ಶಾಕಿಂಗ್ ನ್ಯೂಸ್! ಭಾರತೀಯ ಸೇನೆ ಮೇಲೆ ಪಾಕಿಸ್ತಾನಿ ಹ್ಯಾಕರ್‌ಗಳ ಕಣ್ಣು!
ಭಾರತೀಯ ಭದ್ರತಾ ಸಂಶೋಧಕರು ಶಾಕಿಂಗ್ ಸುದ್ದಿಯೊಂದನ್ನು ಬಹಿರಂಗಪಡಿಸಿದ್ದಾರೆ. ಅಷ್ಟೇ ಅಲ್ಲ ಭಾರತದ ಪ್ರಮುಖ ಸಂಸ್ಥೆಗಳಿಗೆ ಎಚ್ಚರಿಕೆಯನ್ನು ಕೂಡ ನೀಡಿದ್ದಾರೆ. ಶತ್ರು ರಾಷ್ಟ್ರ ಪಾಕಿಸ್ತಾನ ಮೂಲಕ ಹ್ಯಾಕರ್ ಗ್ರೂಪ್ ದೇಶದ ಪ್ರಮುಖ ಸಂಸ್ಥೆಗಳ ಮೇಲೆ ಸೈಬರ್ ದಾಳಿ ನಡೆಸುತ್ತಿರುವುದನ್ನು ಭದ್ರತಾ ಸಂಶೋಧಕರು ಪತ್ತೆ ಹಚ್ಚಿದ್ದಾರೆ.
ಹೌದು, ಶತ್ರು ರಾಷ್ಟ್ರ ಪಾಕಿಸ್ತಾನದ ಹ್ಯಾಕರ್ ಗ್ರೂಪ್ ಭಾರತೀಯ ಸೇನೆ ಮತ್ತು IIT ಗಳು ಮತ್ತು NIT ಗಳು ಸೇರಿದಂತೆ ದೇಶದ ಕೆಲವು ಉನ್ನತ ಶಿಕ್ಷಣ ಸಂಸ್ಥೆಗಳ ಮೇಲೆ ಸೈಬರ್ ದಾಖಲಿ ನಡೆಸುತ್ತಿದೆ ಎಂದು ವರದಿಯಾಗಿದೆ. ಹಿರಿಯ ಡಿಆರ್‌ಡಿಒ ವಿಜ್ಞಾನಿಯನ್ನು ಬಂಧಿಸಿದ ನಂತರ ಈ ಹ್ಯಾಕಿಂಗ್ ಅಭಿಯಾನ ಬೆಳಕಿಗೆ ಬಂದಿದೆ. ಹಾಗಾದ್ರೆ ಹ್ಯಾಕರ್‌ಗಳು ನಮ್ಮ ದೇಶದ ಪ್ರಮುಖ ಸಂಸ್ಥೆಗಳ ಮೇಲೆ ಹೇಗೆ ದಾಳಿ ನಡೆಸುತ್ತಿದ್ದಾರೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

Linux ಮಾಲ್‌ವೇರ್
ಪಾಕಿಸ್ತಾನದ ಹ್ಯಾಕರ್‌ಗಳು ಭಾರತದ ಪ್ರಮುಖ ಸಂಸ್ಥೆಗಳ ಮೇಲೆ ದಾಳಿ ನಡೆಸುವುದಕ್ಕೆ ಲಿನಕ್ಸ್ ಮಾಲ್‌ವೇರ್ ಪೋಸಿಡಾನ್ ಬಳಸುತ್ತಿದ್ದಾರೆ ಎಂದು ವರದಿಯಾಗಿದೆ. ಅಲ್ಲದೆ ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಾದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿಗಳು), ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎನ್‌ಐಟಿಗಳು) ಮೇಲೆ ದಾಳಿ ನಡೆಸುತ್ತಿರುವುದು ಭಾರಿ ಆತಂಕಕ್ಕೆ ಕಾರಣವಾಗಿದೆ. ಈ ಸಂಸ್ಥೆಗಳು ದೇಶದ ಭದ್ರತಾ ಸಂಸ್ಥೆಗಳೊಂದಿಗೆ ನಿಕಟ ಸಂಬಂಧ ಹೊಂದಿರುವುದೇ ಇದಕ್ಕೆ ಮುಖ್ಯ ಕಾರಣ ಎಂದು ಸಹ ಹೇಳಲಾಗಿದೆ.
ಹ್ಯಾಕರ್‌ಗಳು ಬಳಸುತ್ತಿರುವ ಅಪ್ಲಿಕೇಶನ್‌ಗಳು ಯಾವುದು ಗೊತ್ತಾ?
ಇನ್ನು ಶತ್ರುರಾಷ್ಟ್ರದ ಹ್ಯಾಕರ್‌ಗಳು GravityRAT ಟ್ರೋಜನ್ ಅನ್ನು ವಿತರಿಸುವ ಮೆಸೇಜಿಂ ಗ್ ಅಪ್ಲಿಕೇಶನ್‌ಗಳಾದ BingeChat ಮತ್ತು Chatico ಬಳಸುತ್ತಿದ್ದಾರೆ ಎನ್ನಲಾಗಿದೆ. ಈ ಅಪ್ಲಿಕೇಶನ್‌ಗಳು ಭಾರತದಲ್ಲಿ ಹ್ಯಾಕಿಂಗ್ ದಾಳಿ ನಡೆಸಲು ಅವಕಾಶ ನೀಡುತ್ತಿವೆ ಎನ್ನಲಾಗಿದೆ. ಅದರಲ್ಲೂ GravityRAT ಎಂಬುದು ರಿಮೋಟ್ ಆಕ್ಸೆಸ್ ಟೂಲ್ ಆಗಿದ್ದು, ಇದನ್ನು ಕನಿಷ್ಠ 2015 ರಿಂದ ಬಳಸಲಾಗುತ್ತಿದೆ ಎನ್ನಲಾಗಿದೆ. ಅದರಲ್ಲೂ GravityRAT WhatsApp ಬ್ಯಾಕ್‌ಅಪ್‌ಗಳನ್ನು ಹೊರಹಾಕಬಹುದು ಎಂದು ಹೇಳಲಾಗಿದೆ.
ಪಾಕಿಸ್ತಾನ ಮೂಲಕ ಹ್ಯಾಕರ್‌ಗಳ ಕಾರ್ಯವೈಖರಿ ಹೇಗಿದೆ?
ಪಾಕಿಸ್ತಾನ ಮೂಲದ ಹ್ಯಾಕರ್‌ಗಳು ದುರುದ್ದೇಶಪೂರಿತ ಆರ್ಕೈವ್ ಫೈಲ್‌ಗಳನ್ನು ಇಂಜೆಕ್ಟ್ ಮಾಡುತ್ತಿವೆ. ಅಲ್ಲದೆ ನಿರಂತರವಾಗಿ ತಮ್ಮ ವಿಧಾನಗಳು ಮತ್ತು ತಂತ್ರಗಳನ್ನು ಬದಲಾಯಿಸುತ್ತಿದ್ದಾರೆ ಎನ್ನಲಾಗಿದೆ. ಜೊತೆಗೆ ಭಾರತೀಯ ಸೇನೆಯ ಅಧಿಕಾರಿಗಳನ್ನು ಗುರಿಯಾಗಿಸಲು ವ್ಯಾಪಕ ಶ್ರೇಣಿಯ ಮಾಲ್‌ವೇರ್ ಗಳನ್ನು ಹರಡುತ್ತಿದ್ದಾರೆ ಎಂದು ಹೇಳಲಾಗಿದೆ.
ಪತ್ತೆಯಾಗಿವೆ ಅಪಾಯಕಾರಿ ಫೈಲ್ ಹೆಸರುಗಳು
ಇನ್ನು ಇದೇ ಸಂದರ್ಭದಲ್ಲಿ ಭದ್ರತಾ ಸಂಶೋಧಕರು ಅಪಾಯಕಾರಿ ಫೈಲ್ ಹೆಸರುಗಳನ್ನು ಕೂಡ ಪತ್ತೆಹಚ್ಚಿದ್ದಾರೆ. ಇದರಲ್ಲಿ DRDO-K4-Missile-Clean-room.zip; office.template.mac; office.template.ui; DRDO - K4 ಮಿಸೈಲ್ ಕ್ಲೀನ್ room.pptx.lnk; DUser.dll ಮತ್ತು test.bat.ಗಳು ಸೇರಿವೆ ಎಂದು ಹೇಳಲಾಗಿದೆ.

ದೇಶದಲ್ಲಿ ಪತ್ತೆಯಾಗುತ್ತಿವೆ ಪಾಕಿಸ್ತಾನದ ಐಪಿಗಳು
ಇದಲ್ಲದೆ ದೇಶದಲ್ಲಿ ಪಾಕಿಸ್ತಾನದ ಐಪಿ ಅಡ್ರೆಸ್ ಇರುವ ಅಪ್ಲಿಕೇಶನ್‌ಗಳು ಪತ್ತೆ ಆಗುತ್ತಿವೆ. ಅದರಲ್ಲೂ ಪಾಕಿಸ್ತಾನಿ ಮೊಬೈಲ್ ಪೂರೈಕೆದಾರರಿಗೆ ನಿಯೋಜಿಸಲಾದ 17 ವಿಭಿನ್ನ ಐಪಿಗಳು ಪತ್ತೆಯಾಗಿವೆ.
ಭಾರತದ ಪ್ರಮುಖ ಸಂಸ್ಥೆಗಳ ಮೇಲೆ ಹ್ಯಾಕಿಂಗ್ ದಾಳಿ ಮಾಡುವುದಕ್ಕಾಗಿಯೇ 2013ರಲ್ಲಿ ಈ ಹ್ಯಾಕರ್ ಗ್ರೂಪ್ ಹುಟ್ಟಿಕೊಂಡಿದೆ ಎನ್ನಲಾಗಿದೆ. ಈ ಗ್ರೂಪ್ ಮೂಲಕ ದೇಶಧ ಪ್ರಮುಖ ಸಂಸ್ಥೆಗಳ ಮೇಲೆ ಡೇಟಾ ಕದಿಯುವ ಪ್ರಯತ್ನ ನಡೆಯುತ್ತಿದೆ ಎಂದು ಭದ್ರತಾ ಸಂಶೋಧಕರು ಹೇಳಿದ್ದಾರೆ. ಅಷ್ಟೇ ಅಲ್ಲ ಇದು ಭಾರತೀಯ ಸರ್ಕಾರ ಮತ್ತು ಮಿಲಿಟರಿ ಘಟಕಗಳನ್ನು ಗುರಿಯಾಗಿಸಿಕೊಂಡಿದೆ ಎನ್ನಲಾಗಿದೆ.


Click it and Unblock the Notifications








