Home
ಸುದ್ದಿಜಾಲ

ಜಿಯೋಯಿಂದಾಗಿ ಬೀದಿಗೆ ಬೀಳುತ್ತಿದ್ದಾರೆ 30 ಸಾವಿರ ಜನ !!..ಏಕೆ ಗೊತ್ತಾ?

ಟೆಲಿಕಾಂ ಕಂಪೆನಿಗಳ ನಷ್ಟ, ಮಾರಾಟ ಮತ್ತು ವಿಲೀನ ಪರಿಣಾಮಗಳಿಂದ ಮುಂದಿನ 12 ತಿಂಗಳಿನಲ್ಲಿ 30 ಸಾವಿರಕ್ಕಿಂತ ಹೆಚ್ಚು ಹುದ್ದೆಗಳು ಕಡಿತವಾಗುವ ಸಂಭವ ಇದೆ ಎಂದು ನೇಮಕಾತಿ ವಲಯದ ಸಂಸ್ಥೆಗಳು ತಿಳಿಸಿವೆ.!!

By Bhaskar N J

ಟೆಲಿಕಾಂನಲ್ಲಿ ನಡೆಯುತ್ತಿರುವ ದರಸಮರದಿಂದಾಗಿ ಟೆಲಿಕಾಂ ಕಂಪೆನಿಗಳ ಮೇಲೆ ಭಾರೀ ಪರಿಣಾಮ ಬೀರುತ್ತಿದ್ದು, ಟೆಲಿಕಾಂ ಕಂಪೆನಿಗಳ ನಷ್ಟ, ಮಾರಾಟ ಮತ್ತು ವಿಲೀನ ಪರಿಣಾಮಗಳಿಂದ ಮುಂದಿನ 12 ತಿಂಗಳಿನಲ್ಲಿ 30 ಸಾವಿರಕ್ಕಿಂತ ಹೆಚ್ಚು ಹುದ್ದೆಗಳು ಕಡಿತವಾಗುವ ಸಂಭವ ಇದೆ ಎಂದು ನೇಮಕಾತಿ ವಲಯದ ಸಂಸ್ಥೆಗಳು ತಿಳಿಸಿವೆ.!!

ಟೆಲಿಕಾಂನಲ್ಲಿ ದರಸಮರ ಶುರುವಾದಾಗಿನಿಂದಲೂ ಟೆಲಿಕಾಂ ಉದ್ಯೋಗ ವಲಯದ ಒಟ್ಟಾರೆ ಚಿತ್ರಣ ನಿರಾಶಾದಾಯಕವಾಗಿದ್ದು, ಇದರಿಂದ ಟೆಲಿಕಾಂ ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.! ಹಾಗಾದರೆ, ಟೆಲಿಕಾಂ ವಲಯದಲ್ಲಿ ನಡೆಯುತ್ತಿರುವ ಅಚ್ಚರಿಯ ಬೆಳವಣಿಗೆಗಳು ಏನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಉದ್ಯೋಗ ನಷ್ಟಕ್ಕೆ ಜಿಯೋ ಕಾರಣ!!

ಉದ್ಯೋಗ ನಷ್ಟಕ್ಕೆ ಜಿಯೋ ಕಾರಣ!!

ಜಿಯೋಯಿಂದ ಗ್ರಾಹಕರು ಅತ್ಯಂತ ಕಡಿಮೆ ಬೆಲೆಗೆ ಟೆಲಿಕಾಂ ಸೇವೆಗಳನ್ನು ಪಡೆದು ಆನಂದಿಸಿದರೆ, ಇತ್ತ 20ರಿಂದ 30 ಸಾವಿರ ಟೆಲಿಕಾಂ ನೌಕರರು ತಮ್ಮ ಉದ್ಯೋಗ ಕಳೆದುಕೊಳ್ಳುವ ಸ್ಥಿತಿಗೆ ಬಂದಿದ್ದಾರೆ.! ಜಿಯೋಯಿಂದಾಗಿ ಇತರ ಟೆಲಿಕಾಂಗಳ ಆದಾಯ ಕುಸಿದಿರುವುದು ಭಾರೀ ಹುದ್ದೆಗಳ ಕಡಿತಕ್ಕೆ ಮೂಲ ಕಾರಣ ಎನ್ನಲಾಗಿದೆ.!!

ಒಂದೇ ವರ್ಷದಲ್ಲಿ ಹೆಚ್ಚು ಬದಲಾವಣೆ!!

ಒಂದೇ ವರ್ಷದಲ್ಲಿ ಹೆಚ್ಚು ಬದಲಾವಣೆ!!

ಜಿಯೋ ಬಂದ ನಂತರ ಕೇವಲ ಒಂದೇ ವರ್ಷದಲ್ಲಿ ಭಾರತೀಯ ಟೆಲಿಕಾಂ ಹೆಚ್ಚು ಬದಲಾವಣೆಗಳನ್ನು ಕಂಡಿದ್ದು, ಟೆಲಿಕಾಂ ವಲಯದಲ್ಲಿ ಕಂಪನಿಗಳ ಮಾರಾಟ, ವಿಲೀನ, ಸ್ಥಗಿತದಂತಹ ಚಟುವಟಿಕೆಗಳು ಏರ್ಪಟ್ಟಿವೆ. ಇವುಗಳ ಪರಿಣಾಮಗಳಿಂದಾಗಿ ಭವಿಷ್ಯದಲ್ಲಿ ಸಾವಿರಾರು ಉದ್ಯೋಗ ನಷ್ಟವಾಗುವ ಭೀತಿ ಎದುರಾಗಿದೆ.!!

8 ಲಕ್ಷ ಕೋಟಿ ರೂ.ಸಾಲ!!

8 ಲಕ್ಷ ಕೋಟಿ ರೂ.ಸಾಲ!!

ಇಡೀ ಭಾರತೀಯ ಟೆಲಿಕಾಂ ವಲಯ ಒಟ್ಟಾಗಿ 8 ಲಕ್ಷ ಕೋಟಿ ರೂ. ಸಾಲದ ಹೊರೆ ಎದುರಿಸುತ್ತಿದ್ದು, ಇದರ ಜೊತೆಯಲ್ಲಿಯೇ ಎಲ್ಲಾ ಟೆಲಿಕಾಂ ಕಂಪೆನಿಗಳು ಕೂಡ ನಷ್ಟಕ್ಕೆ ಗುರಿಯಾಗುತ್ತಿದ್ದು, ರಿಲಯನ್ಸ್‌ ಜಿಯೊ ಪ್ರವೇಶದ ನಂತರ ಟೆಲಿಕಾಂ ಕಂಪನಿಗಳು ತೀವ್ರ ಒತ್ತಡ ಎದುರಿಸುತ್ತಿವೆ.!!

ಏನೆಲ್ಲಾ ಬದಲಾವಣೆ ಆಗುತ್ತಿದೆ?

ಏನೆಲ್ಲಾ ಬದಲಾವಣೆ ಆಗುತ್ತಿದೆ?

ಜಿಯೋಗೆ ಸೆಡ್ಡುಹೊಡೆಯಲು ಐಡಿಯಾ ಮತ್ತು ವೊಡಾಪೋನ್ ವಿಲೀನವಾದರೆ, ಟಾಟಾ ಸಮೂಹವನ್ನು ಏರ್‌ಟೆಲ್‌ಗೆ ಖರೀದಿಸಿದೆ. ಇನ್ನು ರಿಲಯನ್ಸ್ ಕಮ್ಯುನಿಕೇಶನ್ಸ್ ಹೆಚ್ಚು ನಷ್ಟದಿಂದಾಗಿ ‌ ತನ್ನ ವೈರ್‌ಲೆಸ್‌ ಬಿಸಿನೆಸ್‌ ಅನ್ನು ಶೀಘ್ರದಲ್ಲಿಯೇ ಸ್ಥಗಿತಗೊಳಿಸುತ್ತಿದೆ. ಇದರಿಂದ ಟೆಲಿಕಾಂನಲ್ಲಿ ಭಾರೀ ಹುದ್ದೆಗಳು ಕಡಿತವಾಗುತ್ತಿವೆ.!!

ಯಾವೆಲ್ಲಾ ಉದ್ಯೋಗಗಳಿಗೆ ಕಡಿತ?

ಯಾವೆಲ್ಲಾ ಉದ್ಯೋಗಗಳಿಗೆ ಕಡಿತ?

ಟೆಲಿಕಾಂ ಕಂಪೆನಿಯಲ್ಲಿ ಎಚ್‌ಆರ್‌, ನೆಟ್‌ವರ್ಕಿಂಗ್, ಸೇಲ್ಸ್, ಟೆಲಿಕಾಂ ಎಂಜಿನಿಯರಿಂಗ್ ಮತ್ತು ಕಾಲ್‌ ಸೆಂಟರ್‌ ವಿಭಾಗಗಳು ಉದ್ಯೋಗ ನಷ್ಟದ ಆತಂಕದಲ್ಲಿವೆ. ಅಂದರೆ ಟೆಲಿಕಾಂ ವಲಯದ ಮೂಲ ಸೌಕರ್ಯ ವಿಭಾಗದಲ್ಲಿ ಭಾರಿ ಸಂಖ್ಯೆಯಲ್ಲಿ ಉದ್ಯೋಗ ನಷ್ಟವಾಗುವ ಸಂಭವ ಇದೆ ಎಂದು ಹೇಳಬಹುದಾಗಿದೆ.!!

Best Mobiles in India

English summary
telecom operators have cut about 22,000 jobs in the past five years. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+