ಅಪರಿಚಿತರಿಗೆ ಸಿವಿವಿ/ಒಟಿಪಿ/ಪಿನ್ ಮಾಹಿತಿ ನೀಡುವ ಮುನ್ನ ಇದನ್ನೊಮ್ಮೆ ಓದಿ!

|

ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ ಹಿಂಭಾಗದಲ್ಲಿ ನಮೂದಿಸಲಾದ ಸಿವಿವಿ ನಂಬರ್‌ ಅನ್ನು ಭದ್ರತಾ ಪಾಸ್‌ವರ್ಡ್‌ ಆಗಿ ಉಪಯೋಗಿಸಲಾಗುತ್ತಿದೆ. ಎಲ್ಲ ಆನ್‌-ಲೈನ್‌ ವ್ಯವಹಾರಗಳಲ್ಲೂ ಈ ಸಿವಿವಿ ನಂಬರ್‌ ಅನ್ನು ಹಾಕಿಯೇ ಮುಂದುವರಿಯಬೇಕು. ಈ ಸಿವಿವಿ ನಂಬರ್‌ ತಾಳೆಯಾಗದ ಹೊರತು ವ್ಯವಹಾರ ಸಂಪೂರ್ಣವಾಗುವುದಿಲ್ಲ. ಅದು ಸರಿ, ಆದರೆ ಜನರು ಈ ಸಿವಿವಿ ನಂಬರಿನಲ್ಲಿ ಯಾವುದೇ ಗೌಪ್ಯತೆಯನ್ನು ಕಾಪಾಡುತ್ತಿರಲಿಲ್ಲ ಎಂಬುದು ಸಮಸ್ಯೆ. ಈಗ ಒಟಿಪಿಯನ್ನು ಸಹ ಇತರರಿಗೆ ಹಂಚುತ್ತಿರುವುದು ಮತ್ತೊಂದು ದೊಡ್ಡ ಸಮಸ್ಯೆ.!

ಹೌದು, ಈಗ ಪ್ರತಿಯೊಂದು ಆನ್‌ಲೈನ್ ವ್ಯವಹಾರಕ್ಕೂ ಹೊಸತೊಂದು ಒಟಿಪಿಯನ್ನು ಸಿಸ್ಟಂ ವ್ಯವಹಾರವಿದೆ. ಅದು ನಿಮ್ಮ ನೋಂದಾಯಿತ ಮೊಬೈಲಿಗೆ ಮಾತ್ರವೇ ಬರುವ ಕಾರಣ ನೀವಲ್ಲದೆ ಇನ್ನಾರೂ ಅದನ್ನು ಪಡೆದು ಆನ್‌-ಲೈನ್‌ ವ್ಯವಹಾರವನ್ನು ಪೂರ್ಣಗೊಳಿಸಲು ಸಾಧ್ಯವಿಲ್ಲ. ಇದು ಸದ್ಯಕ್ಕೆ ಜಾರಿಯಲ್ಲಿರುವ ಉತ್ತಮ ಭದ್ರತಾ ವ್ಯವಸ್ಥೆ. ಆದರೆ, ಕ್ರಿಮಿನಲ್‌ಗಳು ನಾನಾ ರೀತಿಯ ಕತೆ ಕಟ್ಟಿ ನಿಮಗೆ ಫೋನ್‌ ಮಾಡಿ ಜನರ ದಿವ್ಯ ಹಸ್ತದಿಂದಲೇ ಆ ಒಟಿಪಿಯನ್ನು ಪಡೆದುಕೊಂಡು ವಂಚನೆ ನಡೆಸುತ್ತಿರುವುದು ಕಂಡುಬರುತ್ತಿದೆ.

ಅಪರಿಚಿತರಿಗೆ ಸಿವಿವಿ/ಒಟಿಪಿ/ಪಿನ್ ಮಾಹಿತಿ ನೀಡುವ ಮುನ್ನ ಇದನ್ನೊಮ್ಮೆ ಓದಿ!

ಈ ರೀತಿಯಲ್ಲಿ ನಡೆಯುವ ಮೋಸಗಳು ಇತ್ತೀಚೆಗೆ ಸರ್ವೇ ಸಾಮಾನ್ಯವಾಗಿದ್ದು, ಯಾವುದೇ ವಿಧಾನದಲ್ಲಿ ತಾವು ಬ್ಯಾಂಕಿನ ಸಿಬ್ಬಂದಿ ಎಂದು ನಿಮಗೆ ನಂಬಿಕೆ ಹುಟ್ಟಿಸುವಂತೆ ಮಾತನಾಡಿ ನಿಮ್ಮ ಬಳಿಯಿಂದ ಪಾಸ್‌ವರ್ಡ್‌/ಸಿವಿವಿ/ಒಟಿಪಿ ಪಡೆದುಕೊಂಡು ಆ ಬಳಿಕ ನಿಮ್ಮ ಖಾತೆಯಲ್ಲಿರುವ ದುಡ್ಡನ್ನು ಬೇರೆಡೆ ವರ್ಗಾಯಿಸುವುದು ಈ ಮೋಸದಲ್ಲಿ ಕಂಡುಬರುತ್ತಿರುವ ದೊಡ್ಡ ಹೆಜ್ಜೆ. ಹಾಗಾಗಿ, ಇಂದಿನ ಲೇಖನದಲ್ಲಿ ಇಂತಹ ಆನ್‌ಲೈನ್ ವಂಚನೆಯಿಂದ ಹುಷಾರಾಗಿ ತಪ್ಪಿಸಿಕೊಳ್ಳುವುದು ಹೇಗೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ನಂಬರುಗಳನ್ನು ಹಂಚಬೇಡಿ!

ನಂಬರುಗಳನ್ನು ಹಂಚಬೇಡಿ!

ಯಾವುದೇ ಕಾರಣಕ್ಕೂ ಸಿವಿವಿ ನಂಬರ್‌ ಮತ್ತು ಒಟಿಪಿ ನಂಬರುಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಸ್ವತಃ ಬ್ಯಾಂಕು ಸಿಬ್ಬಂದಿ/ಕಾಲ್‌ ಸೆಂಟರ್‌ನವರಿಗೂ ಆ ಮಾಹಿತಿಗಳನ್ನು ನಿಮ್ಮಲ್ಲಿ ಕೇಳುವ ಹಕ್ಕಿಲ್ಲ. ಯಾರೇ ಆಗಲಿ ನಿಮ್ಮಲ್ಲಿ ಈ ಮಾಹಿತಿಗಳನ್ನು ಕೇಳಿದರೆ ಅದನ್ನು ನೀಡಲೇ ಬೇಡಿ. ಅವರು ನಿಮ್ಮನ್ನು ಕೇಳಿದಾಗ ಸೈಬರ್ ಕ್ರೆ„ಮ್ ವಿಭಾಗಕ್ಕೂ ದೂರು ನೀಡಿ.

ಕಾರ್ಡ್ ನಿಮ್ಮ ಕಣ್ಣಳತೆಯಲ್ಲಿರಲಿ!

ಕಾರ್ಡ್ ನಿಮ್ಮ ಕಣ್ಣಳತೆಯಲ್ಲಿರಲಿ!

ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಮೂಲಕ ಹಣ ಪಾವತಿ ಮಾಡುವಾಗ ನಿಮ್ಮ ಕಾರ್ಡ್‌ ನಿಮ್ಮ ಕಣ್ಣಳತೆಯಿಂದ ದೂರ ಹೋಗದಂತೆ ಜಾಗ್ರತೆ ವಹಿಸಿರಿ. ಎಲ್ಲ ವ್ಯವಹಾರಗಳು ನಿಮ್ಮ ಕಣ್ಣೆದುರಿಗೇ ನಡೆಯಲಿ. ಸಿಮ್ ರೀತಿಯಲ್ಲೇ ಡೆಬಿಟ್/ಕ್ರೆಡಿಟ್‌ ಕಾರ್ಡುಗಳನ್ನು ಕ್ಲೋನ್ ಮಾಡಿ ಡುಪ್ಲಿಕೇಟ್‌ ಕಾರ್ಡ್‌ ತಯಾರಿಸುವ ಯಂತ್ರಗಳು ಸಹ ಈಗ ಮಾರುಕಟ್ಟೆಯಲ್ಲಿ ಇವೆ, ನೆನಪಿರಲಿ.

ಮೊಬೈಲ್‌ ಫೋನ್‌ ಭದ್ರತೆ

ಮೊಬೈಲ್‌ ಫೋನ್‌ ಭದ್ರತೆ

ನಿಮ್ಮ ಮೊಬೈಲ್‌ ಫೋನ್‌ ಈಗ ಬ್ಯಾಂಕಿಂಗ್‌ ವ್ಯವಹಾರದಲ್ಲಿ ಭದ್ರತೆಗಾಗಿ ಬಳಕೆಯಾಗುವುದನ್ನು ನೆನಪಿನಲ್ಲಿಡಿ. ನಿಮ್ಮ ಮೊಬೈಲ್ ಕಳೆದುಕೊಂಡರೂ ಸಹ ಅದರಲ್ಲಿನ ಮಾಹಿತಿ ಯಾರಿಗೂ ಸಿಗದಂತೆ ಲಾಕ್ ಮಾಡಿ. ಏಕೆಂದರೆ, ನಿಮ್ಮ ಕಾರ್ಡ್‌ ಹಾಗೂ ಮೊಬೈಲ್‌ ಎರಡೂ ಕೈವಶವಾದರೆ ನಿಮ್ಮ ಕಾರ್ಡಿನಲ್ಲಿರುವ ದುಡ್ಡನ್ನು ಯಾರಾದರೂ ಚೌರ ಮಾಡಿಬಿಡಬಹುದು, ಎಚ್ಚರಿಕೆ.

ಮೊಬೈಲ್ ಸಿಮ್ ಭದ್ರತೆ!

ಮೊಬೈಲ್ ಸಿಮ್ ಭದ್ರತೆ!

ಮೊಬೈಲ್ ಫೋನ್ ಮಾತ್ರವಲ್ಲ ಜೊತೆಗೆ ನಿಮ್ಮ ಮೊಬೈಲ್ ಸಿಮ್ ಅನ್ನು ಸಹ ಸೇಫ್ ಆಗಿ ಇಟ್ಟುಕೊಳ್ಳಿ. ನಿಮ್ಮ ಮೊಬೈಲ್ ಸಿಮ್ ಅಚಾನಕ್ ಆಗಿ ಬ್ಲಾಕ್ ಆದರೆ ಆ ಕೂಡಲೇ ಟೆಲಿಕಾಂ ಕಂಪೆನಿಗೆ ಕರೆ ಮಾಡಿ ಸ್ಪಷ್ಟ ಮಾಹಿತಿ ತಿಳಿದುಕೊಳ್ಳಿ. ಒಂದು ವೇಳೆ ಅಪರಿಚಿತರು ಏನಾದರೈ ನಿಮ್ಮ ಸಿಮ್ ಅನ್ನು ನಕಲಿಸಿದ್ದರೆ ಕೂಡಲೇ ಅದನ್ನು ಬ್ಲಾಕ್ ಮಾಡಿಸಿ ಆ ಬಗ್ಗೆ ದೂರು ನೀಡಿ.

ಸಿವಿವಿ ನಂಬರನ್ನು ಅಳಿಸಿಬಿಡಿ!

ಸಿವಿವಿ ನಂಬರನ್ನು ಅಳಿಸಿಬಿಡಿ!

ನಿಮ್ಮ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ ಸಿವಿವಿ ನಂಬರನ್ನು ಬಾಯಿಪಾಠ ಮಾಡಿಕೊಂಡು ಕಾರ್ಡಿನ ಹಿಂಬದಿಯಿಂದ ಅದನ್ನು ಅಳಿಸಿ ಹಾಕಿದರೆ ಒಳ್ಳೆಯದು. ಜೊತೆಗೆ ಅದರಲ್ಲಿನ ಗ್ರಿಡ್‌ ನಂಬರುಗಳನ್ನೂ ಆ ರೀತಿ ಬೇರೆಡೆ ಬರೆದಿಟ್ಟು ಅಳಿಸಿ ಹಾಕಿದರೆ ಒಳ್ಳೆಯದು. ಎಲ್ಲದಕ್ಕಿಂತ ನಿಮ್ಮ ಎಟಿಎಂ ಪಿನ್‌ ಅನ್ನು ಕಾರ್ಡ್ ಮೇಲೆ ಬರೆಯದಂತಹ ಅತ್ಯಂತ ಜಾಗ್ರತೆ ಇರಲಿ.

ಇಮೇಲ್ ಮತ್ತು ನಕಲಿ ಇಮೇಲ್!

ಇಮೇಲ್ ಮತ್ತು ನಕಲಿ ಇಮೇಲ್!

ನಿಮ್ಮ ಗೌಪ್ಯ ನಂಬರುಗಳನ್ನು ಇಮೈಲ್‌ ಮುಖಾಂತರ ಅಥವಾ ಎಸ್ಸೆಮ್ಮೆಸ್ ಮುಖಾಂತರ ಇನ್ನೊಬ್ಬರಿಗೆ ದಾಟಿಸಬೇಡಿ. ಅದು ದುರ್ಬಳಕೆಯಾಗುವ ಸಂದರ್ಭಗಳಿವೆ. ಜೊತೆಗೆ ಯಾವುದೇ ರೀತಿಯ ಲಾಟರಿಯಂತಹ ಇ ಮೇಲ್‌ಗಳು ನಿಮ್ಮ ಮೊಬೈಲ್‌ಗೆ ಬಂದರೆ ಅದನ್ನು ನಂಬಬೇಡಿ. ಇವುಗಳು ಗೋಲ್‌ಮಾಲ್ ವ್ಯವಹಾರಗಳ ಹಿಂದಿರುವ ಏಕೈಕ ಉದ್ದೇಶ ಆಗಿರುತ್ತದೆ.

ಬಹುಬೇಗ ದೂರು ನೀಡಿ.

ಬಹುಬೇಗ ದೂರು ನೀಡಿ.

ಬ್ಯಾಂಕಿಗ್ ವ್ಯವಹಾರದಲ್ಲಿ ಯಾವುದೇ ಅವಘಡ ಸಂಭವಿಸಿದ ಕೂಡಲೇ ನಿಮ್ಮ ಬ್ಯಾಂಕಿನ ಹೆಲ್ಪ್ಲೈನ್/ ಬ್ರಾಂಚ್‌ ಸಂಪರ್ಕಿಸಿ ಕೂಡಲೇ ದೂರು ನೀಡಿರಿ. ಪೊಲೀಸ್‌ ಇಲಾಖೆಯ ಸೈಬರ್ ಕ್ರೈಮ್ ವಿಭಾಗದಲ್ಲೂ ಎಫ್ಐಆರ್ ದಾಖಲಿಸಿರಿ. ನೀವು ಎಷ್ಟು ಬೇಗ ದೂರು ದಾಖಲಿಸುತ್ತೀರಾ ಎಂಬುದು ಕೂಡ ಮುಖ್ಯ. ಆದರೆ, ಎಲ್ಲದಕ್ಕಿಂತ ಮೊದಲು ನೀವು ಎಚ್ಚರವಾಗಿರುವುದು ಬಹುಮುಖ್ಯ.

Most Read Articles
Best Mobiles in India

English summary
When you are using financial services for online transactions, the server, depending upon its configuration to use specified algorithms, generates a one-time password, or OTP, . to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X