗ್ ಬೆಂಬಲವನ್ನು ನೀಡಲಿದೆ. ಈ ಫೋನ್ ಬ್ಯಾಟರಿ ದೀರ್ಘ ಗಂಟೆಗಳವರೆಗೆ ಬಾಳಿಕೆ ನೀಡಲಿದೆ.
ಒಪ್ಪೋ ರೆನೋ 7 5G ಕಾರ್ಯಕ್ಷಮತೆ: ಸುಧಾರಿತ, ಪ್ರೀಮಿಯಂ ಸ್ಮಾರ್ಟ್‌ಫೋನ್ ಅನುಭವ
ಒಪ್ಪೋ ರೆನೋ 7 5G ಸ್ಮಾರ್ಟ್‌ಫೋನ್ ನೋಡುವುದಕ್ಕೆ ಮತ್ತು ಬಳಸುವುದಕ್ಕೆ ಸುಂದರವಾದ ಫೋನ್ ಆಗಿದೆ. ಜೊತೆಗೆ ಇದು ಕಾರ್ಯಕ್ಷಮತೆಯಲ್ಲೂ ಕೂಡ ಶಕ್ತಿಯುತ ಡಿವೈಸ್ ಆಗಿದೆ. ಇದು 6nm ಪ್ರಕ್ರಿಯೆ ಮತ್ತು ಆಕ್ಟಾ-ಕೋರ್ ಆರ್ಕಿಟೆಕ್ಚರ್ ಅನ್ನು ಆಧರಿಸಿದ ಮೀಡಿಯಾಟೆಕ್ ಡೈಮೆನ್ಸಿಟಿ 900 ಪ್ರೊಸೆಸರ್ ಹೊಂದಿದೆ. ಹಾಗೆಯೇ 8GB RAM ಮತ್ತು 256GB ಸ್ಟೋರೇಜ್ ಹೊಂದಿದೆ. ಇದರಲ್ಲಿ ಸ್ಟೋರೇಜ್ ಅನ್ನು 5GB RAM ತನಕ ವಿಸ್ತರಿಸುವ ಆಯ್ಕೆಯನ್ನು ಕೂಡ ನೀಡಲಾಗಿದೆ.

ಇದಲ್ಲದೆ ಒಪ್ಪೊ ಕಂಪೆನಿ ಈ ಫೋನ್‌ನಲ್ಲಿ ಏರ್ ಗೆಸ್ಚರ್ಸ್ ಎಂಬ ಹೊಸ ಫೀಚರ್ಸ್ ಅನ್ನು ಸಹ ಸೇರಿಸಿದೆ. ಇದು ಹೆಸರು ಹೇಳುವುದನ್ನು ನಿಖರವಾಗಿ ಮಾಡುತ್ತದೆ. ವಿಷಯದ ಮೂಲಕ ಸ್ಕ್ರಾಲ್ ಮಾಡಲು ನೀವು ನಿಮ್ಮ ಕೈಗಳನ್ನು ಮೇಲಕ್ಕೆ ಮತ್ತು ಕೆಳಕ್ಕೆ ಎಳೆಯಬಹುದು. ಏರ್ ಗೆಸ್ಚರ್ಸ್ ಮೂಲಕ ನೀವು ಕರೆಗಳಿಗೆ ಉತ್ತರಿಸಬಹುದಾಗಿದೆ. ಇದು ತುಂಬಾ ವೈಜ್ಞಾನಿಕ ಭಾವನೆಯನ್ನು ನೀಡುತ್ತದೆ!
ಒಪ್ಪೋ ರೆನೋ 7 5G AI ಸಿಸ್ಟಮ್ ಬೂಸ್ಟರ್ ಅನ್ನು ಸಹ ಒಳಗೊಂಡಿದೆ, ಇದು ಒಟ್ಟಾರೆ ಸ್ಮಾರ್ಟ್‌ಫೋನ್ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಸಿಸ್ಟಮ್ ಬೂಸ್ಟರ್ ಮೆಮೊರಿ ಬಳಕೆಯನ್ನು 30% ಕಡಿಮೆ 20% ಬ್ಯಾಟರಿ ಯೂಸ್ ಕಡಿಮೆ ಮಾಡಲಿದೆ. ಇದರಿಂದ ಬ್ಯಾಟರಿ ಬಾಳಿಕೆ 12% ಹೆಚ್ಚಾಗಿದೆ ಮತ್ತು 5% ಕಡಿಮೆ ಓದುವ ಮತ್ತು ಬರೆಯುವ ಕಾರ್ಯಕ್ಷಮತೆಯನ್ನು ಕಡಿಮೆ ಮಾಡುತ್ತದೆ ಎಂದು ಒಪ್ಪೋ ಹೇಳಿದೆ.
ಇನ್ನು ಒಪ್ಪೋ ರೆನೋ 7 5G ಸ್ಮಾರ್ಟ್‌ಫೋನ್ ಅತ್ಯುತ್ತಮ ದರ್ಜೆಯ ಫೀಚರ್ಸ್‌ಗಳನ್ನು ಸಹ ನೀಡುತ್ತದೆ. ಸೊಶೀಯಲ್ ಮೀಡಿಯಾ ಮೂಲಕ ಕ್ಯಾಶುಯಲ್ ಬ್ರೌಸಿಂಗ್ ಮತ್ತು ಸ್ಕ್ರೋಲಿಂಗ್‌ನಿಂದ ಹಿಡಿದು ಕಂಟೆಟ್ ಕ್ರಿಯೆಟ್, ಎಡಿಟಿಂಗ್, ಗೇಮಿಂಗ್ ಮತ್ತು ಮುಂತಾದ ತೀವ್ರವಾದ ಸ್ಮಾರ್ಟ್‌ಫೋನ್ ಕಾರ್ಯಗಳವರೆಗೆ ಎಲ್ಲವನ್ನೂ ಈ ಫೋನ್ ನಿಭಾಯಿಸುತ್ತದೆ. ಆಕರ್ಷಕ ಪ್ರೈಸ್ ಟ್ಯಾಗ್, ವಿಶಿಷ್ಟ ವಿನ್ಯಾಸ, ಶಕ್ತಿಯುತ ಕ್ಯಾಮೆರಾಗಳು ಮತ್ತು ಅಭೂತಪೂರ್ವ ಕಾರ್ಯಕ್ಷಮತೆಯು ಬಳಕೆದಾರರನ್ನು ಬಳಕೆದಾರರನ್ನು ಸೆಳೆಯಲಿದೆ. ಇದೇ ಕಾರಣಕ್ಕೆ ಒಪ್ಪೋ ರೆನೋ7 5G ಬೆಲೆ ಮತ್ತು ಪ್ರೀಮಿಯಂ ಫೀಚರ್ಸ್‌ಗಳ ನಡುವೆ ಸರಿಯಾದ ಸಮತೋಲನವನ್ನು ನೀಡುತ್ತದೆ.
ಹೊಸ ಒಪ್ಪೋ ರೆನೋ7 5G ಸ್ಮಾರ್ಟ್‌ಫೋನ್ 8GB + 256GB ಮಾದರಿಯ ಸಿಂಗಲ್ ವೇರಿಯೆಂಟ್ ಆಯ್ಕೆಯಲ್ಲಿ ಲಭ್ಯವಿದೆ. ಇದರ ಬೆಲೆ 28,990ರೂ.ಆಗಿದೆ. ನೀವು ಒಪ್ಪೋ ರೆನೋ 7 5G ಸ್ಮಾರ್ಟ್‌ಫೋನ್ ಅನ್ನು ಸ್ಟಾರಿ ಬ್ಲಾಕ್ ಮತ್ತು ಸ್ಟಾರ್ಟ್ರೈಲ್ಸ್ ಬ್ಲೂ ಕಲರ್ ಆಯ್ಕೆಗಳಲ್ಲಿ ಲಭ್ಯವಿದೆ. ಇನ್ನು ಈ ಫೋನ್ ಫೆಬ್ರವರಿ 17 ರಿಂದ ಮಾರಾಟವಾಗಲಿದೆ. ಇದನ್ನು ರಿಟೇಲ್ ಸ್ಟೋರ್, ಫ್ಲಿಪ್‌ಕಾರ್ಟ್ ಮತ್ತು ಒಪ್ಪೋ ಸ್ಟೋರ್ ಮೂಲಕ ಖರೀದಿಸಬಹುದು.
ಇದಲ್ಲದೆ, ಒಪ್ಪೋ ಕಂಪನಿಯು ತನ್ನ IoT ನಲ್ಲಿ "ಸ್ಮಾರ್ಟ್ ಲೈಫ್" ಎಂಬ ಹೊಸ ಪ್ರಾಡಕ್ಟ್‌ಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಇದು ಬಳಕೆದಾರರನ್ನು ಆದ್ಯತೆಯಾಗಿ ಇರಿಸುತ್ತದೆ. ಈ ದೃಷ್ಟಿಯ ಭಾಗವಾಗಿ, ಒಪ್ಪೋ ಈ ವರ್ಷದ ಆರಂಭದಲ್ಲಿ Enco M32 ನೆಕ್‌ಬ್ಯಾಂಡ್‌ಗಳನ್ನು ಕಪ್ಪು ಬಣ್ಣದಲ್ಲಿ ಪರಿಚಯಿಸಿತು. ಇದೀಗ ಅದು ಹೊಸ ಹಸಿರು ಬಣ್ಣದ ರೂಪಾಂತರವನ್ನು ಪರಿಚಯಿಸುತ್ತಿದೆ.

ನೆಕ್‌ಬ್ಯಾಂಡ್ ಅನ್ನು ಕೇವಲ 10 ನಿಮಿಷಗಳ ಕಾಲ ತ್ವರಿತವಾಗಿ ಚಾರ್ಜ್ ಮಾಡುವುದರಿಂದ ಸುಮಾರು 20 ಗಂಟೆಗಳ ತಡೆರಹಿತ ಸಂಗೀತವನ್ನು ನೀಡುತ್ತದೆ. ಈ ಡಿವಯಸ್ AI ಕರೆ-ಶಬ್ದ-ಕಡಿತ ಅಲ್ಗಾರಿದಮ್, ನೀರು ಮತ್ತು ಧೂಳಿನ ಪ್ರತಿರೋಧಕ್ಕಾಗಿ IP55 ರೇಟಿಂಗ್ ಮತ್ತು 10mm ಡ್ರೈವರ್‌ಗಳನ್ನು ಹೊಂದಿದೆ. ಇದು ಪ್ರಮುಖ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ಮತ್ತು ಒಪ್ಪೋ ಸ್ಟೋರ್‌ಗಳ ಮೂಲಕ ಫೆಬ್ರವರಿ 9ರಿಂದಲೇ ಎನ್ಕೋ M32 ನ ಗ್ರೀನ್ ಕಲರ್ ಆಯ್ಕೆಯು ಮಾರಾಟವಾಗುತ್ತಿದೆ. ಇದು 1,799ರೂ.ಬೆಲೆಯಲ್ಲಿ ಲಭ್ಯವಿದೆ. ಇನ್ನು ಲಾಂಚ್ ಆಫರ್ ಭಾಗವಾಗಿ ಫೆಬ್ರವರಿ 9 ರಿಂದ ಫೆಬ್ರವರಿ 11, 2022 ತನಕ 300ರೂ.ಗಳ ರಿಯಾಯಿತಿ ಕೂಡ ಲಭ್ಯವಿದೆ. ಇದರೊಂದಿಗೆ ಒಪ್ಪೋ ತನ್ನ ಹೊಸ ಸ್ಮಾರ್ಟ್ ವಾಚ್ ಅನ್ನು ಸಹ ಬಿಡುಗಡೆ ಮಾಡಲಿದೆ. ಒಪ್ಪೋ ವಾಚ್ ಫ್ರೀ, ಸ್ಲೀಪ್ ಮಾನಿಟರಿಂಗ್ ಫೀಚರ್ಸ್ "OSleep" ಅನ್ನು ಹೊಂದಿದೆ. ಇದು ಬಳಕೆದಾರರ ವಿಶ್ರಾಂತಿಯ ಗುಣಮಟ್ಟವನ್ನು ಮಾತ್ರ ರೇಟ್ ಮಾಡುತ್ತದೆ. ಜೊತೆಗೆ ಅಪಾಯದ ನಿದ್ರೆಯಲ್ಲಿ ಉಸಿರುಕಟ್ಟುವಿಕೆಯನ್ನು ಅರ್ಥಮಾಡಿಕೊಳ್ಳಲು ಅವರಿಗೆ ಅನುವು ಮಾಡಿಕೊಡುತ್ತದೆ. ಈ ಸ್ಮಾರ್ಟ್‌ವಾಚ್ ಶೀಘ್ರದಲ್ಲೇ ಭಾರತದಲ್ಲಿ 5,999ರೂ.ಗಳಿಗೆ ಲಭ್ಯವಾಗಲಿದೆ.
ಆಫ್‌ಲೈನ್ ಆಪರ್‌ಗಳು
ಹೊಸ ಒಪ್ಪೋ ರೆನೋ 7 5G ಫೋನ್ ಆಕರ್ಷಕ ಯೋಜನೆಗಳು ಮತ್ತು ಆಫರ್‌ಗಳ ಮೂಲಕ ಲಭ್ಯವಿರುತ್ತದೆ. ICICI ಬ್ಯಾಂಕ್, ಕೋಟಕ್ ಬ್ಯಾಂಕ್, ಸ್ಟ್ಯಾಂಡರ್ಡ್ ಚಾರ್ಟರ್ಡ್, IDFC ಫಸ್ಟ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಕ್ರೆಡಿಟ್/ಡೆಬಿಟ್ ಕಾರ್ಡ್‌ಗಳು ಮತ್ತು ಹೆಚ್ಚಿನವುಗಳಿಂದ 10% ವರೆಗೆ ಕ್ಯಾಶ್‌ಬ್ಯಾಕ್ (ಗರಿಷ್ಠ 4000ರೂ)ಪಡಯಬಹುದು. ಇದಲ್ಲದೆ ಗ್ರಾಹಕರು ಬಜಾಜ್ ಫಿನ್‌ಸರ್ವ್, ಟಿವಿಎಸ್ ಕ್ರೆಡಿಟ್, ಎಚ್‌ಡಿಎಫ್‌ಸಿ ಬ್ಯಾಂಕ್, ಕೋಟಕ್ ಬ್ಯಾಂಕ್, ಐಸಿಐಸಿಐ ಕನ್ಸ್ಯೂಮರ್ ಫೈನಾನ್ಸ್, ಮೂಲಕ 'ಸುಲಭವಾಗಿ ಸ್ವಂತ ಹಣಕಾಸು ಯೋಜನೆ' ಆಫರ್‌ಗಳನ್ನು ಆಯ್ಕೆ ಮಾಡಬಹುದು. 16/4 ರಂದು IDFC ಫಸ್ಟ್ ಬ್ಯಾಂಕ್‌ನಿಂದ ಒಂದು EMI ಕ್ಯಾಶ್‌ಬ್ಯಾಕ್ ಅನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಸ್ಕೀಮ್ ಅಂದರೆ ಅವರು ತಮ್ಮ EMI ಗಳಲ್ಲಿ ಒಂದನ್ನು ಫ್ಲಾಟ್ 2500ರೂ.ಗಳ ಕ್ಯಾಶ್‌ಬ್ಯಾಕ್ ಆಗಿ ಸ್ವೀಕರಿಸುತ್ತಾರೆ. ಇದಲ್ಲದೆ ಗ್ರಾಹಕರು ಹೊಸ ಒಪ್ಪೋ ರೆನೋ 7 ಸರಣಿಗೆ ಅಪ್‌ಗ್ರೇಡ್ ಆದ ನಂತರ 12 ತಿಂಗಳೊಳಗೆ ತಮ್ಮ ಹ್ಯಾಂಡ್‌ಸೆಟ್ ಅನ್ನು ಹಿಂತಿರುಗಿಸಲು ಬಯಸಿದರೆ ಒಪ್ಪೋ ಅಪ್‌ಗ್ರೇಡ್ ಮೂಲಕ 70% ವರೆಗೆ ಖಚಿತವಾದ ಬೈಬ್ಯಾಕ್ ಆಫರ್ ಸಹ ಪಡೆಯಬಹುದು. ಅಲ್ಲದೆ ಯಾವುದೇ ಬ್ರ್ಯಾಂಡ್‌ನಿಂದ ತಮ್ಮ ಹಳೆಯ ಡಿವೈಸ್‌ಗೆ ಬದಲಾಗಿ 2000ರೂ. ಎಕ್ಸ್‌ಚೇಂಜ್ ಬೋನಸ್ ಮತ್ತು ಒಪ್ಪೋ ಡಿವೈಸ್ ಎಕ್ಸ್‌ಚೇಂಜ್ ಮೇಲೆ ಹೆಚ್ಚುವರಿ 1000ರೂ. ಲಾಯಲ್ಟಿ ಬೋನಸ್ ಅನ್ನು ಪಡೆಯಬಹುದು. ಟಾಲ್ಲದೆ ಒಪ್ಪೋ ಬಳಕೆದಾರರು 180 ದಿನಗಳವರೆಗೆ ಕಂಪ್ಲಿಟ್ ಡ್ಯಾಮೇಜ್ ಪ್ರೊಟೆಕ್ಷನ್ ಅನ್ನು ಪಡೆಯಬಹುದು. ಇದು ಆಕ್ಸಿಡೆಂಟಲ್ ಡ್ಯಾಮೇಜ್, ವಾಟರ್ ಡ್ಯಾಮೇಜ್ ಅಥವಾ ಯಾವುದೇ ರೀತಿಯ ಡ್ಯಾಮೇಜ್ ಅನ್ನು ಒಳಗೊಂಡಿದೆ. ಅಲ್ಲದೆ ಮೈ ಒಪ್ಪೋ ಅಪ್ಲಿಕೇಶನ್ ಅನ್ನು ಬಳಸಿಕೊಂಡು ಆಫರ್ ಅನ್ನು ಸುಲಭವಾಗಿ ಪಡೆಯಬಹುದು. ಇನ್ನು ಈ ಡಿವೈಸ್ ಅನ್ನು ಖರೀದಿಸುವಾಗ, ಒಪ್ಪೋ ಬಳಕೆದಾರರು 1,999ರೂ. ಮೌಲ್ಯದ ಒಪ್ಪೋ ಪವರ್ ಬ್ಯಾಂಕ್ 30W ಅನ್ನು ಪಡೆಯುತ್ತಾರೆ. ಇದಲ್ಲದೆ ಒಪ್ಪೋ ರೆನೋ 7 ಸರಣಿಯನ್ನು ಖರೀದಿಸುವ ಎಲ್ಲಾ ಬಳಕೆದಾರರು OPPO ಪ್ರೀಮಿಯಂ ಸೇವಾ ಆಫರ್‌ನಲ್ಲಿ 2499ರೂ. ಮೌಲ್ಯದ ವಿಶೇಷ ಸೇವಾ ಪ್ರಯೋಜನವನ್ನು ಪಡೆಯುತ್ತಾರೆ. ಇದು ಫೋನ್‌ಗಳ ದುರಸ್ತಿ ಸಮಯದಲ್ಲಿ ಸುಲಭ EMI ಆಯ್ಕೆಯನ್ನು ಹೊಂದಿದೆ. ಈ ಉಚಿತ ಪಿಕ್ ಅಪ್ ಮತ್ತು ಡ್ರಾಪ್ ಸೇವೆಯ ಜೊತೆಗೆ, 24/7 ಹಾಟ್‌ಲೈನ್ ಬೆಂಬಲ ಮತ್ತು ಉಚಿತ ಸ್ಕ್ರೀನ್ ಗಾರ್ಡ್ ಮತ್ತು ಬ್ಯಾಕ್ ಕವರ್ ಲಬ್ಯವಾಗಲಿದೆ.
ಆನ್‌ಲೈನ್ ಆಫರ್‌ಗಳು
ಆಕ್ಸಿಸ್ ಬ್ಯಾಂಕ್, ಸ್ಟಾಂಡರ್ಡ್ ಚಾರ್ಟರ್ಡ್, ಯೆಸ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾದಲ್ಲಿ ಗ್ರಾಹಕರು 6 ತಿಂಗಳವರೆಗೆ ನೋ ಕಾಸ್ಟ್ EMI ಆಯ್ಕೆ ಸಿಗಲಿದೆ. ಇದರಲ್ಲಿ 10% ತ್ವರಿತ ರಿಯಾಯಿತಿ ಮತ್ತು HDFC ಕ್ರೆಡಿಟ್‌ನಲ್ಲಿ 5% ತ್ವರಿತ ರಿಯಾಯಿತಿ ಪಡೆಯಬಹುದು. ಇನ್ನು ಎಕ್ಸ್‌ಚೇಂಜ್ ಆಫರ್‌ನಲ್ಲಿ 3000ರೂ.ಗಳ ಹೆಚ್ಚುವರಿ ಎಕ್ಸ್‌ಚೇಂಜ್ ಬೋನಸ್ ಅನ್ನು ಸಹ ಪಡೆಯಬಹುದು. ಲಾಂಚ್ ಆಫರ್‌ಗಳ ಭಾಗವಾಗಿ ಒಪ್ಪೋ M32 ನೆಕ್‌ಬ್ಯಾಂಡ್ ಅನ್ನು 1399ರೂ.ಗಳಲ್ಲಿ ಪಡೆಯಬಹುದು. ಒಪ್ಪೊ ಬಳಕೆದಾರರು 180 ದಿನಗಳವರೆಗೆ ಕಂಪ್ಲೀಟ್ ಡ್ಯಾಮೇಜ್ ಪ್ರೊಟೆಕ್ಷನ್ ಅನ್ನು ಸಹ ಪಡೆಯಬಹುದು. ಇದು ಆಕ್ಸಿಡೆಂಟಲ್ ಡ್ಯಾಮೇಜ್ , ವಾಟರ್ ಡ್ಯಾಮೇಜ್ ಅಥವಾ ಯಾವುದೇ ರೀತಿಯ ಡ್ಯಾಮೇಜ್ ಅನ್ನು ಒಳಗೊಳ್ಳುತ್ತದೆ. ಇನ್ನು ಒಪ್ಪೋ ಕಂಪೆನಿಯ ಮೈ ಒಪ್ಪೋ ಅಪ್ಲಿಕೇಶನ್ ಬಳಸಿಕೊಂಡು ಆಫರ್ ಅನ್ನು ಸುಲಭವಾಗಿ ಪಡೆಯಬಹುದು. ಒಪ್ಪೋ ಪ್ರೀಮಿಯಂ ಸೇವೆ- ಒಪ್ಪೋ ರೆನೋ ಬಳಕೆದಾರರಿಗೆ ಪ್ರತ್ಯೇಕವಾಗಿದೆ, ಫೋನ್‌ಗಳ ದುರಸ್ತಿ ಸಮಯದಲ್ಲಿ ಸುಲಭ EMI ಆಯ್ಕೆಯನ್ನು ನೀಡುತ್ತದೆ. ಈ ರೆನೊ ಜೊತೆಗೆ, ಬಳಕೆದಾರರು ಉಚಿತ ಪಿಕ್ ಅಪ್ ಮತ್ತು ಡ್ರಾಪ್ ಸೇವೆ, 24/7 ಹಾಟ್‌ಲೈನ್ ಬೆಂಬಲ ಮತ್ತು ಉಚಿತ ಸ್ಕ್ರೀನ್ ಗಾರ್ಡ್ ಮತ್ತು ಬ್ಯಾಕ್ ಕವರ್ ಅನ್ನು ಪಡೆಯಬಹುದು


Click it and Unblock the Notifications