ಒಪ್ಪೋ ಕಂಪೆನಿಯಿಂದ ಬರಲಿದೆ 'ಹೇಥಿಂಗ್ಸ್ ಐಒಟಿ' ಸ್ಮಾರ್ಟ್‌ವಾಚ್!
ಪ್ರಸ್ತುತ ಟೆಕ್‌ಲೋಕದಲ್ಲಿ ಸ್ಮಾರ್ಟ್‌ವಾಚ್‌ಗಳಿಗೆ ಬಾರಿ ಬೇಡಿಕೆ ಇದೆ. ವಿಭಿನ್ನ ಮಾದರಿಯ ಸ್ಮಾರ್ಟ್‌ವಾಚ್‌ಗಳು ಮಾರುಕಟ್ಟೆಯಲ್ಲಿದ್ದು ವಿಭಿನ್ನ ಬಗೆಯ ಫೀಚರ್ಸ್‌ಗಳ ಮೂಲಕ ಗ್ರಾಹಕರ ಗಮನ ಸೆಳೆದಿವೆ. ಇದರ ನಡುವೆ ಈಗಾಗಲೇ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಸಾಕಷ್ಟು ಸೌಂಡ್ ಮಾಡ್ತಿರೋ ಒಪ್ಪೋ ಕಂಪೆನಿ ಇದೀಗ ಸ್ಮಾರ್ಟ್‌ವಾಚ್‌ಗಳನ್ನು ಸಹ ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಘೋಷಿಸಿದೆ.

ಹೌದು, ಹೊಸ ಮಾದರಿಯ ಐಒಟಿ(IOT) ಪ್ಲಾಟ್‌ಫಾರ್ಮ್ ಅನ್ನು ಪ್ರಾರಂಭಿಸುವುದಾಗಿ ಒಪ್ಪೋ ಉಪಾಧ್ಯಕ್ಷ ಲಿಯು ಬೊ ಹೇಳಿಕೆ ನೀಡಿದ್ದು ಟೆಕ್‌ಲೋಕದಲ್ಲಿ ಬಾರಿ ಸಂಚಲನ ಮೂಡಿಸಿದೆ. ಈಗಾಗಲೇ ಸ್ಮಾರ್ಟ್‌ವಾಚ್ ಮಾರುಕಟ್ಟೆಯಲ್ಲಿ ಬಾಡಿ ಫಿಟ್ನೆಸ್ ಸಂಬಂಧಿಸಿದ ಸಾಕಷ್ಟು ಫಿಟ್ನೆಸ್ ಬ್ಯಾಂಡ್‌ಗಳು ಹಾಗೂ ಫಿಟನೆಸ್ ಸ್ಮಾರ್ಟ್‌ವಾಚ್‌ಗಳು ಸೌಂಡ್ ಮಾಡ್ತಿವೆ. ಇದೀಗ ಒಪ್ಪೊ ಕಂಪೆನಿಯ ಸ್ಮಾರ್ಟ್‌ವಾಚ್ ಹೇಗಿರಲಿದೆ ಅನ್ನೊ ಕುತೂಹಲ ಸೃಷ್ಟಿಯಾಗಿದೆ.

ಒಪ್ಪೊ ಕಂಪೆನಿ ಸ್ಮಾರ್ಟ್‌ವಾಚ್‌ಗಳನ್ನ ಮಾರುಕಟ್ಟೆಗೆ ಬಿಡುಗಡೆ ಮಾಡೋದಕ್ಕೆ ಮುಂದಾಗಿದ್ದು, ಈ ಸ್ಮಾರ್ಟ್‌ವಾಚ್ ‘ಹೇಥಿಂಗ್ಸ್ ಐಒಟಿ' ಪ್ರೋಟೋಕಾಲ್ ಮತ್ತು ಆಡಿಯೊ ಇಂಟರ್ಕನೆಕ್ಷನ್ ಪ್ರೊಟೊಕಾಲ್ ಹೊಂದಿರಲಿದೆ. ಜೊತೆಗೆ ಒಪ್ಪೋ ಸ್ಮಾರ್ಟ್ ವಾಚ್ ಆರೋಗ್ಯ ಸಂಬಂಧಿತ ಸೇವೆಗಳತ್ತ ಹೆಚ್ಚು ಗಮನ ಹರಿಸಲಿದ್ದು 2020ರ ಮೊದಲ ತ್ರೈಮಾಸಿಕದಲ್ಲಿ ಕಂಪೆನಿ ತನ್ನ ಮೊದಲ ಸ್ಮಾರ್ಟ್ ವಾಚ್ ಅನ್ನು ಬಿಡುಗಡೆ ಮಾಡಲಿದೆ ಎಂದು ಲಿಯು ಬೊ (ಒಪ್ಪೋ ಉಪಾಧ್ಯಕ್ಷ) ಬಹಿರಂಗಪಡಿಸಿದ್ದಾರೆ.

ಇನ್ನು ಈ ಸ್ಮಾರ್ಟ್‌ವಾಚ್ ಅನ್ನ ಪರ್ಸನಲ್, ಕುಟುಂಬ, ಪ್ರಯಾಣ ಮತ್ತು ಕಚೇರಿ ಎಂಬ ನಾಲ್ಕು ಆಯ್ಕೆಗಳ ಮೇಲೆ ಆಧರಿಸಿ ಸ್ಮಾರ್ಟ್‌ವಾಚ್ ಅನ್ನ ತಯಾರಿಸಲಾಗುತ್ತದೆ ಎಂದು ಹೇಳಲಾಗಿದೆ. ಮಲ್ಟಿ- ಟರ್ಮಿನಲ್ ಮತ್ತು ಪರಿಸರ ವ್ಯವಸ್ಥೆಗೆ ಅನುಗುಣವಾಗಿ ಈ ಸ್ಮಾರ್ಟ್‌ವಾಚ್ ಅನ್ನ ನಿರ್ಮಿಸುವುದು ಬ್ರಾಂಡ್‌ನ ಉದ್ದೇಶವಾಗಿದೆ ಎಂದು ಲಿಯು ಬೊ(ಒಪ್ಪೋ ಉಪಾಧ್ಯಕ್ಷ) ಉಲ್ಲೇಖಿಸಿದ್ದಾರೆ. ಇದಲ್ಲದೆ ಹೇಥಿಂಗ್ಸ್ ಐಒಟಿ(IOT) ಪ್ರೋಟೋಕಾಲ್ ಮತ್ತು ಮಲ್ಟಿ-ಪ್ರೋಟೋಕಾಲ್ ನಿಂದ ಸ್ಥಳೀಯ ಸಂಪರ್ಕ ಮತ್ತು ಸ್ಮಾರ್ಟ್‌ಫೋನ್ ನಡುವೆಯೂ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತದೆ ಎಂದಿದ್ದಾರೆ.

ಇನ್ನು ಈ ಸ್ಮಾರ್ಟ್‌ವಾಚ್‌ನಿಂದ ಆಡಿಯೋ ಸೌಲಭ್ಯ ಕೂಡ ಇರಲಿದ್ದು, ಪ್ಲೇಬ್ಯಾಕ್ ಸಂಗೀತವನ್ನ ಕೇಳಬಹುದಾಗಿದೆ. ಅಲ್ಲದೆ ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳಾದ ರನ್ನಿಂಗ್, ಟ್ರಕ್ಕಿಂಗ್,ಹಾರ್ಟ್‌ಬೀಟ್ ಕೌಟಿಂಗ್ ವ್ಯವಸ್ಥೆ ಕೂಡ ಇರಲಿದೆ. ಅಲ್ಲದೆ ಈ ಸ್ಮಾರ್ಟ್‌ವಾಚ್‌ನಲ್ಲಿ ಹೈಪರ್ ಬೂಸ್ಟ್, ಲಿಂಕ್ ಬೂಸ್ಟ್, ಕ್ಯಾಮೆರಾ ಯುನಿಟ್, ಮೀಡಿಯಾ ಯುನಿಟ್ ಸಿಸ್ಟಮ್ ಲೆವೆಲ್ ಡೆವಲಪರ್‌ಗಳನ್ನು ಸಕ್ರಿಯಗೊಳಿಸಲು ಎಕ್ಸ್‌ಪೋಸರ್ ಎಂಜಿನ್‌ಗಳನ್ನು ವಿನ್ಯಾಸಗೊಳಿಸಲಾಗಿದೆ.

ಒಪ್ಪೊ ಸ್ಮಾರ್ಟ್‌ವಾಚ್ ಹೇಥಿಂಗ್ಸ್ ಐಒಟಿ ಮಲ್ಟಿ ಕನೆಕ್ಟಿವಿಟಿಯನ್ನ ಹೊಂದಿರಲಿದ್ದು,ಇದನ್ನ ಸ್ಮಾರ್ಟ್‌ವಾಚ್‌ಗಳ ಜೊತೆಗೆ ಸಂಯೋಜಿಸಬಹುದಾಗಿದೆ. ಅಲ್ಲದೆ ತನ್ನ ಬಳಕೆದಾರರಿಗೆ ಸುಗಮ, ತ್ವರಿತ ಮತ್ತು ವರ್ಧಿತ ಸಾಫ್ಟ್‌ವೇರ್ ಅನುಭವವ ನೀಡುವಂತಹ ವಿನ್ಯಾಸದಲ್ಲಿ ಈ ಸ್ಮಾರ್ಟ್‌ವಾಚ್ ಮೂಡಿ ಬರಲಿದೆ. ಜೊತೆಗೆ ದೇಹದ ಆರೋಗ್ಯಕ್ಕೆ ಅನುಗುಣವಾಗಿ ಇದರಲ್ಲಿ ಮಾಹಿತಿಯನ್ನ ಪಡೆಯಬಹುದಾಗಿದ್ದು ಆರೋಗ್ಯ ವ್ಯವಸ್ಥೆಯ ಬಗ್ಗೆ ನಿಖರ ಮಾಹಿತಿ ನೀಡಲಿದೆ ಎಂದು ಕಂಪೆನಿ ಹೇಳಿಕೊಂಡಿದೆ.

ಇನ್ನು ಈ ಸ್ಮಾರ್ಟ್‌ವಾಚ್ ಒಪ್ಪೊ ಕಂಪೆನಿ ಹೊರತರುತ್ತಿರುವ ಮೊದಲ ಸ್ಮಾರ್ಟ್‌ವಾಚ್ ಆಗಿದ್ದು ಬೆಲೆಯ ಬಗ್ಗೆ ಇನ್ನು ಯಾವುದೇ ಮಾಹಿತಿ ಬಹಿರಂಗವಾಗಿಲ್ಲ, ಆದರೆ ಒಪ್ಪೋ ಸ್ಮಾರ್ಟ್‌ವಾಚ್ ಕುರಿತು ಈಗಾಗ್ಲೆ ಬಾರಿ ನಿರೀಕ್ಷೆಯನ್ನ ಇಟ್ಟುಕೊಳ್ಳಲಾಗಿದೆ.


Click it and Unblock the Notifications








