ಒಪ್ಪೊ ಸ್ಮಾರ್ಟ್ ಟಿವಿ K9 ಸರಣಿ ಬಿಡುಗಡೆ! ಆಕರ್ಷಕ ಫೀಚರ್ಸ್‌!

|

ಜನಪ್ರಿಯ ಒಪ್ಪೋ ಕಂಪೆನಿ ಸ್ಮಾರ್ಟ್‌ಫೋನ್‌ ಮಾತ್ರವಲ್ಲದೆ ಸ್ಮಾರ್ಟ್‌ಟಿವಿ ಮಾರುಕಟ್ಟೆಯಲ್ಲೂ ಸೈ ಎನಿಸಿಕೊಂಡಿದೆ. ಈಗಾಗಲೇ ಹಲವು ಮಾದರಿಯ ಸ್ಮಾರ್ಟ್‌ಟಿವಿಗಳನ್ನು ಪರಿಚಯಿಸಿದೆ. ಇದೀಗ ತನ್ನ ಹೊಸ ಒಪ್ಪೋ ಸ್ಮಾರ್ಟ್ ಟಿವಿ K9 ಸರಣಿಯನ್ನು ಪರಿಚಯಿಸಿದೆ. ಈ ಸರಣಿಯಲ್ಲಿ 65 ಇಂಚು, 55 ಇಂಚು ಮತ್ತು 43 ಇಂಚಿನ ಮೂರು ಸ್ಮಾರ್ಟ್‌ಟಿವಿಗಳು ಸೇರಿವೆ. ಇನ್ನು ಈ ಸ್ಮಾರ್ಟ್‌ಟಿವಿಗಳೆಲ್ಲವೂ ಎಲ್‌ಸಿಡಿ ಸ್ಕ್ರೀನ್‌ಗಳನ್ನು ಹೊಂದಿದ್ದು, 65 ಇಂಚಿನ ಮತ್ತು 55 ಇಂಚಿನ ಫೀಚರ್ 4K ರೆಸಲ್ಯೂಶನ್ ಹೊಂದಿದ್ದರೆ, 43 ಇಂಚಿನ ಮಾದರಿಯು ಫುಲ್‌-ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿವೆ.

ಒಪ್ಪೋ

ಹೌದು, ಒಪ್ಪೋ ಸಂಸ್ಥೆ ಸ್ಮಾರ್ಟ್‌ಟಿವಿ K9 ಸರಣಿಯನ್ನು ಚೀನಾ ಮಾರುಕಟ್ಟೆಯಲ್ಲಿ ಲಾಂಚ್‌ ಮಾಡಿದೆ. ಇನ್ನು ಈ ಸ್ಮಾರ್ಟ್‌ಟಿವಿಗಳು ಸ್ಟ್ಯಾಂಡರ್ಡ್ 60Hz ರಿಫ್ರೆಶ್ ರೇಟ್‌ ಮತ್ತು ಲೋ ಬ್ಲೂ ಲೈಟ್‌ ಮೋಡ್ ಅನ್ನು ಹೊಂದಿವೆ. ಒಪ್ಪೋ ಸ್ಮಾರ್ಟ್ ಟಿವಿ K9 ಸರಣಿಯನ್ನು ಬ್ಲ್ಯಾಕ್‌ ಕಲರ್‌ ಆಯ್ಕೆಯಲ್ಲಿ ಹೆಚ್‌ಡಿಆರ್ 10 + ಬೆಂಬಲದೊಂದಿಗೆ ನೀಡಲಾಗುತ್ತದೆ. ಈ ಎಲ್ಲಾ ಮೂರು ಮಾದರಿಗಳು 2GB RAM ಮತ್ತು ಒಂದೇ ಕ್ವಾಡ್ ಕೋರ್ ಪ್ರೊಸೆಸರ್‌ ಅನ್ನು ಹೊಂದಿವೆ. ಇನ್ನುಳಿದಂತೆ ಈ ಸ್ಮಾರ್ಟ್‌ಟಿವಿಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಸ್ಮಾರ್ಟ್

ಒಪ್ಪೋ ಸ್ಮಾರ್ಟ್ ಟಿವಿ K9 65-ಇಂಚು ಮತ್ತು 55 ಇಂಚಿನ ಮಾದರಿಗಳು 3,840x2,160 ಪಿಕ್ಸೆಲ್‌ ಸ್ಕ್ರಿನ್‌ ರೆಸಲ್ಯೂಶನ್‌ ಸಾಮರ್ಥ್ಯದ 4K ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 60Hz ರಿಫ್ರೆಶ್ ರೇಟ್‌, 93% ಡಿಸಿಐ-ಪಿ 3, ಮತ್ತು 300 ನಿಟ್ಸ್ ವಿಶಿಷ್ಟ ಬ್ರೈಟ್‌ನೆಸ್‌ ಹೊಂದಿವೆ. 43 ಇಂಚಿನ ಮಾದರಿಯು 1,920x1,080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ ಫುಲ್‌ ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ. ಇದು 60Hz ರಿಫ್ರೆಶ್ ರೇಟ್‌ಅನ್ನು ಹೊಂದಿದೆ. ಆದರೆ 230 ನಿಟ್‌ಗಳ ವಿಶಿಷ್ಟ ಹೊಳಪನ್ನು ಹೊಂದಿದೆ. ಇನ್ನು ಒಪ್ಪೊ ಸ್ಮಾರ್ಟ್ ಟಿವಿ K9 65-ಇಂಚಿನ ರೂಪಾಂತರವು 60Hz MEMC ಡೈನಾಮಿಕ್ ಪರಿಹಾರವನ್ನು ಬೆಂಬಲಿಸುತ್ತದೆ. ಇತರ ಎರಡು ಮಾದರಿಗಳು ಅದನ್ನು ಬೆಂಬಲಿಸುವುದಿಲ್ಲ.

ಸ್ಮಾರ್ಟ್

ಇನ್ನು ಒಪ್ಪೊ ಸ್ಮಾರ್ಟ್ ಟಿವಿ K9 65-ಇಂಚಿನ ಮತ್ತು 55-ಇಂಚಿನ ಮಾದರಿಗಳು ಒಟ್ಟು 30W ಔಟ್‌ಪುಟ್‌ ನೀಡುವ ಎರಡು 15W ಸ್ಪೀಕರ್‌ಗಳನ್ನು ಹೊಂದಿವೆ. ಅಲ್ಲದೆ 43 ಇಂಚಿನ ಮಾದರಿಯು ಡಾಲ್ಬಿ ಆಡಿಯೊವನ್ನು ಸಹ ಬೆಂಬಲಿಸಿದರೆ, ಇದು 20W ಸೌಂಡ್‌ ಪ್ರೊಡಕ್ಟನ್‌ಗೆ ಎರಡು 10W ಸ್ಪೀಕರ್‌ಗಳೊಂದಿಗೆ ಬರುತ್ತದೆ. ಇನ್ನು ಈ ಎಲ್ಲಾ ಸ್ಮಾರ್ಟ್‌ಟಿವಿಗಳು ಕ್ವಾಡ್ ಕೋರ್ ಮೀಡಿಯಾ ಟೆಕ್ MT9652 SoC ಮತ್ತು G52 MC1 GPU ನಿಂದ ನಿಯಂತ್ರಿಸಲ್ಪಡುತ್ತವೆ. ಇದಲ್ಲದೆ ಒಪ್ಪೋ ಸ್ಮಾರ್ಟ್ ಟಿವಿ K9 ಸರಣಿಯು ಕಲರ್ಓಎಸ್ ಟಿವಿ 2.0 ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ವಾಯ್ಸ್‌ ಅಸಿಸ್ಟೆಂಟ್‌ ಹೊಂದಿರುವ ರಿಮೋಟ್‌ನೊಂದಿಗೆ ಬರುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಾಗಿ ಟಿವಿ K9 ಸರಣಿಯು ಡ್ಯುಯಲ್-ಬ್ಯಾಂಡ್ ವೈ-ಫೈ, ಬ್ಲೂಟೂತ್ ವಿ 5, ಮೂರು ಎಚ್‌ಡಿಎಂಐ ಪೋರ್ಟ್‌ಗಳು, ಎರಡು ಯುಎಸ್‌ಬಿ ಪೋರ್ಟ್‌ಗಳು, ಡಿಟಿಎಂಬಿ ಪೋರ್ಟ್ ಮತ್ತು ಎತರ್ನೆಟ್ ಪೋರ್ಟ್ ಅನ್ನು ಒಳಗೊಂಡಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಒಪ್ಪೋ ಸ್ಮಾರ್ಟ್ ಟಿವಿ K9 65-ಇಂಚಿನ ಸ್ಮಾರ್ಟ್‌ಟಿವಿ ಬೆಲೆ ಸಿಎನ್‌ವೈ 3,999 (ಸುಮಾರು 45,600 ರೂ.), 55 ಇಂಚಿನ ಮಾದರಿಯ ಬೆಲೆ ಸಿಎನ್‌ವೈ 2,799 (ಸುಮಾರು ರೂ. 32,000), ಮತ್ತು 43 ಇಂಚಿನ ಮಾದರಿಯ ಬೆಲೆ ಸಿಎನ್‌ವೈ 1,999 (ಸುಮಾರು ರೂ.22,800)ಬೆಲೆಯನ್ನು ಹೊಂದಿವೆ. ಇನ್ನು ಒಪ್ಪೋ ಸಂಸ್ಥೆ ಮೂರು ಮಾದರಿಗಳನ್ನು ಸಿಎನ್‌ವೈ 3,299 (ಸುಮಾರು ರೂ. 37,700), ಸಿಎನ್‌ವೈ 1,999 (ಸುಮಾರು 22,800 ರೂ.), ಮತ್ತು ಸಿಎನ್‌ವೈ 1,799 (ಸುಮಾರು 20,500 ರೂ) ರಿಯಾಯಿತಿ ದರದಲ್ಲಿ ಸೀಮಿತ ಸಮಯಕ್ಕೆ ನೀಡುತ್ತಿದೆ. ಒಪ್ಪೋ ಸ್ಮಾರ್ಟ್ ಟಿವಿ K9 ಸರಣಿಯು ಮೇ 11 ರಿಂದ ಚೀನಾದಲ್ಲಿ ಮಾರಾಟವಾಗಲಿದೆ.

Best Mobiles in India

English summary
Oppo Smart TV K9 Series With HDR10+, Dolby Audio Launched.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X