Home
ಸುದ್ದಿಜಾಲ

ಲ್ಯಾಪ್‌ಟಾಪ್ ಜೊತೆಗೆ ಅಗತ್ಯ ಎನಿಸುವ ಇತರೆ ಡಿವೈಸ್‌ಗಳು!

ಇತ್ತೀಚಿನ ದಿನಗಳಲ್ಲಿ ಲ್ಯಾಪ್‌ಟಾಪ್‌ಗಳು ಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಂಡಿವೆ. ಕೊರೊನಾ ಬಂದ ನಂತರ ಹೆಚ್ಚಿನ ಜನರು ಮನೆಯಿಂದಲೇ ಕಾರ್ಯನಿರ್ವಹಿಸುತ್ತಿರುವುದರಿಂದ ಲ್ಯಾಪ್‌ಟಾಪ್‌ಗಳಿಗೂ ಹೆಚ್ಚಿನ ಬೇಡಿಕೆ ಬಂದಿದೆ. ಇನ್ನು ಲ್ಯಾಪ್‌ಟಾಪ್‌ ಬಳಸುವವರು ಲ್ಯಾಪ್‌ಟಾಪ್‌ ಜೊತೆಗೆ ಇತರೆ ಡಿವೈಸ್‌ಗಳನ್ನು ಹೊಂದಿರುವುದು ಅವಶ್ಯ ಎನಿಸಿದೆ. ಲ್ಯಾಪ್‌ಟಾಪ್‌ ಅನ್ನು ಉತ್ತಮವಾಗಿಡಲು ಕೆಲವು ಡಿವೈಸ್‌ಗಳು ಎಲ್ಲರಿಗೂ ಅಗತ್ಯವಾಗಿದೆ.

ಲ್ಯಾಪ್‌ಟಾಪ್‌

ಹೌದು, ಲ್ಯಾಪ್‌ಟಾಪ್‌ ಬಳಕೆದಾರರು ಲ್ಯಾಪ್‌ಟಾಪ್‌ ಅನ್ನು ಸುರಕ್ಷಿತವಾಗಿರಿಸಿಕೊಳ್ಳಲು ಕೆಲವು ಡಿವೈಸ್‌ಗಳು ಮುಖ್ಯ ಎನಿಸಿದೆ. ಲ್ಯಾಪ್‌ಟಾಪ್‌ ಅನ್ನು ಹೆಚ್ಚಿನ ಸಮಯ ಬಳಸಿದಂತೆ ಬಿಸಿಯಾಗುತ್ತದೆ ಅದನ್ನು ತಡೆಗಟ್ಟುವುದಕ್ಕೆ ಲ್ಯಾಪ್‌ಟಾಪ್‌ ಪ್ಯಾನ್‌ ಅವಶ್ಯಕವಿದೆ. ಅದೇ ರೀತಿ ಲ್ಯಾಪ್‌ಟಾಪ್‌ ಅನ್ನು ನಿರ್ವಹಿಸಲು ಯಾವೆಲ್ಲಾ ಡಿವೈಸ್‌ಗಳು ಮುಖ್ಯ ಎನಿಸಲಿವೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಲ್ಯಾಪ್‌ಟಾಪ್ ಜೊತೆಗೆ ಅಗತ್ಯ ಎನಿಸುವ ಇತರೆ ಡಿವೈಸ್‌ಗಳು!

ಲ್ಯಾಪ್‌ಟಾಪ್ ಜೊತೆಗೆ ಅಗತ್ಯ ಎನಿಸುವ ಇತರೆ ಡಿವೈಸ್‌ಗಳು!

1. ನೀವು ಗೂಗಲ್ ಕ್ರೋಮ್ ಟ್ಯಾಬ್‌ಗಳು, ಸ್ಪಾಟಿಫೈ, ಫೋಟೋಶಾಪ್, ಸ್ಲಾಕ್, ಔಟ್‌ಲುಕ್ ಮತ್ತು ಎಕ್ಸೆಲ್ ಅನ್ನು ಒಂದೇ ಸಮಯದಲ್ಲಿ ತೆರೆದಾಗ ನಿಮ್ಮ ಲ್ಯಾಪ್‌ಟಾಪ್ ಬಿಸಿಯಾಗುವುದು ಸಹಜ. ಇಂತಹ ಸಮಯದಲ್ಲಿ ನಿಮ್ಮ ಲ್ಯಾಪ್‌ಟಾಪ್‌ ಬಿಸಿಯನ್ನು ಕಡಿಮೆ ಮಾಡುವುದಕ್ಕೆ ಲ್ಯಾಪ್‌ಟಾಪ್ ಫ್ಯಾನ್ ಸೂಕ್ತವಾಗಿದೆ. ಲ್ಯಾಪ್‌ಟಾಪ್‌ ಪ್ಯಾನ್‌ 999 ರೂ.ಗೆ ದೊರೆಯಲಿದೆ.

ಲ್ಯಾಪ್‌ಟಾಪ್‌

ಲ್ಯಾಪ್‌ಟಾಪ್‌

2. ಲ್ಯಾಪ್‌ಟಾಪ್‌ ಬಳಸುವಾಗ ಮೌಸ್‌ ಮತ್ತು ಫೋನ್‌ ಎರಡನ್ನು ಇಟ್ಟುಕೊಳ್ಳುವುದಕ್ಕೆ ಲ್ಯಾಪ್‌ಟಾಪ್‌ ಡೆಸ್ಕ್‌ ಉತ್ತಮವಾಗಿರಲಿದೆ. ಮೆತ್ತನೆಯ ಲ್ಯಾಪ್‌ಟಾಪ್ ಡೆಸ್ಕ್ 1,299 ರೂ.ಬೆಲೆಗೆ ಲಭ್ಯವಾಗಲಿದೆ.

ಲ್ಯಾಪ್‌ಟಾಪ್‌

3. ಲ್ಯಾಪ್‌ಟಾಪ್‌ ಜೊತೆಗೆ ಪೋರ್ಟ್‌ ಯುಎಸ್‌ಬಿ-ಸಿ ಹಬ್ ಕೂಡ ಉತ್ತಮ ಆಯ್ಕೆ ಎನಿಸಲಿದೆ. ಇನ್ನು ಈ ಪೋರ್ಟ್‌ ಯುಎಸ್‌ಬಿ-ಸಿಯನ್ನು 2,159ರೂ.ಗೆ ಖರೀದಿಸಬಹುದಾಗಿದೆ.

ಲ್ಯಾಪ್‌ಟಾಪ್‌

4. ಲ್ಯಾಪ್‌ಟಾಪ್‌ ಬಿಸಿಯಾದಂತೆ ನಿಮಗೆ ಬಿಸಯ ಅನುಭವ ಭಾರದಂತೆ ತಡೆಯಲು ಪ್ಯಾನ್‌ ಕೂಡ ಅನುಕೂಲಕರವಾಗಿದೆ. ಇದಕ್ಕಾಗಿ ನೀವು ನೇರವಾಗಿ ನಿಮ್ಮ ಲ್ಯಾಪ್‌ಟಾಪ್‌ಗೆ ಪ್ಲಗ್ ಮಾಡಬಹುದು. ಈ ಮಾದರಿಯ ಪರ್ಸನಲ್‌ ಯುಎಸ್‌ಬಿ ಪ್ಯಾನ್‌ ಬೆಲೆ 399 ರೂ.ಆಗಿದೆ.

ಲ್ಯಾಪ್‌ಟಾಪ್

5. ನಿಮ್ಮ ಗೃಹ ಕಚೇರಿಯಿಂದ ನಿಜವಾದ ಕಚೇರಿಗೆ ಪ್ರಯಾಣಿಸುವಾಗ ನಿಮ್ಮ ಲ್ಯಾಪ್‌ಟಾಪ್ ಸುರಕ್ಷಿತವಾಗಿರಿಸಲು ಪ್ಯಾಡ್ಡ್ ಲ್ಯಾಪ್‌ಟಾಪ್ ಸ್ಲಿವ್‌ ಕೂಡ ಉತ್ತಮವಾಗಿದೆ. ಇದರ ಬೆಲೆ 452ರೂ.ಆಗಿದೆ.

ಯುಎಸ್‌ಬಿ

6. ನೀವು ಡಾರ್ಕ್ ಪರಿಸ್ಥಿತಿಗಳಲ್ಲಿ ಕೆಲಸ ಮಾಡುವಾಗ ಕೆಲವು ಸಹಾಯಕವಾದ ಬೆಳಕನ್ನು ಒದಗಿಸಲು ನಿಮ್ಮ ಲ್ಯಾಪ್‌ಟಾಪ್‌ನ ಯುಎಸ್‌ಬಿ ಪೋರ್ಟ್‌ಗೆ ನೇರವಾಗಿ ಸಂಪರ್ಕಿಸುವ ಹೊಂದಾಣಿಕೆ ಯುಎಸ್‌ಬಿ ರೀಡಿಂಗ್‌ ಲೈಟ್‌ ಉತ್ತಮ ಆಯ್ಕೆಯಾಗಿದೆ. ಇದರ ಬೆಲೆ 349ರೂ,ಆಗಿದೆ.

ಲೈಟ್‌

7. ಬ್ಲೂ ಲೈಟ್‌ ಫಿಲ್ಟರ್ ಮಾಡುವ ಮತ್ತು ನಿಮ್ಮ ಪರದೆಯನ್ನು ಬದಿಗಳಿಂದ ಓದಲು ಪ್ರೈವೆಸಿ ಸ್ಕ್ರೀನ್‌ ಪ್ರೊಟೆಕ್ಟರ್‌ ಉತ್ತಮವಾಗಿದೆ. ಇದು ನಿಮ್ಮ ಸ್ಕ್ರೀನ್‌ ಅನ್ನು ರಕ್ಷಣೆ ಮಾಡಲಿದೆ. ಹೆಚ್ಚಿನ ಕಾರ್ಯ ಮಾಡುವಾಗಲೂ ಇದು ನಿಮಗೆ ರಕ್ಷಣೆ ನೀಡಲಿದೆ. ಇದರ ಬೆಲೆ 2,599ರೂ,ಆಗಿದೆ.

ಲ್ಯಾಪ್‌ಟಾಪ್‌ನಲ್ಲಿನ

8. ನಿಮ್ಮ ಲ್ಯಾಪ್‌ಟಾಪ್‌ನಲ್ಲಿನ ಟಚ್‌ಪ್ಯಾಡ್ ಅನ್ನು ಬಳಸುವುದಕ್ಕೆ ಬ್ಲೂಟೂತ್ ಮೌಸ್ ಇನ್ನಷ್ಟು ಸಹಾಯಕವಾಗಲಿದೆ. ಇದರ ಬೆಲೆ 1,280ರೂ,ಆಗಿದೆ.

ಲ್ಯಾಪ್‌ಟಾಪ್‌

9. ಇತ್ತೀಚಿನ ದಿನಗಳಲ್ಲಿ ಲ್ಯಾಪ್‌ಟಾಪ್‌ ಜೊತೆಗೆ ಹೆಚ್ಚಿನ ಜನರು ವೆಬ್‌ಕ್ಯಾಮ್ ಕವರ್ ಅನ್ನು ಕೂಡ ಬಳಸುವುದಕ್ಕೆ ಇಷ್ಟ ಪಡುತ್ತಾರೆ. ಈ ಮಾದರಿಯ ವೆಬ್‌ ಕ್ಯಾಮ್‌ ಕವರ್‌ 3 ಪ್ಯಾಕ್‌ಗೆ 189ರೂ.ಗಳ ಬೆಲೆಯನ್ನು ಹೊಂದಿದೆ.

ಲ್ಯಾಪ್‌ಟಾಪ್

10. ಸೂಪರ್ ಸ್ಕ್ರೀನ್ ಮತ್ತು ಕೀಬೋರ್ಡ್ ಅನ್ನು ಪರಿಪೂರ್ಣ ವಾಗಿ ಸುಲಭವಾಗಿ ಬಳಸುವುದಕ್ಕೆ ಲ್ಯಾಪ್‌ಟಾಪ್ ಸ್ಟ್ಯಾಂಡ್ ಕೂಡ ಸಹಾಯಕವಾಗಿದೆ. ಇದರ ಬೆಲೆ 494ರೂ ಆಗಿದೆ.

ಲೈಟಿಂಗ್‌

11. ಲೈಟಿಂಗ್‌, ಮೈಕ್ರೋ ಯುಎಸ್‌ಬಿ, ಮತ್ತು ಯುಎಸ್‌ಬಿ ಟೈಪ್-ಸಿ ಕನೆಕ್ಟರ್‌ಗಳನ್ನು ಹೊಂದಿರುವ 3-ಇನ್ -1 ಚಾರ್ಜಿಂಗ್ ಕೇಬಲ್ ಎಲ್ಲವನ್ನೂ ಸುಲಭವಾಗಿ ಬಳಸಲು ಅನುಮತಿಸುತ್ತದೆ. ಈ ರೀತಿಯ ಫೋರ್ಟಬಲ್‌ ಚಾರ್ಜಿಂಗ್‌ ಕೇವಲ ಅನ್ನು 349ರೂ ಗಳಿಗೆ ಖರೀದಿಸಬಹುದಾಗಿದೆ.

Best Mobiles in India

English summary
A laptop fan that will stop your laptop from overheating when you have 300 Google Chrome tabs, Spotify, Photoshop, Slack, Outlook.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+