0ppo 5g Phone: ಒಪ್ಪೊದ 5G ಸ್ಮಾರ್ಟ್‌ಫೋನ್ ಫೀಚರ್ಸ್ ಲೀಕ್!
ಸ್ಮಾರ್ಟ್‌ಫೋನ್ ವಲಯದಲ್ಲಿ ಈಗಾಗ್ಲೆ ವೈವಿಧ್ಯಮಯ ಸ್ಮಾರ್ಟ್‌ಫೋನ್‌ಗಳ ಮೂಲಕ ಜನಪ್ರಿಯತೆ ಪಡೆದುಕೊಂಡಿರುವ ಒಪ್ಪೋ ಕಂಪೆನಿ. 5G ನೆಟ್‌ವರ್ಕ್ ಬೆಂಬಲಿಸುವ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆಗೆ ಸಿದ್ದತೆ ನಡೆಸಿದೆ. ಸದ್ಯ ಈ ಹೊಸ ಸ್ಮಾರ್ಟ್‌ಫೋನ್ ಮಾಡೆಲ್ ನಂಬರ್ PCLM50 ಆಗಿದೆ ಎನ್ನಲಾಗ್ತಿದ್ದು, ರೆನೊ 5G ಸ್ಮಾರ್ಟ್‌ಫೋನ್ ಎಂದು ಹೇಳಲಾಗ್ತಿದೆ ಆದರೂ ಇದರ ಹೆಸರು ಇನ್ನೂ ಬಹಿರಂಗಗೊಂಡಿಲ್ಲ. ಈ ಸ್ಮಾರ್ಟ್‌ಫೋನ್ NSA / SA ಬ್ಯಾಂಡ್ಸ್ ಬೆಂಬಲಿಸಲಿದ್ದು ಡ್ಯುಯೆಲ್ 4G VoLTE ಬೆಂಬಲಿಸಲಿದೆ.

ಹೌದು ಚೀನಾ ಮೂಲದ ಸ್ಮಾರ್ಟ್‌ಫೋನ್ ಕಂಪೆನಿ ಒಪ್ಪೋ ತನ್ನ ಹೊಸ ಆವೃತ್ತಿಯ 5G ಸ್ಮಾರ್ಟ್‌ಫೋನ್ ಬಿಡುಗಡೆಗೆ ಸಿದ್ದತೆ ನಡೆಸಿದ್ದು, ಯುವಜನತೆಯ ಆಶಯಕ್ಕೆ ತಕ್ಕಂತ ಫೀಚರ್ಸ್‌ಗಳನ್ನ ಹೊಂದಿರಲಿದೆ ಎಂದು ಹೇಳಲಾಗ್ತಿದೆ. 5G ಜಮಾನಕ್ಕೆ ಕಾಲಿಡಲು ಎಲ್ಲಾ ಸ್ಮಾರ್ಟ್‌ಫೋನ್ ಕಂಪೆನಿಗಳು ಸಿದ್ದತೆ ನಡೆಸುತ್ತಿದ್ದು, ಆದರಂತೆ ಒಪ್ಪೋ ಕೂಡ ತನ್ನ ಹೊಸ ಸ್ಮಾರ್ಟ್‌ಫೋನ್ ರೆಡಿ ಮಾಡಿದೆ. ಸದ್ಯ ಈ ಸ್ಮಾರ್ಟ್‌ಫೋನ್‌ನ ಯಾವೆಲ್ಲಾ ಫೀಚರ್ಸ್‌ಗಳನ್ನ ಹೊಂದಿದೆ ಅನ್ನೊದು ಆನ್‌ಲೈನ್‌ನಲ್ಲಿ ಲೀಕ್‌ಆಗಿದ್ದು, ಲೀಕ್ ಮಾಹಿತಿ ಪ್ರಕಾರ ಯಾವ ಪೀಚರ್ಸ್‌ಗಳಿವೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಯೋಣ ಬನ್ನಿ.

ಡಿಸ್ಪ್ಲೇ ವಿನ್ಯಾಸ
ಒಪ್ಪೋ ಕಂಪೆನಿಯ ಈ ಹೊಸ ಸ್ಮಾರ್ಟ್‌ಫೋನ್ 2400 x 1080 ಪಿಕ್ಸೆಲ್ ರೆಸಲ್ಯೂಶನ್ ಹೊಂದಿರುವ 6.4 ಇಂಚಿನ ಅಮೋಲೆಡ್ ಡಿಸ್‌ಪ್ಲೇಯನ್ನ ಹೊಂದಿದೆ. ಅಲ್ಲದೆ 20:9 ಆಸ್ಪೆಕ್ಟ್ ರೇಶಿಯೋ ಹೊಂದಿರುವ ಮಲ್ಟಿ ಟಚ್ ಸಪೋರ್ಟ್ ಅನ್ನ ಒಳಗೊಂಡಿದೆ. ಜೊತೆಗೆ ಫಿಂಗರ್ ಪ್ರಿಂಟ್ ಡಿಸ್‌ಪ್ಲೇ ಸೆನ್ಸಾರ್, ಫಾಸ್ಟ್ ಆನ್‌ಲಾಕಿಂಗ್ ಆಂಡ್ ಸೆಕ್ಯುರಿಟಿ ಸಿಸ್ಟಂ ಅನ್ನ ಹೊಂದಿದೆ.

ಪ್ರೊಸೆಸರ್
ಈ ಸ್ಮಾರ್ಟ್‌ಫೋನ್ 2.4GHz ಆಕ್ಟಾ ಕೋರ್ ಹೊಂದಿರುವ ಸ್ನಾಪ್‌ಡ್ರಾಗನ್ 765G 5G ಚಿಪ್‌ಸೆಟ್ ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಜೊತೆಗೆ 8GB RAM ಮತ್ತು 128GB ಅಥವಾ 256GB ಶೇಖರಣಾ ಸಾಮರ್ಥ್ಯವನ್ನ ಹೊಂದಿದ್ದು, ಮೆಮೊರಿ ಕಾರ್ಡ್ ಮೂಳಕ ಸಂಗ್ರಹ ಸಾಮರ್ಥ್ಯವನ್ನು ವಿಸ್ತಿರಿಸಲು ಯಾವುದೇ ಅವಕಾಶವನ್ನು ನೀಡಿಲ್ಲ ಎಂದು ಹೇಳಲಾಗ್ತಿದೆ.

ಕ್ಯಾಮೆರಾ ಮಾದರಿ
ಸದ್ಯ ಲೀಕ್ ಆಗಿರುವ ಮಾಹಿತಿ ಪ್ರಕಾರ ಈ ಸ್ಮಾರ್ಟ್‌ಫೋನ್ ಎಲ್‌ಇಡಿ ಪ್ಲ್ಯಾಶ್ ಹೊಂದಿರುವ ಕ್ವಾಡ್ ರಿಯರ್ ಕ್ಯಾಮೆರಾ ಸೆಟ್‌ಆಪ್ ಹೊಂದಿದ್ದು, ಮೊದಲನೇ ಕ್ಯಾಮೆರಾ 48ಮೆಗಾ ಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 8ಮೆಗಾ ಪಿಕ್ಸೆಲ್ ಸೆನ್ಸಾರ್ ಮೂರು ಮತ್ತು ನಾಲ್ಕನೇ ಕ್ಯಾಮೆರಾ 2ಮೆಗಾ ಪಿಕ್ಸೆಲ್ ಸೆನ್ಸಾರ್ ಅನ್ನ ಒಳಗೊಂಡಿದೆ. ಜೊತೆಗೆ 32ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿರುವ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ.

ಬ್ಯಾಟರಿ ಮತ್ತು ಇತರೆ
ಈ ಸ್ಮಾರ್ಟ್‌ಫೋನ್ 3935mAh ಬ್ಯಾಟರಿ ಪ್ಯಾಕ್‌ಆಪ್ ಹೊಂದಿದ್ದು, ಫಾಸ್ಟ್ ಚಾರ್ಜಿಂಗ್ ಬೆಂಬಲಿಸುವ ಬಗ್ಗೆ ಯಾವುದೇ ಮಾಹಿತಿ ತಿಳಿದುಬಂದಿಲ್ಲ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈಫೈ 802.11ac, ವೈಫೈ ಹಾಟ್‌ಸ್ಪಾಟ್, ಡ್ಯುಯೆಲ್ ಬ್ಯಾಂಡ್ (2.4/5GHz), ಬ್ಲೂಟೂತ್ V5.0 ಮತ್ತು ಜಿಪಿಎಸ್ ಅನ್ನು ಬೆಂಬಲಿಸಲಿದೆ ಎಂದು ನಿರೀಕ್ಷಿಸಲಾಗಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್ ಗ್ರಾವಿಟಿ, ಪ್ರಾಕ್ಷಿಮಿಟಿ, ಮತ್ತು ಲೈಟ್ ಸೆನ್ಸಾರ್ ಅನ್ನು ಸಹ ಒಳಗೊಂಡಿದೆ.ಸದ್ಯ ವೈಟ್, ಬ್ಲಾಕ್, ಮತ್ತು ಹಳದಿ ಬಣ್ಣಗಳ ಆಯ್ಕೆಯಲ್ಲಿ ಮಾರುಕಟ್ಟೆಗೆ ಬರಲಿದೆ ಎಂದು ಅಂದಾಜಿಸಲಾಗಿದೆ.


Click it and Unblock the Notifications




