ಬೆಂಗಳೂರಿನಲ್ಲಿ 'ಬ್ಯಾಂಕ್ ಖಾತೆಗೆ' ಕನ್ನ ಹಾಕಿರುವ ಈ ಪ್ರಕರಣಕ್ಕೆ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ!

|

ಯಾವುದೇ ಕ್ಷಣದಲ್ಲಿ ನಿಮ್ಮ ಮೊಬೈಲ್ ಸಿಮ್ ಡೆಡ್ ಆಗಬಹುದು. ನಿಮ್ಮ ಸಿಮ್ ಡೆಡ್ ಆದ ತಕ್ಷಣವೇ ಬ್ಯಾಂಕ್ ಖಾತೆಯಲ್ಲಿನ ಹಣ ಖಾಲಿಯಾಗಬಹುದು. ಯಾವಾಗ, ಎಲ್ಲಿ, ಹೇಗೆ ಎಂಬುದು ನಿಮಗೆ ಸ್ವಲ್ಪವೂ ತಿಳಿಯುವುದಿಲ್ಲ ಎಂಬ ಇಂತಹ ಟಿ.ವಿ ಮಾಧ್ಯಮಗಳ ಹೆಡ್‌ಲೈನ್‌ಗಳಿಗೆ ಸರಿಹೊಂದುವಂತಹ ಬೆಚ್ಚಿಬೀಳಿಸುವ ಪ್ರಕರಣ ಬೆಂಗಳೂರಿನಲ್ಲಿ ದಾಖಲಾಗಿದೆ.

ಹೌದು,ಡಿಜಿಟಲ್ ಬ್ಯಾಂಕಿಂಗ್ ವ್ಯವಹಾರಕ್ಕೆ ನಡುಕ ಹುಟ್ಟಿಸುವ ಪ್ರಕರಣ ಇದಾಗಿದ್ದು, ಉದ್ಯಮಿಯೋರ್ವರ ಸಿಮ್ ಕಾರ್ಡ್‌ಗಳನ್ನು ಬ್ಲಾಕ್‌ ಮಾಡಿಸಿ, ನಕಲಿ ದಾಖಲೆಗಳನ್ನು ಬಳಸಿ ಬ್ಯಾಂಕ್‌ ಖಾತೆಯಲ್ಲಿದ್ದ ಹಣವೆಲ್ಲವನ್ನು ದೋಚಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

'ಬ್ಯಾಂಕ್ ಖಾತೆಗೆ' ಕನ್ನ ಹಾಕಿರುವ ಈ ಪ್ರಕರಣಕ್ಕೆ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ!

ಸಾರ್ವಜನಿಕರ ಬ್ಯಾಂಕ್‌ ಖಾತೆಗಳಿಗೆ ಬಹಳ ಬುದ್ದಿವಂತಿಕೆಯಿಂದ ಕನ್ನ ಹಾಕುವ ಜಾಲ ನಗರದಲ್ಲಿ ಸಕ್ರಿಯವಾಗಿದ್ದು ಹಾಗಾದರೆ, ಏನಿದು ಪ್ರಕರಣ? ಡಿಜಿಟಲ್ ಬ್ಯಾಂಕಿಂಗ್ ವ್ಯವಹಾರಕ್ಕೆ ನಡುಕ ಹುಟ್ಟಿಸಿರುವುದು ಏಕೆ? ಪೊಲೀಸರು ಹೇಳುವುದೇನು? ಎಂಬುದನ್ನು ಮುಂದೆ ತಿಳಿಯಿರಿ.

ಮೊಬೈಲ್‌ನ ನೆಟ್‌ವರ್ಕ್‌ ಬಂದ್‌ ಆಗಿತ್ತು

ಮೊಬೈಲ್‌ನ ನೆಟ್‌ವರ್ಕ್‌ ಬಂದ್‌ ಆಗಿತ್ತು

ನಗರದ ಉದ್ಯಮಿಯೊಬ್ಬರ ಮೊಬೈಲ್‌ನ ನೆಟ್‌ವರ್ಕ್‌ ಬಂದ್‌ ಆಗಿತ್ತು. ಕೆಲ ಗಂಟೆ ಬಳಿಕ ಮೊಬೈಲ್‌ಗೆ ಕರೆ ಮಾಡಿದ್ದ ವ್ಯಕ್ತಿಯೊಬ್ಬ, ಸೇವಾ ಕಂಪನಿಯೊಂದರ ಪ್ರತಿನಿಧಿ ಎಂದು ಹೇಳಿ ನೆಟ್‌ವರ್ಕ್‌ ಪುನಃ ಬರಬೇಕಾದರೆ ಒಂದನ್ನು ಒತ್ತುವಂತೆ ಹೇಳಿದ್ದ. ಉದ್ಯಮಿ, ಒಂದನ್ನು ಒತ್ತಿದ್ದರು. ನಂತರವೂ ನೆಟ್‌ವರ್ಕ್‌ ಬಂದಿರಲಿಲ್ಲ ಅತ್ತ ಅಕೌಂಟ್‌ನಲ್ಲಿ ಹಣವೂ ಖಾಲಿಯಾಗಿದೆ.

ಉದ್ಯಮಿ ಹೆಸರಿನಲ್ಲಿ ಅಪರಿಚಿತರಿಗೆ ಸಿಮ್ ಕಾರ್ಡ್‌

ಉದ್ಯಮಿ ಹೆಸರಿನಲ್ಲಿ ಅಪರಿಚಿತರಿಗೆ ಸಿಮ್ ಕಾರ್ಡ್‌

ಈ ಬಗ್ಗೆ ಅವರು ಬ್ಯಾಂಕ್‌ನಲ್ಲಿ ವಿಚಾರಿಸಿದಾಗಸರಿಯಾದ ಪ್ರತಿಕ್ರಿಯೆ ಸಿಕ್ಕಿರಲಿಲ್ಲ ಎಂದು ಠಾಣೆಗೆ ದೂರು ನೀಡಿದ್ದರು. ನಂತರ ಈ ಬಗ್ಗೆ ಸೈಬರ್ ಕ್ರೈಂ ಇಲಾಖೆ ತನಿಖೆ ಕೈಗೊಂಡಾಗ, ಉದ್ಯಮಿ ಹೆಸರಿನಲ್ಲಿ ಅಪರಿಚಿತರು ಸಿಮ್ ಕಾರ್ಡ್‌ ಖರೀದಿಸಿ ಬಹಳ ಸುಲಭವಾಗಿ ಬ್ಯಾಂಕ್ ಹಣವನ್ನು ದೋಚಿದ್ದಾರೆ ಎಂಬ ಮಾಹಿತಿಯನ್ನು ಸೈಬರ್ ಕ್ರೈಂ ಠಾಣೆಯ ಮೂಲಗಳು ತಿಳಿಸಿವೆ.

ಒನ್‌ಟೈಮ್ ಪಾಸ್‌ವರ್ಡ್

ಒನ್‌ಟೈಮ್ ಪಾಸ್‌ವರ್ಡ್

ಉದ್ಯಮಿಯ ಮೊಬೈಲ್‌ ಕಳೆದಿರುವುದಾಗಿ ಟೆಲಿಕಾಂ ಕಂಪನಿಗೆ ತಿಳಿಸಿರುವ ಆರೋಪಿಗಳು, ನಕಲಿ ದಾಖಲೆ ಕೊಟ್ಟು ಉದ್ಯಮಿಯದ್ದೇ ನಂಬರ್‌ ಇರುವ ಹೊಸ ಸಿಮ್ ಕಾರ್ಡ್‌ ಖರೀದಿಸಿದ್ದಾರೆ. ನಂತರ ಉದ್ಯಮಿಯ ಕಾರ್ಡ್ ಸಿವಿವಿ ಅಥವಾ ಆನ್‌ಲೈನ್ ಪೇಮೆಂಟ್ ಮೂಲಕ ವ್ಯವಹಾರ ನಡೆಸಿ ಒನ್‌ಟೈಮ್ ಪಾಸ್‌ವರ್ಡ್ ನೀಡಿ ಹಣವನ್ನು ಇತರೆ ಖಾತೆಗೆ ವರ್ಗಾಯಿಸಿದ್ದಾರೆ ಎನ್ನಲಾಗಿದೆ.

ಕಾರ್ಡ್‌ ಸಂಖ್ಯೆ ಹಾಗೂ ಸಿವಿಸಿ ಮಾಹಿತಿ!!

ಕಾರ್ಡ್‌ ಸಂಖ್ಯೆ ಹಾಗೂ ಸಿವಿಸಿ ಮಾಹಿತಿ!!

ನಿಗದಿತ ಸ್ಥಳದಲ್ಲಿ ಕ್ರೆಡಿಟ್‌, ಡೆಬಿಟ್ ಕಾರ್ಡ್‌ಗಳನ್ನು ತಯಾರಿಸಿ ಕೊರಿಯರ್ ಮೂಲಕ ಗ್ರಾಹಕರಿಗೆ ತಲುಪಿಸಲಾಗುತ್ತದೆ. ಈ ಅವಧಿಯಲ್ಲೇ ಕಾರ್ಡ್‌ ಸಂಖ್ಯೆ ಹಾಗೂ ಸಿವಿಸಿ ಮಾಹಿತಿಯನ್ನು ಖದೀಮರು ಕದಿಯುತ್ತಿದ್ದಾರೆ. ನಂತರ, ಒನ್ ಟೈಂ ಪಾಸ್‌ವರ್ಡ್‌ಗಾಗಿ ನಕಲಿ ದಾಖಲೆಗಳನ್ನು ಕೊಟ್ಟು ಖರೀದಿಸುವ ಸಿಮ್‌ ಕಾರ್ಡ್‌ಗಳನ್ನು ಬಳಕೆ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ.

Bike-Car ಜಾತಕ ಹೇಳುವ ಆಪ್..!
ನೆಟ್‌ವರ್ಕ್‌ ಬಂದಾದರೆ ಹೀಗೆ ಮಾಡಿ!!

ನೆಟ್‌ವರ್ಕ್‌ ಬಂದಾದರೆ ಹೀಗೆ ಮಾಡಿ!!

ಒಮ್ಮಿಂದೊಮ್ಮೆಲೇ ನಿಮ್ಮ ಮೊಬೈಲ್‌ ನೆಟ್‌ವರ್ಕ್‌ ಬ್ಲಾಕ್‌ ಆದರೆ, ಡೆಬಿಟ್ ಹಾಗೂ ಕ್ರೆಡಿಟ್‌ ಕಾರ್ಡ್‌ಗಳನ್ನು ಬ್ಲಾಕ್‌ ಮಾಡಿಸಿ. ಬ್ಲಾಕ್‌ ಆದ ನಂತರ ಬರುವ ಕರೆಗಳು ಹಾಗೂ ಸಂದೇಶಗಳಿಗೆ ಯಾವುದೇ ಕಾರಣಕ್ಕೂ ಪ್ರತಿಕ್ರಿಯಿಸಬೇಡಿ.ನಿಮ್ಮ ಹೆಸರಿನಲ್ಲಿ ಬೇರೊಬ್ಬರು ಸಿಮ್ ಕಾರ್ಡ್‌ ಖರೀದಿಸಿದ್ದರೆ, ಬಹುಬೇಗ ಸೈಬರ್ ಕ್ರೈಂ ಪೊಲೀಸ್‌ ಠಾಣೆಗೆ ದೂರು ನೀಡಿ

ಉತ್ತರ ಕೋರಿಯಾಗಿಂತಲೂ ಹೆಚ್ಚು ವಿಚಿತ್ರ ಕಾನೂನುಗಳು ಚೀನಾದಲ್ಲಿವೆ!!

ಉತ್ತರ ಕೋರಿಯಾಗಿಂತಲೂ ಹೆಚ್ಚು ವಿಚಿತ್ರ ಕಾನೂನುಗಳು ಚೀನಾದಲ್ಲಿವೆ!!

ಚೀನಾ ಎಂಬ ಹೆಸರು ಕೇಳಿದರೆ ಸಾಕು ಭಾರತದ ಶತ್ರು ರಾಷ್ಟ್ರ, ಮೊಬೈಲ್ ಮಾರುಕಟ್ಟೆಯ ದಿಗ್ಗಜ ಎಂಬೆಲ್ಲಾ ವಿಷಯಗಳು ನಮ್ಮ ತಲೆಯಲ್ಲಿ ಹರಿದಾಡುತ್ತವೆ. ಆದರೆ, ವಿಶ್ವದಲ್ಲೇ ಹೆಚ್ಚು ಜನಸಂಖ್ಯೆ ಹೊಂದಿರುವ ಚೀನಾ ದೇಶವು ನಾವು ಕಂಡು ಕೇಳಿರದ ವಿಷಯಗಳನ್ನು ಸಂಗ್ರಹಿಸಿಕೊಂಡಿದೆ ಎಂಬ ಊಹೆ ಕೂಡ ನಿಮಗಿರುವುದಿಲ್ಲ.

ಹೌದು, ಕಮ್ಯುನಿಷ್ಟ್ ರಾಷ್ಟ್ರವಾಗಿರುವ ಚೀನಾದಲ್ಲಿ ಹಲವು ಕಾನೂನುಗಳು ನಮಗಿಂತ ಭಿನ್ನವಾಗಿವೆ. ನೀವು ತಿಳಿದಿರುವ ಉತ್ತರ ಕೋರಿಯಾ ಕಾನೂನುಗಳಿಗಿಂತಲೂ ಹೆಚ್ಚು ವಿಚಿತ್ರ ಕಾನೂನುಗಳನ್ನು ಚೀನಾ ಹೊಂದಿದೆ. ಇಂದು ವಿಶ್ವದ ದೊಡ್ಡ ದೇಶಗಳಲ್ಲಿ ಮತ್ತು ಪ್ರಬಲ ರಾಷ್ಟ್ರಗಳಲ್ಲಿ ಒಂದಾದ ಚೀನಾದಲ್ಲಿ ಈ ರೀತಿ ಕಾನೂನು ಇವೆಯಾ ಎಂಬ ಆಶ್ಚರ್ಯ ಮೂಡಿಸುತ್ತದೆ.

ಉದಾಹರಣೆಗೆ ಚೀನಾದಲ್ಲಿ ಪರೀಕ್ಷೆಗಳಲ್ಲಿ ನಕಲು ಮಾಡುವಾಗ ಮೇಲ್ವಿಚಾರಕರ ಕೈಗೆ ಸಿಕ್ಕರೆ ಸುಮಾರು ಏಳು ವರ್ಷಗಳವರೆಗೆ ಜೈಲುಶಿಕ್ಷೆ ವಿಧಿಸುವ ಕಾನೂನು ಜಾರಿಯಿದೆ ಎಂದರೆ ನೀವು ನಂಬಲೇಬೇಕು. ಇಂತಹ ಅನೇಕ ವಿಷಯಗಳು ಚೀನಾದ ಒಡಲಲ್ಲಿವೆ. ಹಾಗಾಗಿ, ನೆರೆ ರಾಷ್ಟ್ರ ಚೀನಾದಲ್ಲಿ ನಾವು ಕಂಡು ಕೇಳಿರದ ವಿಚಿತ್ರ ವಿಷಯಗಳ ಬಗ್ಗೆ ಇಂದಿನ ಲೇಖನದಲ್ಲಿ ತಿಳಿಯೋಣ.

‘ಚೀನಾ' ಎಂಬ ಹೆಸರು ಬಂದಿದ್ದೇಗೆ?

ವಿಶ್ವದಲ್ಲೇ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಯಾವುದು ಎಂದ ಕೂಡಲೇ, ನಮ್ಮ ನೆರೆಯ ರಾಷ್ಟ್ರ ಚೀನಾ ಎಂದು ಥಟ್ ಎಂದು ಉತ್ತರಿಸುತ್ತೇವೆ. ‘ಚೀನಾ' ಅಥವಾ ‘ಚೈನಾ' ಎಂದು ಕರೆಯುವುವ ಈ ಪದವು ‘Qin' ಎಂಬ ರಾಜವಂಶದ ಹೆಸರಿನಿಂದ ಬಂದಿದೆ. ಇದನ್ನು ಚಿನ್ ಎಂದು ಉಚ್ಚರಿಸಲಾಗುತ್ತದೆ.

‘ಚೀನಾ’ ಎಂಬ ಹೆಸರು ಬಂದಿದ್ದೇಗೆ?

‘ಚೀನಾ’ ಎಂಬ ಹೆಸರು ಬಂದಿದ್ದೇಗೆ?

ವಿಶ್ವದಲ್ಲೇ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಯಾವುದು ಎಂದ ಕೂಡಲೇ, ನಮ್ಮ ನೆರೆಯ ರಾಷ್ಟ್ರ ಚೀನಾ ಎಂದು ಥಟ್ ಎಂದು ಉತ್ತರಿಸುತ್ತೇವೆ. ‘ಚೀನಾ' ಅಥವಾ ‘ಚೈನಾ' ಎಂದು ಕರೆಯುವುವ ಈ ಪದವು ‘Qin' ಎಂಬ ರಾಜವಂಶದ ಹೆಸರಿನಿಂದ ಬಂದಿದೆ. ಇದನ್ನು ಚಿನ್ ಎಂದು ಉಚ್ಚರಿಸಲಾಗುತ್ತದೆ.

ಗಣಿತ ಕಲಿಯುವುದು ಕಡ್ಡಾಯ.!!

ಗಣಿತ ಕಲಿಯುವುದು ಕಡ್ಡಾಯ.!!

ಇತರೆ ರಾಷ್ಟ್ರಗಳಿಗೆ ಹೋಲಿಸಿದರೆ ಚೀನಾದಲ್ಲಿ ಶಿಕ್ಷಣ ವಿಧಾನ ಕಠಿಣವಾಗಿದೆ. ಪ್ರಾಥಮಿಕ, ಮಾಧ್ಯಮಿಕ, ಪ್ರೌಢ, ವೊಕೇಷನಲ್ ಮತ್ತು ಟೆರಿಟರಿ ಎಂಬ ಐದು ಹಂತಗಳಲ್ಲಿ ಇಲ್ಲಿ ಶಿಕ್ಷಣ ಕಲಿಯಬೇಕಾಗುತ್ತದೆ. ಮಾಂಡರಿನ್ ಭಾಷೆಯಲ್ಲಿ ಇಲ್ಲಿ ಶಿಕ್ಷಣ ಕಲಿಸಲಾಗುತ್ತದೆ. ಈ ಎಲ್ಲ ಹಂತಗಳಲ್ಲೂ ಮಾಂಡರಿನ್ ಮತ್ತು ಗಣಿತ ಕಲಿಯುವುದು ಕಡ್ಡಾಯ.!

ಏಳು ವರ್ಷ ಜೈಲು ಶಿಕ್ಷೆ!!

ಏಳು ವರ್ಷ ಜೈಲು ಶಿಕ್ಷೆ!!

ಚೀನಾದಲ್ಲಿ ಭಾರತಕ್ಕಿಂತ ಹೆಚ್ಚು ವಿಷಯಗಳನ್ನು ಕಲಿಯಬೇಕಾಗುತ್ತದೆ. ನಿಮಗೆ ಗೊತ್ತಾ?. ಚೀನಾ ದೇಶದಲ್ಲಿ ಪರೀಕ್ಷೆಗಳಲ್ಲಿ ನಕಲು ಮಾಡುವಾಗ ಮೇಲ್ವಿಚಾರಕರ ಕೈಗೆ ಸಿಕ್ಕರೆ ಸುಮಾರು ಏಳು ವರ್ಷಗಳವರೆಗೆ ಜೈಲುಶಿಕ್ಷೆ ವಿಧಿಸುವ ಕಾನೂನು ಜಾರಿಗೆ ತರಲಾಗಿದೆ. ನಕಲು ಮಾಡಿದ ವಿದ್ಯಾರ್ಥಿಯೋರ್ವ ಏಳು ವರ್ಷ ಜೈಲು ಅನುಭವಿಸುತ್ತಿದ್ದಾನೆ.

ಕೆಂಪು ಬಣ್ಣ ಹೆಚ್ಚು ಬಳಕೆ!!

ಕೆಂಪು ಬಣ್ಣ ಹೆಚ್ಚು ಬಳಕೆ!!

ಚೀನಾ ದೇಶದಲ್ಲಿ ಕೆಂಪು ಬಣ್ಣ ಹೆಚ್ಚು ಬಳಕೆಯಾಗುವುದನ್ನು ನೀವು ನೋಡಬಹುದು. ಚೀನಿಯರು ಕೆಂಪು ಬಣ್ಣವನ್ನು ಸಂತೋಷದ ಪ್ರತೀಕವಾಗಿ ಭಾವಿಸುತ್ತಾರೆ. ಹಾಗಾಗಿ ವಿವಿಧ ಹಬ್ಬಗಳಲ್ಲಿ, ಸಭೆ ಸಮಾರಂಭಗಳಲ್ಲಿ ಚೀನಿಯರು ಕೆಂಪು ಬಣ್ಣ ಎದ್ದು ಕಾಣುವಂತೆ ಮನೆಗಳನ್ನು ಅಲಂಕಾರ ಮಾಡಿರುತ್ತಾರೆ.

ಫೇಸ್‌ಬುಕ್, ಟ್ವಿಟರ್‌ ಯಾರೂ ಬಳಸುವುದಿಲ್ಲ!!

ಫೇಸ್‌ಬುಕ್, ಟ್ವಿಟರ್‌ ಯಾರೂ ಬಳಸುವುದಿಲ್ಲ!!

ಫೇಸ್‌ಬುಕ್‌, ಟ್ವಿಟರ್‌ ಮತ್ತು ಇನ್‌ಸ್ಟಾಗ್ರಾಂನಂತ ಸಾಮಾಜಿಕ ಜಾಲತಾಣಗಳ ಮೇಲೆ ಇಲ್ಲಿ 2009ರವರೆಗೆ ನಿಷೇಧ ಹೇರಲಾಗಿದ್ದ ವಿಷಯ ನಿಮಗೆ ಗೊತ್ತು. ಆದರೆ, ನಂತರ ನಿಯಮ ಸಡಿಲಿಸಿ ಇವುಗಳ ಬಳಕೆಯನ್ನು ಮುಕ್ತವಾಗಿಸಿದರೂ ಸಹ ಇಲ್ಲಿ ಫೇಸ್‌ಬುಕ್, ಟ್ವಿಟರ್ ಅನ್ನು ಯಾರೂ ಬಳಸುವುದಿಲ್ಲ.!

ಆಟಿಕೆಗಳ ರಾಜ!

ಆಟಿಕೆಗಳ ರಾಜ!

ನೀವೆಲ್ಲರೂ ಊಹೆ ಮಾಡಿದಂತೆ ಚೀನಾ ದೇಶ ಇಡೀ ವಿಶ್ವದಲ್ಲಿಯೇ ಅತ್ಯಂತ ಹೆಚ್ಚು ಆಟಿಕೆಗಳನ್ನು ತಯಾರಿಸುವ ದೇಶವಾಗಿದೆ. ವಿಶ್ವದ ಶೇ 70ರಷ್ಟು ಆಟಿಕೆಗಳು ಈ ದೇಶದಲ್ಲೇ ತಯಾರಾಗುತ್ತವೆ ಎಂದರೆ ಈ ದೇಶದ ಆಟಿಕೆಗಳ ಉಧ್ಯಮ ಎಷ್ಟು ದೊಡ್ಡದಾಗಿದೆ ಎಂಬುದು ಕಲ್ಪನೆಗೆ ಕೂಡ ಸಿಗುವುದಿಲ್ಲ.

ಎತ್ತರದ ಭವನಗಳು!!

ಎತ್ತರದ ಭವನಗಳು!!

ಅಮೆರಿಕಾ ಸೇರಿದಂತೆ ವಿಶ್ವದ ಇತರೆ ದೇಶಗಳ ನಗರಗಳಿಗೆ ಹೋಲಿಸಿಕೊಂಡರೆ ಚೀನಾದ ಪ್ರಮುಖ ನಗರಗಳಲ್ಲಿ ಅತೀ ಎತ್ತರದ ಭವನಗಳು ನಿರ್ಮಾಣವಾಗುತ್ತಿವೆ. ಸರಾಸರಿ ಐದು ದಿನಗಳಿಗೊಮ್ಮೆ ದೊಡ್ಡ ದೊಡ್ಡ ಕಟ್ಟಡಗಳು ತಲೆ ಎತ್ತುತ್ತಿವೆ ಎಂದು ಹಲವು ವರದಿಗಳು ತಿಳಿಸಿವೆ.

ರಫ್ತು ಮಾಡುವ ದೇಶ!!

ರಫ್ತು ಮಾಡುವ ದೇಶ!!

ಇಡೀ ವಿಶ್ವದಲ್ಲಿಯೇ ಅತೀ ಹೆಚ್ಚು ಪ್ರಮಾಣದಲ್ಲಿ ವಸ್ತು ಮತ್ತು ಉತ್ಪನ್ನಗಳನ್ನು ರಫ್ತು ಮಾಡುವ ದೇಶಗಳಲ್ಲಿ ಚೀನಾ ಮೊದಲ ಸ್ಥಾನದಲ್ಲಿದೆ. ಹಾಗೆಯೇ ವಸ್ತು ಮತ್ತು ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವ ದೇಶಗಳಲ್ಲಿ ಎರಡನೇ ಸ್ಥಾನದಲ್ಲಿದೆ. ಕಚ್ಚಾ ಪದಾರ್ಥಗಳನ್ನು ಚೀನಾ ಹೆಚ್ಚು ಆಮದು ಮಾಡಿಕೊಳ್ಳುತ್ತದೆ.

ದೇಶಕ್ಕೆ ನಿಷ್ಠರಾಗಿರಬೇಕು!!

ದೇಶಕ್ಕೆ ನಿಷ್ಠರಾಗಿರಬೇಕು!!

ಚೀನಾದವರು ದೇಶಕ್ಕೆ ನಿಷ್ಠ ದೇಶಾಭಿಮಾನಿಯಾಗಿರಬೇಕು ಎಂಬ ಕಾನೂನು ಅಲ್ಲಿದೆ. ಮಾನವೀಯ ಮೌಲ್ಯಗಳಿಗೆ ಹೋರಾಡುವವರನ್ನು ನಿರ್ದಾಕ್ಷಣ್ಯವಾಗಿ ಹತ್ತಿಕ್ಕಲಾಗುತ್ತದೆ. ಇಂತಹ ಹೋರಾಟಗಾರರನ್ನು ಹೊರ ಪ್ರಪಂಚಕ್ಕೆ ತಿಳಿಯದಂತೆ ಕೊಲೆ ಮಾಡಿರುವ ಉದಾಹರಣೆಗಳು ಇವೆ. ವೈಯಕ್ತಿಕ ಸ್ವಾತಂತ್ರ್ಯ ಇಲ್ಲಿ ಕಡಿಮೆ ಇದೆ.

ಈಗಲೂ ಗುಹೆ ವಾಸ!!

ಈಗಲೂ ಗುಹೆ ವಾಸ!!

ವಿರ್ಶವದ ಪ್ರಭಲ ರಾಷ್ಟ್ರಗಳಲ್ಲಿ ಒಂದು ಎಂಬ ಹೆಸರನ್ನು ಪಡೆದಿರುವ ಚೀನಾದಲ್ಲಿ ಈಗಲೂ ಗುಹೆ ವಾಸ ಮಾಡುತ್ತಿರುವವರ ಸಂಖ್ಯೆ ಚೆಚ್ಚು ಬೀಳಿಸುತ್ತದೆ. ಚೀನಾದಲ್ಲಿ ಸುಮಾರು 35 ಮಿಲಿಯನ್ ಜನರು ಈಗಲೂ ಗುಹೆಯಲ್ಲಿಯೇ ವಾಸವಾಗಿದ್ದಾರೆ ಎಂದ ವಿಷಯ ನಿಮಗೆ ಆಶ್ಚರ್ಯವಾಗದೇ ಇರದು.!

ಕನ್ನಡಿಗನೋರ್ವನ ಈ ಮಹಾನ್ ಸಾಧನೆಗೆ ವಿಶ್ವವೇ ಸಲ್ಯೂಟ್ ಹೊಡೆಯುತ್ತಿದೆ!!

ಕನ್ನಡಿಗನೋರ್ವನ ಈ ಮಹಾನ್ ಸಾಧನೆಗೆ ವಿಶ್ವವೇ ಸಲ್ಯೂಟ್ ಹೊಡೆಯುತ್ತಿದೆ!!

ಎಂಜಿನಿಯರಿಂಗ್ ಅಂತಿಮ ವರ್ಷದ ಪ್ರಾಜೆಕ್ಟ್ ಒಂದನ್ನು ತಯಾರಿಸಲು ಹೋದಾಗ 'ಮಕ್ಕಳಾಟ' ಎಂದು ತಿರಸ್ಕೃತಗೊಂಡಿದ್ದ ಮೆಕ್ಯಾನಿಕಲ್‌ ಎಂಜಿನಿಯರಿಂಗ್ ಪದವೀಧರನೋರ್ವನ ಯೋಜನೆಯೊಂದು ಇಂದು ಇಂಡಿಯನ್ ಆರ್ಮಿ, ಇನ್‌ಫೋಸಿಸ್ ಸೇರಿದಂತೆ ಘಟಾನುಘಟಿ ಉದ್ಯಮಿಗಳೇ ಬೆರಗಾಗಿಸುವಂತೆ ಮಾಡಿರುವ ಈ ಕಥೆ ಬಹುತೇಕ ನಿಮಗೆ ತಿಳಿದಿಲ್ಲ.

ಹೌದು, ಕೇವಲ 2 ರೂ.ಗೆ ಸ್ಯಾನಿಟರಿ ಪ್ಯಾಡ್‌ ತಯಾರಿಸಿದ 'ಪ್ಯಾಡ್‌ಮ್ಯಾನ್‌' ಕಥೆಯನ್ನು ನಾವು ಕೇಳಿದ್ದೇವೆ. ಅದೇ ರೀತಿ ಕೇವಲ 20 ರೂ.ಗೆ ನೀರಿನ ಫಿಲ್ಟರ್‌ ಒಂದನ್ನು ತಯಾರಿಸಿದ್ದ ಕನ್ನಡಿಗನೋರ್ವನ ಸಾಧನೆ ಮಾತ್ರ ಮರೆಮಾಚಿದೆ. ಆದರೆ, ವಿದೇಶದಲ್ಲಿಯೂ ಸದ್ದು ಮಾಡುತ್ತಿರುವ ಈ ಕನ್ನಡಿಗ 'ಪ್ಯಾಡ್‌ ಮ್ಯಾನ್‌' ರೀತಿ 'ಫಿಲ್ಟರ್‌ ಮ್ಯಾನ್‌' ಆಗಿ ಪ್ರಸಿದ್ಧಿಯಾಗಿದ್ದಾರೆ.

ವಿದೇಶಿ ಮಾಧ್ಯಮಗಳಲ್ಲಿಯೂ ಸುದ್ದಿಯಾದ ಈತನ ಬಗ್ಗೆ ಕನ್ನಡದ ಬಹುತೇಕ ಟಾಪ್ ಮಾಧ್ಯಮಗಳೇ ಆಲಸ್ಯ ತೋರಿಸಿವೆ. ಆದರೆ, ಜಗತ್ತಿನಾಧ್ಯಂತ ಮೆಚ್ಚುಗೆ ಪಡೆದಿರುವ ನಮ್ಮ ಕನ್ನಡಿಗನೋರ್ವನ ಸಾಧನೆಯನ್ನು ನಾವು ಇಂದು ನಿಮ್ಮ ಮುಂದಿಡುತ್ತಿದ್ದೇವೆ. ಹಾಗಾದರೆ, ಯಾರು ಈ ವಿಶ್ವ ಪ್ರಸಿದ್ದ ಕನ್ನಡಿಗ 'ಫಿಲ್ಟರ್‌ ಮ್ಯಾನ್‌'? ಈತನ ಸಾಧನೆ ಏನು ಎಂಬುದನ್ನು ಮುಂದೆ ತಿಳಿಯಿರಿ.

ಬೆರಳಷ್ಟು ಉದ್ದದ  'ಫ್ರೀ ಫಿಲ್ಟರ್‌'!!

ಬೆರಳಷ್ಟು ಉದ್ದದ 'ಫ್ರೀ ಫಿಲ್ಟರ್‌'!!

ಮೊದಲೇ ಹೇಳಿದಂತೆ ಎಂಜಿನಿಯರಿಂಗ್ ಅಂತಿಮ ವರ್ಷದ ಪ್ರಾಜೆಕ್ಟ್ ವೇಳೆ ತಯಾರಿಸಲು ಹೋದಾಗ 'ಮಕ್ಕಳಾಟ' ಎಂದು ತಿರಸ್ಕೃತಗೊಂಡಿದ್ದ ಪ್ರಾಜೆಕ್ಟ್ ಈ ಬೆರಳಷ್ಟು ಉದ್ದದ 'ಫ್ರೀ ಫಿಲ್ಟರ್‌'! ಇಂದು ಜಾಗತಿಕ ಮಟ್ಟದಲ್ಲಿ ಫಿಲ್ಟರ್‌ ಮಾರಾಟ ನಡೆಸುತ್ತಿರುವ ಒಂದು ಅತ್ಯಂತ ಕಡಿಮೆ ಬೆಲೆಯ ಸಾಧನವಿದು ಎಂದರೆ ಆಶ್ಚರ್ಯವಾಗದೆ ಇರಲು ಸಾಧ್ಯವಿಲ್ಲ.!

ಯಾರೀತ ಕನ್ನಡ ಕುವರ!!

ಯಾರೀತ ಕನ್ನಡ ಕುವರ!!

ಇಂಡಿಯನ್ ಆರ್ಮಿ. ಇನ್‌ಫೋಸಿಸ್ ಸೇರಿದಂತೆ ಜಗತ್ತಿನ ಘಟಾನುಘಟಿ ಉದ್ಯಮಿಗಳೇ ಬೆರಗಾಗುವಂತೆ ಮಾಡಿರುವುದು ನಮ್ಮ ರಾಜ್ಯದ ಬೆಳಗಾವಿಯ ನಿರಂಜನ್ ಕಾರಗಿ ಎಂಬುವವರು. 23 ವರ್ಷದ ಯುವಕ ನಿರಂಜನ್ ಕಾರಗಿ ಅವರ 'ಫ್ರೀ ಫಿಲ್ಟರ್‌' ಈಗ ವಿದೇಶದಲ್ಲಿಯೂ ಸದ್ದು ಮಾಡುತ್ತಿದ್ದು, 'ಪ್ಯಾಡ್‌ ಮ್ಯಾನ್‌' ರೀತಿ 'ಫಿಲ್ಟರ್‌ ಮ್ಯಾನ್‌' ಆಗಿ ಪ್ರಸಿದ್ಧಿಯಾಗಿದ್ದಾರೆ.

ಇಲೆವೆಂಟ್ 100 ಪ್ರಶಸ್ತಿ!

ಇಲೆವೆಂಟ್ 100 ಪ್ರಶಸ್ತಿ!

ಇತ್ತೀಚೆಗೆ ಕರ್ನಾಟಕ ಸರಕಾರ ಆಯೋಜಿಸಿದ್ದ ಇಲೆವೆಂಟ್ 100 ಸಮಾವೇಶದಲ್ಲಿ ನಿರಂಜನ್ ಅವರ ಫಿಲ್ಟರ್‌ ಸಾಧನಕ್ಕೆ ಪ್ರಶಸ್ತಿ ಲಭಿಸಿದೆ. ರಾಜ್ಯ ಸರಕಾರ ಸ್ಟ್ರಾರ್ಟ್‌ಅಪ್‌ ಸಹಾಯಧನ ಕೂಡ ಮಂಜೂರು ಮಾಡಿದೆ. ಈಗ 'ನಿರ್ನಲ್' ಎನ್ನುವ ಕಂಪೆನಿ ಹೆಸರಿನೊಂದಿಗೆ ಈ ಉದ್ಯಮ ಲಕ್ಷಾಂತರ ವ್ಯವಹಾರ ಮಾಡುತ್ತಿದೆ.

ಏನಿದು 'ಫ್ರೀ ಫಿಲ್ಟರ್‌'?

ಏನಿದು 'ಫ್ರೀ ಫಿಲ್ಟರ್‌'?

ಸಾಮಾನ್ಯ ನೀರಿನ ಬಾಟಲಿಯ ಬಾಯಿಗೆ ಅಳವಡಿಸಿ ಶುದ್ಧ ನೀರು ಪಡೆಯಬಹುದಾದ ಫಿಲ್ಟರ್‌ಗೆ 'ಫ್ರೀ ಫಿಲ್ಟರ್‌' ಎಂದು ಹೆಸರಿಡಲಾಗಿದೆ. ಈ ಒಂದು 'ಫಿಲ್ಟರ್‌' ಸಾಧನ 100 ಲೀ. ನೀರು ಶುದ್ಧ ಮಾಡುತ್ತದೆ. ಈ ಸಾಧನಕ್ಕೆ ಒಮ್ಮೆ ನೀರು ತಾಗಿಸಿದರೆ ಗರಿಷ್ಠ ಎರಡು ತಿಂಗಳು ಬಳಸಬಹುದು ಎಂದು ಕನ್ನಡಿಗ 'ಫಿಲ್ಟರ್‌ ಮ್ಯಾನ್‌' ಸಾಧಿಸಿ ತೋರಿಸಿದ್ದಾರೆ.

ಹೇಗಿದೆ ಫಿಲ್ಟರ್‌?

ಹೇಗಿದೆ ಫಿಲ್ಟರ್‌?

ಅಲ್ಟ್ರಾ ಫಿಲ್ಟರೇಶನ್ ಮೆಮರಿನ್ ತಂತ್ರಜ್ಞಾನದಲ್ಲಿ ಈ 'ಫ್ರೀ ಫಿಲ್ಟರ್‌' ಅನ್ನು ತಯಾರಿಸಲಾಗಿದೆ. ಇದು ನೀರನ್ನು ಶುದ್ಧ ಮಾಡುವ ಜತೆಗೆ ಶೇ. 80 ರಷ್ಟು ಬ್ಯಾಕ್ಟೀರಿಯಾಗಳನ್ನು ತಡೆಯುತ್ತದೆ. ಬೆರಳಿನ ಗಾತ್ರದ ಈ ಸಾಧನದಿಂದ ಒಮ್ಮೆ ನೀರನ್ನು ಫಿಲ್ಟರ್ ಮಾಡಿದರೆ, ಆ ನೀರನ್ನು ಗರಿಷ್ಠ ಎರಡು ತಿಂಗಳ ವರೆಗೆ ಬಳಸಬಹುದಾಗಿದೆ.

ಫಿಲ್ಟರ್ ಮಾರಾಟ ಎಲ್ಲೆಲ್ಲಿ?

ಫಿಲ್ಟರ್ ಮಾರಾಟ ಎಲ್ಲೆಲ್ಲಿ?

ತೋರು ಬೆರಳಷ್ಟು ಉದ್ದದ ಅವರ 'ಫ್ರೀ ಫಿಲ್ಟರ್‌' ಸಾಧನ ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಆಫ್ರಿಕಾ, ಫ್ರಾನ್ಸ್‌, ನ್ಯೂಜಿಲೆಂಡ್‌, ಸಿಂಗಾಪುರ, ಕತಾರ್‌ ದೇಶಗಳಿಗೆ ತಲುಪಿದೆ. ಭಾರತೀಯ ಸೇನೆ ಕೂಡ ಸುಮಾರು ಒಂದು ಸಾವಿರ ಫಿಲ್ಟರ್‌ಗಳನ್ನು ಖರೀದಿಸಿದೆ ಎಂದು ನಿರಂಜನ್ ಕಾರಗಿ ಅವರು ತಿಳಿಸಿದ್ದಾರೆ.

'ಫ್ರೀ ಫಿಲ್ಟರ್‌' ಬೆಲೆ ಎಷ್ಟು?

'ಫ್ರೀ ಫಿಲ್ಟರ್‌' ಬೆಲೆ ಎಷ್ಟು?

100 ಲೀ. ನೀರನ್ನು ಶುದ್ಧ ಮಾಡುವ ಈ ಬೆರಳಷ್ಟು ಉದ್ದದ 'ಫ್ರೀ ಫಿಲ್ಟರ್‌' ಬೆಲೆ 30 ರೂಪಾಯಿಗಳಾಗಿವೆ. ಜಿಎಸ್‌ಟಿ ಬೆಲೆಗಳೆಲ್ಲವೂ ಸೇರಿ ಈ ಸಾಧನದ ಬೆಲೆಯನ್ನು ಕನಿಷ್ಠ ಬೆಲೆಯಲ್ಲಿ ನಿಗಧಿಪಡಿಸಲಾಗಿದೆ. ಈ ಫಿಲ್ಟರ್‌ನಲ್ಲಿ ಇನ್ನಷ್ಟು ಸುಧಾರಣೆ ಮಾಡಿ ಅತ್ಯಂತ ಕನಿಷ್ಠ ಬೆಲೆಯಲ್ಲಿ ಜನರಿಗೆ ಕೊಡುವ ಯೋಚನೆಯನ್ನು ನಿರಂಜನ್ ಕಾರಗಿ ಹೊಂದಿದ್ದಾರೆ.

12 ಸಾವಿರ ರೂ. ಹೂಡಿಕೆ!

12 ಸಾವಿರ ರೂ. ಹೂಡಿಕೆ!

ದಿನವೊಂದಕ್ಕೆ 10 ಸಾವಿರಕ್ಕಿಂತ ಹೆಚ್ಚು ಫಿಲ್ಟರ್‌ ಅನ್ನು ನಿರಂಜನ್ ಕಾರಗಿ ಅವರು ತಮ್ಮ ಉದ್ಯಮದಲ್ಲಿ ತಯಾರಿಸುತ್ತಿದ್ದಾರೆ. 12 ಸಾವಿರ ರೂ. ಹೂಡಿಕೆಯೊಂದಿಗೆ ಆರಂಭವಾದ ಅವರ ಉದ್ಯಮ ಈಗ 'ನಿರ್ನಲ್‌' ಎನ್ನುವ ಕಂಪೆನಿ ಹೆಸರಿನೊಂದಿಗೆ ಲಕ್ಷಾಂತರ ವ್ಯವಹಾರ ಮಾಡುತ್ತಿದೆ.

ಮುಂದೆ 'ಅಲ್ಟ್ರಾ ಫಿಲ್ಟರ್‌' ಸಾಧನ!

ಮುಂದೆ 'ಅಲ್ಟ್ರಾ ಫಿಲ್ಟರ್‌' ಸಾಧನ!

ಸರಕಾರಿ ಶಾಲೆಯೊಂದರ ಮಕ್ಕಳು ಕಲುಷಿತ ನೀರು ಕುಡಿಯುತ್ತಿದ್ದರು. ಅದಕ್ಕೆ ಬಾಟಲಿಗೇ ಅಳವಡಿಸುವ ಈ ಫಿಲ್ಟರ್‌ ತಯಾರಿಸಿದ್ದಾಗಿ ನಿರಂಜನ್ ಅವರು ತಿಳಿಸಿದ್ದಾರೆ. ಈ ಫಿಲ್ಟರ್ ಅನ್ನು ಮತ್ತಷ್ಟು 80 ರೂ.ಗೆ 10 ಸಾವಿರ ಲೀಟರ್‌ವರೆಗೆ ಶೇ. 100ರಷ್ಟು ನೀರು ಶುದ್ಧ ಮಾಡುವ 'ಅಲ್ಟ್ರಾ ಫಿಲ್ಟರ್‌' ಸಾಧನ ರೂಪಿಸುತ್ತಿರುವುದಾಗಿ ನಿರಂಜನ್ ಹೇಳಿದ್ದಾರೆ.

Best Mobiles in India

English summary
Businessman says cyber criminals obtained a duplicate SIM card of his mobile number registered with the bank to receive the OTP.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X