ಒಪ್ಪೋದ ಹೊಸ ಫೋನಿನಲ್ಲಿ ಇರಲಿದೆ ಹೈ-ಎಂಡ್‌ ಪ್ರೊಸೆಸರ್‌!

|

ಚೀನಾ ಮೂಲದ ಜನಪ್ರಿಯ ಸ್ಮಾರ್ಟ್‌ಫೋನ್‌ ತಯಾರಕ ಕಂಪೆನಿ ಒಪ್ಪೋ ಸ್ಮಾರ್ಟ್‌ಫೋನ್‌ ಕಂಪೆನಿ ತನ್ನ ಹೊಸ ಆವೃತ್ತಿಯ ಸ್ಮಾರ್ಟ್‌ಫೋನ್‌ ಬಿಡುಗಡೆಗೆ ಸಜ್ಜಾಗಿದೆ. ಈಗಾಗಲೇ ತನ್ನ ವಿಭಿನ್ನ ಪೀಚರ್ಸ್‌ಗಳ ಮೂಲಕ ಸ್ಮಾರ್ಟ್‌ಫೋನ್‌ ಪ್ರಿಯರನ್ನ ಸೆಳೆದಿರೋ ಒಪ್ಪೋ ಕಂಪೆನಿ ಇದೇ ಮೊದಲ ಬಾರಿಗೆ ಡೈಮೆನ್ಸಿಟಿ 1000 ಎಲ್ ಪ್ರೊಸೆರ್‌ ನಿಂದ ಕಾರ್ಯನಿರ್ವಹಿಸುವ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಲಿದೆ ಎಂದು ಹೇಳಲಾಗ್ತಿದ್ದು ಇದು ಡೈಮೆನ್ಸಿಟಿ 1000 ಎಲ್‌ನಿಂದ ಕಾರ್ಯನಿರ್ವಹಿಸೋ ವಿಶ್ವದ ಮೊದಲ ಸ್ಮಾರ್ಟ್‌ಫೋನ್‌ ಆಗಿರಲಿದೆ.

ಒಪ್ಪೋ

ಹೌದು ಒಪ್ಪೋ ಕಂಪೆನಿ ತನ್ನ ಹೊಸ ಮಾದರಿಯ ಫಿಚರ್ಸ್‌ಗಳ ಸ್ಮಾರ್ಟ್‌ಫೋನ್‌ಗಳಿಂದಲೇ ಪ್ರಸಿದ್ದಿಯನ್ನ ಪಡೆದುಕೊಂಡಿರೋದು ನಿಮಗೆಲ್ಲಾ ಗೊತ್ತೇ ಇದೆ. ಈ ಶ್ರೇಯವನ್ನ ಇನ್ನಷ್ಟು ಉಳಿಸಿಕೊಳ್ಳಲು ಮುಂದಾಗಿರೋ ಒಪ್ಪೋ ತನ್ನ ರೆನೋ3 5G ಸ್ಮಾರ್ಟ್‌ಫೋನ್‌ ಅನ್ನ ಡೈಮೆನ್ಸಿಟಿ 1000ಎಲ್‌ನಿಂದ ಕಾರ್ಯನಿರ್ವಹಿಸುವ ಫೋನ್‌ ಆಗಿ ಪರಿಚಯಿಸಲು ಮುಂದಾಗಿದೆ. ಡೈಮೆನ್ಸಿಟಿ 1000ಎಲ್‌ ತುಂಬಾ ಶಕ್ತಿಶಾಲಿಯಾಗಿರಲಿದೆ. ಇದರ ಮೊದಲ ಉತ್ಪಾದಕನಾಗಿ ಒಪ್ಪೋ ಕಂಪೆನಿ ಗುರ್ತಿಸಿಕೊಳ್ಳಲಿದೆ.

ಡೈಮೆನ್ಸಿಟಿ

ಇನ್ನು ಡೈಮೆನ್ಸಿಟಿ 1000 ಎಲ್‌ ಅನ್ನೊದು ಒಂದು ರೀತಿಯಲ್ಲಿ ವೇಗದ ನೆಟ್‌ವರ್ಕ ಅನ್ನ ಬೆಂಬಲಿಸುವ ಕಾರ್ಯಸಾಧನವಾಗಿದೆ. ಇದು 5G ನೆಟ್‌ವರ್ಕ್‌ನಲ್ಲಿ ಕಾರ್ಯನಿರ್ವಹಿಸಲಿದ್ದು ಡೌನ್‌ಲಿಂಕ್‌ ಸಾಕಷ್ಟು ವೇಗವನ್ನ ಒಳಗೊಂಡಿರುತ್ತದೆ. ಇನ್ನು ಈಗಾಗಲೇ ರೆನೋ3 ಒಪ್ಪೋ ಸ್ಮಾರ್ಟ್‌ಫೋನ್‌ ಸ್ನಾಪ್‌ಡ್ರಾಗನ್ 865 ಫೈಂಡ್ ಎಕ್ಸ್2 ಪ್ರೊಸೆಸರ್‌ ಒಳಗೊಂಡಿರಲಿದೆ ಎಂದು ಕಂಪೆನಿ ಹೇಳಿಕೊಂಡಿತ್ತು. ಆದರೆ ಇದೀಗ ಡೈಮೆನ್ಸಿಟಿ 1000 ಎಲ್‌ ಪ್ರೊಸೆಸರ್‌ ಸ್ಮಾರ್ಟ್‌ಫೋನ್‌ ಆಗಿ ಬರಲಿದೆ ಎಂದು ಹೇಳಲಾಗ್ತಿದೆ.

ಆಕ್ಟಾ-ಕೋರ್

ಇನ್ನು ಡೈಮೆನ್ಸಿಟಿ 1000ಎಲ್‌ ಆಕ್ಟಾ-ಕೋರ್ ಪ್ರೊಸೆಸರ್ ಆಗಿದ್ದು, 4X ಕಾರ್ಟೆಕ್ಸ್-ಎ 77ಕೋರ್ಸ್ ಗಳಲ್ಲಿ‌, 2.6GHz ಮತ್ತು 4x ಕಾರ್ಟೆಕ್ಸ್-ಎ 55 ಕೋರ್ಸ್‌ನಲ್ಲಿ 2.2GHz ವೇಗವನ್ನ ಹೊಂದಿರಲಿದೆ. ಅಲ್ಲದೆ ಇದು ಹೊಸ ಮಾಲಿ-ಜಿ 77 ಜಿಪಿಯು(Mali-G77 GPU) ಸಹ ಹೊಂದಿರುತ್ತದೆ. ಈ ಸ್ಮಾರ್ಟ್‌ಫೋನ್‌ಗಳ ಚಿಪ್‌ಸೆಟ್, ಎಸ್‌ಎ ಮತ್ತು ಎನ್‌ಎಸ್‌ಎಗಳಲ್ಲಿ 5G ನೆಟ್‌ವರ್ಕ್‌ಗಳನ್ನು ಬೆಂಬಲಿಸುತ್ತದೆ ಮತ್ತು 4.7 ಜಿಬಿಪಿಎಸ್ ವರೆಗೆ ಡೌನ್‌ಲಿಂಕ್ ವೇಗವನ್ನು ಹೊಂದಿರುತ್ತದೆ.

5G ಡ್ಯುಯಲ್

ಇದು 5G ಡ್ಯುಯಲ್-ಸಿಮ್‌ಗೆ ಬೆಂಬಲವನ್ನು ನೀಡಲಿದೆ, ಇದು ಇತರ SoC ಗಳಂತೆ ಒಂದೇ ಸಮಯದಲ್ಲಿ ಎರಡು 5G ಸಿಮ್ ಕಾರ್ಡ್‌ಗಳನ್ನು ಬಳಸಲು ನಿಮಗೆ ಅನುವು ಮಾಡಿಕೊಡುತ್ತದೆ. ಡೈಮೆನ್ಸಿಟಿ 1000 5G ಎಸ್‌ಒಸಿ 5G ಮಾದರಿಯ 2ಸಿಸಿ ಸಿಎ ಅನ್ನು ಬೆಂಬಲಿಸುತ್ತದೆ ಮತ್ತು ವಿಶ್ವದ ಅತಿ ವೇಗದ ಥ್ರೋಪುಟ್ ಎಸ್‌ಒಸಿಯನ್ನು ಬೆಂಬಲಿಸಲಿದ್ದು, 4.7 ಜಿಬಿಪಿಎಸ್ ಡೌನ್‌ಲಿಂಕ್‌ಅನ್ನು 6 ಜಿಹೆಚ್ ನೆಟ್‌ವರ್ಕ್‌ಗಳಲ್ಲಿ 2.5 ಜಿಬಿಪಿಎಸ್ ಅಪ್‌ಲಿಂಕ್ ವೇಗವನ್ನು ಹೊಂದಿದೆ ಎಂದು ಕಂಪನಿ ತಿಳಿಸಿದೆ.

ಇನ್ನು

ಇನ್ನು ಈ ಡೈಮೆನ್ಸಿಟಿ ಚಿಪ್‌ಸೆಟ್ ಸ್ಟ್ಯಾಂಡ್ ಅಲೋನ್ ಮತ್ತು ಸ್ಟ್ಯಾಂಡ್ ಅಲೋನ್ ನೆಟ್‌ವರ್ಕ್‌ಗಳನ್ನು ಬೆಂಬಲಿಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಅಲ್ಲದೆ 2G ಯಿಂದ 5G ವರೆಗಿನ ಕನೆಕ್ಟಿವಿಟಿಗೆ ಮಲ್ಟಿ-ಮೋಡ್ ಬೆಂಬಲವನ್ನು ಇದು ಒಳಗೊಂಡಿರುತ್ತದೆ. ಜೊತೆಗೆ ಡೈಮೆನ್ಸಿಟಿ 1000 5G ವೇಗವಾಗಿ ಮತ್ತು ಹೆಚ್ಚು ಪರಿಣಾಮಕಾರಿಯಾದ ಸ್ಥಳೀಯ ವೈರ್‌ಲೆಸ್ ಸಂಪರ್ಕಕ್ಕಾಗಿ ವೈ-ಫೈ 6 ಮತ್ತು ಬ್ಲೂಟೂತ್ 5.1+ ಅನ್ನ ಕನೆಕ್ಟಿವಿಟಿ ಆಯ್ಕೆಯನ್ನ ಸಂಯೋಜಿಸುತ್ತದೆ.

ಏಷ್ಯಾ,

ಏಷ್ಯಾ, ಉತ್ತರ ಅಮೆರಿಕಾ ಮತ್ತು ಯುರೋಪ್‌ನಲ್ಲಿ ಪ್ರಾರಂಭವಾಗುತ್ತಿರುವ ಜಾಗತಿಕ ಉಪ -6 GHz 5G ನೆಟ್‌ವರ್ಕ್‌ಗಳಿಗಾಗಿ ಡೈಮೆನ್ಸಿಟಿ 1000 ಅನ್ನು ವಿನ್ಯಾಸಗೊಳಿಸಲಾಗಿದ್ದು. ಒಪ್ಪೋ ಈ ಮಾದರಿಯಲ್ಲಿ ಸ್ಮಾರ್ಟ್‌ಫೋನ್‌ ತಯಾರಿಸುವ ಮಾತನಾಡ್ತಿದ್ದು ಆ ಸ್ಮಾರ್ಟ್‌ಫೋನ್‌ ಹೇಗಿರಲಿದೆ ಅನ್ನೊ ನಿರೀಕ್ಷೆ ಈಗಲೇ ಶುರುವಾಗಿದೆ.

Best Mobiles in India

Read more about:
English summary
The OPPO Reno3 5G is the first smartphone in the world to be powered by the Dimensity 1000L. While the MediaTek processor is expected to appear in more devices next year, we are more interested in its more powerful sibling, the Dimensity 1000. And now we know which manufacturer will use it first.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X