Home
ಸುದ್ದಿಜಾಲ

ಒಪ್ಪೋ ಸಂಸ್ಥೆಯಿಂದ ಭಾರತದಲ್ಲಿ ಹೊಸ ಮಾದರಿಯ ಪ್ರೀಮಿಯಂ ಫೋನ್ ಬಿಡುಗಡೆಗೆ ಸಿದ್ದತೆ!

ಚೀನಾದ ಜನಪ್ರಿಯ ಸ್ಮಾರ್ಟ್‌ಫೋನ್‌ ತಯಾರಕ ಒಪ್ಪೋ ತನ್ನ ವಿಶೇಷ ಮಾದರಿಯ ಸ್ಮಾರ್ಟ್‌ಫೋನ್‌ಗಳ ಮೂಲಕ ಗುರುತಿಸಿಕೊಂಡಿದೆ. ಹೊಸ ಮಾದರಿಯ ಫೀಚರ್ಸ್‌ ಹಾಗೂ ವಿನ್ಯಾಸಗಳಿಗೆ ಹೆಸರುವಾಸಿಯಾದ ಒಪ್ಪೋ ಸ್ಮಾರ್ಟ್‌ಫೋನ್‌ ಪ್ರಿಯರ ನೆಚ್ಚಿನ ಬ್ರ್ಯಾಂಡ್‌ಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಸದ್ಯ ಈಗಾಗಲೇ ಹಲವು ವೈವಿಧ್ಯಮಯ ಸ್ಮಾರ್ಟ್‌ಫೋನ್‌ಗಳನ್ನ ಬಿಡುಗಡೆ ಮಾಡಿರುವ ಒಪ್ಪೋ ಇದೀಗ ಭಾರತದಲ್ಲಿ ರೆನೋ 4 ಸರಣಿಯೊಂದಿಗೆ ಮತ್ತೊಂದು ಪ್ರೀಮಿಯಂ ಫೋನ್ ಅನ್ನು ಬಿಡುಗಡೆ ಮಾಡಲಿದೆ ಎಂದು ವರದಿ ಆಗಿದೆ.

ಸ್ಮಾರ್ಟ್‌ಫೋನ್‌

ಹೌದು, ಜನಪ್ರಿಯ ಸ್ಮಾರ್ಟ್‌ಫೋನ್‌ ಕಂಪೆನಿ ಒಪ್ಪೋ ತನ್ನ ಮತ್ತೊಂದು ಪ್ರೀಮಿಯಂ ಸ್ಮಾರ್ಟ್‌ಫೋನ್‌ ಪರಿಚಯಿಸಲಿದೆ ಎಂದು ವರದಿ ಆಗಿದೆ. ಇದೀಗ ಒಪ್ಪೋ ಕಂಪನಿಯು ಮುಂದಿನ ತಿಂಗಳು ಫೈಂಡ್ ಎಕ್ಸ್ 2 ಅನ್ನು ಬಿಡುಗಡೆ ಮಾಡಲಿದೆ, ಇದಾದ ನಂತರ ದಿನಗಳಲ್ಲಿ ಒಪ್ಪೋ ರೆನೋ 4 ಸರಣಿಯಲ್ಲಿ ಸ್ಮಾರ್ಟ್‌ಫೋನ್‌ಗಳನ್ನ ಬಿಡುಗಡೆ ಮಾಡಲು ಪ್ಲ್ಯಾನ್‌ ಮಾಡಿಕೊಂಡಿದೆ. ಇದರ ನಡುವೆ ಇದೀಗ ಕಂಪೆನಿ ಬಿಡುಗಡೆ ಮಾಡಿರುವ ಹೊಸ ಟೀಸರ್ ಪ್ರಕಾರ, ಮತ್ತೊಂದು ಪ್ರೀಮಿಯಂ ಫೋನ್ ಬಿಡುಗಡೆ ಮಾಡಲಿದೆ ಎನ್ನಲಾಗ್ತಿದೆ.

ಒಪ್ಪೋ

ಸದ್ಯ ಒಪ್ಪೋ ರೆನೋ 4 ಪ್ರೊ ಬಿಡುಗಡೆ ಆಗಿ ಯಶ್ವಸಿಯಾದ ನಂತರ ಮತ್ತೊಂದು ಪ್ರೀಮಿಯಂ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಎಂಟ್ರಿ ನೀಡಲಿದೆ ಎಂದು ಒಪ್ಪೋ ಕಂಪೆನಿ ಟ್ವಿಟ್ಟರ್‌ನಲ್ಲಿಹೇಳಿಕೊಂಡಿದೆ. ಅಲ್ಲದೆ ಕಂಪೆನಿಯ ಟ್ವೀಟ್ ಪ್ರಕಾರ, ಇನ್ನೂ ಹೆಸರಿಸದ ಈ ಹೊಸ ಸ್ಮಾರ್ಟ್‌ಫೋನ್‌ ರೆನೋ 4 ಸರಣಿಯ ಸ್ಮಾರ್ಟ್‌ಫೋನ್‌ ಜೊತೆಗೆ ಬಿಡುಗಡೆ ಆಗುವ ಸಾಧ್ಯತೆಯಿದೆ. ಆದರೆ ಭಾರತದಲ್ಲಿ ಒಪ್ಪೋ ರೆನೋ ಸರಣಿಯ ಸ್ಮಾರ್ಟ್‌ಫೋನ್‌ ಬಿಡುಗಡೆಯ ದಿನಾಂಕವನ್ನ ಇನ್ನೂ ಬಹಿರಂಗ ಪಡಿಸದ ಕಾರಣ ಈ ಪ್ರೀಮಿಯಂ ಸ್ಮಾರ್ಟ್‌ಫೋನ್‌ ಬಿಡುಗಡೆ ಯಾವಾಗ ಎನ್ನುವುದರ ಬಗ್ಗೆ ಇನ್ನು ದಿನಾಂಕ ನಿಗಧಯಾಗಿಲ್ಲ.

ಒಪ್ಪೋ

ಇನ್ನು ಈಗಾಗಲೇ ಕೆಲವು ದಿನಗಳ ಹಿಂದೆಯಷ್ಟೇ ಭಾರತಕ್ಕೆ ತಕ್ಕಂತೆ ಫೀಚರ್ಸ್‌ಗಳನ್ನ ಹೊಂದಿರುವ ರೆನೋ 4 ಸರಣಿಯನ್ನು ಬಿಡುಗಡೆ ಮಾಡುವುದಾಗಿ ಒಪ್ಪೋ ಹೇಳಿಕೊಂಡಿತ್ತು. ಅಲ್ಲದೆ ಒಪ್ಪೊ ರೆನೋ 4 ಮತ್ತು ರೆನೋ 4 ಪ್ರೊ ಅನ್ನು ಈಗಾಗಲೇ ಚೀನಾದಲ್ಲಿ ಬಿಡುಗಡೆ ಮಾಡಲಾಗಿದೆ. ಆದರೆ ಭಾರತದಲ್ಲಿ ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆಯಾ ಅನ್ನೊದನ್ನ ಕಾದು ನೊಡಬೇಕಿದೆ. ಜೊತೆಗೆ ಒಪ್ಪೋ ರೆನೋ 4 ಸರಣಿಯ ಸ್ಮಾರ್ಟ್‌ಫೋನ್‌ಗಳು ಎರಡು ವಿಧದ ವೇರಿಯೆಂಟ್‌ ಆಯ್ಕೆಗಳಲ್ಲಿ ಲಭ್ಯವಾಗಲಿದೆ ಎನ್ನಲಾಗ್ತಿದೆ.

ರೆನೋ 4

ಸದ್ಯ ಚೀನಾದಲ್ಲಿ ಬಿಡುಗಡೆ ಆಗಿರುವ ರೆನೋ 4 ಮತ್ತು ರೆನೋ 4 ಪ್ರೊ ಸ್ಮಾರ್ಟ್‌ಫೋನ್‌ ಕ್ರಮವಾಗಿ 6.43-ಇಂಚಿನ ಮತ್ತು 6.55-ಇಂಚಿನ AMOLED ಡಿಸ್ಪ್ಲೇಗಳನ್ನು ಹೊಂದಿದೆ. ಅಲ್ಲದೆ ಈ ಡಿಸ್‌ಪ್ಲೇ ಸ್ಕ್ರೀನ್‌ 90Hz ರಿಫ್ರೆಶ್ ರೇಟ್‌ ಮತ್ತು ಫುಲ್‌ HD + ರೆಸಲ್ಯೂಶನ್ ಅನ್ನು ಬೆಂಬಲಿಸಲಿವೆ. ಇನ್ನು ಈ ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 765G ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್ 10 ಆಧಾರಿತ ಇತ್ತೀಚಿನ ಕಲರ್ಓಎಸ್ 7.2 ಆವೃತ್ತಿಯ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿವೆ.

Best Mobiles in India

English summary
The company is going to launch a slew of phones with ColorOS in the country over the next few months.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+