Home
ಸುದ್ದಿಜಾಲ

ಎಂಟ್ರಿ ಕೊಡ್ತು ಹೊಸ ಟ್ಯಾಬ್; ಒಮ್ಮೆ ಚಾರ್ಜ್ ಮಾಡಿದ್ರೆ, 6 ತಿಂಗಳು ಕಿರಿ ಕಿರಿ ಇರಲ್ಲ!

ಮಾರುಕಟ್ಟೆಯಲ್ಲಿ ನೀವು ವಿವಿಧ ಮಾದರಿಯ ಸ್ಮಾರ್ಟ್‌ಟ್ಯಾಬ್ಲೆಟ್‌ಗಳನ್ನು ಕಾಣಬಹುದು. ಆದರೆ ಔಕಿಟೆಲ್ (Oukitel) ಕಂಪೆನಿ ಇದೇ ಮೊದಲ ಬಾರಿಗೆ 5G ಕನೆಕ್ಟಿವಿಟಿ ಬೆಂಬಲಿಸುವ ರಗಡ್‌ ಟ್ಯಾಬ್ಲೆಟ್‌ ಬಿಡುಗಡೆ ಮಾಡಿದೆ. ಇದನ್ನು Oukitel RT7 Titan 5G ಎಂದು ಹೆಸರಿಸಲಾಗಿದ್ದು, ಇದು 32,000mAh ಸಾಮರ್ಥ್ಯದ ಬಿಗ್‌ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿದೆ.

ಹೌದು, Oukitel RT7 Titan 5G ಟ್ಯಾಬ್ಲೆಟ್‌ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಇದು ತನ್ನ ಬಿಗ್‌ ಬ್ಯಾಟರಿ ಸಾಮರ್ಥ್ಯದಿಂದ ಗಮನಸೆಳೆದಿದ್ದು, ಸ್ಟ್ಯಾಂಡ್‌ಬೈನಲ್ಲಿ 2,720 ಗಂಟೆಗಳ ಬ್ಯಾಕ್‌ಅಪ್‌ ನೀಡಲಿದೆ. ಇದು ಡೈಮೆನ್ಸಿಟಿ 720 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ ಟ್ಯಾಬ್ಲೆಟ್‌ ವಿಶೇಷತೆ ಏನಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಎಂಟ್ರಿ ಕೊಡ್ತು ಹೊಸ ಟ್ಯಾಬ್; ಒಮ್ಮೆ ಚಾರ್ಜ್ ಮಾಡಿದ್ರೆ,6ತಿಂಗಳು ಕಿರಿಕಿರಿ ಇರಲ್ಲ

Oukitel RT7 Titan 5G ಫೀಚರ್ಸ್‌ ವಿವರ
Oukitel RT7 Titan 5G ಸ್ಮಾರ್ಟ್‌ ಟ್ಯಾಬ್ಲೆಟ್‌ 10.1 ಇಂಚಿನ FHD+ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 1920x1200 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದಲ್ಲದೆ ಈ ಡಿಸ್‌ಪ್ಲೇ 24 ಬಿಟ್‌ ಅನ್ನು ಒಳಗೊಂಡಿದೆ. ಜೊತೆಗೆ ಇದು IP68/ IP69K/ MIL-STD-810H ರಗಡ್ ಚಾಸಿಸ್ ಅನ್ನು ಹೊಂದಿದೆ.

ಇನ್ನು ಈ ಸ್ಮಾರ್ಟ್‌ ಟ್ಯಾಬ್ಲೆಟ್‌ ಡೈಮೆನ್ಸಿಟಿ 720 SoC ಪ್ರೊಸೆಸರ್‌ ವೇಗವನ್ನು ಹೊಂದಿದ್ದು, ಆಂಡ್ರಾಯ್ಡ್ 13 ಔಟ್ ಆಫ್ ದಿ ಬಾಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 24GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಇದಲ್ಲದೆ ಹೆಚ್ಚುವರಿಯಾಗಿ RAM ಅನ್ನು 12GB ವರೆಗೆ ವಿಸ್ತರಿಸಬಹುದಾಗಿದೆ.

Oukitel RT7 Titan 5G ಟ್ಯಾಬ್ಲೆಟ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್‌ ಸೆನ್ಸಾರ್‌, ಎರಡನೇ ಕ್ಯಾಮೆರಾ 20 ಮೆಗಾಪಿಕ್ಸೆಲ್‌ ಸೆನ್ಸಾರ್‌, ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ.

Oukitel RT7 Titan 5G ಟ್ಯಾಬ್ಲೆಟ್‌ 32,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು ಸ್ಟ್ಯಾಂಡ್‌ಬೈನಲ್ಲಿ 2,720 ಗಂಟೆಗಳ ಬ್ಯಾಕ್‌ಅಪ್‌ ಅನ್ನು ನೀಡಲಿದೆ. ಅಂದರೆ ಬರೋಬ್ಬರಿ 180 ದಿನಗಳ ಬಾಳಿಕೆಯನ್ನು ನೀಡಲಿದೆ ಎಂದು ಹೇಳಲಾಗಿದೆ. ಇದು ಡಿಟ್ಯಾಚೇಬಲ್ ಹ್ಯಾಂಡಲ್ ಅನ್ನು ಸಹ ಹೊಂದಿದೆ. ಇದನ್ನು USB-C ಮೂಲಕ 33W ವೇಗದ ಚಾರ್ಜಿಂಗ್‌ನಲ್ಲಿ ಚಾರ್ಜ್‌ ಮಾಡಬಹುದಾಗಿದೆ.

Oukitel RT7 Titan 5G ಬೆಲೆ ಮತ್ತು ಲಭ್ಯತೆ
Oukitel RT7 Titan 5G ಸ್ಮಾರ್ಟ್‌ ರಗಡ್‌ ಟ್ಯಾಬ್ಲೆಟ್‌ ಬೆಲೆ $999.97 ಆಗಿದೆ. ಇದನ್ನು ಈಗಾಗಲೇ ಜಾಗತಿಕ ವೆಬ್‌ಸೈಟ್ ಅಲೈಕ್ಸ್‌ಪ್ರೆಸ್‌ನಲ್ಲಿ ಪಟ್ಟಿ ಮಾಡಲಾಗಿದೆ. ಆದರೆ ಇದು ಅಧಿಕೃತವಾಗಿ ಆಗಸ್ಟ್‌ 21-25ರ ನಡುವೆ ಅನಾವರಣಗೊಳ್ಳಲಿದೆ ಎಂದು ಹೇಳಲಾಗಿದೆ.

ಇನ್ನು ಇತ್ತೀಚಿನ ಸ್ಮಾರ್ಟ್‌ ಟ್ಯಾಬ್ಲೆಟ್‌ ಸುದ್ದಿಗಳನ್ನು ಗಮನಿಸುವುದಾದರೆ ಶಿಯೋಮಿ ಕಂಪೆನಿ ಹೊಸ ಶಿಯೋಮಿ ಪ್ಯಾಡ್‌ 6 ಅನ್ನು ಪರಿಚಯಿಸಿದೆ. ಇದು 11 ಇಂಚಿನ 2.8K IPS LCD ಸ್ಕ್ರೀನ್‌ ಅನ್ನು ಹೊಂದಿದೆ. ಇನ್ನು ಡಿಸ್‌ಪ್ಲೇ 1,800x2,880 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿದ್ದು, 550 ನೀಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ನೀಡಲಿದೆ. ಇದಲ್ಲದೆ ಸ್ನಾಪ್‌ಡ್ರಾಗನ್ 870 SoC ಪ್ರೊಸೆಸರ್‌ ವೇಗದಲ್ಲಿ ಕಾರ್ಯನಿರ್ವಹಿಸಲಿದೆ. ಜೊತೆಗೆ ಆಂಡ್ರಾಯ್ಡ್ 13-ಆಧಾರಿತ MIUI 14 ಔಟ್-ಆಫ್-ದಿ-ಬಾಕ್ಸ್‌ ಬೆಂಬಲವನ್ನು ಹೊಂದಿದೆ. ಈ ಸ್ಮಾರ್ಟ್‌ ಟ್ಯಾಬ್ಲೆಟ್‌ 13 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸಿಂಗಲ್‌ ರಿಯರ್‌ ಕ್ಯಾಮೆರಾವನ್ನು ಹೊಂದಿದೆ. ಅಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಹೊಂದಿದೆ.

Best Mobiles in India

English summary
Oukitel RT7 Titan 5G with 32,000mAh battery launched: Specs and Price details in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+