Home
ಸುದ್ದಿಜಾಲ

ಒಪ್ಪೋದಿಂದ ಆಪಲ್‌ ಸ್ಮಾರ್ಟ್‌ವಾಚ್‌ ಅನ್ನೇ ಹೋಲುವ ಸ್ಮಾರ್ಟ್‌ವಾಚ್‌ ಲಾಂಚ್‌!

ಇತ್ತೀಚಿನ ದಿನಗಳಲ್ಲಿ ಟೆಕ್‌ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ವಾಚ್‌ಗಳ ಭರಾಟೆ ಜೋರಾಗಿ ನಡೆಯುತ್ತಿದೆ. ಅದರಲ್ಲೂ ಹೆಚ್ಚಿನ ಗ್ರಾಹಕರು ಫಿಟ್ನೆಸ್‌ ಆಧಾರಿತ ಸ್ಮಾರ್ಟ್‌ವಾಚ್‌ಗಳ ಮೇಲೆ ಹೆಚ್ಚಿನ ಒಲವನ್ನು ಹೊಂದಿದ್ದಾರೆ. ಇದೇ ಕಾರಣಕ್ಕೆ ಹಲವು ಸ್ಮಾರ್ಟ್‌ಫೋನ್‌ ಕಂಪೆನಿಗಳು ಸಹ ಸ್ಮಾರ್ಟ್‌ವಾಚ್‌ಗಳನ್ನ ಪರಿಚಯಿಸುತ್ತಿವೆ. ಇದೀಗ ಒಪ್ಪೋ ಕಂಪೆನಿ ಕೂಡ ಹೊಸ ಆವೃತ್ತಿಯ ಸ್ಮಾರ್ಟ್‌ವಾಚ್‌ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಸ್ಮಾರ್ಟ್‌ವಾಚ್‌ ಥೇಟ್‌ ಆಪಲ್‌ ಕಂಪೆನಿಯ ಸ್ಮಾರ್ಟ್‌ವಾಚ್‌ ಮಾದರಿಯನ್ನ ಹೊಂದಿದೆ ಎಂದು ಹೇಳಲಾಗ್ತಿದೆ.

ಹೌದು

ಹೌದು, ಚೀನಾ ಮೂಲದ ಜನಪ್ರಿಯ ಸ್ಮಾರ್ಟ್‌ಫೋನ್‌ ತಯಾರಕ ಒಪ್ಪೋ ಕಂಪೆನಿ ತನ್ನ ಹೊಸ ಸ್ಮಾರ್ಟ್‌ವಾಚ್‌ ಅನ್ನು ಲಾಂಚ್‌ ಮಾಡಿದೆ. ಈ ಸ್ಮಾರ್ಟ್‌ವಾಚ್‌ ಒಪ್ಪೋ ಕಂಪೆನಿಯ ಮೊದಲ ಸ್ಮಾರ್ಟ್‌ವಾಚ್‌ ಆಗಿದೆ. ಪ್ರಸ್ತುತ ಯುವಜನತೆಯ ಆಶಯಕ್ಕೆ ತಕ್ಕಂತೆ ಈ ಸ್ಮಾರ್ಟ್‌ವಾಚ್‌ ಅನ್ನು ವಿನ್ಯಾಸಗೊಳಿಸಲಾಗಿದೆ ಎನ್ನಲಾಗ್ತಿದ್ದು. ಅಲ್ಲದೆ ಇದರ ವಿನ್ಯಾಸ ಆಪಲ್ ಸ್ಮಾರ್ಟ್‌ವಾಚ್‌ ಅನ್ನೇ ಹೊಲುವಂತಿದ್ದು ಮಾರುಕಟ್ಟೆಯಲ್ಲಿ ಸೌಂಡ್‌ ಮಾಡೋ ಸೂಚನೆ ನೀಡಿದೆ.

ಒಪ್ಪೋ ಸ್ಮಾರ್ಟ್‌ವಾಚ್‌

ಒಪ್ಪೋ ಸ್ಮಾರ್ಟ್‌ವಾಚ್‌

ಇನ್ನು ಈ ಸ್ಮಾರ್ಟ್‌ವಾಚ್‌ 1.6 ಇಂಚಿನ ಅಮೋಲೆಡ್ ಡಿಸ್‌ಪ್ಲೇಯನ್ನ ಹೊಂದಿದೆ. ಅಲ್ಲದೆ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 2500 ಚಿಪ್‌ಸೆಟ್‌ ಪ್ರೊಸೆಸರ್‌ ಹೊಂದಿದ್ದು, ಕಲರ್‌ಒಎಸ್‌ ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಅಲ್ಲದೆ ಈ ಸ್ಮಾರ್ಟವಾಚ್‌ 1GB RAM ಮತ್ತು 8GB ಇನ್‌ಬಿಲ್ಟ್‌ ಸ್ಟೋರೇಜ್‌ ಸಾಮರ್ಥ್ಯವನ್ನ ಒಳಗೊಂಡಿದೆ. ಅಷ್ಟೇ ಅಲ್ಲ ಇದು LTE ಬೆಂಬಲವನ್ನ ಪಡೆಯಲಿದ್ದು, eSIM ಅನ್ನು ಬೆಂಬಲಿಸಲಿದೆ. ಅಲ್ಲದೆ NFC ಯನ್ನು ಸಹ ಬೆಂಬಲಿಸಲಿದೆ.

ಸ್ಮಾರ್ಟ್‌ಫೋನ್‌ ವಿನ್ಯಾಸ

ಸ್ಮಾರ್ಟ್‌ಫೋನ್‌ ವಿನ್ಯಾಸ

ಈ ಸ್ಮಾರ್ಟ್‌ವಾಚ್‌ ಥೇಟ್‌ ಆಪಲ್‌ ಕಂಪೆನಿಯ ಸ್ಮಾರ್ಟ್‌ವಾಚ್‌ ಹೋಲುವಂತಹ ವಿನ್ಯಾಸವನ್ನೇ ಹೊಂದಿದೆ. ಅಲ್ಲದೆ ಇದು ಬಳಕೆದಾರು ಧರಿಸುವುದಕ್ಕೆ ಉತ್ತಮ ವಿನ್ಯಾಸವನ್ನ ಹೊಂದಿದ್ದು, ಕೈ ಮಣಿಕಟ್ಟಿನ ಮೇಲೆ ಉತ್ತಮವಾಗಿ ಹೊಂದಿಕೊಳ್ಳಲಿದೆ. ಅಲ್ಲದೆ ಈ ಸ್ಮಾರ್ಟ್‌ವಾಚ್‌ನ ಎರಡು ಬದಿಗಳಲ್ಲೂ ಕಿರೀಟ ಮಾದರಿಯ ಗುಂಡಿಗಳನ್ನ ನೀಡಲಾಗಿದೆ. ಅಲ್ಲದೆ ಇದು ECG ಯನ್ನು ಬೆಂಬಲಿಸುವುದಿಲ್ಲ ಅನ್ನೊದು ಬಿಟ್ಟರೆ ಈ ಸ್ಮಾರ್ಟ್‌ವಾಚ್‌ ಆಪಲ್‌ 5 ಸ್ಮಾರ್ಟ್‌ವಾಚ್‌ಗೆ ಸರಿಸಮವಾಗಿದೆ.

ವಿಶೇಷತೆ

ವಿಶೇಷತೆ

ಒಪ್ಪೋ ಕಂಪೆನಿಯ ಈ ಹೊಸ ಸ್ಮಾರ್ಟ್‌ವಾಚ್‌ ಬಳಕೆದಾರರ ಹಾರ್ಟ್‌ಬೀಟ್‌ ರೇಟಿಂಗ್‌ ಅನ್ನು ಟ್ರ್ಯಾಕ್‌ ಮಾಡುವ ಸೆನ್ಸಾರ್‌ ಅನ್ನು ಮಾಡಲಿದೆ. ದೇಹದ ಆರೋಗ್ಯಕ್ಕೆ ಸಂಬಂಧಿಸಿದ ವ್ಯಾಮಾಯಗಳ ನೋಟಿಫೀಕೇಶನ್‌ ನೀಡಲಿದೆ. ಸೈಕ್ಲಿಂಗ್‌, ಸ್ಲೀಪ್‌ ಮಾನಿಟರಿಂಗ್‌, ವ್ಯವಸ್ಥೆಯನ್ನ ಒಳಗೊಂಡಿದೆ. ದೇಹದ ರಕ್ತ ಶುದ್ದತೆಯ ಮಟ್ಟವನ್ನ ತಿಳಿಸಿಕೊಡಲಿದೆ. ಜೊತೆಗೆ ವರ್ಕೌಟ್‌ ಮೋಡ್‌ಗಳನ್ನ ಈ ಸ್ಮಾರ್ಟ್‌ವಾಚ್‌ನಲ್ಲಿ ಅಳವಡಿಸಲಾಗಿದೆ.

ಬ್ಯಾಟರಿ ಮತ್ತು ಲಭ್ಯತೆ

ಬ್ಯಾಟರಿ ಮತ್ತು ಲಭ್ಯತೆ

ಇನ್ನು ಈ ಸ್ಮಾರ್ಟ್‌ವಾಚ್‌ 430mAh ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿದ್ದು, VOOC ಫ್ಲ್ಯಾಶ್‌ ಚಾರ್ಜ್‌ ಅನ್ನು ಬೆಂಬಲಿಸಲಿದೆ. ಇನ್ನು ಈ ಸ್ಮಾರ್ಟ್‌ವಾಚ್‌ 41mm ಮತ್ತು 46mm ಆಳತೆ ಹೊಂದಿರುವ ಸ್ಟೇನ್‌ಲೆಸ್‌ ಸ್ಟೀಲ್‌ ಮಾದರಿಯನ್ನ ಹೊಂದಿದೆ. ಇನ್ನು 41mm ಅಳತೆಯ ಸ್ಮಾರ್ಟ್‌ವಾಚ್‌ CNY 1,499 (ಅಂದಾಜು 16,100 ರೂ) ಬೆಲೆಯನ್ನ ಹೊಂದಿದೆ. ಅಲ್ಲದೆ 46mm ಅಳತೆಯ ಸ್ಮಾರ್ಟ್‌ವಾಚ್‌ CNY 1,999 (ಸುಮಾರು 21,400 ರೂ.) ಬೆಲೆಯನ್ನ ಹೊಂದಿದ್ದು, ಬ್ಲ್ಯಾಕ್‌, ವೈಟ್‌, ಪಿಂಕ್‌ ಕಲರ್‌ನಲ್ಲಿ ಲಭ್ಯವಾಗಲಿದೆ.

Best Mobiles in India

English summary
Oppo’s first smartwatch looks like an Apple Watch clone but with a cheaper price tag.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+